Advertisment

ಮಂಜು ಭಾಷಿಣಿಗೆ ಬಿಗ್ ಶಾಕ್.. ಬಡ್ಡಿ ಬಂಗಾರಮ್ಮ ಪಾತ್ರದ ಬಗ್ಗೆ ನಿರ್ದೇಶಕರಿಂದ ಅಚ್ಚರಿ ಹೇಳಿಕೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಾವಿರ ಸಂಚಿಕೆಯ ಗಡಿದಾಟಿ ಯಶಸ್ವಿ ಜರ್ನಿ ಮುಂದುವರೆಸಿದೆ. ಟಿಆರ್​ಪಿನಲ್ಲೂ ಟಾಪ್​ ಸ್ಥಾನ ಕಾಯ್ದುಕೊಂಡಿದೆ. ಈ ನಡುವೆ ಬಂಗಾರಮ್ಮನ ಪಾತ್ರದ ಕರಿತು ಹಲವು ಗೊಂದಲಗಳು ಸೃಷ್ಟಿಯಾಗಿವೆ.

author-image
Ganesh Kerekuli
Manju Bhashini (1)
Advertisment

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಾವಿರ ಸಂಚಿಕೆಯ ಗಡಿದಾಟಿ ಯಶಸ್ವಿ ಜರ್ನಿ ಮುಂದುವರೆಸಿದೆ.  ಟಿಆರ್​ಪಿನಲ್ಲೂ ಟಾಪ್​ ಸ್ಥಾನ ಕಾಯ್ದುಕೊಂಡಿದೆ. ಈ ನಡುವೆ ಬಂಗಾರಮ್ಮನ ಪಾತ್ರದ ಕರಿತು ಹಲವು ಗೊಂದಲಗಳು ಸೃಷ್ಟಿಯಾಗಿವೆ.   

Advertisment

ಬಂಗಾರಮ್ಮ ಪಾತ್ರವನ್ನ ತೂಕವಾಗಿ ನಿಭಾಯಿಸಿದ್ರು ಮಂಜು ಭಾಷಿಣಿ. 4 ವರ್ಷ ಸತತವಾಗಿ ವೀಕ್ಷಕರನ್ನ ರಂಜಿಸಿದ್ರು. ಈ ನಡುವೆ ಬಿಗ್​ ಬಾಸ್​ ಆಫರ್​ ಬಂದ ಕಾರಣ ಸೀರಿಯಲ್​ನಿಂದ ಹೊರಬಂದಿದ್ರು. ಹೀಗಾಗಿ ಕಥೆಯಲ್ಲಿ ಹಲವು ಬದಲಾವಣೆ ಮಾಡಿ, ಬಾಂಗಾರಮ್ಮ ಆಸ್ಪತ್ರೆ ಸೇರಿದ್ದಾರೆ ಎನ್ನುವಂತೆ ತೋರಿಸಲಾಗ್ತಿತ್ತು. 

ಇದನ್ನೂ ಓದಿ: ರಕ್ಷಿತಾ ನಿಜವಾಗಿಯೂ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಮತ್ತೊಮ್ಮೆ ಅಶ್ವಿನಿ ಗೌಡರ ಮುಖವಾಡ ಕಳಚಿದ ಸುದೀಪ್..! VIDEO

ಬಿಗ್​ ಬಾಸ್​ನಿಂದ ಹೊರ ಬಂದಿರೋ ಮಂಜು ಭಾಷಿಣಿ ಮತ್ತೆ ಸೀರಿಯಲ್​ಗೆ ಮರಳಲಿದ್ದಾರಾ ಎಂಬ ಗೊಂದಲ ಇದೆ. ವೀಕ್ಷಕರು ಕಾಯ್ತಿದ್ದಾರೆ. ಈ ಬಗ್ಗೆ ಸ್ಪಷ್ಟಣೆ ಪಡೆಯಲು ನಿರ್ದೇಶಕರಾದ ಆರೂರು ಜಗದೀಶ್​ ಅವ್ರನ್ನ ನಿಮ್ಮ ನ್ಯೂಸ್​ ಫಸ್ಟ್ ಸಂಪರ್ಕಿಸಿತ್ತು. 

Advertisment

ಅವರು ಹೇಳಿದ್ದು ಏನೆಂದರೆ.. ಬಿಗ್​ ಬಾಸ್​ ಆಫರ್​ ಇದೆ ಅಂತ ನಮಗೆ ಗೊತ್ತಿರಲಿಲ್ಲ. ಔಟ್​ಆಫ್​ ಕಂಟ್ರಿಗೆ ಹೋಗ್ಬೇಕು ಅಂತ ಹೇಳಿದ್ರು ನಟಿ ಮಂಜು ಭಾಷಿಣಿ. ಹೀಗಾಗಿ ಕಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಈಗ ಪಾತ್ರನ ರಿಪ್ಲೇಸ್​ ಮಾಡಲ್ಲ. ಬಿಗ್​ ಬಾಸ್​ 6 ತಿಂಗಳ ಕಾಂಟ್ರಾಕ್ಟ್​ ಇರುತ್ತೆ. ಹೀಗಾಗಿ ಬಂಗಾರಮ್ಮನ ಪಾತ್ರನ ಮುಕ್ತಾಯ ಮಾಡ್ತೀವಿ. ಅರ್ಥಾತ್​ ಸಾಯಿಸ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ನಲ್ಲಿ ಆದಿ ಇದ್ಮೇಲೆ ಅಂತ್ಯ ಇರ್ಲೆ ಬೇಕಲ್ವಾ? ಬಂಗಾರಮ್ಮನ ಪಾತ್ರ ಕೆಲ ದಿನಗಳಲ್ಲಿ ಅಂತ್ಯವಾಗಲಿದೆ. ಪಾತ್ರ ಮುಂದುವರೆಯುತ್ತೆ ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿರೋದಂತು ಸತ್ಯ. 

ಇದನ್ನೂ ಓದಿ: BBK12 ಗಿಲ್ಲಿ ಮೇಲೆ ರಿಷಾ ಹಲ್ಲೆ.. ಪಂಚಾಯ್ತಿಯಲ್ಲಿ ಕಿಚ್ಚನ ತೀರ್ಪು ಏನು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IF YOU NOT GIVE Garabage will be fined by GBA Manju Bhashini Bigg Boss Kannada 12 Bigg boss
Advertisment
Advertisment
Advertisment