ರಕ್ಷಿತಾ ನಿಜವಾಗಿಯೂ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಮತ್ತೊಮ್ಮೆ ಅಶ್ವಿನಿ ಗೌಡರ ಮುಖವಾಡ ಕಳಚಿದ ಸುದೀಪ್..! VIDEO

ರಕ್ಷಿತಾ ಮೇಲಿನ ಕೋಪಕ್ಕೋ ಅಥವಾ ಅವಳನ್ನು ಬಿಗ್‌ಬಾಸ್‌ ಮನೆಯಲ್ಲಿ ಬೇರೆಯದ್ದೇ ರೀತಿಯಲ್ಲಿ ಪೋರ್‌ಟ್ರೇ ಮಾಡಬೇಕೆಂದೋ ಅಂತು ಕಳೆದೊಂದು ವಾರದಿಂದ ಅಶ್ವಿನಿ ಗೌಡ, ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಇದೆಷ್ಟು ಸರಿ?

author-image
Ganesh Kerekuli
Rakshita shetty (2)
Advertisment

ರಕ್ಷಿತಾ ಮೇಲಿನ ಕೋಪಕ್ಕೋ ಅಥವಾ ಅವಳನ್ನು ಬಿಗ್‌ಬಾಸ್‌ ಮನೆಯಲ್ಲಿ ಬೇರೆಯದ್ದೇ ರೀತಿಯಲ್ಲಿ ಪೋರ್‌ಟ್ರೇ ಮಾಡಬೇಕೆಂದೋ ಅಂತು ಕಳೆದೊಂದು ವಾರದಿಂದ ಅಶ್ವಿನಿ ಗೌಡ, ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಇದೆಷ್ಟು ಸರಿ? 

ರಕ್ಷಿತಾ ಶೆಟ್ಟಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ನೀಡಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಬಂದ ಮೊದಲ ದಿನವೇ ಎಲಿಮಿನೇಟ್‌ ಆದರೂ ನಂತರ ಜಾಹ್ನವಿ ಹಾಗೂ ಅಶ್ವಿನಿಯ ನಾಟಕಕ್ಕೆ ವಸ್ತುವಾದರು, ಬಳಿಕ ದ್ರುವಂತ್‌, ರಾಶಿಕಾ, ರಿಷಾ, ಕಾಕ್ರೋಚ್‌ ಸುಧಿ ಹೀಗೆ ಎಲ್ಲರ ಟಾರ್ಗೆಟ್‌ ಆದರು. ಇಷ್ಟೆಲ್ಲ ಆದರೂ ತಮ್ಮ ಆಟ ಮುಂದುವರಿಸಿರುವ ರಕ್ಷಿತಾ ಬಗ್ಗೆ ಕಳೆದೊಂದು ವಾರದಿಂದ ದೊಡ್ಡ ಅಪವಾದವೊಂದು ಸದ್ದು ಮಾಡ್ತಿದೆ. 

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಭರತ್​ ನಾಯಕ್ ದಂಪತಿ..!

Kiccha sudeep

ಅಶ್ವಿನಿ ಗೌಡರೊಂದಿಗೆ ಜಗಳ ಆಡುವಾಗ ರಕ್ಷಿತಾ ಕಲಾವಿದರು ಕಾಲು ಕಸ ಎನ್ನುವ ರೀತಿಯಲ್ಲಿ ತೋರಿಸಿದ್ದರು ಎಂದು ಆರೋಪಿಸಿದ್ದಾರೆ. ಮನೆಯೊಳಗಿರುವ ಎಲ್ಲರೂ ರಕ್ಷಿತಾ ಉದ್ದೇಶ ಅದಾಗಿರಲಿಲ್ಲ ಎಂದು ಅಶ್ವಿನಿಯವರ ತಪ್ಪು ಕಲ್ಪನೆಯನ್ನು ತೋರಿಸಲು ಹೊರಟರೂ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ಧರೇ ಇರಲಿಲ್ಲ. 

ಇದನ್ನೂ ಓದಿ:ಕಾವ್ಯ ಗೌರವಕ್ಕೆ ದಕ್ಕೆ ತಂದ್ರಾ ಧ್ರುವಂತ್? ಗಿಲ್ಲಿ ಟೀಕಿಸೋ ಭರದಲ್ಲಿ ತಪ್ಪು ಮಾಡಿದ್ರಾ?

Rakshita shetty (3)

ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಸ್ವತಃ ಸುದೀಪ್‌ ಇದಕ್ಕೆ ಉತ್ತರ ನೀಡಿದ್ದಾರೆ. ರಕ್ಷಿತಾ ಕಲಾವಿದರಿಗೆ ಅವಮಾನಿಸಬೇಕು ಅನ್ನೋ ಉದ್ದೇಶದಿಂದ ಹಾಗೇ ಮಾಡೇ ಇಲ್ಲ. ಯಾಕೆ ಇಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ನಾನೂ ಒಬ್ಬ ಕಲಾವಿದನೇ ಅಲ್ವಾ ಎಂದು ಹೇಳಿದ್ದಾರೆ. ಮಾತ್ರವಲ್ಲ ಅಶ್ಚಿನಿ ಗೌಡರ ತಪ್ಪು ಕಲ್ಪನೆಯಿಂದ ಕರ್ನಾಟಕದಲ್ಲಿರುವ ಸಮಸ್ತ ಕಲಾವಿದರಿಗೆ ನಾನೂ ಉತ್ತರ ಕೊಡಬೇಕಾಗಿ ಬಂದಿದೆ ಎಂದಿದ್ದಾರೆ. 

ಇದನ್ನೂ ಓದಿ: BBK12 ಗಿಲ್ಲಿ ಮೇಲೆ ರಿಷಾ ಹಲ್ಲೆ.. ಪಂಚಾಯ್ತಿಯಲ್ಲಿ ಕಿಚ್ಚನ ತೀರ್ಪು ಏನು?

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Bigg Boss Kannada 12 BBK12 Bigg boss
Advertisment