Advertisment

ರವೀಂದ್ರ ಭಟ್ಕಳ್ vs ಜೆಪಿ ಪಾಟೀಲ್.. ವೀಕ್ಷಕರ ಮನಗೆದ್ದ ಭಾರ್ಗವಿ L.L.B ಧಾರಾವಾಹಿ..!

ಅಂತೂ ಭಾರ್ಗವಿ ತಂದೆ ರವೀಂದ್ರ ಭಟ್ಕಳ್ ಮತ್ತೆ ವಕೀಲರ ಬಟ್ಟೆ ತೊಟ್ಟಿದ್ದಾರೆ. ಕೋರ್ಟ್​ನಲ್ಲಿ ಮತ್ತೆ ಜೆ.ಪಿ ಪಾಟೀಲ್​ಗೆ ಮುಖಾಮುಖಿಯಾಗಿ ವಾದ ಮಾಡಲು ರವೀಂದ್ರ ಭಟ್ಕಳ್ ಸಿದ್ದರಾಗಿದ್ದಾರೆ.

author-image
Ganesh Kerekuli
bharghavi llb
Advertisment

ಭಾರ್ಗವಿ ತಂದೆ ರವೀಂದ್ರ ಭಟ್ಕಳ್  ಕೋರ್ಟ್‌ನಲ್ಲಿ ಜೆಪಿ ಪಾಟೀಲ್​ನಿಂದ ಅವಮಾನಿತರಾಗಿ ವೃತ್ತಿಯನ್ನ ತೊರೆದಿರ್ತಾನೆ. ಹೀಗಾಗಿ ಭಾರ್ಗವಿ ತಂದೆಯ ಆಸೆಯಂತೆ ಕಷ್ಟಪಟ್ಟು ಓದಿ ತಂದೆಯಂತೆ ಲಾಯರ್​ ಆಗ್ತಾಳೆ. ಆದ್ರೆ ವಿಧಿ ಸುಮ್ಮನಿರಬೇಕಲ್ಲಾ.. ತನ್ನ ತಂದೆಗೆ ಅವಮಾನ ಮಾಡಿದ ಜೆಪಿ ಪಾಟೀಲ್ ಮಗ ಅರ್ಜುನನ್ನೆ ಭಾರ್ಗವಿ ಮದುವೆಯಾಗ್ತಾಳೆ.

Advertisment

ಮುಂದೆ ಜೆಪಿ ಪಾಟೀಲ್  ಮನೆಯಲ್ಲಿ ಜೀವನ ಸಾಗಿಸ್ತಾ ಇರ್ತಾಳೆ.. ಈ ನಡುವೆ ಸಂಧ್ಯಾಳಿಗೆ ಸಹಾಯ ಮಾಡಲು ಹೋಗಿದ್ದ​ ಭಾರ್ಗವಿ ಸುಳ್ಳು ಸಾಕ್ಷಿ ನೀಡಿದ ಆರೋಪದ ಮೇಲೆ ಆರೆಸ್ಟ್ ಆಗ್ತಾಳೆ. ಹೀಗಾಗಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ್ದ ಅರ್ಜುನ್, ಲಾಯರ್‌ ಆಗಿ ಕೋರ್ಟ್ ಒಳಗೆ ಬಂದು ತಂದೆ ಜೆಪಿ ಪಾಟೀಲ್ ವಿರುದ್ದ ನಿಂತು ಪತ್ನಿಯನ್ನ ಕಷ್ಟಗಳಿಂದ ಕಾಪಾಡ್ತಿರ್ತಾನೆ. ಈ ಸೀನ್​ ಅಂತೂ ವೀಕ್ಷಕರು ಬಹಳ ಇಷ್ಟಪಟ್ಟಿದ್ರು. ಆದ್ರೆ   ಅರ್ಜುನ್​ ಅಂತು ಲಾಯರ್​ ಆಗಾಯ್ತು.. ಆದ್ರೆ  ಭಾರ್ಗವಿ ತಂದೆ ರವೀಂದ್ರ  ಮತ್ತೆ ಯಾವಾಗ ವಕೀಲರಾಗಿ ಕಾಣಿಸಿಕೊಳ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. 

ಇದನ್ನೂ ಓದಿ: ಅಭಿಷೇಕ್ ಶರ್ಮಾಗೆ ಅನಾರೋಗ್ಯ, ಹೊಸ ಟೆನ್ಷನ್! ಬುಮ್ರಾ ಎಂಟ್ರಿಯಾದ್ರೆ ಸಿರಾಜ್ ಕತೆ ಏನು..?

ಈಗ ರವಿ ಭಟ್ಕಳ್‌ ಮತ್ತೆ ಕೋರ್ಟ್‌ಗೆ ಹಾಲ್ ಬರಬೇಕು ಅನ್ನೋದು ಭಾರ್ಗವಿ ಆಸೆ. ಹೀಗಾಗಿ ಮಗಳ ಆಸೆಯಂತೆ ರವಿ ಭಟ್ಕಳ್ ಕಪ್ಪು ಕೋರ್ಟ್ ಹಾಕ್ಕೊಂಡು ಕೋರ್ಟ್‌ಗೆ ಹೋಗಿದ್ದಾರೆ. ಆದ್ರೆ, ಇದಕ್ಕೂ ಬ್ರೇಕ್ ಹಾಕಲು ಜೆಪಿ ಪಾಟೀಲ್‌ ಫ್ಯಾಮಿಲಿ ಒಂದು ಷರತ್ತು ವಿಧಿಸಿತ್ತು. ಅದೇ ಈ ವಾರದ ಮಹಾ ಟ್ವಿಸ್ಟ್.

Advertisment

ರವಿ ಭಟ್ಕಳ್ ಷಷ್ಠಿ ಪೂರ್ತಿ ಸಮಾರಂಭಕ್ಕೆ ಖುದ್ದು ಪತ್ನಿ ಜೊತೆ ಜೆಪಿ ಮನೆಗೆ ಹೋಗ್ತಾರೆ.ಆದ್ರೆ, ಈ ಕಾರ್ಯಕ್ರಮಕ್ಕೆ ಬರಲು ಆಗೋದಿಲ್ಲ ಕುಟುಂಬ  ಸದಸ್ಯರು ಹೇಳ್ತಾರೆ. ಜೆಪಿ ಕಟುವಾಗಿ ಮಾತನಾಡುತ್ತಾನೆ. ರವಿ ಭಟ್ಕಳ್ ಮಕ್ಕಳಿಗಾಗಿ ಬನ್ನಿ. ನಾವೆಲ್ಲಾ ಒಂದಾಗೋಣ ಅಂತಾರೆ ಇದಕ್ಕೆಲ್ಲಾ ಜೆಪಿ ಸೊಪ್ಪು ಹಾಕೋದಿಲ್ಲ. ಇದೇ ಟೈಮ್‌ನಲ್ಲಿ ಬೃಂದಾ, ನಾವ್ ಸಮಾರಂಭಕ್ಕೆ ಬರ್ತೀನಿ. ನೀವು ಕೇಸ್‌ನಿಂದ ಹಿಂದೆ ಸರಿಯುತ್ತೀರಾ ಅಂತಾ ಷರತ್ತು ವಿಧಿಸುತ್ತಾರೆ. ಆದ್ರೆ, ರವಿ ಭಟ್ಕಳ್‌ ನನಗೆ ನನ್ನ ಮಗಳ ಬದುಕಿಗಿಂತ ಅಮಾಯಕ ಮಕ್ಕಳ ಭವಿಷ್ಯ ಮುಖ್ಯ ಅಂತಾ, ಕಡ್ಡಿ ಮುರಿದಂತೆ ಹೇಳ್ತಾರೆ.

ಈಗ ಕೋರ್ಟ್‌ ಹಾಲ್‌ನಲ್ಲಿ ಜೆಪಿ ವರ್ಸಸ್ ರವಿ ಭಟ್ಕಳ್‌ ವಾದ ಪ್ರತಿವಾದ ನಡೆಯಲಿದೆ. ಇದು ಭಾರ್ಗವಿ ಎಲ್‌ಎಲ್‌ಬಿ ಧಾರವಾಹಿಯ ಈ ವಾರದ ಹೈ ಪಾಯಿಂಟ್ ಆಗಿದ್ದು, ಸಖತ್ ಇಂಟರೆಸ್ಟಿಂಗ್ ಆಗಿದೆ.

ಇದನ್ನೂ ಓದಿ: ಚಂದದ ಕುಟುಂಬ ಹಾಳು ಮಾಡಲು ಬಂದಳಾ ಪ್ರಿಯಾ..? ನಂದಗೋಕುಲ ವೀಕ್ಷಕರಲ್ಲಿ ಕಾಡಿದ ಆತಂಕ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Bhargavi LLB Kannada serial
Advertisment
Advertisment
Advertisment