Advertisment

ಕ್ಯಾಪ್ಟನ್ಸಿಯಿಂದ ಕಳಪೆಗಿಳಿದ ಮಾಳು.. ಮುಂದಿನ ವಾರದ ನಾಯಕ ಯಾರೆಂದು ರಿವೀಲ್..!

ಜನರ ವೋಟಿಂಗ್‌ ಮೂಲಕ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದ ಮಾಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ವಾ? ಇದರ ಪರಿಣಾಮ ಏನಾಯ್ತು? ಸ್ಪರ್ಧಿಗಳ ಒಟ್ಟಾರೆ ಅಭಿಪ್ರಾಯ ಏನು ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Malu
Advertisment

ಜನರ ವೋಟಿಂಗ್‌ ಮೂಲಕ ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದ ಮಾಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ವಾ? ಇದರ ಪರಿಣಾಮ ಏನಾಯ್ತು? ಸ್ಪರ್ಧಿಗಳ ಒಟ್ಟಾರೆ ಅಭಿಪ್ರಾಯ ಏನು ಅನ್ನೋ ವಿವರ ಇಲ್ಲಿದೆ.  

Advertisment

ಮಾಳು ಬಿಗ್‌ಬಾಸ್‌ ಮನೆಗೆ ಬಂದಾಗಿನಿಂದಲೂ ಯಾರೊಂದಿಗೂ ಹೆಚ್ಚಾಗಿ ಬೆರೆಯಲ್ಲ ಅನ್ನೋ ಆರೋಪ ಇದ್ದೇ ಇತ್ತು. ಇದೇ ಕಾರಣದಿಂದ ನಾಮಿನೇಟ್‌ ಆಗಿದ್ದ ಮಾಳು ಮನೆಯಲ್ಲಿ ಉಳಿದುಕೊಂಡರು. ಕ್ಯಾಪ್ಟನ್ಸಿ ಅಭ್ಯರ್ಥಿಯೂ ಆದರು. ಇವೆಲ್ಲಕ್ಕಿಂತ ಅಚ್ಚರಿ ಅನಿಸಿದ್ದು, ಜನರನ್ನು ಕಂಡ ಕೂಡಲೇ ಅವರಲ್ಲಿ ಕಂಡುಬಂದ ಹುಮ್ಮಸ್ಸು. ಅದೆಷ್ಟು ಅಚ್ಚರಿ ಮೂಡಿಸಿತ್ತೆಂದರೆ ಹೊಸ ಮಾಳು ಸಿಕ್ಕರಾ ಅನ್ನೋ ಅನುಮಾನ ಮೂಡಿತ್ತು. ಜನರ ಆಶೀರ್ವಾದವೂ ಸಿಕ್ಕಿ ಕ್ಯಾಪ್ಟನ್‌ ಕೂಡ ಆದರು.

ಇದನ್ನೂ ಓದಿ: ಕಣ್ಣೀರಿಡುವಂತೆ ಮಾಡಿದ ಸಕ್ರೇಬೈಲ್​ ಶಾಂತಿ.. ‘ಆಸೆ’ಗೆ ನೂರೆಂಟು ತಿರುವು
 
ಇಷ್ಟಿದ್ದ ಮಾಳು ಎಡವಿದ್ದೆಲ್ಲಿ. ತಮಗೆ ಕೊಟ್ಟ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದ ಅವರು ಎಲ್ಲೋ ಎಡವಿದ್ದಾರೆ. ಇದೇ ಕಾರಣದಿಂದ ಈ ವಾರ ಕ್ಯಾಪ್ಟನ್ಸಿಯಿಂದ ನೇರವಾಗಿ ಕಳಪೆಯಾಗಿದ್ದಾರೆ. ಅವರನ್ನು ಕಳಪೆ ಎಂದು ಆಯ್ಕೆ ಮಾಡಲು ಸ್ಪರ್ಧಿಗಳು ಕೊಟ್ಟ ಕಾರಣವೂ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ. 

ಕ್ಯಾಪ್ಟನ್‌ ಆಗಿ ನಾಮಿನೇಟ್‌ ಮಾಡುವ ಅಧಿಕಾರ ಕೊಟ್ಟಾಗ ಮಾಳು ಅದನ್ನು ಸರಿಯಾಗಿ ನಿಭಾಯಿಸಿಲ್ಲ. ಅವರು ಕೊಟ್ಟ ಯಾವ ಕಾರಣವೂ ಮಾನ್ಯ ಎಂದು ಅನಿಸೋದೇ ಇಲ್ಲ ಎಂದು ನಾಮಿನೇಟ್‌ ಆಗಿರುವ ಎಲ್ಲರೂ ಆರೋಪಿಸಿದ್ದಾರೆ, ಹಾಗಾದ್ರೆ ನಿಜಕ್ಕೂ ಮಾಳು ಕ್ಯಾಪ್ಟನ್‌ ಆಗಿ ಸೋತ್ರಾ? ಜನರೇ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲಾಗದೆ ಹೋದ್ರಾ? ಇನ್ನು ಮುಂದಿನ ವಾರಕ್ಕೆ ಮ್ಯೂಟಂಟ್ ರಘು ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.  

Advertisment

ಇದನ್ನೂ  ಓದಿ: ನಿನ್ನೆ ಸ್ನೇಹಿತರು, ಇವತ್ತು ಶತ್ರುಗಳು.. ರಾಶಿ, ರಿಷಾ ಮಧ್ಯೆ ಜಗಳ ಹುಟ್ಟಿಕೊಂಡಿದ್ದು ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Malu Nipanal Bigg boss mutant raghu
Advertisment
Advertisment
Advertisment