/newsfirstlive-kannada/media/media_files/2026/01/23/ugram-manju-1-2026-01-23-10-31-14.jpg)
ಉಗ್ರಂ ಮಂಜು ಅವರು ಇವತ್ತು ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು. ಹಿತೈಸಿಗಳು ನವ ಜೋಡಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಅನುಶ್ರೀ ಕಾಲೆಳೆದ ಗಿಲ್ಲಿ..! ಬಿಗ್ ಬಾಸ್ ವಿನ್ನರ್ ಬಗ್ಗೆ ಸ್ಟಾರ್ ಮಸ್ತ್ ಮಾತು -VIDEO
/filters:format(webp)/newsfirstlive-kannada/media/media_files/2026/01/23/ugram-manju-2026-01-23-10-32-28.jpg)
ಮದುವೆಗೆ ಎರಡು ದಿನಗಳು ಬಾಕಿ ಇರುವಂತೆಯೇ, ಮಂಜು ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ವಿಜೃಂಭಣೆಯಿಂದ ನಡೆದಿತ್ತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತ್ತು.
ಮಂಜುನಾಥ್ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಉಗ್ರಂ ಮಂಜು ಎಂದೇ ಖ್ಯಾತಿ ಪಡೆದಿದ್ದಾರೆ. ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.
ಉಗ್ರಂ ಮಂಜು ಅವರು ಮದುವೆಯಾದ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿದ ಹುಡುಗಿ ಹೆಸರು ಸಾಯಿ ಸಂಧ್ಯಾ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್​ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us