ಬೌಲಿಂಗ್​ ಓಕೆ, ಓಕೆ.. ಫೀಲ್ಡಿಂಗ್​ನದ್ದೇ ಟೆನ್ಶನ್​.. ಇವತ್ತಿನ ಪಂದ್ಯದ ನಿರೀಕ್ಷೆಗಳು ಏನೇನು?

ಮೊದಲ ಟಿ20 ಪಂದ್ಯದಲ್ಲಿ ಕಿವೀಸ್​ ಕಿವಿ ಹಿಂಡಿದ ಟೀಮ್​ ಇಂಡಿಯಾ 2ನೇ ಕದನಕ್ಕೆ ಸಜ್ಜಾಗಿದೆ. ಗೆಲುವಿನ ಆತ್ಮವಿಶ್ವಾಸದಲ್ಲಿರೋ ಇಂಡಿಯನ್​ ಟೀಮ್​ ರಾಯ್​​ಪುರದಲ್ಲೂ ಬ್ಲ್ಯಾಕ್​ ಕ್ಯಾಪ್ಸ್​ ಪಡೆಯನ್ನ ಉಡಾಯಿಸಲು ತುದಿಗಾಲಲ್ಲಿ ನಿಂತಿದೆ.

author-image
Ganesh Kerekuli
IND vs NZ
Advertisment
  • ರಾಯ್​​ಪುರ ಸ್ಟೇಡಿಯಂನಲ್ಲಿಂದು 2ನೇ ಟಿ20 ಪಂದ್ಯ
  • ಗೆಲುವಿನ ವಿಶ್ವಾಸದಲ್ಲಿ ಮೆನ್​ ಇನ್​ ಬ್ಲ್ಯೂ ಪಡೆ
  • ಅಭಿಷೇಕ್​ ಅಬ್ಬರ.. ರಿಧಮ್​ ಕಂಡುಕೊಂಡ ಸಂಜು


ಮೊದಲ ಟಿ20 ಪಂದ್ಯದಲ್ಲಿ ಕಿವೀಸ್​ ಕಿವಿ ಹಿಂಡಿದ ಟೀಮ್​ ಇಂಡಿಯಾ 2ನೇ ಕದನಕ್ಕೆ ಸಜ್ಜಾಗಿದೆ. ಗೆಲುವಿನ ಆತ್ಮವಿಶ್ವಾಸದಲ್ಲಿರೋ ಇಂಡಿಯನ್​ ಟೀಮ್​ ರಾಯ್​​ಪುರದಲ್ಲೂ ಬ್ಲ್ಯಾಕ್​ ಕ್ಯಾಪ್ಸ್​ ಪಡೆಯನ್ನ ಉಡಾಯಿಸಲು ತುದಿಗಾಲಲ್ಲಿ ನಿಂತಿದೆ. ಇಂದಿನ ಪಂದ್ಯದಲ್ಲೂ ಟೀಮ್​ ಇಂಡಿಯಾ ಭರ್ಜರಿ ಜಯ ಸಾಧಿಸುತ್ತಾ? ಅಥವಾ ನ್ಯೂಜಿಲೆಂಡ್​ ಕಮ್​ಬ್ಯಾಕ್​ ಮಾಡುತ್ತಾ? ಪಿಚ್​ ರಿಪೋರ್ಟ್​ ಏನ್​ ಹೇಳುತ್ತೆ? 

ಇಂಡೋ-ಕಿವೀಸ್​ 2ನೇ ಟಿ20 ಕದನಕ್ಕೆ ರಾಯ್​​ಪುರ ಸ್ಟೇಡಿಯಂ ರೆಡಿಯಾಗಿದೆ. ಇಂದು ಸಂಜೆ ನಡೆಯಲಿರೋ ಮಹಾ ಕದನದಲ್ಲಿ ರನ್​ ಹೊಳೆಯೇ ಹರಿಯಲಿದೆ. ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾದ ರಣಾರ್ಭಟಕ್ಕೆ ನ್ಯೂಜಿಲೆಂಡ್​ ಪಡೆ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಇಂದು ನಡೆಯೋ 2ನೇ ಪಂದ್ಯದಲ್ಲೂ ಅಷ್ಟೇ ಕಿವೀಸ್​ ಕಂಗಾಲ್​ ಆಗೋದು ಕನ್​ಫರ್ಮ್​. ಅಭಿಮಾನಿಗಳಿಗಂತೂ ಫುಲ್​ ಮೀಲ್ಸ್​​ ಎಂಟರ್​​ಟೈನ್​ಮೆಂಟ್​ ಮಿಸ್ಸೇ ಆಗಲ್ಲ.

ಇದನ್ನೂ ಓದಿ:ಅಪರೂಪದ ಘಟನೆ: ಮೂರು ಕಂದಮ್ಮಗಳಿಗೆ ಜನ್ಮ ನೀಡಿದ ಮಂಡ್ಯದ ಮಹಿಳೆ!

SANJU_SAMSON_New (1)

ರಿಧಮ್​ ಕಂಡುಕೊಂಡ ಸಂಜು

ನ್ಯೂಜಿಲೆಂಡ್​ಗೆ ಪವರ್​ ಪ್ಲೇನಲ್ಲೇ ಪಂಚ್​ ಕೊಡೋಕೆ ಇಂಡಿಯನ್​ ಓಪನರ್ಸ್​​ ರೆಡಿಯಾಗಿದ್ದಾರೆ. ಸೌತ್​ ಆಫ್ರಿಕಾ ಎದುರು ಸೈಲೆಂಟ್​ ಆಗಿದ್ದ ಅಭಿಷೇಕ್​ ಶರ್ಮಾ ಕಳೆದ ಪಂದ್ಯದಲ್ಲಿ ವೈಲೆಂಟ್​ ಅವತಾರ ಎತ್ತಿದ್ದಾರೆ. ಅಬ್ಬರಿಸಿ ಬೊಬ್ಬಿರಿದ ಸಿಕ್ಸರ್​ ಕಿಂಗ್​ ಅಭಿಷೇಕ್ ಶರ್ಮಾ ಟ್ರ್ಯಾಕ್​ಗೆ ಮರಳಿದ್ದಾರೆ. ಬಿಗ್​ ಸ್ಕೋರ್​ ಕಲೆ ಹಾಕದಿದ್ರೂ, ಸಂಜು ಸ್ಯಾಮ್ಸನ್​ ಅಗ್ರೆಸ್ಸಿವ್​ ಇಂಟೆಂಟ್​ನಲ್ಲಿ ಬ್ಯಾಟಿಂಗ್​ ನಡೆಸಿ ರಿಧಮ್​ ಕಂಡುಕೊಂಡಿದ್ದಾರೆ. ಓಪನರ್ಸ್​​ ಬ್ಯಾಟಿಂಗ್​ ವೈಖರಿ ನ್ಯೂಜಿಲೆಂಡ್​ ನಿದ್ದೆಗೆಡಿಸಿದೆ. 

ಸೂರ್ಯ, ಹಾರ್ದಿಕ್​, ರಿಂಕು.. ಬ್ಯಾಟಿಂಗ್​ ಬಲ 

ಸತತ ವೈಫಲ್ಯ ಅನುಭವಿಸಿದ್ದ ಸೂರ್ಯಕುಮಾರ್​ ಯಾದವ್​ ನಾಗ್ಪುರದಲ್ಲಿ ಸಮಾಧಾನಕರ ಇನ್ನಿಂಗ್ಸ್​ ಕಟ್ಟಿದ್ರು. ಪಾಂಡ್ಯ ಎಂದಿನ ಶೈಲಿಯಲ್ಲಿ ಬೌಲರ್​​ಗಳ ಮೇಲೆ ಸವಾರಿ ಮಾಡಿದ್ರು. ಅಂತಿಮ ಹಂತದಲ್ಲಿ ಅಬ್ಬರಿಸಿದ ರಿಂಕು ಸಿಂಗ್​ ಸಾಲಿಡ್​ ಫಿನಿಷಿಂಗ್​ ಟಚ್​ ನೀಡಿದ್ರು. ಮಿಡಲ್​ ಆರ್ಡರ್​ ಹಾಗೂ ಲೋವರ್​ ಆರ್ಡರ್​ ಬ್ಯಾಟರ್ಸ್​ ಗುಡ್​ ಟಚ್​ನಲ್ಲಿರೋದ್ರಿಂದ ಬ್ಯಾಟಿಂಗ್​ ಬಲ ಹೆಚ್ಚಿಸಿದೆ. ಟೀಮ್​ ಮ್ಯಾನೇಜ್​ಮೆಂಟ್​​ ಫುಲ್​ ಟೆನ್ಶನ್​ ಫ್ರೀ ಆಗಿದೆ. 

ಇದನ್ನೂ ಓದಿ:RCB ಖರೀದಿಗೆ ಪೂನಾವಾಲಾ ಸಿದ್ಧತೆ.. ಬಿಗ್ ಪ್ಲಾನ್ ರಿವೀಲ್‌ ಮಾಡಿದ ಸೀರಮ್ ಸಿಇಓ..!

Hardik pandya (11)

ತಿಲಕ್​ ವರ್ಮಾ ಇಂಜುರಿಯಿಂದಾಗಿ ಇಶಾನ್​ ಕಿಶನ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಸಿಕ್ಕಿದೆ. ಆದ್ರೆ, ದೀರ್ಘ ಕಾಲದ ಬಳಿಕ ಕಮ್​ಬ್ಯಾಕ್​ ಮಾಡಿರೋ ಕಿಶನ್​ ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ್ರು. ಮೊದಲ ಪಂದ್ಯದಲ್ಲಿ ಫೇಲ್​ ಆದ ಇಶಾನ್​ ಕಿಶನ್​ 2ನೇ ಪಂದ್ಯದಲ್ಲಾದ್ರೂ ಎಚ್ಚೆತ್ತುಕೊಳ್ಳಬೇಕಿದೆ. ಒಂದೊಳ್ಳೆ ಇನ್ನಿಂಗ್ಸ್​ ಮೂಲಕ ಸೆಲೆಕ್ಟರ್ಸ್​ ಹಾಗೂ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ನ ಇಂಪ್ರೆಸ್​ ಮಾಡಬೇಕಿದೆ. ಇಲ್ಲದಿದ್ರೆ, ತಿಲಕ್​ ವರ್ಮಾ ಕಮ್​​​ಬ್ಯಾಕ್​ ಬಳಿಕ ಸೈಡ್​​ಲೈನ್​ ಆಗೋದು ಪಕ್ಕಾ.

ಬೌಲಿಂಗ್​ ಓಕೆ, ಓಕೆ..!

ಇಬ್ಬನಿಯ ಕಾಟದ ನಡುವೆಯೂ ಟೀಮ್​ ಇಂಡಿಯಾ ಬೌಲರ್ಸ್​​ ಮೊದಲ ಟಿ20ಯಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ರು. ಮೆನ್​ ಇನ್​ ಬ್ಲ್ಯೂ ಪಡೆಯ ಫೀಲ್ಡಿಂಗ್​ ತೀರಾ ಕಳಪೆಯಾಗಿತ್ತು. ಕ್ಯಾಚ್​ ಡ್ರಾಪ್​ ಹಾಗೂ ರನೌಟ್​ ಅವಕಾಶಗಳನ್ನ ಮಿಸ್​ ಮಾಡಿದ್ದು, ತಂಡಕ್ಕೆ ಹಿನ್ನಡೆಯಾಯ್ತು. ಸೂರ್ಯನ ಸೈನ್ಯದ ಕಳಪೆ ಫೀಲ್ಡಿಂಗ್​ ಸುಧಾರಿಸಲೇಬೇಕಿದೆ. 

ಇದನ್ನೂ ಓದಿ:ಪುನೀತ್‌ ಕೆರೆಹಳ್ಳಿ ಮತ್ತೆ ಅರೆಸ್ಟ್​.. ಆಗಿದ್ದೇನು..?

Surya kumar yadav

ಮೊದಲ ಪಂದ್ಯದಲ್ಲಿ 48 ರನ್​ಗಳ ಸೋಲುಂಡ ಕಿವೀಸ್​​ ಪಡೆ ಕಮ್​ಬ್ಯಾಕ್​ ಮೇಲೆ ಕಣ್ಣಿಟ್ಟಿದೆ. ಟಾಪ್​ ಆರ್ಡರ್​​ ವೈಫಲ್ಯದ ಹೊರತಾಗಿ ಗ್ಲೇನ್​ ಫಿಲಿಪ್ಸ್​​, ಡೇರಿಲ್​ ಮಿಚೆಲ್​, ಮಾರ್ಕ್​ ಚಾಂಪ್​ಮನ್​ ಗುಡ್​ ಟಚ್​​​ನಲ್ಲಿರೋದು ತಂಡದಲ್ಲಿ ವಿಶ್ವಾಸ ಮೂಡಿಸಿದೆ. ಬೌಲಿಂಗ್​ನಲ್ಲಿ ಜೇಕಬ್​ ಡಫಿ ಒಬ್ಬರೇ ಭರವಸೆಯಾಗಿದ್ದಾರೆ. ರಾಯ್​​ಪುರದಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳಬೇಕಂದ್ರೆ ನ್ಯೂಜಿಲೆಂಡ್​​ ಬೌಲರ್ಸ್​ ಪರ್ಫಾಮ್​ ಮಾಡಬೇಕಿದೆ. 

ರಾಯ್​ಪುರ ಸ್ಟೇಡಿಯಂನಲ್ಲಿ ಇಂದು ರನ್​ಹೊಳೆ ಹರಿಯೋ ನಿರೀಕ್ಷೆಯಿದೆ. ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿಯಾಗೋ ಪಿಚ್​ನಲ್ಲಿ ಬೌಲರ್​​ಗಳಿಗೆ ರಿಯಲ್​ ಚಾಲೆಂಜ್​ ಎದುರಾಗಲಿದೆ. ಡ್ಯೂ ಫ್ಯಾಕ್ಟರ್​ ಮೇಜರ್​ ರೋಲ್​ ಪ್ಲೇ ಮಾಡಲಿದ್ದು, ಚೇಸಿಂಗ್​ ಮಾಡೋ ತಂಡಕ್ಕೆ ಅಂಡ್ವಾಂಟೇಜ್​ ಜಾಸ್ತಿ. ಒಟ್ಟಿನಲ್ಲಿ, ರಾಯ್​​ಪುರದಲ್ಲಿ ಇಂದು ಹೊಡಿಬಡಿ ಆಟ ನಡೆಯಲಿದ್ದು, ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಯಲಿದೆ. ಅಭಿಮಾನಿಗಳಿಗೆ ಜಬರ್ದಸ್ತ್​​ ಎಂಟರ್​ಟೈನ್​ಮೆಂಟ್​ ಕಾದಿದೆ. 

ಇದನ್ನೂ ಓದಿ: ಗಿಲ್ಲಿ ಕಂಡಾಗ ಸಿದ್ದು ರಿಯಾಕ್ಷನ್ ಹೇಗಿತ್ತು..? ಘಟನೆ ವಿವರಿಸಿದ ಗಿಲ್ಲಿ ನಟ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

team india squad India vs NewZealand IND vs NZ
Advertisment