Advertisment

ಕಾಣೆಯಾದ ಕೊಹ್ಲಿ.. ಎಲ್ಲಿದ್ದಾರೆ ರನ್​ ಮಷಿನ್..? ಆಸ್ಟ್ರೇಲಿಯಾದಿಂದ ಹೋಗಿದ್ದೆಲ್ಲಿಗೆ?

ಇಂಡೋ-ಆಫ್ರಿಕಾ 2ನೇ ಟೆಸ್ಟ್​ ಪಂದ್ಯಕ್ಕಿಂತ ಅದಾದ ಬಳಿಕ ನಡೆಯೋ ಏಕದಿನ ಸರಣಿಯ ಕಾವು ಕ್ರಿಕೆಟ್​ ಲೋಕವನ್ನ ಆವರಿಸ್ತಿದೆ. ಮಹತ್ವದ ಸರಣಿಗೆ ಟೀಮ್​ ಸೆಲೆಕ್ಷನ್​ ಪ್ರಕ್ರಿಯೆ ಸದ್ದಿಲ್ಲದೇ ಆರಂಭವಾಗಿದೆ. ಇದ್ರ ನಡುವೆ ಕಾಣೆಯಾದ ಕೊಹ್ಲಿಯ ಹುಡುಕಾಟವೂ ಜೋರಾಗಿದೆ.

author-image
Ganesh Kerekuli
VIRAT_KOHLI_1 (1)
Advertisment

ಇಂಡೋ-ಆಫ್ರಿಕಾ 2ನೇ ಟೆಸ್ಟ್​ ಆರಂಭಕ್ಕೂ ಮುನ್ನವೇ ಏಕದಿನ ಸರಣಿಗೆ ಸಿದ್ಧತೆ ಸದ್ದಿಲ್ಲದೇ ಆರಂಭವಾಗಿದೆ. ಟೀಮ್​ ಸೆಲೆಕ್ಷನ್​ಗೆ ಕೌಂಟ್​​ಡೌನ್​ ಆರಂಭವಾಗಿದ್ದು, ಮ್ಯಾನೇಜ್​ಮೆಂಟ್​​ ಹಾಗೂ ಸೆಲೆಕ್ಷನ್​ ಕಮಿಟಿ ಹೈವೋಲ್ಟೆಜ್​ ಸಭೆಗಳನ್ನ ನಡೆಸ್ತಿವೆ. ಗಿಲ್​ ಇಂಜುರಿ, ಪಾಂಡ್ಯ ಇಂಜುರಿ, ಬೂಮ್ರಾ ರೆಸ್ಟ್​ ನೀಡೋ ವಿಚಾರದ ಬಗ್ಗೆ ಚರ್ಚೆಗಳು ನಡೆದಿವೆ. ಇದೇ ವೇಳೆ ವಿರಾಟ್​ ಕೊಹ್ಲಿ ಎಲ್ಲಿ ಎಂಬ ಪ್ರಶ್ನೆಯೂ ಹುಟ್ಟಿದೆ. ಆದ್ರೆ ಉತ್ತರ ಸಿಕ್ಕಿಲ್ಲ. 

Advertisment

ಎಲ್ಲಿದ್ದಾರೆ ವಿರಾಟ್​​.?

ಸೌತ್​ ಆಫ್ರಿಕಾ ಎದುರಿನ ಒನ್​ ಡೇ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಹುಡುಕಾಟ ನಡೀತಿದೆ. ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಅಂದು ಪಂದ್ಯ ಮುಗಿದ ಬಳಿಕ ಟೀಮ್​ ಬಸ್​ ಹತ್ತಿ ಹೊರಟ ವಿರಾಟ್​ ಕೊಹ್ಲಿ ಆ ಬಳಿಕ ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ಮಾಯದಲ್ಲಿ ಕಾಂಗರೂ ನಾಡಿಂದ ಆಂಗ್ಲರ ನಾಡಿಗೆ ಹೋದ್ರೂ ಅನ್ನೋದು ಯಾರಿಗೂ ಗೊತ್ತಿಲ್ಲ. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಕೊಹ್ಲಿ ನಿಗೂಢ ಮನುಷ್ಯನಾಗಿ ಉಳಿದುಬಿಟ್ಟಿದ್ದಾರೆ.

ಇದನ್ನೂ  ಓದಿ: ‘ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿ ಕ್ಲೀನ್​ಸ್ವೀಪ್ ಮಾಡಿದ್ರೆ..’ ತಲೆದಂಡ ಫಿಕ್ಸ್​!

VIRAT_KOHLI

ಲಂಡನ್​ನಲ್ಲಿ ಏನ್ ​ಮಾಡ್ತಿದ್ದಾರೆ ವಿರಾಟ್?

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಕೊಹ್ಲಿ ಲಾರ್ಡ್ಸ್​​ ಕ್ರಿಕೆಟ್​​ ಗ್ರೌಂಡ್ಸ್​ನಲ್ಲಿ ಅಭ್ಯಾಸವನ್ನ ನಡೆಸ್ತಿದ್ದ ಫೋಟೋಗಳು, ವಿಡಿಯೋಗಳಾದ್ರೂ ಹರಿದಾಡಿದ್ವು. ಆದ್ರೆ, ಸೌತ್​ ಆಫ್ರಿಕಾ ಸರಣಿಗೆ ದಿನಗಣನೆ ಆರಂಭವಾಗಿದ್ರೂ ವಿರಾಟ್​ ಕೊಹ್ಲಿಯ ಸುಳಿವೇ ಇಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕೊಹ್ಲಿ ಏನ್ಮಾಡ್ತಿದ್ದಾರೆ ಎಂಬ ಪ್ರಶ್ನೆಯಿದೆ. ಸದ್ಯ ಲಂಡನ್​ನಲ್ಲಿ ಬೀಡು ಬಿಟ್ಟಿರೋ ಕೊಹ್ಲಿ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಇದ್ರ ಜೊತೆಗೆ ನೆಟ್​​ ಸೆಷನ್​ನಲ್ಲೂ ಭಾಗಿಯಾಗ್ತಿದ್ದಾರೆ. ಫಿಟ್​​ನೆಸ್​​ ಮೇಲೂ ಫೋಕಸ್​ ಮಾಡ್ತಿರೋ ವಿರಾಟ್​ ಜಿಮ್​​ನಲ್ಲೂ ಬೆವರಿಳಿಸ್ತಾ ಇದ್ದಾರೆ ಅನ್ನೋದು ಮೂಲಗಳ ಮಾಹಿತಿ. 

Advertisment

ಆಟ ಅಷ್ಟಕಷ್ಟೇ

ಸುದೀರ್ಘ ಅಂತರದ ಬಳಿಕ ಕಾಂಗರೂ ನಾಡಲ್ಲಿ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿದ ಕೊಹ್ಲಿ ಮೊದಲ 2 ಪಂದ್ಯಗಳಲ್ಲಿ ಆಗಿದ್ದು ಡೌಕೌಟ್​. ಅಡಿಲೇಡ್​, ಪರ್ತ್​​ನಲ್ಲಿ ಸೊನ್ನೆ ಸುತ್ತಿದ​ ವಿರಾಟ್​ ಕೊಹ್ಲಿ, ಸಿಡ್ನಿಯಲ್ಲಿ ಹಳೆ ಖದರ್​ನಲ್ಲಿ ಬ್ಯಾಟ್​ ಬೀಸಿ ಕೊಹ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. ಅಜೇಯ 74 ರನ್​ಗಳ ಇನ್ನಿಂಗ್ಸ್​ನೊಂದಿಗೆ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಆ ಇನ್ನಿಂಗ್ಸ್​ ಐಸಿಯುನಲ್ಲಿದ್ದ ಕರಿಯರ್​ಗೆ ಆಕ್ಸಿಜನ್​ ನೀಡಿದ್ಯೆ ಹೊರತು ಸೇಫ್​ ಮಾಡಿಲ್ಲ. 

ಮುಂಬರುವ ಸೌತ್​ ಅಫ್ರಿಕಾ ಎದುರಿನ ಏಕದಿನ ಸರಣಿ ವಿರಾಟ್​ ಕೊಹ್ಲಿ ಪಾಲಿಗೆ ಮಹತ್ವದ ಸರಣಿ. ವಿರಾಟ್​ ಕೊಹ್ಲಿ ಒನ್​ ಡೇ ಕ್ರಿಕೆಟ್​ನ ಭವಿಷ್ಯವೇ ಈ ಸರಣಿಯ ಮೇಲೆ ನಿಂತಿದೆ ಅಂದ್ರೆ ತಪ್ಪಾಗಲ್ಲ. 2027ರ ವಿಶ್ವಕಪ್​ ಆಡಬೇಕು ಅನ್ನೋ ಬಿಗ್​ ಡ್ರೀಮ್​ ನನಸಾಗಬೇಕಂದ್ರೆ ಈ ಸರಣಿಯಲ್ಲಿ ವಿರಾಟರೂಪ ದರ್ಶನವಾಗಬೇಕಿದೆ. ಕನ್ಸಿಸ್ಟೆಂಟ್​ ಆಗಿ ರನ್​ಗಳಿಸಿ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿಯನ್ನ ಇಂಪ್ರೆಸ್​ ಮಾಡಬೇಕಿದೆ. ಚನ್ನಾಗಿ ಆಡಿದ್ರೆ ಸ್ಥಾನ ಸೇಫ್​.! ಇಲ್ಲದಿದ್ರೆ ಸಂಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ: ನಾಳೆ ಸ್ಮೃತಿ ಮಂದಾನ ಮದುವೆ.. ಭಾವಿ ಪತಿ ಸರ್ಪ್ರೈಸ್​​ಗೆ ಭಾವುಕರಾದ RCB ಸುಂದರಿ..!

Advertisment

ಒಟ್ಟಿನಲ್ಲಿ ಕೊಹ್ಲಿ ಕಾರಣಕ್ಕೆ ನವೆಂಬರ್​ 30ರಿಂದ ಆರಂಭವಾಗೋ 3 ಪಂದ್ಯಗಳ ಏಕದಿನ ಸರಣಿಯ ಕಾವು ಈಗಲೇ ಜೋರಾಗಿದೆ. ಸುದೀರ್ಘ ಅಂತರದ ಬಳಿಕ ಭಾರತದ ನೆಲದಲ್ಲಿ ಕೊಹ್ಲಿ ಕಣಕ್ಕಿಳಿತಾ ಇರೋದು ಒಂದೆಡೆಯಾದ್ರೆ, ಇನ್ನೊಂದೆಡೆ ವಿರಾಟ್​ ಪಾಲಿಗೆ ಇದು ಡೈ ಆರ್​ ಡೈ ಸರಣಿ. ಹೀಗಾಗಿ ಅಭಿಮಾನಿಗಳ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli
Advertisment
Advertisment
Advertisment