ಗಾಢ ನಿದ್ದೆಯಿಂದ ಬೆಚ್ಚಿಬಿದ್ದ ಸ್ಪರ್ಧಿಗಳು.. ಮಿಡ್​ನೈಟ್ ಎಲಿಮಿನೇಷನ್​​ನಲ್ಲಿ ಔಟ್ ಆಗಿದ್ಯಾರು?

ಈ ವಾರಾಂತ್ಯದವರೆಗಾದರೂ ತಾವು ಸೇಫ್‌ ಆಗಿ ಇರ್ತೀವಲ್ಲ ಅಂದುಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮಧ್ಯರಾತ್ರಿ ಬಿಗ್‌ಶಾಕ್‌ ನೀಡಿದ್ದಾರೆ. ಮಿಡ್‌ವೀಕ್‌ ಎಲಿಮಿನೇಷನ್‌ ಅನ್ನೋ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ.

author-image
Ganesh Kerekuli
Bigg Boss (13)
Advertisment

ಬಿಗ್‌ಬಾಸ್‌ ಮೊದಲ ಗ್ರ್ಯಾಂಡ್‌ ಫಿನಾಲೆ ವೀಕ್‌ ಇದು. ಈ ಸೀಸನ್‌ ಹಿಂದಿನ ಎಲ್ಲ ಸೀಸನ್‌ಗಳಿಗಿಂತ ಭಿನ್ನವಾಗಿರಲಿದ್ದು, ಮಾಸ್‌ ಎಲಿಮಿನೇಷನ್‌ ನಡೆಯಲಿದೆ ಎಂದು ಸ್ಪರ್ಧಿಗಳೆಲ್ಲ ತಮ್ಮನ್ನು ಮನೆಯಲ್ಲಿ ಉಳಿಸಿಕೊಳ್ಳೋಕೆ ಎಲ್ಲ ಯತ್ನವನ್ನೂ ಮಾಡಿದ್ದರು. ಇದರ ನಡುವೆಯೇ ಈಗ ಯಾರೂ ಊಹಿಸಿರದ ಸಸ್ಪೆನ್ಸ್‌ ಎದುರಾಗಿದೆ. 

ಇದನ್ನೂ ಓದಿ:ಫಿನಾಲೆಗೂ ಮುನ್ನವೇ ಬಿಗ್​ಬಾಸ್ ಬಿಗ್ ಶಾಕ್​.. ಇವತ್ತು ಒಬ್ಬರು ಔಟ್​​..!

bb12

ಈ ವಾರಾಂತ್ಯದವರೆಗಾದರೂ ತಾವು ಸೇಫ್‌ ಆಗಿ ಇರ್ತೀವಲ್ಲ ಅಂದುಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮಧ್ಯರಾತ್ರಿ ಬಿಗ್‌ಶಾಕ್‌ ನೀಡಿದ್ದಾರೆ. ಮಿಡ್‌ವೀಕ್‌ ಎಲಿಮಿನೇಷನ್‌ ಅನ್ನೋ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ.

ಇದು ಬಿಗ್‌ಬಾಸ್​ನ ಮೊದಲ ಗ್ರ್ಯಾಂಡ್‌ ಫಿನಾಲೆ ವಾರ. ಇಲ್ಲಿ ಮಾಸ್‌ ಎಲಿಮಿನೇಷನ್‌ ಆಗಬಹುದು. ಮನೆಯೊಳಗಿರೋ ಸ್ಪರ್ಧಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಹೊರಕ್ಕೆ ಹೋಗಿ ಹೊಸ ಸ್ಪರ್ಧಿಗಳೇ ಎಂಟ್ರಿ ಕೊಡಬಹುದು ಎಂದು ಸುದೀಪ್‌ ಕಳೆದ ವಾರವೇ ಎಚ್ಚರಿಕೆ ನೀಡಿದ್ದರು. ಹಾಗಾಗಿ ಸ್ಪರ್ಧಿಗಳಿಗೆ ಈ ವೀಕೆಂಡ್‌ ದೊಡ್ಡ ಟ್ವಿಸ್ಟ್‌ ಸಿಗಲಿದೆ ಅನ್ನೋ ನಿರೀಕ್ಷೆ ಇತ್ತು. ವೀಕೆಂಡ್‌ ಟ್ವಿಸ್ಟ್‌ ನಿರೀಕ್ಷೆ ಮಾಡ್ತಿದ್ದ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮಿಡ್‌ವೀಕ್‌ ಟ್ವಿಸ್ಟ್‌ ಪರಿಚಯಿಸಿದ್ದಾರೆ.

ಇದನ್ನೂ ಓದಿ: BBK 12 : ರಕ್ಷಿತಾ ಶೆಟ್ಟಿ ಮೈ ಮೇಲೆ ದೆವ್ವ ! ಜಾಹ್ನವಿ-ಅಶ್ವಿನಿ ಪಿತೂರಿಗೆ ಕಣ್ಣೀರಿಟ್ಟ ರಕ್ಷಿತಾ !

Bigg-Boss-12
Photograph: (colors kannada)

ಆರಾಮಾಗಿ ನಿದ್ದೆ ಮಾಡುತ್ತಿದ್ದ ಸ್ಪರ್ಧಿಗಳನ್ನು ಮಧ್ಯರಾತ್ರಿ ಬೆಲ್‌ ಬಾರಿಸಿ ಎಬ್ಬಿಸಿ ಓರ್ವ ಸ್ಪರ್ಧಿ ವಾರಾಂತ್ಯದವರೆಗೂ ಉಳಿಯದೆ ವಾರದ ಮಧ್ಯದಲ್ಲೇ ಮನೆಯಿಂದ ಹೊರಕ್ಕೆ ಹೋಗಲಿದ್ದಾರೆ ಎಂದು ಹೇಳಿದ್ದಾರೆ. ಯಾವ ಸ್ಪರ್ಧಿಯನ್ನು ಮನೆಯಿಂದ ಹೊರಕ್ಕೆ ಹಾಕಬೇಕು ಎಂದು ವೋಟಿಂಗ್‌ ಮಾಡಲು ಹೇಳಿದ್ದು, ಯಾರಿಗೆ ಹೆಚ್ಚು ವೋಟ್‌ ಬಿದ್ದಿದೆ. ಯಾರು ವಾರದ ಮಧ್ಯದಲ್ಲೇ ಮನೆಯಿಂದ ಹೊರಕ್ಕೆ ಹೋಗುತ್ತಾರೆ ಅನ್ನೋದನ್ನು ಇವತ್ತಿನ ಎಪಿಸೋಡ್‌ನಲ್ಲಿ ನೋಡಬೇಕು. 

ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರಿವೇಂಜ್‌ ತಗೊಂಡ ಸ್ಪಂದನಾ! : ಧ್ರುವಂತ್‌ ರನ್ನು ಟಾಸ್ಕ್ ನಿಂದ ಬ್ಲಾಕ್ ಮಾಡಿದ ಸ್ಪಂದನಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Bigg boss midnight elimination
Advertisment