ಒಬ್ಬರಾದ ಮೇಲೆ ಒಬ್ಬರು ಲಾರಿ ಮೇಲೆ ಹತ್ತಿ ಏನ್ ಮಾಡಿದ್ರು ಗೊತ್ತಾ?
ಸೈಲೆಂಟ್ ಆಗಿ ಲಾರಿಯನ್ನು ಹಿಂಬಾಲಿಸಿದ ಮೂವರು ದುಷ್ಕರ್ಮಿಗಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಕಳ್ಳರ ಕೈಚಳಕದ ವಿಡಿಯೋ
ಭೋಪಾಲ್: ಅಬ್ಬಬ್ಬಾ.. ಇವರು ಅಂತಿಂಥ ಕಳ್ಳರಲ್ಲ ಕಣ್ರಿ.. ಖತರ್ನಾಕ್ ಕಳ್ಳರು. ಸಾಮಾನ್ಯವಾಗಿ ಈ ರೀತಿಯ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಸ್ಯಾಂಡಲ್ವುಡ್ ನಟ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ಮೂಡಿ ಬಂದ ದೃಶ್ಯದ ಹಾಗೇ ಮೂವರು ತಮ್ಮ ಕೈಚಳಕ ತೋರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಇವರ ಪ್ಲಾನ್ಗೆ ಹಾಗೂ ಧೈರ್ಯಕ್ಕೆ ಮೆಚ್ಚಲೇಬೇಕು ಅಂತಿದ್ದಾರೆ.
ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ನತಾಶಾ ಪ್ರೇಮ್ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!
ಅಸಲಿಗೆ ಆಗಿದ್ದೇನು..?
ಮೂವರು ಮೂರು ದುಷ್ಕರ್ಮಿಗಳು ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಹತ್ತಿ ಬಟ್ಟೆಯ ಬಾಕ್ಸ್ ಅನ್ನು ಲೂಟಿ ಮಾಡಿದ್ದಾರೆ. ಇದೇ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗಿದೆ.
America : The Fast And Furious 11 will be the ultimate
Indian chor : hold my pulser pic.twitter.com/9b6PN0MCqe
— Raja Babu (@GaurangBhardwa1) May 25, 2024
ಹೌದು, ಲಾರಿಯೊಂದರಲ್ಲಿ ಬಟ್ಟೆಗಳ ಮೂಟೆಗಳನ್ನು ಸಾಗಿಸಲಾಗುತ್ತಿತ್ತು. ಇದೇ ವೇಳೆ ಲಾರಿಯನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಒಬ್ಬರಾದ ಮೇಲೆ ಒಬ್ಬರು ಲಾರಿ ಮೇಲೆ ಹತ್ತಿದ್ದಾರೆ. ಬಳಿಕ ಬಟ್ಟೆಗಳ ಮೂಟೆಯನ್ನು ಕೆಳಗಡೆ ಬಿಸಾಡಿದ್ದಾರೆ. ಆ ನಂತರ ಭಯಾನಕವಾಗಿ ಲಾರಿಯಿಂದ ಪಲ್ಸರ್ ಬೈಕ್ಗೆ ಜಪ್ ಮಾಡಿ ಅಲ್ಲಿಂದ ಆರಾಮಾಗಿ ಎಸ್ಕೇಪ್ ಆಗಿದ್ದಾರೆ. ಇದನ್ನು ನೋಡದ ಮತ್ತೊಬ್ಬ ಕಾರು ಚಾಲಕ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಖತರ್ನಾಕ್ ಕಳ್ಳರ ಕೈಚಳಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ