‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!

author-image
Ganesh
Updated On
‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!
Advertisment
  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಘಟನೆ ಇದು
  • ದ್ವಿಚಕ್ರ ಚಾಲನೆ ಮಾಡುವಾಗ ಸಂಚಾರಿ ನಿಯಮ ಉಲ್ಲಂಘನೆ
  • ಪೊಲೀಸರ ಕಣ್ಣಿಗೆ ಬೀಳ್ತಿದ್ದಂತೆ ಮಾಡಿದ್ದೇ ಬೇರೆ? ಮಾಡಿದ್ದೇನು?

ಶಿವಮೊಗ್ಗ: ಅಪ್ರಾಪ್ತನಿಗೆ ಬೈಕ್ ಓಡಿಸಲು ಅವಕಾಶ ಮಾಡಿಕೊಟ್ಟ ತಂದೆಗೆ ತೀರ್ಥಹಳ್ಳಿ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ತೀರ್ಥಹಳ್ಳಿ ಟೌನ್ ಪೊಲೀಸರು ದೊಡ್ಮನೆ ಕೇರಿಯ ಹತ್ತಿರ ಇತ್ತೀಚೆಗೆ ವಾಹನ ತಪಾಸಣೆ ಮಾಡುವಾಗ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಚಾಲನಾ ಪರವಾನಗಿ ಇಲ್ಲದೆ ದ್ವಿಚಕ್ರ ಚಾಲನೆ ಮಾಡಿ ಸಂಚಾರಿ ನಿಯಮವನ್ನುಉಲ್ಲಂಘನೆ ಮಾಡಿದ್ದು ಪತ್ತೆಯಾಗಿತ್ತು.

ಇದನ್ನೂ ಓದಿ:‘ದರ್ಶನ್ ಜೊತೆ ಸೇರಿ ಹಾಳಾದ..’ ಅಯ್ಯೋ ಪಾಪ ಅನಿಸುವ ಹಾಗಿದೆ ದರ್ಶನ್ ಅತ್ಯಾಪ್ತನ ಕತೆ..

publive-image

ಈ ಸಂಬಂಧ ತೀರ್ಥಹಳ್ಳಿ ಠಾಣೆ ಪೊಲೀಸರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಬಾಲಕನ ತಂದೆ ಮೊಹಮ್ಮದ್ ಹಯಾನ್ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ:ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​ಗೆ ಟ್ವಿಸ್ಟ್​.. 5 ಕೋಟಿಗಾಗಿ ಬ್ಲ್ಯಾಕ್​ಮೇಲ್ ಆರೋಪ..!

publive-image

ವಿಚಾರಣೆ ನಡೆಸಿದ ತೀರ್ಥಹಳ್ಳಿ ಪಿಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಬಾಲಕನ ತಂದೆ ಮೊಹಮ್ಮದ್ ಹಯಾನ್ ಗೆ ರೂ 25,000 ದಂಡ ವಿಧಿಸಿದೆ.

ಇದನ್ನೂ ಓದಿ:ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment