ಭಾವಿ ಪತಿಗೆ ದುಬಾರಿ ಸರ್ಪ್ರೈಸ್ ಗಿಫ್ಟ್ ಕೊಟ್ಟ ನಟಿ ಶೋಭಾ ಶೆಟ್ಟಿ; ಏನದು?

author-image
Veena Gangani
Updated On
ಭಾವಿ ಪತಿಗೆ ದುಬಾರಿ ಸರ್ಪ್ರೈಸ್ ಗಿಫ್ಟ್ ಕೊಟ್ಟ ನಟಿ ಶೋಭಾ ಶೆಟ್ಟಿ; ಏನದು?
Advertisment
  • ಕನ್ನಡದಿಂದ ತೆಲುಗಿನ ಅಂಗಳದಲ್ಲಿ ಮಿಂಚುತ್ತಿರೋ ನಟಿ ಶೋಭಾ ಶೆಟ್ಟಿ
  • ಬಿಗ್​​ಬಾಸ್ ಸೀಸನ್ 7ಕ್ಕೆ ಎಂಟ್ರಿ ಕೊಟ್ಟು ಫ್ಯಾನ್ಸ್​ ಗಳಿಸಿಕೊಂಡಿದ್ದ ನಟಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹೊಸ ಫೋಟೋಸ್​

ಕನ್ನಡ ಕಿರುತೆರೆ ನಟಿ ಶೋಭಾ ಶೆಟ್ಟಿ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಗಮನ ಸೆಳೆದಿದ್ದರು. ಕನ್ನಡ ಸೀರಿಯಲ್​ನಲ್ಲಿ ಮಿಂಚಿದ್ದ ಶೋಭಾ ಅವರು ಸದ್ಯ ತೆಲುಗಿನ ಅಂಗಳದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ.

publive-image

ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

ಮೊನ್ನೆ ಮೊನ್ನೆಯಷ್ಟೇ ನಟಿ ಶೋಭಾ ಶೆಟ್ಟಿ ಅವರು ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಯಶವಂತ್ ರೆಡ್ಡಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡು ಫ್ಯಾನ್ಸ್​ಗೆ ಗುಡ್​ನ್ಯೂಸ್​ ನೀಡಿದ್ದರು. ಇದೀಗ ಶೋಭಾ ಶೆಟ್ಟಿ ಭಾವಿ ಪತಿ ಯಶವಂತ್ ರೆಡ್ಡಿ ಅವರ ಹುಟ್ಟು ಹಬ್ಬಕ್ಕೆ ಸರ್​ಪ್ರೈಸ್​ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ.

publive-image

ಬೀಸ್ಟ್ ಎಕ್ಸ್‌ಯುವಿ 700 ಕಾರ್‌ ಅನ್ನು ಭಾವಿ ಪತಿ ಯಶ್ವಂತ್ ರೆಡ್ಡಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇನ್ನು, ಬೀಸ್ಟ್ ಎಕ್ಸ್‌ಯುವಿ 700 ಕಾರಿನ ಬೆಲೆ ಬರೋಬ್ಬರಿ 17.71 ಲಕ್ಷದ್ದಾಗಿದೆ. ಸದ್ಯ ಹೊಸ ಕಾರಿನ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

publive-image

ದೇ ಫೋಟೋ ನೋಡಿದ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಈಗಾಗಲೇ ನಟಿ ಶೋಭಾ ಹೈದರಾಬಾದ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ಗೃಹ ಪ್ರವೇಶ ಕೂಡ ಆಗಿದ್ದು, ಮುಂದಿನ ತಿಂಗಳು ಆ ಮನೆಗೆ ಶಿಫ್ಟ್ ಆಗಲಿದ್ದಾರೆ. ಕನ್ನಡದ ಹಿಟ್​​ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಟಿ ಶೋಭಾ ಅಭಿನಯಿಸಿದ್ದರು. ಈ ಧಾರಾವಾಹಿ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.


ಇದನ್ನೂ ಓದಿ:Kalki 2898AD ಟ್ರೇಲರ್​ ನೋಡಿದ್ರಾ? ನಿಮಗಿದೆ 1 ಲಕ್ಷ ರೂಪಾಯಿ ಬಹುಮಾನ ಗೆಲ್ಲೋ ಅವಕಾಶ! ಮಿಸ್​​ ಮಾಡ್ಬೇಡಿ

ಬಳಿಕ ಬಿಗ್​​ಬಾಸ್ ಸೀಸನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿ ಇನ್ನೂ ಹೆಚ್ಚು ಫ್ಯಾನ್ಸ್​ಗಳ ಮನಸ್ಸನ್ನು ಗೆದ್ದುಕೊಂಡಿದ್ದರು. ಇದೇ ವೇಳೆ ಬಿಗ್​ಬಾಸ್​ ವೇದಿಕೆ ಮೇಲೆಯೇ ಶೋಭಾ ಅವರು ತಮ್ಮ ಬಾಯ್‌ಫ್ರೆಂಡ್ ಯಾರು ಎಂಬುವುದನ್ನು ರಿವೀಲ್ ಸಹ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment