newsfirstkannada.com

ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

Share :

Published September 13, 2024 at 9:26am

    ಹೊಸ ಅವತಾರದಲ್ಲಿ ಶ್ರೇಯಾಂಕಾ ಪಾಟೀಲ್

    ಶ್ರೇಯಾಂಕಾ ಡಾನ್​​ ಮ್ಯಾನರಿಸಮ್​​ಗೆ ಫುಲ್ ಮಾರ್ಕ್​

    ಆಟ, ಪಾಠಕ್ಕೂ ಸೈ ನಟನೆಗೂ ಜೈ ಎಂದ ಶ್ರೇಯಾಂಕಾ

ಶ್ರೇಯಾಂಕಾ ಪಾಟೀಲ್.. ಈ ಕನ್ನಡದ ಕವರಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಯಾ ಕ್ರಶ್​​​​​. ಆನ್​ಫೀಲ್ಡ್​ನಲ್ಲಿ ತನ್ನ ಆಲ್​​ರೌಂಡ್​​ ಆಟದಿಂದ ರಂಜಿಸಿರುವ ಈ ಬ್ಯೂಟಿ, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೇಯಾಂಕಾ ಪಾಟೀಲ್, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್​. ಟೀಮ್ ಇಂಡಿಯಾಗೆ ಕಾಲಿಟ್ಟು ವರ್ಷ ಕಳೆದಿಲ್ಲ. ಈಗಾಗ್ಲೆ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಶ್ರೇಯಾಂಕ ಆಟಕ್ಕೆ, ನೋಟಕ್ಕೆ ಕ್ಲೀನ್​ಬೋಲ್ಡ್​ ಆದವರಿಗೆ ಬರವಿಲ್ಲ. ಟೀಮ್ ಇಂಡಿಯಾ ಹಾಗೂ ಆರ್​​ಸಿಬಿ ಪರ ಆಡಿ ಮೋಡಿ ಮಾಡಿರುವ ಈ ಚೆಂದುಳ್ಳಿ ಚೆಲುವೆ, ಅಭಿಮಾನಿಗಳ ನಯಾ ಕ್ರಶ್​.. ಅಭಿಮಾನಿಗಳ ಪಾಲಿನ ಪ್ರೀತಿಯ ಕುಟ್ಟಿ. ಕ್ರಿಕೆಟ್​ ಆಟದಿಂದಲೇ ಮೋಡಿ ಮಾಡಿ ಸೆನ್ಸೇಷನ್​ ಸೃಷ್ಟಿಸಿರೋ ಶ್ರೇಯಾಂಕಾ, ಇದೀಗ ಆಫ್​ ದ ಫೀಲ್ಡ್​ನಲ್ಲೂ ಸಖತ್​ ಸದ್ದು ಮಾಡ್ತಿದ್ದಾರೆ.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ಹೊಸ ಅವತಾರದಲ್ಲಿ ಶ್ರೇಯಾಂಕಾ ಪಾಟೀಲ್!
ಆನ್​ಫೀಲ್ಡ್​ನಲ್ಲಿ ಬ್ಯಾಟ್​​​, ಬಾಲ್​, ಫೀಲ್ಡಿಂಗ್​​​ನಿಂದ ಮ್ಯಾಜಿಕ್​ ಮಾಡ್ತಿದ್ದ ಶ್ರೇಯಾಂಕಾ, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಜಸ್ಟ್ ರೀಲ್ಸ್​ಗೆ ಸಿಮೀತವಾಗಿದ್ದ ಶ್ರೇಯಾಂಕಾ, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಜಾಹೀರಾತು ಒಂದರಲ್ಲಿ ಡಾನ್​​​ ಪಾತ್ರದಲ್ಲಿ ಕಾಣಿಸಿಕೊಂಡು ಹವಾ ಸೃಷ್ಟಿಸಿದ್ದಾರೆ. ಈಕೆಯ ನಟನೆಗೆ ಫ್ಯಾನ್ಸ್​ ಅಂತೂ ಸಖತ್ ಫಿದಾ ಆಗಿದ್ದಾರೆ.

ರೌಡಿ ಬೇಬಿಯ ನ್ಯಾಚುರಲ್ ಆ್ಯಕ್ಟಿಂಗ್​​ಗೆ ಬಹುಪರಾಕ್
ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶ್ರೇಯಾಂಕಾ, ರಗಡ್ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಪಕ್ಕಾ ರೌಡಿ ಸ್ಟ್ರೈಲ್​​​​ನಲ್ಲಿ ಪೋಸ್​ ಕೊಟ್ಟಿರುವ ಕನ್ನಡತಿಯ ಮ್ಯಾನರಿಸಮ್​​​​ಗೆ ನೋಡುಗರು ಫುಲ್ ಮಾರ್ಕ್​ ನೀಡಿದ್ದಾರೆ. ಶ್ರೇಯಾಂಕಾಳ ನ್ಯಾಚುರಲ್ ಆ್ಯಕ್ಟಿಂಗ್​ ಸ್ಕಿಲ್ಸ್​ಗೆ ಫ್ಯಾನ್ಸ್ ಬಹುಪರಕ್ ಎಂದಿದ್ದಾರೆ. ಇದು ರಾಹುಲ್​ ದ್ರಾವಿಡ್​​ರ ಇಂದಿರ ನಗರ್ ಕಾ ಗೂಂಡಾ ಜಾಹೀರಾತನ್ನೇ ಕನ್ನಡಿಗರಿಗೆ ನೆನಪಿಸ್ತಿರೋದು ಸುಳ್ಳಲ್ಲ.

ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್​​ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?

‘ರೀಲ್ಸ್​ ರಾಣಿ’ ಈ ಶ್ರೇಯಾಂಕಾ..!
ಶ್ರೇಯಾಂಕಾ ಜಾಹೀರಾತು ಸಖತ್ ಸೌಂಡ್ ಮಾಡ್ತಿದೆ. ಇದಕ್ಕೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಶ್ರೇಯಾಂಕಾ ಟ್ರೆಂಡ್ ಸೆಟ್ ಮಾಡಿದ್ದಾರೆ. ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ರೀಲ್ಸ್​ ಲೋಕದಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ಸಿನಿಮಾ ಪ್ರಮೋಷನ್​​​ಗಳಲ್ಲಿ, ಟಿವಿ ಶೋಗಳು ಸೇರಿದಂತೆ ಕೆಲ ಈವೆಂಟ್​ಗಳಲ್ಲೂ ಶ್ರೇಯಾಂಕ ಕಾಣಿಸಿಕೊಂಡು ಸೊಂಟ ಬಳುಕಿಸಿದ್ದಿದೆ. ಆದ್ರೆ, ಇದೇ ಫಸ್ಟ್​ ಟೈಮ್​, ಕಂಪ್ಲೀಟ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶ್ರೇಯಾಂಕಾ, ಆಟ, ಪಾಠಕ್ಕೆ ಮಾತ್ರವೇ ಅಲ್ಲ. ನಟನೆಗೂ ನಾ ಸೈ ಅನ್ನೋದನ್ನ ನಿರೂಪಿಸಿದ್ದಾರೆ.

ಆನ್​ ಫೀಲ್ಡ್​ ಆ್ಯಂಡ್ ಅಂಡ್ ಆಫ್​​​ ದಿ ಫೀಲ್ಡ್​ನಲ್ಲಿ ಒಂದಿಲ್ಲೊಂದು ರೀತಿಯಾಗಿ ಎಂಟರ್​ಟೈನ್ಮೆಂಟ್ ನೀಡ್ತಿರೋ ಶ್ರೇಯಾಂಕಾಗೆ ಸಪರೇಟ್​ ಫ್ಯಾನ್​​ ಬೇಸ್​​ ಇದೆ. ಈ ಪ್ರಸಿದ್ಧಿಯೇ ಇದೀಗ ಜಾಹೀರಾತುದಾರರು ಮುಗಿ ಬೀಳುವಂತೆ ಮಾಡ್ತಿದೆ.

ಇದನ್ನೂ ಓದಿ:ಬಿಸಿಸಿಐ ಮಾನಹಾನಿ ಮಾಡಿದವರಿಗೆ ಕಪಾಳಮೋಕ್ಷ; ಸತ್ಯ ಬಿಚ್ಚಿಟ್ಟ ಅಫ್ಘಾನ್ ಕ್ರಿಕೆಟ್​ ಮಂಡಳಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶ್ರೇಯಾಂಕಾ ಪಾಟೀಲ್ ಕ್ರಿಕೆಟರ್ ಅಲ್ಲ, ಈಗ ಡಾನ್..! ರೌಡಿ ಬೇಬಿಯ ಹೊಸ ಅವತಾರಕ್ಕೆ ಜನ ಕಂಗಾಲ್..!

https://newsfirstlive.com/wp-content/uploads/2024/09/SREYANKA-PATIL-2.jpg

Load More