ಜಾಮೀನು ಸಿಗ್ತಿದ್ದಂತೆ ಕೋರ್ಟ್ನಿಂದ ತೆರಳಿದ CM, DCM
ರಾಹುಲ್ ಗಾಂಧಿ ಗೈರು.. ವಿನಾಯತಿ ಕೇಳಿದ ವಕೀಲರು
ನ್ಯಾಯಾಧೀಶರ ಮುಂದೆ ಕೈಕಟ್ಟಿ ನಿಂತಿದ್ದ ಶಿವಕುಮಾರ್
ಬೆಂಗಳೂರು: ಬಿಜೆಪಿ ವಿರುದ್ಧ ಅವಹೇಳನಕಾರಿ ಪ್ರಕರಣದಲ್ಲಿ ದಾಖಲಾಗಿರುವ ಖಾಸಗಿ ಮಾನನಷ್ಟ ಕೇಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಏನಿದು ಪ್ರಕರಣ..?
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಹೀರಾತು ಮೂಲಕ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಸಿಎಂ ಹುದ್ದೆಗಾಗಿ 2500 ಕೋಟಿ, ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಹೈಕಮಾಂಡ್ಗೆ ನೀಡಿ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಕೋವಿಡ್ ಕಿಟ್ ಪೂರೈಕೆ ಟೆಂಡರ್ ಡೀಲ್ನಲ್ಲಿ ಶೇಕಡಾ 75, ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್ನಲ್ಲಿ ಶೇ 40 ರಷ್ಟು ಸೇರಿದಂತೆ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ಕಮೀಷನ್ ಡೀಲ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಇದನ್ನೂ ಓದಿ:ಇಂದು ಕೋರ್ಟ್ ಕಟಕಟೆಯಲ್ಲಿ ಸಿಎಂ ಸಿದ್ದರಾಮಯ್ಯ.. ಡಿಕೆ ಶಿವಕುಮಾರ್; ಯಾವ ವಿಚಾರ..?
ಇದನ್ನು ಪ್ರಶ್ನಿಸಿ ಬಿಜೆಪಿ ಪ್ರಧಾನಕಾರ್ಯದರ್ಶಿ ಕೇಶವಪ್ರಸಾದ್, ಖಾಸಗಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದರು. ಕೆಪಿಸಿಸಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯನ್ನು ಪ್ರತಿವಾದಿಯಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು.
ಕೋರ್ಟ್ನಲ್ಲಿ ಏನಾಯ್ತು..?
ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಮುಂದೆ ಇಬ್ಬರು ನಾಯಕರು ಹಾಜರಾಗಿದ್ದರು. ಜಡ್ಜ್ ಮುಂದೆ ಡಿಕೆ ಶಿವಕುಮಾರ್ ಕೈಕಟ್ಟಿ ನಿಂತಿದ್ದರು. ಆರೋಪಿಗಳು ಯಾರು ಯಾರು ಎಂಬ ಪ್ರಶ್ನೆಗೆ ವಕೀಲರು ಎ-2 ಡಿಕೆ ಶಿವಕುಮಾರ್, ಎ-3 ಸಿದ್ದರಾಮಯ್ಯ ಎಂದು ವಕೀಲರು ಕೋರ್ಟ್ಗೆ ತಿಳಿಸಿದರು. ಇದೇ ವೇಳೆ ಇಬ್ಬರೂ ಕೂಡ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಅಲ್ಲದೇ ವಿಚಾರಣೆ ಹಾಜರಾಗದ ರಾಹುಲ್ ಗಾಂಧಿಗೆ ವಿನಾಯತಿ ನೀಡುವಂತೆ ಕೋರ್ಟ್ ಬಳಿ ಕಾಂಗ್ರೆಸ್ ಪರ ವಕೀಲರು ಮನವಿ ಮಾಡಿಕೊಂಡರು.
ಇದನ್ನೂ ಓದಿ:ಇಂದು ಮಿಂಚಿದವರಿಗೆ ಜಾಕ್ಪಾಟ್- ಅಭ್ಯಾಸ ಪಂದ್ಯದ ಪ್ಲಾನ್ ತಿಳಿಸಿದ ಕ್ಯಾಪ್ಟನ್ ಶರ್ಮಾ..!
ಇಂಡಿಯಾ ಒಕ್ಕೂಟದ ಮೀಟಿಂಗ್ನಲ್ಲಿ ರಾಹುಲ್ ಗಾಂಧಿ ಭಾಗಿ ಆಗಿರೋದಕ್ಕೆ ಬಿಜೆಪಿ ಪರ ವಕೀಲರು ತಕರಾರು ತೆಗೆದರು. ಕೋರ್ಟ್ ಮುಂದೆ ಎಲ್ಲರು ಸಮಾನರು, ಹೀಗಿದ್ದಾಗ ಏಕೆ ವಿನಾಯಿತಿ ನೀಡಬೇಕು? ಎಂದು ವಕೀಲ ವಿನೋದ್ ಕುಮಾರ್ ವಾದಿಸಿದರು. ನಂತರ ರಾಹುಲ್ ಗಾಂಧಿ ಗೈರು ಕುರಿತು ಕೋರ್ಟ್ನ ವಾದ ಪ್ರತಿವಾದ ನಡೆಸಿದ ಕೋರ್ಟ್ ತೀರ್ಪನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿತು. ಇತ್ತ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಜಾಮೀನು ಸಿಗುತ್ತಿದ್ದಂತೆಯೇ ಬಾಂಡ್ ಪೇಪರ್ಗೆ ಸಹಿ ಮಾಡಿ ಕೋರ್ಟ್ನಿಂದ ನಿರ್ಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ