newsfirstkannada.com

ಇಂದು ಮಿಂಚಿದವರಿಗೆ ಜಾಕ್​ಪಾಟ್- ಅಭ್ಯಾಸ ಪಂದ್ಯದ ಪ್ಲಾನ್ ತಿಳಿಸಿದ ಕ್ಯಾಪ್ಟನ್ ಶರ್ಮಾ..!

Share :

Published June 1, 2024 at 9:36am

    ಇಂದು ಬಾಂಗ್ಲಾದೇಶ ಎದುರು ಅಭ್ಯಾಸ ಪಂದ್ಯ

    ಪ್ರಯೋಗಕ್ಕೆ ರಹದಾರಿ.. 15 ಆಟಗಾರರು ಕಣಕ್ಕೆ..!

    ಟೀಮ್​​​ ಕಾಂಬಿಷೇನ್​ಗೆ ಇಂದೇ ಅಂತಿಮ ಮುದ್ರೆ..!

17 ವರ್ಷಗಳ ನಂತರ ಟ್ರೋಫಿ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಟಿ20 ವಿಶ್ವಕಪ್​​ನಲ್ಲಿ ಇಂದು ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಪ್ರಯೋಗ, ಟೀಮ್ ಕಾಂಬಿನೇಶನ್​, ಸ್ಟ್ರೆಂಥ್​​​ ಅಂಡ್ ವೀಕ್ನೆಸ್​​​​​. ಇದಕ್ಕೆಲ್ಲ ಆನ್ಸರ್ ಕಂಡುಕೊಳ್ಳಲು ಪ್ರಾಕ್ಟೀಸ್ ಮ್ಯಾಚ್​​ ಉತ್ತಮ ವೇದಿಕೆಯಾಗಿದೆ. ಇದೇ ಪಂದ್ಯದಲ್ಲಿ ರೋಹಿತ್​ ಶರ್ಮಾ ಪಡೆ ಕೆಲ ಪ್ರಶ್ನೆಗಳಿಗೆ ಆನ್ಸರ್​​​​​​ ಕಂಡುಕೊಳ್ಳಬೇಕಿದೆ.

ಇಂದಿನಿಂದ ಟೀಮ್ ಇಂಡಿಯಾ ವಿಶ್ವಕಪ್​ ಜರ್ನಿ ಶುರು..!
ಜೂನ್​​​​ 2 ಅಂದ್ರೆ ನಾಳೆಯಿಂದ ಬಹುನಿರೀಕ್ಷಿತ ಟಿ20 ವಿಶ್ವಕಪ್​​​​ ದಂಗಲ್ ಆರಂಭಗೊಳ್ಳಲಿದೆ. ಆದ್ರೆ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾದ ಜರ್ನಿ ಇಂದಿನಿಂದ ಶುರುವಾಗಲಿದೆ. ಇಂದು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಅಸಲಿ ಅಖಾಡಕ್ಕೂ ಮುನ್ನ ಭಾರತಕ್ಕಿರೋದು ಒಂದೇ ಅಭ್ಯಾಸ ಪಂದ್ಯ. ಇಲ್ಲಿನೇ ತಂಡದ ಎಲ್ಲಾ ಪ್ರಾಬ್ಲಮ್ಸ್​​ಗೆ ಆನ್ಸರ್ ಕಂಡುಕೊಳ್ಳುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:Breaking: ಬೆಳ್ಳಂಬೆಳಗ್ಗೆ ಗುಡ್​ ನ್ಯೂಸ್.. LPG ಸಿಲಿಂಡರ್ ಬೆಲೆಯಲ್ಲಿ ಇಳಿಕೆ..

ನಸ್ಸೌ ಅಂತಾರಾಷ್ಟ್ರೀಯ ಕೌಂಟಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳು ನಾಯಕರು ಈ ಕಾದಾಟಕ್ಕೆ ಸಾಕಷ್ಟು ಎಕ್ಸೈಟ್ ಆಗಿದ್ದಾರೆ.

ಇದು ತೆರೆದ ಮೈದಾನ. ಇಲ್ಲಿ ಮೊದಲ ಅಭ್ಯಾಸ ಪಂದ್ಯವನ್ನ ಆಡಲು ಸಾಕಷ್ಟು ಖುಷಿ ಆಗುತ್ತಿದೆ. ಕಂಡಿಷನ್​ ಬಳಸಿ ಜೂನ್​​ 5 ರಂದು ನಡೆಯುವ ಮೊದಲ ಪಂದ್ಯದಲ್ಲಿ ಯಾವ ಆಟಗಾರರನ್ನ ಆಡಿಸಬೇಕು ಎಂದು ನಿರ್ಧರಿಸುತ್ತೇವೆ. ಇಲ್ಲಿಯ ವಾತಾವರಣ, ಪಿಚ್​​ ನಿಜಕ್ಕೂ ಅದ್ಭುತ ಅನುಭವ -ರೋಹಿತ್​ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್​

ನಂಬಲಾಗುತ್ತಿಲ್ಲ. ಕ್ರೇಜಿ ಅನ್ನಿಸುತ್ತಿದೆ. ನಾನು ಮೈದಾನದ ವಿಕೆಟ್​​, ವಾತಾವರಣ ನೋಡಿದೆ. ನಿಜಕ್ಕೂ ಉತ್ತಮ ಅನುಭವ. ನೋಡಲು ಕೂಡ ಕ್ರೇಜಿ ಆಗಿದೆ-ನಜ್ಮುಲ್​​ ಎಚ್​​​ ಶಾಂಟೋ, ಬಾಂಗ್ಲಾ ಕ್ಯಾಪ್ಟನ್​​​

ಪ್ರಯೋಗಕ್ಕೆ ರಹದಾರಿ..15 ಆಟಗಾರರು ಕಣಕ್ಕೆ..!
ನಸ್ಸೌ ಮೈದಾನದಲ್ಲಿ ನಡೆಯುವ ಇಂದಿನ ಅಭ್ಯಾಸ ಪಂದ್ಯ, ಟೀಂ ಇಂಡಿಯಾ ಪಾಲಿಗೆ ಪ್ರಯೋಗ ಪಂದ್ಯವಾಗಿರಲಿದೆ. ಈ ಪಂದ್ಯವನ್ನ ಬಿಟ್ರೆ ಟೀಮ್ ಇಂಡಿಯಾ ನೇರವಾಗಿ ವಿಶ್ವಕಪ್ ಅಖಾಡಕ್ಕೆ ಧುಮುಕಲಿದೆ. ಹೀಗಾಗಿ ಏನೇ ಪ್ರಯೋಗ ಮಾಡಿದ್ರೂ ಇಂದೇ ಮಾಡಲೇಬೇಕಿದೆ. 15 ಆಟಗಾರರಿಗೆ ಆಡಲು ಅವಕಾಶವಿರುತ್ತೆ. ಹೀಗಾಗಿ ಆಯ್ಕೆಯಾಗಿರೋ ಎಲ್ಲಾ ಆಟಗಾರರು ಇಂದು ಕಣಕ್ಕಿಳಿಯಲಿದ್ದಾರೆ. ಇದರಿಂದಾಗಿ ತಂಡದ ಮಿಸ್ಟೇಕ್ಸ್​ ತಿದ್ದಿಕೊಳ್ಳುವ ಜೊತೆ ಟೀಮ್​ ಕಾಂಬಿನೇಷನ್​ಗೆ ನೆರವಾಗಲಿದೆ.

ಇದನ್ನೂ ಓದಿ:ಸಚಿನ್ ಕೊನೆಯ ಪಂದ್ಯವನ್ನು ಹೋಮ್​ಗ್ರೌಂಡ್​ನಲ್ಲೇ ಆಡಿದ್ದು ಯಾಕೆ ಗೊತ್ತಾ..? ಫೋಟೋ ನೋಡಿ ಗೆಸ್​ ಮಾಡಿ..

ಟೀಮ್​​​ ಕಾಂಬಿಷೇನ್​ಗೆ ಇಂದೇ ಅಂತಿಮ ಮುದ್ರೆ
ಬಿಸಿಸಿಐ ವಿಶ್ವಕಪ್​​ಗೆ ಬಲಿಷ್ಠ 15 ಆಟಗಾರರ ತಂಡವನ್ನೇನೋ ಸೆಲೆಕ್ಟ್ ಮಾಡಿದೆ. ಆದ್ರೆ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಕಾಣಿಸಿಕೊಳ್ತಾರೆ ಅನ್ನೋದಕ್ಕೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಕೆಲ ಸ್ಲಾಟ್​ಗೆ ಭಾರಿ ಫೈಪೋಟಿ ಏರ್ಪಟ್ಟಿದೆ. ಅಭ್ಯಾಸ ಪಂದ್ಯದಲ್ಲಿ ಅದಕ್ಕೆಲ್ಲಾ ಉತ್ತರ ಸಿಗಲಿದೆ. ಇಂದು ಇಂಪ್ರೆಸ್ಸಿವ್​​ ಪ್ರದರ್ಶನ ನೀಡಿದವರಿಗೆ ಜೂನ್​​​​ 5 ರಂದು ಜಾಕ್​ಪಾಟ್​​ ಹೊಡೆಯಲಿದೆ.

ರೋಹಿತ್​​​-ದ್ರಾವಿಡ್​ ಮುಂದಿವೆ ಬಿಗ್ ಚಾಲೆಂಜಸ್​​..!
ಅಭ್ಯಾಸ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಹೆಡ್​ಕೋಚ್​ ರಾಹುಲ್​​ ದ್ರಾವಿಡ್​ ಮುಂದೆ ಅನೇಕ ಸವಾಲುಗಳಿವೆ. ಸ್ಲೋ ಪಿಚ್​​ನಲ್ಲಿ ಓಪನರ್ಸ್​ ಯಾರು ? ಫಿನಿಶಿಂಗ್ ರೋಲ್​​​ ನಿಭಾಯಿಸೋದ್ಯಾರು ? ಪಂತ್​ ಆಯ್ಕೆ ಉತ್ತಮನಾ ಅಥವಾ ಸ್ಯಾಮ್ಸನ್ ಆಯ್ಕೆ ಉತ್ತಮನಾ ? ಕುಲ್ಚಾ ಜೋಡಿಯಲ್ಲಿ ಯಾರನ್ನ ಆಡಿಸಿದ್ರೆ ಬೆಸ್ಟ್​ ? ಈ ಎಲ್ಲಾ ಪ್ರಶ್ನೆಗಳಿಗೆ ರೋಹಿತ್​​​ ಹಾಗೂ ದ್ರಾವಿಡ್​​ ಅಭ್ಯಾಸ ಪಂದ್ಯದಲ್ಲಿ ಆನ್ಸರ್​​ ಕಂಡುಕೊಳ್ಳಬೇಕಿದೆ.

ಇದನ್ನೂ ಓದಿ:ಫಾಫ್, ಮ್ಯಾಕ್ಸಿ ಸೇರಿ ನಾಲ್ವರನ್ನು RCB ಕೈಬಿಡಬೇಕು -ಟೀಂ ಇಂಡಿಯಾದ ಮಾಜಿ ಸ್ಟಾರ್​

ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿತಾರಾ ಕಿಂಗ್ ಕೊಹ್ಲಿ..?
ಐಪಿಎಲ್​​ ಬಳಿಕ ಕಿರು ವಿಶ್ರಾಂತಿಗೆ ಜಾರಿದ್ದ ಕಿಂಗ್ ಕೊಹ್ಲಿ ತಡವಾಗಿ ತಂಡವನ್ನ ಸೇರಿಕೊಂಡಿದ್ದಾರೆ. ಆದರೆ ಅವರು ಬಾಂಗ್ಲಾದೇಶ ಎದುರಿನ ಅಭ್ಯಾಸ ಪಂದ್ಯದಲ್ಲಿ ಆಡ್ತಾರಾ? ಇಲ್ವಾ ಅನ್ನೋದು ಸ್ಪಷ್ಟವಾಗಿಲ್ಲ. ಒಂದು ವೇಳೆ ಕೊಹ್ಲಿ ಕಣಕ್ಕಿಳಿದಿದ್ದೆ ಆದ್ರೆ ಅವರ ಪ್ರಸೆನ್ಸ್​​ ತಂಡಕ್ಕೆ ಸಾಕಷ್ಟು ಬಲ ತುಂಬಲಿದೆ.

ಇದನ್ನೂ ಓದಿ:ಗುದದ್ವಾರದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಇಟ್ಕೊಂಡು ವಿಮಾನ ಹತ್ತಿದ್ದ ಗಗನ ಸಖಿ ಅರೆಸ್ಟ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇಂದು ಮಿಂಚಿದವರಿಗೆ ಜಾಕ್​ಪಾಟ್- ಅಭ್ಯಾಸ ಪಂದ್ಯದ ಪ್ಲಾನ್ ತಿಳಿಸಿದ ಕ್ಯಾಪ್ಟನ್ ಶರ್ಮಾ..!

https://newsfirstlive.com/wp-content/uploads/2024/06/ROHIT-SHARMA-8.jpg

Load More