ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡ ಸಿಧು ಮೂಸೆವಾಲಾ ತಂದೆ
ಹತ್ಯೆಯಾಗಿದ್ದ ಮಗ ಸಿಧು ಮತ್ತೆ ಹುಟ್ಟಿ ಬಂದ ಅಂತ ಖುಷಿ ಆಗಿತ್ತು
ಇಳಿ ವಯಸ್ಸಿನಲ್ಲೂ ಮಗು ಪಡೆದಿದ್ದಕ್ಕೆ ಪ್ರಶ್ನೆ ಮಾಡಿರುವ ಸರ್ಕಾರ
ಚಂಡೀಗಢ: ಖ್ಯಾತ ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ, ತಾಯಿ ಇಳಿ ವಯಸ್ಸಿನಲ್ಲೂ IVF ತಂತ್ರಜ್ಞಾನದ ಮೂಲಕ ಮೊನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಾಹಿತಿಯನ್ನು ಹಂಚಿಕೊಂಡಿದ್ದ ತಂದೆ ಬಲ್ಕೌರ್ ಸಿಂಗ್ ಖುಷಿ ವ್ಯಕ್ತಪಡಿಸಿದ್ದರು. ಆದರೆ ಮಗು ಪಡೆದು ಸಂತಸದಲ್ಲಿದ್ದ ಪೋಷಕರಿಗೆ ಪಂಜಾಬ್ ಸರ್ಕಾರ ಕಿರುಕುಳ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರುವ ಬಲ್ಕೌರ್ ಸಿಂಗ್ ಅವರು, ಪಂಜಾಬ್ನ ಸಿಎಂ ಭಗವಂತ್ ಮಾನ್ ನೇತೃತ್ವದ ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ಮಾರ್ಚ್ 17ರಂದು ಪತ್ನಿ ಚರಣ್ ಕೌರ್ ಮಗುವಿಗೆ ಜನ್ಮ ನೀಡಿದ್ದರು. ಆಗ ಹತ್ಯೆಯಾಗಿದ್ದ ಮಗ ಸಿಧು ಮೂಸೆವಾಲಾ ಮತ್ತೆ ಹುಟ್ಟಿ ಬಂದಿದ್ದಾನೆಂದು ಆನಂದದಲ್ಲಿದ್ದೆವು. ಆದರೆ ಪಂಜಾಬ್ ಸರ್ಕಾರವು ಬೆಳಗ್ಗೆಯಿಂದ ಮಗುವಿನ ಕುರಿತ ದಾಖಲೆಗಳನ್ನು ನೀಡುವಂತೆ ನಮ್ಮ ಫ್ಯಾಮಿಲಿಗೆ ಕಿರುಕುಳ ನೀಡುತ್ತಿದೆ. ಈ ಮಗು ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರದ ಪ್ರಕಾರ IVF (In vitro Fertilisation) ವಿಧಾನದ ಮೂಲಕ ಮಗುವನ್ನು ಪಡೆಯಬೇಕಾದರೆ ವಯಸ್ಸಿನ ಮಿತಿ ಇರುತ್ತದೆ. ಈ ಬಗ್ಗೆ ವಿಸ್ತೃತವಾದ ಕಾಯ್ದೆ ಕೂಡ ಇದೆ. IVF ಮಗು ಪಡೆಯಲು ಬಯಸುವ ಮಹಿಳೆಗೆ 21-50 ವರ್ಷಗಳು ಹಾಗೂ ಪುರುಷಗೆ 21-55 ವರ್ಷದೊಳಗೆ ಇರಬೇಕು. ಆದರೆ ಮೊನ್ನೆ ವರದಿಯಾದ ಪ್ರಕಾರ ಸಿಧು ಮೂಸೆವಾಲಾರ ತಾಯಿಗೆ 58 ವರ್ಷದಲ್ಲಿ ಮಗು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ಸಿಧು ಮೂಸೆವಾಲಾ ತಾಯಿಗೆ ಗಂಡು ಮಗು ಜನನ.. ಸಿಹಿ ಸುದ್ದಿ ಹಂಚಿಕೊಂಡ ತಂದೆ ಬಲ್ಕೌರ್ ಸಿಂಗ್
ಸದ್ಯ ಈ ಬಗ್ಗೆ ಬಲ್ಕೌರ್ ಸಿಂಗ್ ಅವರು ಎಲ್ಲ ಚಿಕಿತ್ಸೆಗಳು ಮುಗಿಯುವವರೆಗೆ ಅವಕಾಶ ನೀಡಬೇಕು. ಸಿಎಂ ಭಗವಂತ್ ಮಾನ್ ಬಳಿ ಈ ಬಗ್ಗೆ ವಿಶೇಷವಾಗಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಮುಗಿದ ಬಳಿಕ ನೀವು ಕರೆದ ಸ್ಥಳಕ್ಕೆ ಬಂದು ಎಲ್ಲದಕ್ಕೂ ಉತ್ತರಿಸುತ್ತೇನೆ. ನಾವು ಎಲ್ಲ ಕಾನೂನು ವಿಧಾನಗಳನ್ನು ಅನುಸರಿಸಿದ್ದು ಎಲ್ಲ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಮತ್ತೆ ಹುಟ್ಟಿ ಬಂದ ಮಗ.. ಸಿಧು ಮೂಸೆವಾಲಾ ಹೆತ್ತವರ ನೋಡಿದ್ರೆ ಎಂತಹವರ ಹೃದಯವೂ ತುಂಬಿ ಬರುತ್ತೆ!
ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು 2022ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಫರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತು ಸೋತು ಹೋಗಿದ್ದರು. ಇದಾದ ಬಳಿಕ ಸಿಧು ಮೇಲೆ ಗುಂಡಿನ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ