newsfirstkannada.com

ಕಾರಿಗೆ ಅಪರಿಚಿತ ವಾಹನ ಡಿಕ್ಕಿ.. ದೇವಸ್ಥಾನಕ್ಕೆ ಹೋಗ್ತಿದ್ದ ಒಂದೇ ಕುಟುಂಬದ 6 ಜನ ಸಾವು

Share :

Published May 5, 2024 at 5:13pm

Update May 5, 2024 at 5:14pm

  ಡಿಕ್ಕಿಯಾದ ವಾಹನ ಪತ್ತೆ ಹಚ್ಚಲು ಪೊಲೀಸರಿನಿಂದ ತನಿಖೆ

  ಬ್ರಿಡ್ಜ್​ ಮೇಲೆ ಹೋಗುವಾಗ ಡಿಕ್ಕಿ ಹೊಡೆದು ಹೋದ ವಾಹನ

  ಗಂಭೀರವಾಗಿ ಗಾಯಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಜೈಪುರ್: ದೇವಾಲಯಕ್ಕೆ ಹೋಗುತ್ತಿದ್ದ ಕಾರಿಗೆ ಅಪರಿಚಿತ ವಾಹನವೊಂದು ಭಯಾನಕವಾಗಿ ಡಿಕ್ಕಿಯಾದ ಪರಿಣಾಮ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಬನಾಸ್ ನದಿ ಸೇತುವೆ ಬಳಿ ನಡೆದಿದೆ.

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಮೃತರನ್ನು ಮನೀಶ್ ಶರ್ಮಾ, ಇವರ ಪತ್ನಿ ಅನಿತಾ, ಕೈಲಾಶ್ ಶರ್ಮಾ, ಇವರ ಪತ್ನಿ ಸಂತೋಷ ಮತ್ತು ಸತೀಶ್ ಶರ್ಮಾ ಇವರ ಪತ್ನಿ ಪೂನಂ ಎಂದು ಗುರುತಿಸಲಾಗಿದೆ. ಇವರ ಇಬ್ಬರು ಮಕ್ಕಳಾದ ಮನಾನ್ ಮತ್ತು ದೀಪಾಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಶರ್ಮಾ ಕುಟುಂಬವು ಸವಾಯಿ ಮಾಧೋಪುರದಲ್ಲಿನ ಗಣೇಶ ದೇವಸ್ಥಾನಕ್ಕೆ ಕಾರಿನ ಮೂಲಕ ಹೋಗುತ್ತಿದ್ದರು. ಈ ವೇಳೆ ಬನಾಸ್ ನದಿಯ ಸೇತುವೆ ಬಳಿ ಹೋಗುವಾಗ ಅತಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಭೀಕರವಾಗಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ 8 ಜನರ ಪೈಕಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಡಿಕ್ಕಿಯಾದ ವಾಹನ ಘಟನಾ ಸ್ಥಳದಲ್ಲೇ ನಿಲ್ಲಿಸದೇ ಅಲ್ಲಿಂದ ಹಾಗೇ ಹೋಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೇ ಆ ವಾಹನವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿಗೆ ಅಪರಿಚಿತ ವಾಹನ ಡಿಕ್ಕಿ.. ದೇವಸ್ಥಾನಕ್ಕೆ ಹೋಗ್ತಿದ್ದ ಒಂದೇ ಕುಟುಂಬದ 6 ಜನ ಸಾವು

https://newsfirstlive.com/wp-content/uploads/2024/05/JAIPUR_ACCIDENT.jpg

Load More