/newsfirstlive-kannada/media/post_attachments/wp-content/uploads/2024/08/SHREYANKA.jpg)
22 ವರ್ಷದ ಕರುನಾಡ ಕುವರಿ ಶ್ರೇಯಾಂಕ ಪಾಟೀಲ್​​​​​ ಮಹಿಳಾ ಆರ್​ಸಿಬಿ ತಂಡದ ಸೆನ್ಸೇಷನ್​. ಶ್ರೇಯಾಂಕ ಅಂದ್ರೆ ಫ್ಯಾನ್ಸ್​ ಮುಗಿಬೀಳ್ತಾರೆ. ಇದೇ ಫ್ಯಾನ್ಸ್​ ಕಾರಣಕ್ಕೆ ಶ್ರೇಯಾಂಕ, ಕ್ಯಾಪ್ಟನ್​​ ಸ್ಮೃತಿ ಮಂದಾನರಿಂದ ಒಮ್ಮೆ ಹಿಗ್ಗಾಮುಗ್ಗಾ ಬೈಸಿಕೊಂಡಿದ್ರು. ಅಷ್ಟಕ್ಕೂ ಸ್ಮೃತಿ ಮಂದಾನ, ಕನ್ನಡತಿ ಮೇಲೆ ಕೋಪಗೊಂಡಿದಾದ್ರೂ ಏಕೆ ಅನ್ನೋ ಇಂಟ್ರೆಸ್ಟಿಂಗ್ ಕಹಾನಿ ಹೀಗಿದೆ..
ಶ್ರೇಯಾಂಕ ಪಾಟೀಲ್​​..! ಆಡಿದ್ದು ಎರಡೇ ಎರಡು ವುಮೆನ್ಸ್​ ಪ್ರೀಮಿಯರ್ ಲೀಗ್​​. ಆಗಲೇ ಆರ್​ಸಿಬಿ ತಂಡದ ಈ ಕಿಲಾಡಿ ಆಟಗಾರ್ತಿ ಎಲ್ಲರ ಮನೆ ಮಾತಾಗಿದ್ದಾರೆ. ಇವರ ಸ್ಪಿನ್ ಚಮತ್ಕಾರ, ಚುರುಕಿನ ಫೀಲ್ಡಿಂಗ್​​​​ ಹಾಗೂ ಬ್ಯಾಟಿಂಗ್​​ಗೆ ಫಿದಾ ಆಗದೋರಿಲ್ಲ. ಆಟದಷ್ಟೇ ಇವರ ಮಾತು ಹಾಗೂ ಡ್ಯಾನ್ಸ್ ಕೂಡ ನೋಡೋಕೆ ಚೆಂದ. ಹೀಗಾಗಿ ಫ್ಯಾನ್ಸ್​ ಮುಗಿ ಬೀಳ್ತಾರೆ. ಹಿಂದೊಮ್ಮೆ ಫ್ಯಾನ್ಸ್​ ಖುಷಿ ಪಡಿಸೋಕೆ ಹೋಗಿ ಈ ಸ್ಟಾರ್​​​​ ಆರ್​ಸಿಬಿ ಆಟಗಾರ್ತಿ ಒಮ್ಮೆ ಕ್ಯಾಪ್ಟನ್​​​​​​​​​ ಸ್ಮೃತಿ ಮಂದಾನರಿಂದ ಸರಿಯಾಗಿ ಬೈಸಿಕೊಂಡಿದ್ದರು.
ಇದನ್ನೂ ಓದಿ:ಕೈಕೊಟ್ಟ ಸಿರಾಜ್, ಜಡೇಜಾ.. ಬಾಂಗ್ಲಾ ಸರಣಿ ಕನಸು ಛಿದ್ರಗೊಳ್ಳುವ ಆತಂಕ..!
ಒಮ್ಮೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​​​ ವೇಳೆ ನಡೆದ ಘಟನೆಯಿದು. ಮೈದಾನದ ಸುತ್ತ ಇದ್ದ ಫ್ಯಾನ್ಸ್ ಆರ್​ಸಿಬಿ ಚಿಯರ್​ ಮಾಡ್ತಿದ್ರು. ಬೌಂಡರಿ ಲೈನ್​ ಬಳಿ ಫೀಲ್ಡ್​ ಮಾಡ್ತಿದ್ದ ಕನ್ನಡದ ಹುಡುಗಿಯ ಶ್ರೇಯಾಂಕ ಹೆಸರನ್ನ ಕೂಗ್ತಾ ಇದ್ರು. ಹೀಗಾಗಿ ದೀಪಿಕಾ ಪಡುಕೋಣೆ ಸ್ಟೈಲ್​​ನಲ್ಲಿ ಶ್ರೇಯಾಂಕ ಫ್ಯಾನ್ಸ್​​ ಕಡೆ ಕೈಬೀಸುತ್ತಾ ನಿಂತಿದ್ರಂತೆ.
ಇದೇ ವೇಳೆ ಕ್ಯಾಪ್ಟನ್​ ಮಂದಾನ, ಶ್ರೇಯಾಂಕ ಪಾಟೀಲ್​​​ ರನ್ನ ಫೀಲ್ಡ್​ ಪ್ಲೇಸ್​ಮೆಂಟ್​ ಬದಲಾಯಿಸಲು ಜೋರಾಗಿ ಕರೆದ್ರಂತೆ. ಅಭಿಮಾನಿಗಳ ಅಭಿಮಾನದಲ್ಲಿ ಬೆರೆತು ಹೋಗಿದ್ದ ಶ್ರೇಯಾಂಕಾಗೆ ನಾಯಕಿ ಹೇಳಿದ್ದು ಕಿವಿಗೆ ಬೀಳಲಿಲ್ಲ. ಇದ್ರಿಂದ ಸಿಟ್ಟಿಗೆದ್ದ ಸ್ಮೃತಿ ಮಂದಾನ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ರಂತೆ. ಅದಾದ ಮುಂದಿನ ಪಂದ್ಯದಲ್ಲಿ ಪ್ರೇಕ್ಷಕರ ಕಡೆ ನೋಡುವುದನ್ನ ಬಿಟ್ಟು, ಆಟದ ಕಡೆ ಗಮನ ಕೊಟ್ರಂತೆ. ಈ ವಿಚಾರವನ್ನ ಆರ್​ಸಿಬಿ ನಾಯಕಿ ಸ್ಮೃತಿ ಮಂದಾನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us