Advertisment

ಏನಿದು ಬೆಂಕಿ ಉಂಗುರ ಸೂರ್ಯಗ್ರಹಣ ? ವರ್ಷದ ಕಟ್ಟ ಕಡೆಯ ಗ್ರಹಣದಿಂದ ಅಪಾಯ ಕಾದಿದೆಯಾ?

author-image
Gopal Kulkarni
Updated On
ಏನಿದು ಬೆಂಕಿ ಉಂಗುರ ಸೂರ್ಯಗ್ರಹಣ ? ವರ್ಷದ ಕಟ್ಟ ಕಡೆಯ ಗ್ರಹಣದಿಂದ ಅಪಾಯ ಕಾದಿದೆಯಾ?
Advertisment
  • ಗ್ರಹಣಗಳಿಗೂ ದುರಂತಗಳಿಗೂ ಇದೆಯಾ ಸಂಬಂಧ?
  • ವರ್ಷದ ಕೊನೆಯ ಗ್ರಹಣದಂದು ಏನೆಲ್ಲಾ ಮಾಡಬೇಕು?
  • ಗ್ರಹಣಕ್ಕೂ ಹಿಂದೂ ಪುರಾಣಗಳಿಗೂ ಇರುವ ಸಂಬಂಧವೇನು

ಸೂರ್ಯ ಗ್ರಹಣ, ಕೋಟ್ಯಾನುಕೋಟಿ ವರ್ಷಗಳಿಂದ ನಿರಂತರವಾಗಿ ಉರಿಯುತ್ತಾ, ಬೆಂಕಿ ಉಗುಳುತ್ತಾ, ಭೂಮಿ ಸೇರಿ ಬ್ರಹ್ಮಾಂಡಕ್ಕೆಲ್ಲಾ ಬೆಳಕು ನೀಡ್ತಿರೋ ಸೂರ್ಯ. ಇದ್ದಕ್ಕಿದ್ದ ಹಾಗೆ ಬೆಂಕಿಯ ಉಂಗುರವಾಗೋ ವಿಸ್ಮಯಕಾರಿ ಘಳಿಗೆ. ಉರಿಯೋ ಸೂರ್ಯನಿಗೆ ಕವಿಯೋ ಗ್ರಹಣದಿಂದ ದಿಢೀರಂತ ಎಲ್ಲೆಡೆ ಕತ್ತಲು ಆವರಿಸುವಂತೆ ಮಾಡ್ತಾನೆ. ನಮ್ಮ ಭೂಮಿಯ ಉಪಗ್ರಹವಾದ ಚಂದ್ರನನ್ನ ತನ್ನ ಉಂಗುರದೊಳಗೆ ಬಂಧಿ ಮಾಡಿ, ಭೂಮಿಯ ಮೇಲೆ ತನ್ನ ಗ್ರಹಣ ಕಿರಣಗಳು ಅಪ್ಪಳಿಸುವಂತೆ ಮಾಡ್ತಾನೆ.

Advertisment

ಈ ಚಿತ್ರ, ವಿಚಿತ್ರ ಮತ್ತು ವಿರೋಚಕ ವಿದ್ಯಮಾನಕ್ಕೆ ಇನ್ನು ಉಳಿದಿರೋದು ಕೇವಲ ಎರಡು ದಿನವಷ್ಟೇ. ಅಂದ್ರೆ, ಬೆಂಕಿ ಉಂಗುರ ಸೂರ್ಯ ಗ್ರಹಣ ಜುರಗುತ್ತಿರೋ ದಿನ ಅಕ್ಟೋಬರ್ 2. ಅಕ್ಟೋಬರ್ 2ರ ಸೂರ್ಯಗ್ರಹಣಕ್ಕೆ ಕ್ಷಣಗಣನೆ ಶುರುವಾಗ್ತಿದ್ದಂತೆ ದೇಶದ ನಾನಾ ಪುಣ್ಯಕ್ಷೇತ್ರಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಪೂಜೆ, ಪುನಸ್ಕಾರ ಆರಂಭಗೊಂಡಿದೆ. ಭಕ್ತರು ಪುಣ್ಯನದಿಗಳಲ್ಲಿ ಪವಿತ್ರಸ್ನಾನ ಮಾಡಿ 'ಕೇಡುಮಾಡಬೇಡಾ ಸೂರ್ಯದೇವಾ' ಅಂತ ಪರಿಪರಿಯಾಗಿ ಬೇಡಿಕೊಳ್ತಿದ್ದಾರೆ. ರಾಜಕೀಯ ನಾಯಕರು ಬೆಂಕಿ ಉಂಗುರ ಸೂರ್ಯಗ್ರಹಣದ ಕೆಟ್ಟ ನೆರಳು ತಮ್ಮ ಮೇಲೆ ಬೀಳದಂತೆ ದೇವರ ಮೊರೆ ಹೋಗ್ತಿದ್ದಾರೆ.

ಇದನ್ನೂ ಓದಿ:ಸೂರ್ಯ ನಮಸ್ಕಾರ ಯಾವಾಗ ಮಾಡಬೇಕು? ಬೆಳಗ್ಗೆ ಮಾಡುವುದು ಒಳ್ಳೆಯದಾ, ಸಂಜೆ ಮಾಡಬೇಕಾ?

ಅಕ್ಟೋಬರ್ 2ರ ಬೆಂಕಿ ಉಂಗುರ ಸೂರ್ಯ ಗ್ರಹಣ ಯಾಕೆ ಟೆನ್ಷನ್ ಹುಟ್ಟಿಸಿದೆ ಅನ್ನೋದ್ರ ಸ್ಯಾಂಪಲ್ ಇದು. ಸೂರ್ಯ ಗ್ರಹಣ ಒಂದು ಮಾಮೂಲಿ ವೈಜ್ಞಾನಿಕ ವಿದ್ಯಮಾನ ಅನ್ನೋದೆಷ್ಟು ಸತ್ಯವೋ, ಈ ವೈಜ್ಞಾನಿಕ ವಿದ್ಯಮಾನದ ಸುತ್ತ ಜ್ಯೋತಿಷ್ಯ ಶುಭ-ಅಶುಭ ಫಲಗಳ ಭಯಾನಕ ಲೆಕ್ಕಾಚಾರ ತಳಕುಹಾಕಿಕೊಂಡಿರೋದು ಕೂಡ ಅಷ್ಟೇ ಸತ್ಯ

Advertisment

publive-image

ಹಿಂದೆ ಯಾವಾಗೆಲ್ಲಾ ಈ ಬೆಂಕಿ ಉಂಗುರ ಸೂರ್ಯ ಗ್ರಹಣಗಳು ಗೋಚರಿಸಿದ್ದವೋ. ಆವಾಗೆಲ್ಲಾ ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ, ಯಾವುದೋ ಒಂದು ರೀತಿಯ ಘೋರಾತಿಘೋರ ಪ್ರಾಕೃತಿಕ ದುರಂತ ನಡೆದು ಹೋಗಿರೋ ಘಟನೆಗಳು ಕಣ್ಣಿಗೆ ರಾಚುವಂತಿವೆ. ಹಾಗಾಗಿ, ಪ್ರತಿಬಾರಿ ಸೂರ್ಯ ಗ್ರಹಣ ಜರುಗಿದಾಗ ಎಲ್ಲರ ಒಳಗೊಂದು ಅವ್ಯಕ್ತ ಭಯ, ಹೇಳಿಕೊಳ್ಳಲಾದ ಆತಂಕ ಹುಟ್ಟಿಕೊಳ್ಳುತ್ತೆ. ಈಗ ಭಾರತದಲ್ಲಿ, ಕರ್ನಾಟಕದಲ್ಲಿ ಮತ್ತು ಜಗತ್ತಿನ ಮೂಲೆ ಮೂಲೆಯಲ್ಲಿ ಶುರುವಾಗಿರೋ ಭಯಾತಂಕಕ್ಕೂ ಈ ಅಕ್ಟೋಬರ್ 2 ರ ಸೂರ್ಯಗ್ರಹಣವೇ ಕಾರಣವಾಗಿದೆ!

ಇದನ್ನೂ ಓದಿ:ಕಳೆದ 4 ವರ್ಷದಲ್ಲಿ 15ನೇ ಪರೋಲ್​; ಚುನಾವಣಾ ಸಮಯದಲ್ಲಿ ಮತ್ತೆ ಹೊರಗೆ ಬಂದ ಸ್ವಯಂ ಘೋಷಿತ ದೇವಮಾನವ

ರಿಂಗ್ ಆಫ್ ಫೈಯರ್, ಅಂದ್ರೆ ಬೆಂಕಿಯ ಉಂಗುರ. ಬೆಂಕಿಯಿಂದಲೇ ಮಾಡಲ್ಪಟ್ಟಿರೋ ಉಂಗುರದಂತೆಯೇ ಸೂರ್ಯ ಬದಲಾಗ್ತಾನೆ. ಅಕ್ಟೋಬರ್ 2ನೇ ತಾರೀಖು ಜರುಗುತ್ತಿರೋದು ಈ ವರ್ಷದ ಕಟ್ಟ ಕಡೆಯ ಸೂರ್ಯ ಗ್ರಹಣವಿದು. ಹಾಗಾದ್ರೆ, ವರ್ಷದ ಕೊನೆಯ ಸೂರ್ಯ ಗ್ರಹಣ, ಅದರಲ್ಲೂ ಬೆಂಕಿ ಉಂಗುರ ಸೂರ್ಯ ಗ್ರಹಣದಿಂದ ಮನುಕುಲದ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗಲಿದೆ. ಭಾರತ ಮತ್ತು ಭಾರತೀಯರ ಮೇಲೆ ಮಹಾಲಾಯ ಅಮಾವಾಸ್ಯೆ ಸೂರ್ಯಗ್ರಹಣದಿಂದ ಯಾವ ರೀತಿಯ ಪರಿಣಾಮ ಉಂಟಾಗಲಿದೆ. ಅಷ್ಟಕ್ಕೂ, ಈ ಬೆಂಕಿ ಉಂಗುರ ಸೂರ್ಯ ಗ್ರಹಣ ಅಂದ್ರೇನು?ಈ ಬೆಂಕಿ ಉಂಗುರ ಸೂರ್ಯಗ್ರಹಣ ಜಗತ್ತಿನ ಎಲ್ಲೆಲ್ಲಿ ಗೋಚರಗೊಳ್ಳುತ್ತೆ? ಎಷ್ಟು ಗಂಟೆಗೆ ಕಾಣಿಸಿಕೊಳ್ಳುತ್ತೆ?

Advertisment

ಇದನ್ನೂ ಓದಿ:56 ವರ್ಷಗಳ ಹಿಂದೆ ಪತನವಾಗಿದ್ದ ಭಾರತೀಯ ವಿಮಾನ; 102 ಸೈನಿಕರಲ್ಲಿ ನಾಲ್ವರ ಶವ ಈಗ ಪತ್ತೆ!

publive-image

ಕಳೆದ ಚಂದ್ರಗ್ರಹಣದಿಂದ ಪಿತೃಪಕ್ಷ ಆರಂಭಗೊಂಡಿತ್ತು. ಈಗ ಸೂರ್ಯಗ್ರಹಣದಿಂದ ಪಿತೃಪಕ್ಷ ಅಂತ್ಯಗೊಳ್ಳುತ್ತಿದೆ. ಈ ದಿನವನ್ನು ಮಹಾಲಯ ಅಮಾವಾಸ್ಯೆ ಅಂತಲೇ ಆಚರಿಸಲಾಗುತ್ತೆ. ಪೂರ್ವಜರನ್ನು ಕುರಿತು ಪೂಜಿಸೋದಕ್ಕೆ, ಆರಾಧಿಸೋದಕ್ಕೆ ಈ ದಿನವನ್ನು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತೆ. ಈ ದಿನ ತರ್ಪಣ ಮತ್ತು ಪಿಂಡ ದಾನ ಮಾಡುವುದರಿಂದ ಪೂರ್ವಜರಿಗೆ ಮೋಕ್ಷ ಸಿಗುತ್ತೆ ಮತ್ತು ಅವರ ಅವರ ಆತ್ಮಗಳು ತೃಪ್ತಗೊಳ್ಳುತ್ತವೆ ಎಂಬ ನಂಬಿಕೆಯಿದೆ.

ಆದ್ರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯಗ್ರಹಣದ ಜೊತೆಯಲ್ಲೇ ಪಿತೃಪಕ್ಷ ಅಂತ್ಯಗೊಳ್ಳುವುದು ಅಶುಭ ಸೂಚಕವಂತೆ.
ಚಂದ್ರಗ್ರಹಣ ಸದಾ ಹುಣ್ಣಿಮೆಯಂದು ಮತ್ತು ಸೂರ್ಯಗ್ರಹಣ ಅಮಾವಾಸ್ಯೆಯಂದು ಜರುಗತ್ತವೆ. ಆದ್ರೆ, ಈ ಬಾರಿಯ ಸೂರ್ಯ ಗ್ರಹಣ ಮಹಾಲಯ ಅಮಾವಾಸ್ಯೆಯಂದೇ ಜರುಗುತ್ತಿರೋದು ಕುತೂಹಲ ಹುಟ್ಟಿಸಿದೆ. ಆ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆಯಿದೆ. ಇನ್ನು, ಅದೇ ದಿನವೇ ಸೂರ್ಯ ಗ್ರಹಣ, ಅದೂ ಕೂಡ ಬೆಂಕಿ ಉಂಗುರ ಸೂರ್ಯ ಗ್ರಹಣ ಜರುಗುತ್ತಿದೆ. ಆ ಸಮಯದಲ್ಲಿ ಸೂರ್ಯ ತನ್ನ ಶಕ್ತಿ ಕಳೆದುಕೊಂಡಿರ್ತಾನೆ ಎನ್ನುವ ನಂಬಿಕೆಯಿದೆ. ವಿಜ್ಞಾನವೂ ಕೂಡ ಈ ವಿಚಾರವನ್ನ ತನ್ನದೇ ರೀತಿಯಲ್ಲಿ ಒಪ್ಪಿಕೊಳ್ಳುತ್ತೆ. ಹಾಗಾಗಿ, ಮಹಾಲಯ ಅಮಾವಾಸ್ಯೆ, ಪಿತೃಪಕ್ಷ, ಬೆಂಕಿ ಉಂಗುರ ಸೂರ್ಯ ಗ್ರಹಣ.. ಎಲ್ಲವೂ ಒಂದೇ ದಿನ ಬಂದಿರೋದು ಭಾರತದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಾ ಎಂಬ ಚರ್ಚೆ ಮತ್ತು ಭಯಕ್ಕೆ ನಾಂದಿ ಹಾಡಿದೆ.

Advertisment

ಬೆಂಕಿ ಉಂಗುರ ಸೂರ್ಯ ಗ್ರಹಣ ಎಂದರೇನು ಗೊತ್ತಾ?
ಹಾಗಾದ್ರೆ, ಏನಿದು ಬೆಂಕಿ ಉಂಗುರ ಸೂರ್ಯಗ್ರಹಣ ಅನ್ನೋದನ್ನ ಸರಳವಾಗಿ, ದೃಶ್ಯ ಸಮೇತ ತೋರಿಸ್ತೀವಿ ನೋಡಿ. ಭೂಮಿಯ ಮೇಲೆ ನಿಂತಿರೋ ನಾವು, ಸೂರ್ಯನ ಕಡೆ ನೋಡ್ತಿದ್ದೇವೆ. ಆ ಸಂದರ್ಭದಲ್ಲಿ ಚಂದ್ರನು ನಾವಿರೋ ಭೂಮಿ ಮತ್ತು ಸೂರ್ಯನ ನಡುವೆ ಹಾಯ್ದು ಬರ್ತಾನೆ, ಹಾಯ್ದು ಹೋಗುವ ವೇಳೆ ಕೆಲ ಗಂಟೆಗಳ ಕಾಲ ಚಂದ್ರ ಸೂರ್ಯನೊಳಗೆ ಈ ರೀತಿ ಬಂಧಿಯಾಗುತ್ತಾನೆ. ಅರ್ಥಾತ್, ಭೂಮಿಯಲ್ಲಿರೋ ನಮಗೆ ಸೂರ್ಯನು ಕಾಣದಂತೆ ಚಂದ್ರ ಅಡ್ಡವಾಗಿ ಸಾಗುತ್ತಿರುತ್ತಾನೆ.

ಆ ಸಂದರ್ಭದಲ್ಲಿ ಚಂದ್ರನು ಆಕ್ರಮಿಸಿಕೊಳ್ಳದ ಸೂರ್ಯನ ಹೊರಭಾಗ ಇರುತ್ತಲ್ಲಾ.. ಅದಷ್ಟೇ ನಮ್ಮ ಕಣ್ಣಿಗೆ ಗೋಚರವಾಗುತ್ತೆ. ಆ ಹೊರಭಾಗವನ್ನ ನೋಡಿದಾಕ್ಷಣ ನಮಗೆ ಬೆಂಕಿಯ ಉಂಗುರದಂತೆ ಗೋಚರವಾಗುತ್ತೆ. ಹಾಗಾಗಿಯೇ, ಈ ಸೂರ್ಯಗ್ರಹಣಕ್ಕೆ ಬೆಂಕಿ ಉಂಗುರ ಸೂರ್ಯ ಗ್ರಹಣ ಅಂತ ಕರೀತಾರೆ.

ಇದನ್ನೂ ಓದಿ:VIral Video ಟೇಲರ್​ ಸ್ವಿಫ್ಟ್​ ಸಹಿ ಇರುವ ಗಿಟಾರ್ ಖರೀದಿಸಿ ವೃದ್ಧ, ವೇದಿಕೆಯ ಮೇಲೆಯೇ ಒಡೆದು ಹಾಕಿದ್ದು ಏಕೆ?

Advertisment

ಅಕ್ಟೋಬರ್ 2ನೇ ತಾರೀಖಿನಂದ ಜರುಗುತ್ತಿರೋ ಸೂರ್ಯ ಗ್ರಹಣವೂ ಕೂಡ ಉಂಗುರ ಸೂರ್ಯ ಗ್ರಹಣವಾಗಿದೆ. ಈ ಉಂಗುರ ಸೂರ್ಯ ಗ್ರಹಣಕ್ಕೆ ಬೆಂಕಿ ಗ್ರಹಣ ಅಂತಲೂ ಕರೆಯಲಾಗುತ್ತೆ. ಬೆಂಕಿ ಗ್ರಹಣ ಜರುಗೋದ್ರಿಂದ ಜಗತ್ತಿಗೆ ಕಂಟಕ ಎದುರಾಗುತ್ತೆ ಅನ್ನೋ ಸುದ್ದಿಗಳೇ ಎಲ್ಲರಲ್ಲೂ ಭಯ ಹುಟ್ಟಿಸ್ತಿದೆ.

ಸೂರ್ಯ ಗ್ರಹಣದ ವೈಜ್ಞಾನಿಕ & ಪೌರಾಣಿಕ ಮಹತ್ವ ಏನು?
ಹಿಂದೂ ಪುರಾಣಗಳ ಪ್ರಕಾರ ಸೂರ್ಯ ಗ್ರಹಣ ಸಾಗರದ ಮಂಥನಕ್ಕೆ ಸಂಬಂಧಪಟ್ಟಿದೆ ಎನ್ನಲಾಗಿದೆ. ಪೌರಾಣಿಕ ಕಥೆಯ ಪ್ರಕಾರ ಸಮುದ್ರ ಮಂಥನದಿಂದ ಹೊರಬಂದ ಅಮೃತವನ್ನು ಅವರ್ಭ ಎಂಬ ಅಸುರನು ಕುಡಿಯುತ್ತಾನೆ. ಅದನ್ನ ತಿಳಿಯುತ್ತಿದ್ದಂತೆ ಜಗತ್ ಪಾಲಕನಾದ ವಿಷ್ಣು ದೈವ ತನ್ನ ಸುದರ್ಶನ ಚಕ್ರದಿಂದ ರಾಕ್ಷಸನ ಕತ್ತು ಕತ್ತರಿಸಿಬಿಡ್ತಾನೆ. ಆದರೆ ಆ ಅಸುರ ಅಮೃತವನ್ನೇ ಕುಡಿದಿದ್ದರಿಂದ ತಲೆ ಮತ್ತು ದೇಹ ಬೇರೆ ಬೇರೆಯಾದರೂ ಸಾಯಲಿಲ್ಲ. ಆಗ ಅವರ್ಭ ಅಸುರನ ರುಂಡವು ರಾಹುವಾಗಿ, ಮುಂಡವು ಕೇತುವಾಗಿ ಮಾರ್ಪಾಡಾದ್ವಂತೆ. ಈ ರಾಹು ಕೇತುಗಳ ನೆರಳು ಸೂರ್ಯನ ಮೇಲೆ ಬಿದ್ದಾಗ ಸೂರ್ಯ ಗ್ರಹಣ ಜರುಗುತ್ತದೆ ಎನ್ನೋ ನಂಬಿಕೆ ನಮ್ಮ ಪುರಾಣಗಳದ್ದು!

publive-image

ಇನ್ನು, ಸೂರ್ಯನು ಸೌರವ್ಯೂಹದ ಮಧ್ಯ ಭಾಗದಲ್ಲಿ ಕೇಂದ್ರೀಕೃತನಾಗಿರ್ತಾನೆ. ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ. ಸೂರ್ಯನ ಸುತ್ತ ಉಪಗ್ರಹಗಳು ಸಹ ಇವೆ. ಚಂದ್ರ ಭೂಮಿಗೆ ಉಪಗ್ರಹವಾಗಿ ಸುತ್ತುತ್ತಾನೆ. ಭೂಮಿಯ ಸುತ್ತ ತಿರುಗುವ ಚಂದ್ರ, ಭೂಮಿ ಮತ್ತು ಸೂರ್ಯನ ನಡುವೆ ಬಂದಾಗ ಸೂರ್ಯನ ಬೆಳಕು ಭೂಮಿಗೆ ಬೀಳದಂತಾಗುತ್ತೆ. ಆಗ ಭೂಮಿಯಲ್ಲಿ ಕತ್ತಲೆ ಆವರಿಸುವುದು. ಅದನ್ನ ಗ್ರಹಣ ಎಂದೇ ಪರಿಗಣಿಸಲಾಗುತ್ತೆ. ಇದು ಸೂರ್ಯ ಗ್ರಹಣದ ವೈಜ್ಞಾನಿಕ ಹಿನ್ನೆಲೆ. ಆದ್ರೀಗ.. ಜನರಲ್ಲಿ ಗ್ರಹಣ ಹೇಗೆ ಜರುಗುತ್ತೆ ಎಂಬುದಕ್ಕಿಂತಲೂ. ಈ ಗ್ರಹಣದಿಂದ ಉಂಟಾಗುವ ಒಳಿತು, ಕೆಡುವಿನ ಬಗ್ಗೆಯೇ ಹೆಚ್ಚಿನ ಕುತೂಹಲ. ಹಾಗಾಗಿ, ಗ್ರಹಣಕ್ಕೂ ಮುನ್ನವೇ ಪುಣ್ಯಕ್ಷೇತ್ರಗಳ, ಶಕ್ತಿದೇಗುಲಗಳ ಭೇಟಿ ಮಾಡಿ, ದೇವರ ದರ್ಶನ ಪಡೆದು ಒಳಿತಿಗಾಗಿ ಬೇಡಿಕೊಳ್ತಿದ್ದಾರೆ.

publive-image

ಗ್ರಹಣಕ್ಕೂ ದುರಂತಗಳಿಗೂ ಸಂಬಂಧವಿದೆಯೋ? ಕಾಕತಾಳೀಯವೋ ಗೊತ್ತಿಲ್ಲ. ಆದ್ರೆ ಸೂರ್ಯ ಗ್ರಹಣದ ಆಸುಪಾಸಲ್ಲಿ ಮನುಕುಲಕ್ಕೆ ಗಂಡಾಂತರಗಳು ಬಂದಿರೋದಂತೂ ಸತ್ಯ. ಅಲ್ಲೆಲ್ಲೋ ಭೂಕಂಪ, ಇಲ್ಲೆಲ್ಲೋ ಚಂಡಮಾರುತ. ಮತ್ತೆಲ್ಲೋ ಜ್ವಾಲಾಮುಖಿ ಸ್ಫೋಟ. ವಾತಾವರಣದಲ್ಲಿ ವಿಷಗಾಳಿಯ ಹರಿದಾಟ. ಮಾನವರ ಆರೋಗ್ಯದಲ್ಲಿ ಏರುಪೇರು. ಹೀಗೆ ಎಲ್ಲವೂ ನಿಗೂಢ ರೀತಿಯಲ್ಲೇ ನಡೆಯುತ್ವೆ. ಅದರಲ್ಲೂ ಸೂರ್ಯ ಗ್ರಹಣ ಯಾವ ಭಾಗದಲ್ಲಿ ಹೆಚ್ಚು ಸ್ಪಷ್ಟವಾಗಿ, ಪರಿಪೂರ್ಣವಾಗಿ ಗೋಚರವಾಗುತ್ತೋ. ಆ ಭಾಗದ ಜನ, ಜಾನುವಾರು, ಪ್ರಾಣಿ ಪಕ್ಷಿಗಳು ಖಂಡಿತವಾಗಿಯೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗುತ್ವೆ. ಅದೇ ರೀತಿಯಲ್ಲೇ ಸೂರ್ಯಗ್ರಹಣದಿಂದ ಒಳಿತೂ ಕೂಡ ಆಗಿರೋ ಅನೇಕ ಉದಾಹರಣೆಗಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment