/newsfirstlive-kannada/media/post_attachments/wp-content/uploads/2023/07/VIRAT-1.jpg)
ಜಂಟಲ್ಮೆನ್ ಗೇಮ್ ಅಂತ ಕರೆಸಿಕೊಳ್ಳುವ ಕ್ರಿಕೆಟ್ ಆಗಾಗ ಅಚ್ಚರಿ ಸಂಗತಿಗಳಿಗೆ ಸಾಕ್ಷಿಯಾಗುತ್ತೆ. ನೀವು ಆಶ್ಚರ್ಯ ಪಡುವಂತ ಹಲವು ಕೋ-ಇನ್ಸಿಡೆಂಟ್ಸ್ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ನಡೆದಿವೆ. ಇದೆಲ್ಲವನ್ನೂ ಮಾಡಿರೋದು ಕಿಂಗ್ ಕೊಹ್ಲಿ.
20223ರಲ್ಲಿ ವಿರಾಟ್ ಕೊಹ್ಲಿ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಇಷ್ಟಾದರೂ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸ್ತಿರೋ ಸೆಂಚುರಿ ಸ್ಪೆಷಲಿಸ್ಟ್ಗೆ ಒಂದು ಕೊರಗು ಕಾಡ್ತಿತ್ತು. ಅದೇನಂದ್ರೆ ವಿದೇಶದಲ್ಲಿ ಸೆಂಚುರಿ ಬರ ನೀಗೋದ್ಯಾವಾಗ ಅನ್ನೋದು. ವಿಂಡೀಸ್ ವಿರುದ್ಧ ಟ್ರಿನಿಡಾಡ್ ಟೆಸ್ಟ್ನಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ 5 ವರ್ಷಗಳ ವಿದೇಶಿ ಸೆಂಚುರಿ ವನವಾಸಕ್ಕೆ ಇತಿಶ್ರೀ ಹಾಡಿದ್ದಾರೆ.
/newsfirstlive-kannada/media/post_attachments/wp-content/uploads/2023/06/SACHIN_WORLD_CUP.jpg)
500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂಡಿಬಂದ ಕೊಹ್ಲಿಯ ಈ ಶತಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯ್ತು. ಹಲವು ದಿಗ್ಗಜರ ದಾಖಲೆಗಳು ಪುಡಿ ಪುಡಿ ಆದ್ವು. ಇದೆಲ್ಲದರಾಚೆಗೆ ರನ್ ಮಷೀನ್ ಬಾರಿಸಿದ 29ನೇ ಶತಕ ಅನೇಕ ಕೋಇನ್ಸಿಡೆಂಟ್ಸ್ಗೆ ಸಾಕ್ಷಿಯಾಯ್ತು. ಶತಕದ ಸಂಭ್ರಮದಲ್ಲಿ ಕ್ರಿಕೆಟ್ ಜಗತ್ತು ಅದನ್ನ ಮರೆತೇ ಬಿಟ್ಟಿತ್ತು. ನಾವೀಗ ಕೊಹ್ಲಿಯ 29ನೇ ಟೆಸ್ಟ್ ಶತಕಕ್ಕೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ರ ಶತಕಕ್ಕೂ ಒಂದು ಕಾಕತಾಳೀಯ ಇದೆ.
ಕೊಹ್ಲಿ-ಸಚಿನ್ 29ನೇ ಶತಕ ಬಾರಿಸಿದ್ದು ಸೇಮ್ ಸ್ಟೇಡಿಯಂನಲ್ಲಿ
ಯೆಸ್, ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಸತ್ಯ. ಕಾಕತಾಳೀಯವೆಂಬಂತೆ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ತಮ್ಮ 29ನೇ ಟೆಸ್ಟ್ ಶತಕವನ್ನು ಸೇಮ್ ಸ್ಟೇಡಿಯಂನಲ್ಲಿ ಸಿಡಿಸಿದ್ದಾರೆ. ಅಂದ್ರೆ ಸದ್ಯ ನಡೆಯುತ್ತಿರುವ ಫೋರ್ಟ್ ಆಫ್ ಸ್ಪೇನ್ ಅಂಗಳದಲ್ಲಿ.
/newsfirstlive-kannada/media/post_attachments/wp-content/uploads/2023/07/VIRAT_KOHLI_JADEJA.jpg)
ದಿಟ್ಟ ಹೋರಾಟ ನಡೆಸಿದ್ದ ವಿರಾಟ್ 206 ಎಸೆತಗಳಲ್ಲಿ 121 ರನ್ ಬಾರಿಸುವ ಮೂಲಕ ರೆಡ್ ಬಾಲ್ ಕ್ರಿಕೆಟ್ನಲ್ಲಿ 29ನೇ ಶತಕ ಪೂರೈಸಿದ್ರು. ಕೋ-ಇನ್ಸಿಡೆಂಟ್ಸ್ ಎನ್ನುವಂತೆ ಸಚಿನ್ ತೆಂಡೂಲ್ಕರ್ 2002 ರಲ್ಲಿ ಇದೇ ಅಂಗಳದಲ್ಲಿ ಟೆಸ್ಟ್ ವೃತ್ತಿಜೀವನದ 29ನೇ ಶತಕ ಬಾರಿಸಿ ಮೆರೆದಾಡಿದ್ರು.
499 ಪಂದ್ಯಗಳ ನಂತ್ರ ಇಬ್ಬರು ಹೊಡೆದಿದ್ದು ತಲಾ 75 ಶತಕ
ಇದು ಮತ್ತೊಂದು ಕೋ-ಇನ್ಸಿಡೆಂಟ್ಸ್.. ಕಿಂಗ್ ಕೊಹ್ಲಿ 499 ಪಂದ್ಯಗಳ ಬಳಿಕ ಮೂರು ಮಾದರಿ ಕ್ರಿಕೆಟ್ನಲ್ಲಿ 75 ಶತಕ ಸಿಡಿಸಿದ ಸಾಧನೆ ಮಾಡಿದ್ರು. ಟೆಸ್ಟ್ 28, ಏಕದಿನ 46 ಹಾಗೂ ಟಿ20ಯಲ್ಲಿ 1 ಶತಕ ವಿರಾಟ್ ಹೆಸರಿನಲ್ಲಿತ್ತು. ಶತಕಗಳ ಶತಕ ರಾಜ ಸಚಿನ್ ತೆಂಡೂಲ್ಕರ್ ಅವರದ್ದೇ ಇದೇ ಕಥೆ. ಗಾಡ್ ಆಫ್ ಕ್ರಿಕೆಟ್ ಕೂಡ 499 ಪಂದ್ಯಗಳ ಮುಕ್ತಾಯಕ್ಕೆ ಸೇಮ್ ಕೊಹ್ಲಿಯಷ್ಟೇ 75 ಶತಕಗಳನ್ನ ಬಾರಿಸಿದ್ದು ನಿಜಕ್ಕೂ ಕಾಕತಾಳೀಯ.
/newsfirstlive-kannada/media/post_attachments/wp-content/uploads/2023/07/Team_INDIA-3-1.jpg)
ಅಂದು ಗವಾಸ್ಕರ್ 121.. ಇಂದು ಕೊಹ್ಲಿ 121 ರ ನ್..!
ಬರೀ ಸಚಿನ್ ಮಾತ್ರವಲ್ಲ, ವಿರಾಟ್ ಕೊಹ್ಲಿಯ 29ನೇ ಟೆಸ್ಟ್ ಸೆಂಚುರಿ ದಿಗ್ಗಜ ಸುನೀಲ್ ಗವಾಸ್ಕರ್ ಅವರೊಂದಿಗೆ ಹೋಲಿಕೆ ಹೊಂದಿದೆ. 1983 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತನ್ನ 50ನೇ ಆಡಿದಾಗ ಗವಾಸ್ಕರ್ ಅಮೋಘ 121 ರನ್ ಗಳಿಸಿದ್ದರು. ಇದೀಗ 40 ವರ್ಷಗಳ ನಂತರ ಭಾರತ-ವೆಸ್ಟ್ಇಂಡೀಸ್ ತಂಡಗಳು 100ನೇ ಟೆಸ್ಟ್ ಆಡುತ್ತಿವೆ. ಆ ವಿಶೇಷ ಕ್ಷಣಕ್ಕೆ ಸದ್ಯ ನಡೆಯುತ್ತಿರುವ ಫೋರ್ಟ್ ಆಫ್ ಸ್ಪೇನ್ ಸ್ಟೇಡಿಯಂ ಸಾಕ್ಷಿಯಾಗಿದೆ. ಈ ಮೈಲುಗಲ್ಲಿನ ಪಂದ್ಯದಲ್ಲಿ ಕೊಹ್ಲಿ ಕೂಡ ಸುನೀಲ್ ಗವಾಸ್ಕರ್ ರಂತೆ ಕರೆಕ್ಟಾಗಿ 121 ರನ್ ಗಳಿಸಿದ್ದಾರೆ. ಇದು ಕಾಕತಾಳೀಯಾನೋ ಇಲ್ಲ ಸಾಂದಭಿರ್ಕಕನೋ ಗೊತ್ತಿಲ್ಲ. ಆದರೆ ಇಂತಹ ಘಟನೆಗಳು ಕ್ರಿಕೆಟ್ ಪ್ರೇಮಿಗಳನ್ನ ಅಚ್ಚರಿಗೆ ತಳ್ಳಿರುವುದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us