newsfirstkannada.com

BBMP ಚುನಾವಣೆ.. ‘ಗ್ಯಾರಂಟಿ’ಯ ಲಾಭ ಪಡೆಯಲು ಕಾಂಗ್ರೆಸ್​​ ಸಿದ್ಧತೆ..!

Share :

Published May 16, 2024 at 6:19am

  ಬಿಬಿಎಂಪಿಗೆ ಚುನಾವಣೆ ನಡೆದು 9 ವರ್ಷಗಳು ಆಗಿದೆ

  ದೇಶದ ಬೃಹತ್​​​ ಪಾಲಿಕೆಗಳಲ್ಲಿ ಬಿಬಿಎಂಪಿ ಕೂಡ ಒಂದು

  ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ-ಅಶೋಕ್

ಬಿಬಿಎಂಪಿ.. ಬೃಹತ್​​​ ಬೆಂಗಳೂರು ಮಹಾ ನಗರ ಪಾಲಿಕೆ. ದೇಶದ ಬೃಹತ್​​​ ಪಾಲಿಕೆಗಳಲ್ಲಿ ಒಂದು. ನಗರದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉತ್ತರದಾಯಿ. ರಾಜಧಾನಿಯ ಉಸ್ತುವಾರಿ ನಿರ್ವಹಿಸಬೇಕಿದ್ದ ಬಿಬಿಎಂಪಿಗೆ ಕಳೆದ 4 ವರ್ಷಗಳಿಂದ ಎಲೆಕ್ಷನ್​​ ಇಲ್ಲದೆ ಗ್ರಹಣ ಕವಿದಿದೆ. ಇಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳದ್ದೇ ದರ್ಬಾರ್​​ ಇದೆ. ಇದೀಗ ಬಿಬಿಎಂಪಿಗೆ ಕವಿದ ಗ್ರಹಣ ಮೋಕ್ಷಕ್ಕಾಗಿ ಎಲೆಕ್ಷನ್​​​ ಹೋಮ ಹವನಕ್ಕೆ ಸಿದ್ಧತೆ ಶುರುವಾಗಿದೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

ಗ್ಯಾರಂಟಿಯ ಲಾಭ ಪಡೆಯಲು ಕಾಂಗ್ರೆಸ್​​ ಶಾಸಕರ ಸಿದ್ಧತೆ!

2020 ಸೆಪ್ಟೆಂಬರ್​ನಲ್ಲೇ ಬಿಬಿಎಂಪಿ ಸದಸ್ಯರುಗಳ ಅವಧಿ ಅಂತ್ಯ ಆಗಿದೆ.. ಇನ್ನೊಂದು ವರ್ಷ ಕಳೆದ್ರೆ ಎಲೆಕ್ಷನ್​​​ ಅವಧಿಯೇ ಕಳೆದಂತೆ. ಸದ್ಯ ಎಲೆಕ್ಷನ್​ಗೆ ಒಲವು ತೋರಿಸಿದ ರಾಜ್ಯ ಸರ್ಕಾರ, ಪೂರ್ವ ಸಿದ್ಧತೆ ಶುರು ಮಾಡಿದೆ.. ಲೋಕಸಭಾ ಫಲಿತಾಂಶದ ಬೆನ್ನಿಗೆ ಹೈವೋಲ್ಟೇಜ್​ ಮೀಟಿಂಗ್​ ಅರೆಂಜ್​​ ಆಗಿದೆ. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಕಾಂಗ್ರೆಸ್​ ಶಾಸಕರ ಸಭೆ ನಡೆಯಲಿದ್ದು, ಬಹುತೇಕ ದಸರಾ ವೇಳೆಗೆ ಎಲೆಕ್ಷನ್​ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಯಾವತ್ತೋ ನಡೀಬೇಕಿದ್ದ ಎಲೆಕ್ಷನ್​​ಗೆ ವಾರ್ಡ್​​ಗಳ ಮರು ವಿಂಗಡಣೆ, ಮೀಸಲಾತಿ, ಕೋರ್ಟ್​​ ವ್ಯಾಜ್ಯಗಳು, ವಿಧಾನಸಭೆ, ಲೋಕಸಭೆ ಎಲೆಕ್ಷನ್​​​ ಕಾರಣಕ್ಕೆ ಬಿಬಿಎಂಪಿ ಎಲೆಕ್ಷನ್​​ನನ್ನ ಬಹುತೇಕರು ಮರೆತೇ ಬಿಟ್ಟಿದ್ದಾರೆ. ಅಂದ್ಹಾಗೆ ಈಗ ಡಿಸಿಎಂ ಡಿ.ಕೆ ಶಿವಕುಮಾರ್​​ಗೆ ಬೆಂಗಳೂರಿನ ಕಾಂಗ್ರೆಸ್ ಸಚಿವರು, ಶಾಸಕರು ಈ ಬಿಬಿಎಂಪಿ ಎಲೆಕ್ಷನ್​​​ಗಾಗಿ ದುಂಬಾಲು ಬಿದ್ದಿದ್ದಾರೆ. ಸರ್ಕಾರ ಸಹ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಪ್ಲಾನ್​​ ಮಾಡ್ತಿದೆ.

ಬಿಬಿಎಂಪಿ ಮಂತ್ರ.. ಕಾಂಗ್ರೆಸ್​​ ತಂತ್ರ!

 • ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ
 • ಸಾಲು ಸಾಲು ಚುನಾವಣೆ ಬಳಿಕ ಸರ್ಕಾರ ಇನ್ನಷ್ಟು ಆ್ಯಕ್ಟೀವ್ ಆಗಬೇಕಿದೆ
 • ಒಂದ್ವೇಳೆ ಪಾಲಿಕೆ ಕೈಪಡೆ ಪಾಲಾದ್ರೆ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು
 • ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರ ಹಿಡಿಯಬೇಕಾಗಿದೆ
 • ರಾಜ್ಯದಲ್ಲಿ ಮರು ಆಯ್ಕೆಗೆ ರಾಜ್ಯದ ರಾಜಧಾನಿ ಕಾಂಗ್ರೆಸ್​ ಕೈಯಲ್ಲಿರಬೇಕು
 • ಸಾಧ್ಯವಾದಷ್ಟು ಗ್ಯಾರೆಂಟಿಗಳ ಫಲ ಬಾಚಿಕೊಳ್ಳಲು ಬಿಬಿಎಂಪಿ ಎಲೆಕ್ಷನ್​​​​
 • ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಬಲ ಕುಂದಿಸಲು ಈ ಚುನಾವಣೆ ಅಗತ್ಯ
 • ಸತತ ಎಲೆಕ್ಷನ್​​​ನಲ್ಲಿ ಪಕ್ಷಕ್ಕೆ ಸಹಕಾರಿಯಾದ ಕಾರ್ಯಕರ್ತರಿಗೂ ಅವಕಾಶ

ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆಯ ಸುದ್ದಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್​​​.ಅಶೋಕ್​​​, ಬೆಂಗಳೂರಿನಲ್ಲಿ ಯಾವಾಗಲೇ ಚುನಾವಣೆ ಬಂದ್ರೂ ನಾವು ಎದುರಿಸಲು ಸಿದ್ಧ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಬಾಯ್ ​ಫ್ರೆಂಡ್​​ಗೆ ದುಬಾರಿ ಗಿಫ್ಟ್​ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!

‘ಯಾವಾಗ ಎಲೆಕ್ಷನ್​ ಬಂದ್ರೂ ಸಿದ್ಧ’

ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ. ಬೆಂಗಳೂರಲ್ಲಿ ನಮ್ಮದೇ 3 ಜನ ಸಂಸದರು ಇದ್ದಾರೆ. 16 ಜನ ಶಾಸಕರು ನಾವಿದ್ದೇವೆ. ಡಿ.ಕೆ ಶಿವಕುಮಾರ್ ಇಂನ್​ಚಾರ್ಜ್ ಮಿನಿಸ್ಟರ್ ಆದ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ಒಂದೊಂದು ಮನೆ ಕಟ್ಟಬೇಕಾದರೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಲಂಚ ಕೊಡಬೇಕು. ಈ ಎಲೆಕ್ಷನ್ ಬಂದರೆ ಲಂಚ ತಗೊಂಡಿದ್ದಾರಲ್ಲ, ಅದಕ್ಕೆ ಜನ ಸರಿಯಾದ ಪಾಠ ಕಲಿಸುತ್ತಾರೆ.

ಆರ್​.ಅಶೋಕ್​, ವಿಪಕ್ಷ ನಾಯಕ

ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ 4 ವರ್ಷ ಕಳೆದಿದೆ. ಪ್ರತಿ ಮಳೆಗಾಲ, ಬೇಸಿಗೆಯಲ್ಲೂ ತತ್ತರಿಸ್ತಿರುವ ಸಿಲಿಕಾನ್​​​ ಸಿಟಿ ಬ್ರ್ಯಾಂಡ್​​ಗೆ ಧಕ್ಕೆ ಆಗ್ತಿದೆ. ಸಾಕಷ್ಟು ಅಭಿವೃದ್ಧಿ ಪರ, ಜನಪರ ಯೋಜನೆಗಳು ಪಾತಾಳ ಸೇರಿವೆ. ಹೀಗಾಗಿ ಬಿಬಿಎಂಪಿ ಎಲೆಕ್ಷನ್​ ಅತ್ಯವಶ್ಯ ಅಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBMP ಚುನಾವಣೆ.. ‘ಗ್ಯಾರಂಟಿ’ಯ ಲಾಭ ಪಡೆಯಲು ಕಾಂಗ್ರೆಸ್​​ ಸಿದ್ಧತೆ..!

https://newsfirstlive.com/wp-content/uploads/2024/03/BBMP_DKS.jpg

Load More