/newsfirstlive-kannada/media/media_files/2025/12/11/abhishek-sharma-2025-12-11-10-15-53.jpg)
ಅಭಿಷೇಕ್ ಶರ್ಮಾ Photograph: (ಬಿಸಿಸಿಐ)
ಇಂಡೋ-ನ್ಯೂಜಿಲೆಂಡ್​​ ಟಿ20 ಸರಣಿಗೂ ಮುನ್ನ ಟೀಮ್​ ಇಂಡಿಯಾದ ಡಿಸ್ಟ್ರಕ್ಟಿವ್​ ಬ್ಯಾಟರ್​ ಅಭಿಷೇಕ್​ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಕಳೆದ ಸೌತ್ ಆಫ್ರಿಕಾ ಎದುರಿನ ಟಿ-20 ಸರಣಿಯಲ್ಲಿ ಅಭಿಷೇಕ್ ಶರ್ಮಾ, ಫುಲ್ ಸೈಲೆಂಟ್ ಆಗಿದ್ರು. ಪವರ್​ ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ನಡೆಸ್ತಿದ್ದ ಅಭಿಷೇಕ್, ಆಫ್ರಿಕನ್ ಬೌಲರ್​ಗಳ ಎದುರು ಮಂಕಾಗಿದ್ರು. ಇದೀಗ ಕಿವೀಸ್​​ ಬೌಲರ್​ಗಳ ಎದುರಾದ್ರು ಸಿಡಿದೇಳ್ತಾರಾ ಅನ್ನೋದು ಕ್ರಿಕೆಟ್​ ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆಯಾಗಿದೆ.
ಇಂಡೋ-ನ್ಯೂಜಿಲೆಂಡ್​ ಮೊದಲ ಟಿ20 ಪಂದ್ಯಕ್ಕೆ ಅಖಾಡ ರೆಡಿಯಾಗಿದೆ. ನಾಗ್ಪುರದ ವಿದರ್ಭ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆಯೋ ಪಂದ್ಯಕ್ಕೆ ಮೆನ್​ ಇನ್​ ಬ್ಲ್ಯೂ ಪಡೆ ಭರ್ಜರಿ ಸಿದ್ಧತೆ ನಡೆಸಿ ಸಜ್ಜಾಗಿದೆ. ಸ್ಪೋಟಕ ಬ್ಯಾಟ್ಸ್​​ಮನ್​ ಅಭಿಷೇಕ್​ ಶರ್ಮಾ ಚುಟುಕು ಸರಣಿಯ ಸೆಂಟರ್​ ಆಫ್​​ ಅಟ್ರಾಕ್ಷನ್​ ಅನಿಸಿದ್ದಾರೆ. ಪಂಜಾಬ್​ ಪುತ್ತರ್​ ಬ್ಯಾಟ್​ನಿಂದ ಬೌಂಡರಿ, ಸಿಕ್ಸರ್​ ಸುರಿಮಳೆಯ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಅಭಿಷೇಕ್​ ಶರ್ಮಾ ನೋಡಿದ್ರೆ, ಸೈಲೆಂಟ್​ ಮೂಡ್​ಗೆ ಜಾರಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ವಿಶೇಷ ವಿಧಾನಸಭೆ ಅಧಿವೇಶನ ಶುರು: ವಿಬಿ ರಾಮ್ ಜಿ ಕಾಯಿದೆ ಪರ-ವಿರುದ್ಧ ಚರ್ಚೆಗೆ ತಯಾರಿ
/filters:format(webp)/newsfirstlive-kannada/media/media_files/2025/10/01/abhishek_sharma-8-2025-10-01-12-43-11.jpg)
ಬೌಂಡರಿ, ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದ ಅಭಿಷೇಕ್ ಶರ್ಮಾ, ಕಳೆದ ಸರಣಿಯಲ್ಲಿ ಅದ್ಯಾಕೋ ಡಲ್ ಆಗ್ಬಿಟ್ಟಿದ್ರು. ಟೆರರ್, ಡಿಸ್ಟ್ರಕ್ಟೀವ್, ಪವರ್​​ ಹಿಟ್ಟರ್ ಅಂತಾನೇ ಕರೆಸಿಕೊಳ್ತಿದ್ದ ಪಂಜಾಬ್ ಬಾಯ್ ಸೌತ್​ ಆಫ್ರಿಕಾ ಎದುರು ರನ್​ಗಳಿಸೋಕೇ ಪರದಾಡಿದ್ರು. ಅಭಿಷೇಕ್​ಗೆ ಏನಾಗಿದೆ..? ಅಭಿಷೇಕ್ ಅಬ್ಬರಕ್ಕೆ ಆಫ್ರಿಕನ್ನರು ಬ್ರೇಕ್ ಹಾಕಿದ್ದೇಗೆ..? ಅಭಿಷೇಕ್ ಬ್ಯಾಟಿಂಗ್ ರಿದಮ್ ಕಳೆದುಕೊಂಡ್ರಾ..? ಎಂಬೆಲ್ಲಾ ಪ್ರಶ್ನೆಗಳು ಸರಣಿ ಅಂತ್ಯದ ಬಳಿಕ ಚರ್ಚೆಯಾಗಿದ್ವು.
T20 ಸರಣಿಯಲ್ಲಿ ಅಭಿಷೇಕ್ ಸೈಲೆಂಟ್
ಸೌತ್​ ಆಫ್ರಿಕಾ ಸರಣಿಯಲ್ಲಿ ಅಭಿಷೇಕ್ ಶರ್ಮಾ 4 ಪಂದ್ಯಗಳನ್ನ ಆಡಿದ್ರು. ಈ ಪಂದ್ಯಗಳಿಂದ ಅಭಿಷೇಕ್ ಗಳಿಸಿದ್ದು, ಕೇವಲ 103 ರನ್ ಮಾತ್ರ. 25.75ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್​ಗಳಿಸಿದ್ದ ಅಭಿಷೇಕ್​ ಶರ್ಮಾ ಬೌಂಡರಿ, ಸಿಕ್ಸರ್​ಗಳ ಧಮಾಕ ಸೃಷ್ಟಿಸುವಲ್ಲೂ ಫೇಲ್​ ಆಗಿದ್ರು. ವಿಶ್ವದ ನಂಬರ್​ 1 ಟಿ20 ಬ್ಯಾಟ್ಸ್​​ಮನ್​​ ಅಭಿಷೇಕ್ ಕರಿಯರ್​ನಲ್ಲೇ ಅತ್ಯಂತ ಕಳಪೆ ಟಿ-20 ಸರಣಿ.
ಒಂದೇ ಒಂದು ಫಿಫ್ಟಿ ಇಲ್ಲ
ಕ್ಲೀನ್ ಹಿಟ್ಟರ್, ಅಗ್ರೆಸಿವ್ ಮೈಂಡ್​ಸೆಟ್ ಇರುವ ಅಭಿಷೇಕ್​, ಸೌತ್​ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಒಂದೇ ಒಂದು ಅರ್ಧಶತಕವನ್ನ ಕೂಡ ಸಿಡಿಸಲಿಲ್ಲ. ಇದು ಅಭಿಷೇಕ್ ಬ್ಯಾಟಿಂಗ್​​​ನ ಲೋ ಪಾಯಿಂಟ್ ಆಂದ್ರೆ ತಪ್ಪಿಲ್ಲ. ಧರ್ಮಶಾಲಾ ಟಿ-ಟ್ವೆಂಟಿ ಪಂದ್ಯದಲ್ಲಿ ಅಭಿಷೇಕ್ 35 ರನ್, ಅಹ್ಮದಾಬಾದ್​ನಲ್ಲಿ 34 ರನ್​ಗಳಿಸಿದ್ರೆ, ಉಳಿದೆರಡು ಪಂದ್ಯಗಳಲ್ಲಿ 17 ರನ್​ಗಳಿಗೆ ಸುಸ್ತಾದ್ರು. ಕಳೆದ 9 ಟಿ20 ಇನ್ನಿಂಗ್ಸ್​ಗಳಲ್ಲಿ ಕೇವಲ 1 ಅರ್ಧಶತಕ ಸಿಡಿಸಿದ್ದಾರೆ.
ಟಿ-20 ಕಿಂಗ್, ಸಿಕ್ಸರ್​​​ಗಳ ಸರದಾರ ಎನಿಸಿಕೊಂಡಿದ್ದ ಅಭಿಷೇಕ್ ಶರ್ಮಾ, ಪಂದ್ಯವೊಂದರಲ್ಲಿ ಬೌಂಡರಿಗಿಂತ ಸಿಕ್ಸರ್​ಗಳನ್ನೇ ಹೆಚ್ಚು ಸಿಡಿಸ್ತಾರೆ. ಆದ್ರೆ ಸೌತ್ ಆಫ್ರಿಕಾ ಟಿ-ಟ್ವೆಂಟಿ ಸೀರಿಸ್​ನಲ್ಲಿ ಆರಂಭಿಕ ಬ್ಯಾಟ್ಸ್​ಮನ್​ ಸಿಡಿಸಿದ್ದು, ಕೇವಲ 7 ಸಿಕ್ಸರ್​​ ಮಾತ್ರ. ತನ್ನ ಪವರ್​ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್​ಗಳನ್ನ ಷೇಕ್ ಮಾಡುತ್ತಿದ್ದ ಅಭಿಷೇಕ್, ಬ್ಯಾಟಿಂಗ್ ರಿದಮ್ ಕಳೆದುಕೊಂಡು ಅವರೇ ಷೇಕ್ ಅದಂತೆ ಅನಿಸಿದ್ರು.
ಇದನ್ನು ಓದಿ: ಬೂಮ್ರಾ ಖದರ್ ಮಾಯ.. ಶಿವಂ ದುಬೆನೇ ಎಷ್ಟೋ ವಾಸಿ..!
/filters:format(webp)/newsfirstlive-kannada/media/media_files/2025/12/19/abhishekh-sharma-2025-12-19-12-16-02.jpg)
ಕ್ರಿಕೆಟ್​​ನಲ್ಲಿ ಅಭಿಷೇಕ್ ಮೋಸ್ಟ್ ಇಂಪಾರ್ಟೆಂಟ್ ಬ್ಯಾಟರ್. ಅಭಿಷೇಕ್ ಒಳ್ಳೆ ಸ್ಟಾರ್ಟ್ ಕೊಟ್ರೆ, ತಂಡ ಗುಡ್ ಪೊಸಿಷನ್​​​ನಲ್ಲಿರುತ್ತದೆ. ಒಂದು ವೇಳೆ ಅಭಿಷೇಕ್ ಕೈಕೊಟ್ರೆ, ತಂಡ ರನ್​ಗಳಿಸೋಕೂ ಪರದಾಡುತ್ತಿದೆ. ಇದು ಪದೇ ಪದೇ ಪ್ರೂವ್ ಕೂಡ ಆಗಿದೆ. ಆರಂಭಿಕ ಅಭಿಷೇಕ್ ಸ್ವಲ್ಪ ಜವಾಬ್ದಾರಿ ಮರೆತ್ರೂ, ತಂಡಕ್ಕೆ ಹಿನ್ನಡೆ ಖಚಿತ. ಅಭಿಷೇಕ್ ಬ್ಯಾಟಿಂಗ್​ನಲ್ಲಿ ಮಿಂಚಿದ್ರೆ, ತಂಡದ ಗೆಲುವನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ.
ಸೌತ್​ ಆಫ್ರಿಕಾ ಎದುರು ಸೈಲೆಂಟ್​ ಆಗಿದ್ದ ಅಭಿಷೇಕ್ ಶರ್ಮಾ, ನ್ಯೂಜಿಲೆಂಡ್ ಸರಣಿಯಲ್ಲಿ ಸಿಡಿದೇಳ್ತಾರಾ ಅನ್ನೋದು ಸದ್ಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಇರೋ ಪ್ರಶ್ನೆಯಾಗಿದೆ. ಬೌಂಡರಿ, ಸಿಕ್ಸರ್​​ಗಳ ಸುರಿಮಳೆ ಸುರಿಸಿ ಕಿವೀಸ್​ ಕಿವಿ ಹಿಂಡೋಕೆ ಅಭಿಷೇಕ್​ ಶರ್ಮಾ ಭರ್ಜರಿ ಅಭ್ಯಾಸವನ್ನ ನಡೆಸಿ ಸಜ್ಜಾಗಿದ್ದಾರೆ. ಅಭಿಷೇಕ್​ ಟ್ರ್ಯಾಕ್​ ರೆಕಾರ್ಡ್​ ನೋಡಿದ್ರೆ, ಯಾವುದು ಅಸಾಧ್ಯವಿಲ್ಲ. ಹೊಡಿಬಡಿ ಆಟದಲ್ಲಿ ಅಭಿಷೇಕ್​ನ ಮೀರಿಸೋರೇ ಇಲ್ಲ.
ಇದನ್ನೂ ಓದಿ: ಬೂಮ್ರಾ ಖದರ್ ಮಾಯ.. ಶಿವಂ ದುಬೆನೇ ಎಷ್ಟೋ ವಾಸಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us