/newsfirstlive-kannada/media/media_files/2026/01/21/shivam-dube-and-jasprit-bumrah-2026-01-21-15-05-01.jpg)
ಭಾರತ-ನ್ಯೂಜಿಲೆಂಡ್​​ ನಡುವಿನ ಮೊದಲ ಟಿ20 ಸರಣಿಗೆ ಕೌಂಟ್​​ಡೌನ್​ ಆರಂಭವಾಗಿದೆ. ಟಿ20 ವಿಶ್ವಕಪ್​ಗೂ ಮುನ್ನ ಟೀಮ್​ ಇಂಡಿಯಾಗೆ ಸಿಕ್ಕಿರೋ ಪ್ರಿಪರೇಟರಿ ಸಿರೀಸ್​ ಇದಾಗಿದೆ. ವಿಶ್ವ ಯುದ್ಧಕ್ಕೆ ಈಗಾಗಲೇ ಟೀಮ್​ ಅನೌನ್ಸ್​ ಮಾಡಿ ಟೈಟಲ್​ ಡಿಫೆಂಡ್​ ಮಾಡಿಕೊಳ್ಳಲು ಟೀಮ್​ ಇಂಡಿಯಾ ಹೊರಟಿದೆ. ಇದ್ರ ನಡುವೆ ಟೀಮ್​ ಇಂಡಿಯಾ ವೇಗಿ ಜಸ್​​ಪ್ರಿತ್​ ಬೂಮ್ರಾ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಹೊಸ ತಲೆನೋವು ತಂದಿಟ್ಟಿದ್ದಾರೆ.
ಬೂಮ್ರಾ ಖದರ್​ ಮಾಯವಾಯ್ತಾ..?
ಟಿ20 ಫಾರ್ಮೆಟ್​​ನ ಬಿರುಗಾಳಿ ಬೌಲರ್​​ ಎಂದೇ ಖ್ಯಾತಿ ಪಡೆದಿದ್ದ ಜಸ್​​​ಪ್ರಿತ್​ ಬೂಮ್ರಾ ಖದರ್​ ಈಗ ಮಾಯವಾಗಿದೆ. ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಬೂಮ್ರಾ ರಿಧಮ್​ ಕಳೆದುಕೊಂಡಂತೆ ಕಾಣ್ತಿದ್ದಾರೆ. ಬೆಂಕಿ ಎಸೆತಗಳನ್ನ ಎಸೆದು ಎದುರಾಳಿಯ ಕಂಗೆಡಿಸ್ತಾ ಇದ್ದ ಬೂಮ್ರಾ ಹಳೆ ಖದರ್​​ ಈಗ ಮಾಯವಾಗಿದೆ. ಬೌಲಿಂಗ್​ನಲ್ಲಿ ಬೂಮ್ರಾ ಮ್ಯಾಜಿಕ್​ ನಡೆಯದೆ ಇರೋದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿದೆ.
ಇದನ್ನೂ ಓದಿ:ಭಾರತ-ನ್ಯೂಜಿಲೆಂಡ್​ T20 ಮ್ಯಾಚ್.. ಹೇಗಿರುತ್ತೆ ಟೀಂ ಇಂಡಿಯಾ ಪ್ಲೇಯಿಂಗ್-11?
/filters:format(webp)/newsfirstlive-kannada/media/media_files/2025/12/19/jasprit-bumrah-2025-12-19-13-20-58.jpg)
ಸೌತ್​ ಆಫ್ರಿಕಾ, ಆಸಿಸ್​​ ವಿರುದ್ಧ ಬೂಮ್ರಾ ಸೈಲೆಂಟ್​​​
ಬೂಮ್ರಾ ಖದರ್​ ಮಾಯವಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಗೆ ಕಳೆದ 2 ಸರಣಿಗಳು ಕೂಡ ಕಾರಣ. ಆಸ್ಟ್ರೇಲಿಯಾದ ಪೇಸ್​ & ಬೌನ್ಸಿ ಟ್ರ್ಯಾಕ್​ನಲ್ಲೂ ಬೂಮ್ರಾ ಬೌಲಿಂಗ್​ ಮ್ಯಾಜಿಕ್​ ಮಾಡಿವಲ್ಲಿ ಫೇಲ್​ ಆಗಿದ್ರು. ಆಡಿದ 5 ಪಂದ್ಯಗಳಿಂದ ಕೇವಲ 3 ವಿಕೆಟ್​ ಕಬಳಿಸಿದ್ರು. ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ಸರಣಿಯಲ್ಲೂ ಬೂಮ್ರಾ ಬೌಲಿಂಗ್​ ಸಾಧಾರಣ.! ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯಗಳನ್ನಾಡಿದ ಬೂಮ್ರಾ, 11 ಓವರ್​ ಬೌಲಿಂಗ್​ ಮಾಡಿದ್ರು. ಕೇವಲ 4 ವಿಕೆಟ್​ ಕಬಳಿಸಿದ ಬೂಮ್ರಾ, 8.86ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ರು.
ಬೂಮ್ರಾ ಬೌಲಿಂಗ್ ಸಾಧಾರಣ
ಕಳೆದ ಏಷ್ಯಾಕಪ್​ ಟೂರ್ನಿಯಲ್ಲೂ ಜಸ್​​​ಪ್ರಿತ್​ ಬೂಮ್ರಾ ಬೌಲಿಂಗ್​ ಅಷ್ಟಕಷ್ಟೆ. ದುಬೈನಲ್ಲಿ ದರ್ಬಾರ್​ ನಡೆಸ್ತಾರೆ ಅನ್ನೋ ಅಪಾರ ನಿರೀಕ್ಷೆಯಿಟ್ಟಿದ್ದ ಫ್ಯಾನ್ಸ್​ಗೆ ಸಾಧಾರಣ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ರು. 5 ಪಂದ್ಯ ಬೌಲಿಂಗ್​ ಮಾಡಿದ ಬೂಮ್ರಾ ಕೇವಲ 7 ವಿಕೆಟ್​ ಉರುಳಿಸಿದ್ರು. ಯುಎಇ ಬೌಲರ್​ ಜುನೈದ್​ ಸಿದ್ಧಕಿ ಅನ್ನೋ ಯುವ ವೇಗಿಯೇ 3 ಪಂದ್ಯಕ್ಕೆ 9 ವಿಕೆಟ್​ ಕಬಳಿಸಿದ ಟೂರ್ನಮೆಂಟ್​ನಲ್ಲಿ ಬೂಮ್ರಾ ಸಾಧನೆ ಸಾಧಾರಣವಲ್ಲದೇ ಮತ್ತೇನು.?
ಇದನ್ನೂ ಓದಿ: SUPER SIX: 3ನೇ ಕ್ರಮಾಂಕದಲ್ಲಿ ಕಿಶನ್ ಬ್ಯಾಟಿಂಗ್.. ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​ಗೆ ಆಘಾತ..!
/filters:format(webp)/newsfirstlive-kannada/media/media_files/2025/09/07/shivam-dube-team-india-new-jursey-2025-09-07-08-12-06.jpg)
ಶಿವಂ ದುಬೆನೇ ಬೆಸ್ಟ್​
ಅಚ್ಚರಿ ಅನಿಸಿದ್ರು ಇದು ಸತ್ಯ.! 2025ರ ಕ್ಯಾಲೆಂಡರ್​​ ವರ್ಷದಲ್ಲಿ ಅಲ್ಲೊಂದು ಇಲ್ಲೊಂದು ಓವರ್​ ಬೌಲಿಂಗ್​ ಮಾಡೋ ಟೀಮ್​ ಇಂಡಿಯಾ ಆಲ್​​ರೌಂಡರ್​ ಶಿವಂ ದುಬೆ, ಜಸ್​​ ಪ್ರಿತ್​ ಬೂಮ್ರಾಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್​ ಕಬಳಿಕೆಯಲ್ಲಿ ಬೂಮ್ರಾಗಿಂತ ದುಬೆ ಉತ್ತಮ ಸರಾಸರಿಯನ್ನ ಹೊಂದಿದ್ದಾರೆ. 2025ರಲ್ಲಿ 25.3 ಓವರ್ಸ್​​​ ಬೌಲಿಂಗ್ ಮಾಡಿರೋ ಶಿವಂ ದುಬೆ 12 ವಿಕೆಟ್ಸ್​ ಬೇಟೆಯಾಡಿದ್ದಾರೆ. ಇದೇ 12 ವಿಕೆಟ್​ ಕಬಳಿಸಲು ಜಸ್​ಪ್ರಿತ್​ ಬೂಮ್ರಾ 37.1 ಓವರ್​ ಬೌಲಿಂಗ್​ ಮಾಡಿದ್ದಾರೆ. ದುಬೆ 17.91ರ ಸರಾಸರಿ ಹೊಂದಿದ್ರೆ, ಬೂಮ್ರಾ ಸರಾಸರಿ 24 ಆಗಿದೆ.
ಟ್ರ್ಯಾಕ್​ಗೆ ಮರಳ್ತಾರಾ?
ಭಾರತದ ಆತಿಥ್ಯದಲ್ಲೇ ನಡೆಯೋ ಟಿ20 ವಿಶ್ವಕಪ್ ಟೂರ್ನಿಗೆ ಉಳಿದಿರೋದು ಕೆಲವೇ ಕೆಲವು ಪಂದ್ಯಗಳು ಮಾತ್ರ. ಇಂದಿನ ಪಂದ್ಯವೂ ಸೇರಿ ಒಟ್ಟು 5 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ಬೂಮ್ರಾ ಫಾರ್ಮ್​​​​ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ತಲೆವೋವು ತಂದಿಟ್ಟಿದೆ. ಎದುರಾಳಿ ತಂಡದ ಭಯಕ್ಕೆ ಕಾರಣವಾಗಿದ್ದ ಬೂಮ್ರಾ, ಇದೀಗ ಟೀಮ್​ ಇಂಡಿಯಾದ ಭಯಕ್ಕೆ ಕಾರಣವಾಗಿಬಿಟ್ಟಿದ್ದಾರೆ. ಕಿವೀಸ್​ ಸರಣಿಯಲ್ಲಾದ್ರೂ ಬೂಮ್ರಾ, ಕಮ್​ಬ್ಯಾಕ್​ ಮಾಡ್ತಾರಾ.? ಕಾದು ನೋಡೋಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us