/newsfirstlive-kannada/media/media_files/2025/09/14/team-india-13-2025-09-14-13-10-43.jpg)
ಜನ ವಿರೋಧದ ನಡುವೆಯೂ ಪಾಕ್ ಎದುರಿನ ಹೋರಾಟಕ್ಕೆ ಸೂರ್ಯ ಪಡೆ ಸನ್ನದ್ಧವಾಗಿದೆ. ಗೆಲುವಿಗಾಗಿ ಪಣ ತೊಟ್ಟಿರುವ ಉಭಯ ತಂಡಗಳು, ತೆರೆ ಮರೆಯಲ್ಲಿ ಗೇಮ್ ಪ್ಲಾನ್ ಸ್ಟ್ರಾಟರ್ಜಿಗಳನ್ನು ರೂಪಿಸಿವೆ.
ಗೆಲುವೊಂದೇ ಗುರಿಯಾಗಿಸಿಕೊಂಡು ಹೋರಾಡಲು ಸಜ್ಜಾಗಿರುವ ಆಟಗಾರರು, ಪಂದ್ಯ ಗೆಲ್ಲಿಸಿ ಸೂಪರ್ ಸ್ಟಾರ್ ಪಟ್ಟಕ್ಕೇರುವ ಕನಸಿನಲ್ಲಿದ್ದಾರೆ. ಗೆದ್ದವರ ಬ್ಯಾಟಲ್ನಲ್ಲಿ ಯಾರಿಗೆ ಯಾರ್ ಟಕ್ಕರ್ ನೀಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ. ಇದರ ಮಧ್ಯೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಕೂಡ ಇದೆ.
ಇದನ್ನೂ ಓದಿ:ಕಳೆಗುಂದಿದ IND-PAK ಮ್ಯಾಚ್.. ಅದಕ್ಕೆ ಕಾರಣ ಈ ಐದು ಸ್ಟಾರ್..
ಯುಎಇ ಎದುರು ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್ ಸಾಲಿಡ್ ಓಪನಿಂಗ್ ನೀಡಿದ್ದಾರೆ. ಅಕ್ರಮಣಕಾರಿ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ದಾರೆ. ಇಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಇಂದು ಉಳಿದ ಬ್ಯಾಟ್ಸ್ಮನ್ಸ್ಗೆ ಅಗ್ನಿಪರೀಕ್ಷೆ ಕಾದಿದೆ. ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್ನಲ್ಲಿ ಮ್ಯಾಜಿಕ್ ಮಾಡಬೇಕಿದೆ.
ಯುಎಇ ಎದುರು ಚಮತ್ಕಾರ ಮಾಡಿದ್ದ ಕುಲ್ದೀಪ್ ಯಾದವ್, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಪಾಕ್ ಎದುರಿನ ಹೈವೋಲ್ಟೇಜ್ ಮ್ಯಾಚ್ನಲ್ಲೂ ಮ್ಯಾಜಿಕ್ ಮಾಡೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಮಿಡಲ್ ಓವರ್ಗಳಲ್ಲಿ ಚೆಂಡನ್ನ ಬುಗುರಿಯಂತೆ ತಿರುಗಿಸಿದ್ರೆ, ಪಾಕ್ ಸ್ಟನ್ ಆಗೋದ್ರಲ್ಲಿ ಡೌಟಿಲ್ಲ.
ಆರ್ಷ್ದೀಪ್ ಸಿಂಗ್ ಪ್ರಯೋಗ ಫಿಕ್ಸ್.. ಯಾರು ಔಟ್
ಯುಎಇ ಎದುರು ಬೆಂಚ್ ಕಾದಿದ್ದ ಅರ್ಷ್ದೀಪ್ ಸಿಂಗ್, ಇವತ್ತು ಪಾಕ್ ಎದುರು ಪ್ರಯೋಗಕ್ಕಿಳಿಸುವುದು ಕನ್ಫರ್ಮ್. ಲೆಫ್ಟ್ ಆ್ಯಂಡ್ ರೈಟ್ ಹ್ಯಾಂಡ್ ಕಾಂಬಿನೇಷನ್ ಮೂಲಕ ಪಾಕ್ ಬ್ಯಾಟರ್ಗಳಿಗೆ ಕಾಡುವ ಲೆಕ್ಕಾಚಾರದಲ್ಲಿದೆ. ಅರ್ಷ್ದೀಪ್ ಎಂಟ್ರಿಯಿಂದ ಯಾರು ಬೆಂಚ್ ಕಾಯ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಅಕಸ್ಮಾತ್ ಅರ್ಷದೀಪ್ ಎಂಟ್ರಿಯಾದಲ್ಲಿ ತಿಲಕ್ ವರ್ಮ ಅಥವಾ ದುಬೆಗೆ ರೆಸ್ಟ್ ನೀಡಬೇಕಾಗಿ ಬಂದರೂ ಅಚ್ಚರಿ ಇಲ್ಲ. ಅಭಿಷೇಕ್ ಶರ್ಮಾ
ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅರ್ಷದೀಪ್ ಸಿಂಗ್ /ಶಿವಂ ದುಬೆ, ತಿಲಕ್ ವರ್ಮಾ.
ಇದನ್ನೂ ಓದಿ:ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳೇ ರೋಚಕ.. ಈ ಹಿಂದೆ ನಡೆದ ಐದು ಪ್ರಮುಖ ಘಟನೆಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ