/newsfirstlive-kannada/media/post_attachments/wp-content/uploads/2023/09/IND_VS_PAK.jpg)
ಏಷ್ಯಾಕಪ್ನಲ್ಲಿ ಇಂದು ಬಿಗ್ ಬ್ಯಾಟಲ್ ನಡೀತಿದೆ. ಇಂಡೋ ಪಾಕ್ ಪಂದ್ಯದ ಈ ಹೈವೋಲ್ಟೇಜ್ ಮ್ಯಾಚ್ನಲ್ಲಿ ಬಿಗ್ ಸ್ಟಾರ್ಗಳೇ ಇಲ್ಲದಂತಾಗಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಇಂಡೋ ಪಾಕ್ ಪಂದ್ಯ ಹೈಟೆನ್ಶನ್ ಮ್ಯಾಚ್ ಕೂಡ ಕಳೆಗುಂದಿದೆ.
ಏಷ್ಯಾಕಪ್ನಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ, ಬಿಗ್ ಬ್ಯಾಟಲ್ಗೆ ಸಜ್ಜಾಗಿದೆ. ಪಾಕ್ ಎದುರಿನ ಹೈವೋಲ್ಟೇಜ್ ಮ್ಯಾಚ್ನಲ್ಲಿ ಶತಯಾ, ಗತಾಯಾ ಗೆಲ್ಲೋಕೆ ತಂತ್ರ, ಪ್ರತಿತಂತ್ರ ಹೆಣೆಯುತ್ತಿದೆ. ಟೀಮ್ ಇಂಡಿಯಾ ಅಭಿಮಾನಿಗಳಿಗೆ ಮಾತ್ರ ಅವರಿಲ್ಲದ ಕೊರುಗು ಕಾಡ್ತಿದೆ. ಪಾಕ್ ಮ್ಯಾಚ್ ಅಂದ್ರೆ ಅತ್ಯುತ್ಸಾಹದಲ್ಲಿದ್ದ ಅಭಿಮಾನಿಗಳು, ನಿರುತ್ಸಾಹಿಗಳಾಗಿದ್ದಾರೆ. ಇದಕ್ಕೆಲ್ಲಾ ಕಾರಣ ರೋಹಿತ್ ಅಂಡ್ ವಿರಾಟ್ ಕೊಹ್ಲಿ.
ಕಳೆಗುಂದಿದ ಏಷ್ಯಾಕಪ್
ಒಂದಲ್ಲ, ಎರಡಲ್ಲ.. ಬರೋಬ್ಬರಿ 17 ವರ್ಷ.. ಈ 17 ವರ್ಷದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಲ್ಲದ ಐಸಿಸಿ ಟೂರ್ನಿ ನೋಡಿಲ್ಲ. ಐಸಿಸಿ ಟೂರ್ನಿಯಿರಲಿ, ಏಷ್ಯಾಕಪ್ ಟೂರ್ನಿಯಲ್ಲೂ ಇವರಿಲ್ಲದೇ ನಡೆದಿಲ್ಲ. 17 ವರ್ಷಗಳ ನಂತರ ಟೀಮ್ ಇಂಡಿಯಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಲ್ಲದೆ ಕಣಕ್ಕಿಳಿಯುತ್ತಿದೆ. ಈ ಸ್ಟಾರ್ಗಳಿಲ್ಲದೆ ಟೀಮ್ ಇಂಡಿಯಾ ಮಾತ್ರವಲ್ಲ. ಏಷ್ಯಾಕಪ್ ಸಹ ಬಡವಾಗಿ ಕಾಣ್ತಿದೆ. ಏಷ್ಯಾಕಪ್ ಕಳೆಯನ್ನೇ ಕಳೆದುಕೊಂಡಿದೆ. ಫ್ಯಾನ್ಸ್ ಅಂತೂ ಈ ಜೋಡೆತ್ತುಗಳಿಲ್ಲದ ಟೀಮ್ ಇಂಡಿಯಾ ಪಂದ್ಯವನ್ನು ನೋಡೋಕೆ ಹಿಂದೇಟು ಹಾಕ್ತಿದ್ದಾರೆ
ಇದನ್ನೂ ಓದಿ:ಭಾರತ ಮತ್ತು ಪಾಕ್ ನಡುವಿನ ಪಂದ್ಯಗಳೇ ರೋಚಕ.. ಈ ಹಿಂದೆ ನಡೆದ ಐದು ಪ್ರಮುಖ ಘಟನೆಗಳು..!
/filters:format(webp)/newsfirstlive-kannada/media/media_files/2025/08/07/virat-kohli-rohit-sharma-2-2025-08-07-18-26-21.jpg)
ಇಂಡೋ ಪಾಕ್ ಬ್ಯಾಟಲ್ ಅಂದ್ರೆ ನೆನಪಾಗುವುದು ಕೊಹ್ಲಿ ವರ್ಸಸ್ ಪಾಕ್ ಬ್ಯಾಟಲ್. ರೋಹಿತ್ ವರ್ಸಸ್ ಪಾಕ್ ಫೈಟ್. ಬಿಗ್ ಮ್ಯಾಚ್ಗಳಲ್ಲಿ ಇವ್ರೇ ಟೀಮ್ ಇಂಡಿಯಾ ಪಾಲಿನ ಮ್ಯಾಚ್ ವಿನ್ನರ್ಗಳಾಗ್ತಿದ್ದರು. ಹೈಫ್ರಷರ್ ಗೇಮ್ನಲ್ಲಿ ತಂಡದ ಕೈಹಿಡಿದು ಮುನ್ನಡೆಸ್ತಿದ್ದರು. ಟೀಮ್ ಇಂಡಿಯಾನ ಗೆಲುವಿನ ದಡ ಸೇರಿಸ್ತಿದ್ದರು. ಆದ್ರೀಗ ಇವರಿಲ್ಲದ ಪಾಕ್ ಮ್ಯಾಚ್, ಕಳೆಗುಂದಿದೆ. ಇದಕ್ಕೆ ಸಾಕ್ಷಿ ಇಂಡೋ ಪಾಕ್ ಮ್ಯಾಚ್ನ ಟಿಕೆಟ್ಸ್ ಬಿಕರಿಯಾಗದೆ ಉಳಿದಿದ್ದಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಳಿಕ ಕೇಳಿ ಬರುವ ಸ್ಟಾರ್ಗಳ ಹೆಸರು. ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್. ಆದ್ರೆ ರಾಹುಲ್, ಯುವ ಆಟಗಾರರ ಪೈಪೋಟಿಯಲ್ಲಿ ಕಳೆದು ಹೋಗಿದ್ದಾರೆ. ಹೈಪ್ರೆಷರ್ ಗೇಮ್ಗಳಲ್ಲಿ ಇನ್ನಿಂಗ್ಸ್ ಬಿಲ್ಡ್ ಮಾಡುವ ಕನ್ನಡಿ ರಾಹುಲ್, ಏಷ್ಯಾಕಪ್ ಟೂರ್ನಿಯುದಕ್ಕೂ ಫ್ಯಾನ್ಸ್ಗೆ ಕಾಡಲಿದ್ದಾರೆ. ರಾಹುಲ್ ಮಾತ್ರವೇ ಅಲ್ಲ. ಗೇಮ್ ಚೇಂಜರ್ ಪ್ಲೇಯರ್, ಪಕ್ಕಾ ಎಂಟರ್ಟೈನರ್ ಬ್ಯಾಟರ್ ರಿಷಭ್ ಪಂತ್ ಆಟವೂ ಫ್ಯಾನ್ಸ್ಗೆ ಮಿಸ್ ಮಾಡಿಕೊಳ್ತಾರೆ. ಪಂತ್ ಸಿಡಿಸ್ತಿದ್ದ ಡಿಫರೆಂಟ್ ಡಿಫರೆಂಟ್ ಸಿಕ್ಸರ್ಗಳು, ಪ್ರತಿ ಪಂದ್ಯದಲ್ಲಿ ನೆನಪಾಗುವುದು ಫಿಕ್ಸ್.
ಇದನ್ನೂ ಓದಿ:Asia Cup; ಪ್ಲೇಯಿಂಗ್-11 ಆಯ್ಕೆ, ಹೆಡ್ ಕೋಚ್ ರಾಜಕೀಯ.. ಈ ಪ್ಲೇಯರ್ಸ್ ಅಂದ್ರೆ ಗಂಭೀರ್ ಗರಂ!
/filters:format(webp)/newsfirstlive-kannada/media/media_files/2025/08/18/yashaswi-jaiswal-shreyas-iyer-2025-08-18-09-19-49.jpg)
ಶ್ರೇಯಸ್ ಮಿಸ್ಸಿಂಗ್!
ಯಶಸ್ವಿ ಜೈಸ್ವಾಲ್.. ಶ್ರೇಯಸ್ ಅಯ್ಯರ್.. ಒಬ್ಬರು ಅಗ್ರೆಸ್ಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಆಡಿದ್ರೆ. ಮತ್ತೊಬ್ಬರು ಪರಿಸ್ಥಿಗೆ ತಕ್ಕಂತೆ ಬ್ಯಾಟ್ ಬೀಸುವ ಕಲೆಗಾರ. ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶ್ರೇಯಸ್, ಏಷ್ಯಾಕಪ್ನಲ್ಲಿ ಇಲ್ದಿರುವುದು. ಟೀಮ್ ಇಂಡಿಯಾಗೆ ಹಿನ್ನಡೆಯಾಗಲಿದೆ. ಪ್ರಮುಖವಾಗಿ ಪಾಕ್ನಂಥ ಹೈವೋಲ್ಟೇಜ್ ಮ್ಯಾಚ್ನಲ್ಲಿ ಶ್ರೇಯಸ್ ಅಯ್ಯರ್ನಂಥ ಕ್ರಿಕೆಟ್ ಬ್ರೈನ್ ತಂಡದಲ್ಲಿ ಇರಬೇಕಿತ್ತು.
ವೇಳೆ ನೆನಪಾಗ್ತಾರೆ ಸಿರಾಜ್
ಟೀಮ್ ಇಂಡಿಯಾ ಅಭಿಮಾನಿಗಳು ಯಾರನ್ನು ಎಷ್ಟು ಮಿಸ್ಸಾಗ್ತಾರೋ ಇಲ್ವೋ. ಮೊಹಮ್ಮದ್ ಸಿರಾಜ್ನ ಹೆಚ್ಚು ಮಿಸ್ ಆಗ್ತಾರೆ. ಇದಕ್ಕೆ ಕಾರಣ ಆತನ ಹೋರಾಟದ ಗುಣ, ಅಗ್ರೆಸ್ಸಿವ್ ಅಟಿಟ್ಯೂಡ್. ಹರ್ಷಿತ್ ರಾಣಾ ಸ್ಥಾನದಲ್ಲಿ ಆಯ್ಕೆಯಾಗಬೇಕಿದ್ದ ಸಿರಾಜ್, ಈಗ ತಂಡದಲ್ಲಿ ಇಲ್ಲ. ಇದು ಬಿಗ್ ಮ್ಯಾಚ್ಗಳಲ್ಲಿ ಭಾರೀ ಹೊಡೆತವನ್ನೇ ಕೊಟ್ಟರು ಅಚ್ಚರಿ ಇಲ್ಲ.
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಶಾಕ್.. ಗಾಯಗೊಂಡ ಟೀಂ ಇಂಡಿಯಾ ಸ್ಟಾರ್..!
ಬಾಬರ್, ರಿಜ್ವಾನ್ ಅಲಭ್ಯತೆ
ಟೀಮ್ ಇಂಡಿಯಾಗೆ ಮಾತ್ರವಲ್ಲ.. ಪಾಕ್ ತಂಡಕ್ಕೂ ಬಿಗ್ ಪ್ಲೇಯರ್ಗಳ ಅಲಭ್ಯತೆ ಕಾಡಲಿದೆ. ಪ್ರಮುಖವಾಗಿ ಟೀಮ್ ಇಂಡಿಯಾಗೆ ಕಾಟ ನೀಡ್ತಿದ್ದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಇಲ್ದೇ ಇರುವುದು ಭಾರತಕ್ಕೆ ಬಿಗ್ ಅಡ್ವಾಂಟೇಜ್ ಆಗೋದ್ರಲ್ಲಿ ಡೌಟೇ ಇಲ್ಲ. ಇದಿಷ್ಟೇ ಅಲ್ಲ.! ಆನ್ಫಿಲ್ಡ್ನಲ್ಲಿ ಈ ಅನುಭವಿಗಳ ಇನ್ಫುಟ್ಸ್ ಕಳೆದುಕೊಳ್ಳಲಿರುವ ಪಾಕ್ಗೆ ಭಾರೀ ನಷ್ಟವೇ ಎದುರಾಗುವುದು ಸುಳ್ಳಲ್ಲ.
ಇಂಡೋ ಪಾಕ್ ಹೈವೋಲ್ಟೇಜ್ ಮ್ಯಾಚ್ಗೆ ಕೌಂಟ್ಡೌನ್ ಶುರುವಾದರು. ಬಿಗ್ ಮ್ಯಾಚ್ಗೆ ಬಿಗ್ ಪ್ಲೇಯರ್ಗಳು ಇಲ್ವಲ್ಲ ಎಂಬ ಕೊರಗಂತು ಫ್ಯಾನ್ಸ್ಗೆ ಕಾಡ್ತಿದೆ. ಇದು ಏಷ್ಯಾಕಪ್ ಮೇಲೆಯೂ ನಕಾರಾತ್ಮಕ ಪರಿಣಾಮವನ್ನೇ ಬೀರುವಂತೆ ಮಾಡಿರುವುದಂತೂ ಸತ್ಯ
ಇದನ್ನೂ ಓದಿ:ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ಶಾಕ್.. ಗಾಯಗೊಂಡ ಟೀಂ ಇಂಡಿಯಾ ಸ್ಟಾರ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ