/newsfirstlive-kannada/media/media_files/2025/09/07/suryakumar_gill-1-2025-09-07-17-58-12.jpg)
ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಮೊದಲ ಸಮರಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ದುಬೈನಲ್ಲಿ ನಡೆಯೋ ಮೊದಲ ಕದನದಲ್ಲಿ ಟೀಮ್​ ಇಂಡಿಯಾ ಯುಎಇ ಸವಾಲನ್ನ ಎದುರಿಸಲಿದೆ. ಸುದೀರ್ಘ ಕಾಲದ ಬಳಿಕ ಮೈದಾನಕ್ಕಿಳಿತಿರೋ ತಂಡದ ಸಿದ್ಧತೆ ಹೇಗಿದೆ ಅನ್ನೋ ವಿವರ ಇಲ್ಲಿದೆ.
ಮಹತ್ವದ ಏಷ್ಯಾಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಂದು ಯುಎಇ ಎದುರು ಸೆಣೆಸಾಡಲಿದೆ. ಸತತ 3 ದಿನಗಳ ಕಾಲ ಭರ್ಜರಿ ಅಭ್ಯಾಸ ನಡೆಸಿರೋ ಆಟಗಾರರು ರನ್​ಭೂಮಿಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಹೆಡ್​​ಕೋಚ್​ ಗೌತಮ್​ ಗಂಭೀರ್​, ಕ್ಯಾಪ್ಟನ್​ ಸೂರ್ಯಕುಮಾರ್​ ರೆಡಿಯಿಲ್ಲ. ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಇಬ್ಬರ ಪಾಲಿಗೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ.
ಟೀಮ್​ ಇಂಡಿಯಾಗೆ ತಲೆನೋವು
ಪ್ಲೇಯಿಂಗ್​ ಇಲೆವೆನ್​ನ ಆಯ್ಕೆ ವಿಚಾರದಲ್ಲಿ ಓಪನರ್ಸ್​ ಸೆಲೆಕ್ಷನ್​ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಂಜು ಸ್ಯಾಮ್ಸನ್​, ಶುಭ್​ಮನ್​ ಗಿಲ್​, ಅಭಿಶೇಕ್​ ಶರ್ಮಾ ನಡುವೆ ಸ್ಥಾನಕ್ಕಾಗಿ ತ್ರಿಕೋನ ಪೈಪೋಟಿ ಏರ್ಪಟ್ಟಿದೆ. ಉಪನಾಯಕನ ಶುಭ್​ಮನ್​ ಗಿಲ್​ಗೆ ಸ್ಥಾನ ಕನ್ಫರ್ಮ್​​​. ಇನ್ನುಳಿದ ಒಂದು ಸ್ಥಾನಕ್ಕೆ ಸಂಜು ಸ್ಯಾಮ್ಸನ್​, ಅಭಿಶೇಕ್​ ಶರ್ಮಾ ಇಬ್ಬರಲ್ಲಿ ಒಬ್ಬರ ಆಯ್ಕೆ ತಲೆನೋವಾಗಿದೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ ಅಭಿಶೇಕ್​ ಶರ್ಮಾ ಕಣಕ್ಕಿಳಿಯೋ ಸಾಧ್ಯತೆ ದಟ್ಟವಾಗಿದೆ.
3 ಕ್ರಮಾಂಕ ಕಗ್ಗಂಟು.. 4-5ಕ್ಕೆ ಸೂರ್ಯ, ಅಕ್ಷರ್​ ಫಿಕ್ಸ್​
ಗಿಲ್​ಗಾಗಿ ಸಂಜು ಸ್ಯಾಮ್ಸನ್​ ಆರಂಭಿಕನ ಸ್ಥಾನ ತ್ಯಜಿಸಿದ್ರೆ, 3ನೇ ಕ್ರಮಾಂಕದಲ್ಲಿ ಆಡೋ ನಿರೀಕ್ಷೆ ಮಾಡಬೇಹುದು. ಇಲ್ಲೂ ಪೈಪೋಟಿಯಿದೆ. ತಿಲಕ್​ ವರ್ಮಾ 3ನೇ ಕ್ರಮಾಂಕಕ್ಕೆ ಸ್ಟ್ರಾಂಗ್​ ಕಂಟೆಡರ್ ಆಗಿದ್ದಾರೆ. ಹೀಗಾಗಿ 3ನೇ ಕ್ರಮಾಂಕದ ಆಯ್ಕೆ ಕಗ್ಗಂಟಾಗಿದೆ. 4ನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್​, 5ನೇ ಕ್ರಮಾಂಕದಲ್ಲಿ ಆಲ್​​​ರೌಂಡರ್​ ಅಕ್ಷರ್​ ಪಟೇಲ್ ಆಡೋದು ಪಕ್ಕಾ ಆಗಿದೆ.
ಜಿತೇಶ್​ ಶರ್ಮಾಗೆ ಜಾಕ್​ಪಾಟ್​
6ನೇ ಕ್ರಮಾಂಕದಲ್ಲಿ ಹಾರ್ದಿಕ್​ ಪಾಂಡ್ಯ ಆಡಲಿದ್ದಾರೆ. 7ನೇ ಕ್ರಮಾಂಕಕ್ಕೆ ಫಿನಿಷರ್​ ಆಯ್ಕೆ ಸದ್ಯ ಕುತೂಹಲ ಮೂಡಿಸಿದೆ. ರಿಂಕು ಸಿಂಗ್​ ಹಾಗೂ ಜಿತೇಶ್​ ಶರ್ಮಾ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿದ್ದಾರೆ. ಐಸಿಸಿ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆದ 3 ದಿನಗಳ ಅಭ್ಯಾಸವನ್ನ ಗಮನಿಸಿದ್ರೆ ಜಿತೇಶ್​​ ಶರ್ಮಾ ಆಡೋ ಸಾಧ್ಯತೆಯೇ ಹಚ್ಚಿದೆ. ಕೋಚ್​ ಗಂಭೀರ್​, ಫೀಲ್ಡಿಂಗ್​ ಕೋಚ್​ ಟಿ ದಿಲೀಪ್​ ಅಭ್ಯಾಸದ ವೇಳೆ ಜಿತೇಶ್​ ಶರ್ಮಾ ವಿಶೇಷ ಗಮನ ವಹಿಸಿದ್ರು. ಆಟ ನೋಡಿ ಅಗತ್ಯ ಸಲಹೆ-ಸೂಚನೆಗಳನ್ನ ನೀಡ್ತಿದ್ರು.
ಇದನ್ನ
ಆಲ್​​ರೌಂಡರ್​ ಅಕ್ಷರ್​ ಪಟೇಲ್​ ಜೊತೆಗೆ ಯುಎಇನ ಪ್ಲೇಯಿಂಗ್​ ಕಂಡಿಷನ್​​ಗೆ ತಕ್ಕಂತೆ ಇಬ್ಬರು ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಿಗೆ ಮಣೆ ಹಾಕಲು ಟೀಮ್​ ಮ್ಯಾನೇಜ್​ಮೆಂಟ್ ರೆಡಿಯಾಗಿದೆ. ಚೈನಾಮನ್​ ಬೌಲರ್​ ಕುಲ್​​ದೀಪ್​ ಯಾದವ್​, ಮಿಸ್ಟ್ರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಯುಎಇನಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಗೆಲುವಿನಲ್ಲಿ ಕುಲ್​​ದೀಪ್​, ವರುಣ್​ ಪ್ರಮುಖ ಪಾತ್ರವಹಿಸಿದ್ರು.
ಬೂಮ್ರಾ, ಆರ್ಷ್​​ದೀಪ್​..
ರೈಟ್​ ಅಂಡ್ ಲೆಫ್ಟ್​ ಕಾಂಬಿನೇಷನ್​ನಲ್ಲಿ ಟೀಮ್​ ಇಂಡಿಯಾ ಪೇಸ್​​ ಅಟ್ಯಾಕ್​ನ ಕಣಕ್ಕಿಳಿಸಲಿದೆ. ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಯುಎಇ ವಿರುದ್ಧ ಬೌಲಿಂಗ್​ ದಾಳಿ ಸಂಘಟಿಸಲಿದ್ದಾರೆ. ಅನುಭವಿಗಳ ಲಭ್ಯತೆಯಲ್ಲಿ ಅನಾನುಭವಿ ಹರ್ಷಿತ್​ ರಾಣಾ ಬೆಂಚ್​ ಕಾಯಲೇಬೇಕಾಗಿದೆ.
ಒಟ್ಟಿನಲ್ಲಿ ಏಷ್ಯಾಕಪ್​ ಟೂರ್ನಿಯ ಮೊದಲ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದರೂ 3 ಸ್ಲಾಟ್​ ಆಯ್ಕೆಯ ವಿಚಾರದಲ್ಲಿ ಗೊಂದಲವಿದೆ. ಈ ಗೊಂದಲಕ್ಕೆ ಸಂಜೆ ವೇಳೆಗೆ ಸೂರ್ಯಕುಮಾರ್​-ಗೌತಮ್​ ಗಂಭೀರ್​ ಯಾವ ಪರಿಹಾರ ಕಂಡುಕೊಳ್ತಾರೆ ಕಾದು ನೋಡೋಣ.
ಇದನ್ನೂ ಓದಿ:ತೊಡೆ ತಟ್ಟಿ ಗೆದ್ದವರಿಲ್ಲ.. ಹಾಲಿ ಚಾಂಪಿಯನ್​ ಟೀಮ್ ಇಂಡಿಯಾದ 50 ವರ್ಷದ ಇತಿಹಾಸ ಹೇಗಿದೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us