Advertisment

ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ನಡೆಸಿತ್ತು.. ಕೊನೆಯಲ್ಲಿ ಅಭಿಮಾನಿಗಳಿಗೆ ಕಾದಿದ್ದು ನಿರಾಸೆ..!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯವು ಮಳೆಗೆ ಆಹುತಿಯಾಗಿದೆ. ಮೊದಲ ಪಂದ್ಯಕ್ಕೆ ಓವಲ್​​ನ ಅಂತಾರಾಷ್ಟ್ರೀಯ ಮೈದಾನ ಸಿದ್ಧವಾಗಿತ್ತು, ಮಳೆ ಹಿನ್ನೆಲೆಯಲ್ಲಿ 18 ಓವರ್​​ಗೆ ಮ್ಯಾಚ್​ ಸೀಮಿತಗೊಳಿಸಲಾಗಿತ್ತು.

author-image
Ganesh Kerekuli
Gill surya
Advertisment

ಭಾರತ ಮತ್ತು ಆಸ್ಟ್ರೇಲಿಯಾ (Australia vs India) ನಡುವಿನ ಮೊದಲ ಟಿ-20 ಪಂದ್ಯವು ಮಳೆಗೆ ಆಹುತಿಯಾಗಿದೆ. ಮೊದಲ ಪಂದ್ಯಕ್ಕೆ ಓವಲ್​​ನ ಅಂತಾರಾಷ್ಟ್ರೀಯ ಮೈದಾನ ಸಿದ್ಧವಾಗಿತ್ತು, ಮಳೆ ಹಿನ್ನೆಲೆಯಲ್ಲಿ 18 ಓವರ್​​ಗೆ ಮ್ಯಾಚ್​ ಸೀಮಿತಗೊಳಿಸಲಾಗಿತ್ತು. 

Advertisment

ಟಾಸ್ ಸೋತು ಬ್ಯಾಟಿಂಗ್​ಗೆ ಬಂದಿದ್ದ ಟೀಂ ಇಂಡಿಯಾ ಕೇವಲ 9.4 ಓವರ್​ನಲ್ಲಿ ಒಂದು ವಿಕೆಟ್ ಕಳೆದುಕೊಂಡು 97 ರನ್​ಗಳಿಸಿ ಬೃಹತ್ ಮೊತ್ತ ಕಲೆ ಹಾಕುವ ಸೂಚನೆ ನೀಡಿತ್ತು. ಅಭಿಷೇಕ್ ಶರ್ಮಾ 19 ರನ್​ಗಳಿಸಿ ಔಟ್ ಆದರೆ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹಾಗೂ ಶುಬ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ನಡೆಸಿ ದಿಟ್ಟ ಹೋರಾಟ ಕೊಟ್ಟಿದ್ದರು. 

ಇದನ್ನೂ ಓದಿ:MI ಬಿಡಲು ರೋಹಿತ್ ಶರ್ಮಾ ರೆಡಿ.. ಯಾವ ಫ್ರಾಂಚೈಸಿ ಸೇರ್ತಾರೆ ಹಿಟ್​ಮ್ಯಾನ್..?

Gill (1)

20 ಬಾಲ್​ ಎದುರಿಸಿದ ಗಿಲ್, 185 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ ಒಂದು ಸಿಕ್ಸರ್, 4 ಬೌಂಡರಿಯೊಂದಿಗೆ 37 ರನ್​ಗಳಿಸಿ ಆಡುತ್ತಿದ್ದರು. ಇನ್ನು ನಾಯಕ ಸೂರ್ಯಕುಮಾರ್ ಯಾದವ್, 162.50 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸಿ 39 ರನ್​ಗಳಿಸಿದ್ದರು. 

Advertisment

ಮತ್ತೆ ಮಳೆ ಸುರಿದಿದ್ದರಿಂದ ತಾತ್ಕಾಲಿಕವಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು. ಆದರೆ ಮಳೆ ಬಿಟ್ಟೂ  ಬಿಡದೇ ನಿರಂತರವಾಗಿ ಸುರಿದಿದ್ದರಿಂದ ಮೊದಲ ಪಂದ್ಯ ಮಳೆಗೆ ವಾಷೌಟ್ ಆಗಿದೆ. ಯಾವುದೇ ಫಲಿತಾಂಶ ಇಲ್ಲ. ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಇನ್ನು ನಾಲ್ಕು ಪಂದ್ಯಗಳು ಉಳಿದಿವೆ. ನಾಡಿದ್ದು ಅಂದರೆ ಶುಕ್ರವಾರ ಎರಡನೇ ಟಿ-20 ಪಂದ್ಯ ನಡೆಯಲಿದೆ. 

ಇದನ್ನೂ ಓದಿ: T20; ಟೀಮ್ ಇಂಡಿಯಾ ಫಸ್ಟ್ ಬ್ಯಾಟಿಂಗ್​.. ಪ್ಲೇಯಿಂಗ್- 11ರಲ್ಲಿ ಯಾರ್​ ಯಾರಿಗೆ ಚಾನ್ಸ್​..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
T20I India vs Australia
Advertisment
Advertisment
Advertisment