/newsfirstlive-kannada/media/media_files/2025/11/12/rohit-kohli-2025-11-12-19-37-21.jpg)
ಬಿಸಿಸಿಐ ಫೋಟೋ
ಮುಂದಿನ ಅಪೆಕ್ಸ್​ ಕೌನ್ಸಿಲ್​ ಮೀಟಿಂಗ್​ಗೂ ಮುನ್ನ ಬಿಸಿಸಿಐ ವಲಯದಲ್ಲಿ ಹೊಸ ಬೆಳವಣಿಗೆಗಳು ನಡೀತಿವೆ. 2026ರ ಸೆಂಟ್ರಲ್​ ಕಾಂಟ್ರಾಕ್ಟ್​ ಲಿಸ್ಟ್ ಫೈನಲ್​ ಮಾಡೋದ್ರಲ್ಲಿ ಬಾಸ್​​ಗಳು ಬ್ಯುಸಿಯಾಗಿದ್ದಾರೆ. ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​ ಈಗಾಗಲೇ ತಮ್ಮ ಲಿಸ್ಟ್​ ಸಲ್ಲಿಕೆ ಮಾಡಿದ್ದಾರೆ. ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​​ನಲ್ಲಿ ಯಾರಿಗೆ ಪ್ರಮೋಷನ್​? ಯಾರಿಗೆ ಡಿಮೋಷನ್​?
ಬಿಸಿಸಿಐ ವಲಯದಲ್ಲಿ ಟೀಮ್​ ಇಂಡಿಯಾ ಆಟಗಾರರ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ರಿನ್ಯೂವಲ್​ಗೆ ಸಿದ್ಧತೆ ಜೋರಾಗಿ ನಡೀತಿದೆ. ಹೊಸ ವರ್ಷಕ್ಕೆ ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​ ಅನೌನ್ಸ್​ಮೆಂಟ್​ಗೆ ಬಾಸ್​​​ಗಳು ರೆಡಿಯಾಗಿದ್ದಾರೆ. ಹೊಸ ಗುತ್ತಿಗೆ ಒಪ್ಪಂದದ ಲಿಸ್ಟ್​ ಬಹುತೇಕ ಫೈನಲ್​ ಆಗಿದ್ದು, ಮಹತ್ವದ ನಿರ್ಧಾರಗಳನ್ನ ಬಿಸಿಸಿಐ ಬಾಸ್​ಗಳು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಸೀರಿಯಲ್​ಗೆ ಸೂರಜ್ ಸಿಂಗ್ ಆಯ್ಕೆ ಆಗಿದ್ದು ಹೇಗೆ? ಡೈರೆಕ್ಟರ್ ಏನಂದ್ರು? VIDEO
/filters:format(webp)/newsfirstlive-kannada/media/media_files/2025/09/11/bcci-2-2025-09-11-12-29-09.jpg)
ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​ ಲಿಸ್ಟ್​ನಲ್ಲಿ ಇಷ್ಟು ವರ್ಷ 4 ಕೆಟಗೆರಿಗಳಿದ್ವು. ಇದ್ರ ಪ್ರಕಾರ A+ಗ್ರೇಡ್​ನ ಆಟಗಾರರಿಗೆ ವಾರ್ಷಿಕವಾಗಿ 7 ಕೋಟಿ, ಎ ಗ್ರೇಡ್​ನ ಆಟಗಾರರಿಗೆ 5 ಕೋಟಿ, ಬಿ ಗ್ರೇಡ್​ನ ಆಟಗಾರರಿಗೆ 3 ಕೋಟಿ, ಸಿ ಗ್ರೇಡ್​ನ ಆಟಗಾರರಿಗೆ 1 ಕೋಟಿ ಹಣವನ್ನ ನೀಡಲಾಗ್ತಿತ್ತು. ಆದ್ರೀಗ ಮಹತ್ವದ ನಿರ್ಧಾರವನ್ನ ತಳೆದಿರುವ ಬಿಸಿಸಿಐ ಬಾಸ್​ಗಳು, A+ ಕೆಟಗೆರಿಗೇ ಕೊಕ್​ ನೀಡಲು ಮುಂದಾಗಿದ್ದಾರೆ. A+ ಕೆಟಗೆರಿ ಬದಲಾಗಿ D ಕೆಟಗೆರಿಯನ್ನ ಇಂಟ್ರಡ್ಯೂಸ್​ ಮಾಡಲು ಪ್ಲಾನ್​ ರೂಪಿಸಿದ್ದಾರೆ.
ರೋಹಿತ್​, ಕೊಹ್ಲಿಗೆ ಕಾಂಟ್ರ್ಯಾಕ್ಟ್​ನಲ್ಲಿ ಡಿಮೋಷನ್
ನೂತನ ಕಾಂಟ್ರ್ಯಾಕ್ಟ್​ ಪಟ್ಟಿಯಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕರಿಗೆ ಡಿಮೋಷನ್​ ಶಾಕ್​ ಕಾದಿದೆ. ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಸೆಂಟ್ರಲ್​ ಕಾಂಟ್ರಾಕ್ಟ್​ನಲ್ಲಿ ಸದ್ಯ A+ ಗ್ರೇಡ್​ನಲ್ಲಿದ್ದು, ವಾರ್ಷಿಕವಾಗಿ 7 ಕೋಟಿ ಹಣವನ್ನ ಪಡೀತಿದ್ದಾರೆ. ಟಿ20 ಹಾಗೂ ಟೆಸ್ಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿ ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಒಂದೇ ಫಾರ್ಮೆಟ್​ಗೆ ಸೀಮಿತವಾಗಿರೋದ್ರಿಂದ ರೋಹಿತ್​-ಕೊಹ್ಲಿ ಬಿ ಗ್ರೇಡ್​ಗೆ ಡಿಮೋಟ್​ ಆಗಲಿದ್ದಾರೆ. ಜೊತೆಗೆ ರವಿಂದ್ರ ಜಡೇಜಾ ಕೂಡ A+ನಿಂದ B ಗ್ರೇಡ್​ಗೆ ಡಿಮೋಟ್​ ಆಗೋ ಸಾಧ್ಯತೆಯಿದೆ.
ಶುಭ್​ಮನ್​ ಗಿಲ್​ಗೆ ಪ್ರಮೋಷನ್​ ನೀಡಲು ಬಿಸಿಸಿಐ ಮುಂದಾಗಿದೆ. ಹೊಸ ಕಾಂಟ್ರ್ಯಾಕ್ಟ್​ ಲಿಸ್ಟ್​ನಲ್ಲಿ ಟೀಮ್​ ಇಂಡಿಯಾದ ಟೆಸ್ಟ್​ ಹಾಗೂ ಒನ್​ ಡೇ ಟೀಮ್​ನ ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಬಂಪರ್​ ಬಹುಮಾನ ಕಾದಿದೆ. ಆಲ್​​​ ಫಾರ್ಮೆಟ್​ ಪ್ಲೇಯರ್​ ಶುಭ್​ಮನ್​ ಗಿಲ್​ಗೆ ಟಾಪ್​ ಲೆವೆಲ್​ಗೆ ಪ್ರಮೋಷನ್​ ನೀಡಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆದಿವೆ. ಗಿಲ್​ ಜೊತೆಗೆ ವೇಗಿ ಜಸ್​​ಪ್ರಿತ್​ ಬೂಮ್ರಾ, ಅಕ್ಷರ್​ ಪಟೇಲ್​ ಹಾಗೂ ಕುಲ್​​ದೀಪ್​ ಯಾದವ್​​ ಕಾಣಿಸಿಕೊಳ್ಳೋ ಸಾಧ್ಯತೆಯಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರಿಂದ ಬಿಗ್ ಬಾಸ್ ವಿಜೇತ ಗಿಲ್ಲಿ ನಟಗೆ ಸನ್ಮಾನ : ಗಿಲ್ಲಿ ನಟರಾಜ್‌ಗೆ ಸಿಎಂ ಶ್ಲಾಘನೆ
/filters:format(webp)/newsfirstlive-kannada/media/media_files/2025/12/06/kohli-2025-12-06-10-02-51.jpg)
ಪಂತ್​, ಸೂರ್ಯಕುಮಾರ್​ಗೆ ಕಾದಿದ್ಯಾ ಶಾಕ್​?
ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್, ಟಿ20 ಕ್ಯಾಪ್ಟನ್​ ಸೂರ್ಯಕುಮಾರ್​ಗೆ ಬಿಸಿಸಿಐನಿಂದ ಶಾಕ್​ ಎದುರಾದ್ರೂ ಅಚ್ಚರಿ ಪಡಬೇಕಿಲ್ಲ. ರಿಷಭ್​ ಪಂತ್ ಕೇವಲ ಟೆಸ್ಟ್​ ಫಾರ್ಮೆಟ್​ಗೆ ಸೀಮಿತವಾಗಿದ್ರೆ, ಸೂರ್ಯ ಕುಮಾರ್​ ಟಿ20 ಫಾರ್ಮೆಟ್​ನಲ್ಲಿ ಮಾತ್ರ ಆಡ್ತಿದ್ದಾರೆ. ಟಿ20 ವಿಶ್ವಕಪ್​ ಬಳಿಕ ಸೂರ್ಯ ಟೀಮ್​ ಇಂಡಿಯಾದಿಂದ ದೂರಾದ್ರೂ ಅಚ್ಚರಿಪಡಬೇಕಿಲ್ಲ. ಹೀಗಾಗಿ ಎ ಗ್ರೇಡ್​ನಲ್ಲಿರೋ ಪಂತ್​ ಹಾಗೂ ಬಿ ಗ್ರೇಡ್​ನಲ್ಲಿರೋ ಸೂರ್ಯನಿಗೆ ಹಿಂಬಡ್ತಿ ನೀಡೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.
ಶ್ರೇಯಸ್​​ ಅಯ್ಯರ್​ ಹಾಗೂ ಯಶಸ್ವಿ ಜೈಸ್ವಾಲ್​ಗೆ ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಲ್ಲಿ ಪ್ರಮೋಷನ್​ ಸಿಗೋ ಸಾಧ್ಯತೆ ದಟ್ಟವಾಗಿದೆ. ಏಕದಿನ ತಂಡದ ವೈಸ್​ ಕ್ಯಾಪ್ಟನ್​ ಆಗಿರೋ ಶ್ರೇಯಸ್​​ ಅಯ್ಯರ್​ ಹಾಗೂ ಆಲ್​ ಫಾರ್ಮೆಟ್​​ ಪ್ಲೇಯರ್​ ಯಶಸ್ವಿ ಜೈಸ್ವಾಲ್​ ಸದ್ಯ ಬಿ ಕೆಟಗೆರಿಯಲ್ಲಿದ್ದಾರೆ. ಹೊಸದಾಗಿ ಪರಿಚಯಿಸೋ ಕಾಂಟ್ರ್ಯಾಕ್ಟ್​ ಲಿಸ್ಟ್​ ಪ್ರಕಾರ ಬಿ ಗ್ರೇಡ್​ನಲ್ಲೇ ಮುಂದುವರೆದರೂ ಕೂಡ ಸಿಗೋ ಹಣವಂತೂ ಹೆಚ್ಚಾಗಲಿದೆ.
ಇದನ್ನೂ ಓದಿ: ವಿಶ್ವದಲ್ಲಿ 2ನೇ ಅತಿ ಹೆಚ್ಚು ಟ್ರಾಫಿಕ್ ಇರೋ ಸಿಟಿ ಬೆಂಗಳೂರು ನಗರ! 2024 ಕ್ಕಿಂತ ಹದಗೆಟ್ಟ ಟ್ರಾಫಿಕ್ ಜಾಮ್ ಸಮಸ್ಯೆ!
/filters:format(webp)/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ಶಮಿಗೆ ಗೇಟ್​ಪಾಸ್​​​
ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಲು ಶತಪ್ರಯತ್ನ ನಡೆಸ್ತಾ ಇರೋ ಸೀನಿಯರ್​ ವೇಗಿ ಮೊಹಮ್ಮದ್​ ಶಮಿಗೆ ಶಾಕ್​ ಕಾದಿದೆ. ಈಗಾಗಲೇ ಸೆಲೆಕ್ಟರ್ಸ್​ ತಂಡದಿಂದ ಶಮಿಯನ್ನ ಸೈಡ್​ಲೈನ್​ ಮಾಡಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಬಳಿಕ ಟೀಮ್​ ಇಂಡಿಯಾದಿಂದ ಶಮಿ ಹೊರಬಿದ್ದಿದ್ದು, ಮುಂದೆ ಆಯ್ಕೆಗೆ ಪರಿಗಣಿಸೋದೂ ಅನುಮಾನವಾಗಿದೆ. ಹೀಗಾಗಿ ಕಾಂಟ್ರ್ಯಾಕ್ಟ್​ ರಿನ್ಯೂವಲ್​ ಮಾಡೋ ಸಾಧ್ಯತೆ ಕಡಿಮೆಯಿದೆ.
ಟೀಮ್​ ಇಂಡಿಯಾದ ಕೆಲ ಯುವ ಆಟಗಾರರಿಗೆ ಬಿಸಿಸಿಐನಿಂದ ಹೊಸ ವರ್ಷದಲ್ಲಿ ಭರ್ಜರಿ ಗಿಫ್ಟ್​ ಕಾದಿದೆ. ಕಳೆದೊಂದು ವರ್ಷದಿಂದ ಟೀಮ್​ ಇಂಡಿಯಾ ಪರ ಖಾಯಂ ಆಟಗಾರರಾಗಿರೋ ತಿಲಕ್​ ವರ್ಮಾ, ಆರ್ಷ್​​ದೀಪ್​ ಸಿಂಗ್​, ಪ್ರಸಿದ್ಧ್​ ಕೃಷ್ಣ, ದೃವ್​ ಜುರೇಲ್​ ಹಾಗೂ ಹರ್ಷಿತ್​ ರಾಣಾಗೆ ಬಡ್ತಿ ನೀಡಲು ಬಿಸಿಸಿಐ ಮುಂದಾಗಿದೆ. ಯುವ ಆಟಗಾರೆರಲ್ಲಾ ಒಂದು ಅಥವಾ 2 ಫಾರ್ಮೆಟ್​ಗಳಲ್ಲಿ ಟೀಮ್​ ಇಂಡಿಯಾ ಪರ ಆಡ್ತಿರೋದ್ರಿಂದ, ಸಿ ಗ್ರೇಡ್​​ನಿಂದ ಬಿ ಗ್ರೇಡ್​​ಗೆ ಬಡ್ತಿ ಪಡೆಯಲಿದ್ದಾರೆ. ಒಂದು ವೇಳೆ ಸಿಗ್ರೇಡ್​​ನಲ್ಲಿ ಮುಂದುವರೆದ್ರೂ, ಹೆಚ್ಚಿನ ಹಣ ಸಿಗಲಿದೆ.
ಇದನ್ನೂ ಓದಿ:ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ -ಗಿಲ್ಲಿ ಮುಂದೆ ಬಿಗ್​ ಪ್ಲಾನ್ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us