Advertisment

ಶಿಷ್ಯನಿಗಾಗಿ ಶಮಿ ಸ್ಥಾನ ಕಿತ್ತುಕೊಂಡ ಗಂಭಿರ್​.. ಅಸಲಿ ಸತ್ಯ ರಿವೀಲ್!

ಆಸ್ಟ್ರೇಲಿಯಾ ಸರಣಿಗೆ ಟೀಮ್​ ಇಂಡಿಯಾ ಆಟಗಾರರು ಕಾಂಗರೂ ನಾಡನ್ನ ತಲುಪಿದ್ರೂ ಭಾರತೀಯ ಕ್ರಿಕೆಟ್​ ಲೋಕದಲ್ಲಿ ಸೆಲೆಕ್ಷನ್​ ಡ್ರಾಮಾ ನಿಲ್ಲುವಂತೆ ಕಾಣ್ತಿಲ್ಲ. ಟೀಮ್​ ಸೆಲೆಕ್ಷನ್​ನಲ್ಲಾದ ರಾಜಕೀಯದಾಟದ ಚರ್ಚೆ ಮತ್ತಷ್ಟು ಜೋರಾಗಿ ನಡೀತಿದೆ.

author-image
Ganesh Kerekuli
Shami and Gambhir
Advertisment

ಆಸ್ಟ್ರೇಲಿಯಾ ಸರಣಿಗೆ ಟೀಮ್​ ಇಂಡಿಯಾ ಆಟಗಾರರು ಕಾಂಗರೂ ನಾಡನ್ನ ತಲುಪಿದ್ರೂ ಭಾರತೀಯ ಕ್ರಿಕೆಟ್​ ಲೋಕದಲ್ಲಿ ಸೆಲೆಕ್ಷನ್​ ಡ್ರಾಮಾ ನಿಲ್ಲುವಂತೆ ಕಾಣ್ತಿಲ್ಲ. ಟೀಮ್​ ಸೆಲೆಕ್ಷನ್​ನಲ್ಲಾದ ರಾಜಕೀಯದಾಟದ ಚರ್ಚೆ ಮತ್ತಷ್ಟು ಜೋರಾಗಿ ನಡೀತಿದೆ. ಸೈಲೆಂಟ್​ ಆಗಿದ್ದ ಮೊಹ್ಮದ್​ ಶಮಿ ಇದೀಗ ಸಿಡಿದೆಡ್ಡಿದ್ದಾರೆ. ಸೆಲೆಕ್ಷನ್​ ಕಮಿಟಿ ಚೇರ್​​ಮನ್​ ಅಜಿತ್​ ಅಗರ್ಕರ್​ ಮೇಲೆ ಅಟ್ಯಾಕ್​ ಮಾಡಿದ್ದಾರೆ. 

Advertisment

ಶಿಷ್ಯನ ಮೇಲೆ ವ್ಯಾಮೋಹ.. ಶಮಿ ಸೈಡ್​ಲೈನ್?

2023ರ ಏಕದಿನ ವಿಶ್ವಕಪ್​, 2025ರ ಚಾಂಪಿಯನ್ಸ್​ ಟ್ರೋಫಿ. ಎರಡೂ ಪ್ರತಿಷ್ಟಿತ ಟೂರ್ನಿಗಳಲ್ಲಿ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾ ಪರ ಮಹತ್ವದ ಪಾತ್ರವಹಿಸಿದ್ರು. ಎರಡೂ ಟೂರ್ನಿಗಳಲ್ಲಿ ಹೈಯೆಸ್ಟ್​ ವಿಕೆಟ್​ ಟೇಕರ್​​ ಆಗಿ ಹೊರಹೊಮ್ಮಿದ್ರು. ಆ ಬಳಿಕ ಇಂಜುರಿಗೆ ತುತ್ತಾದ ಶಮಿಯನ್ನ ಸಂಪೂರ್ಣ ಸೈಡ್​ಲೈನ್​ ಮಾಡಲಾಗ್ತಿದೆ. ಇದಕ್ಕೆ ಕಾರಣ ಗಂಭೀರ್ ನೆಚ್ಚಿನ ಶಿಷ್ಯ ಹರ್ಷಿತ್​ ರಾಣಾ.

ಇದನ್ನೂ ಓದಿ:ಆಟಕ್ಕಿಂತ ರಾಜಕೀಯವೇ ಹೆಚ್ಚು.. ಶಮಿ ರೊಚ್ಚಿಗೆದ್ದ ಹಿಂದಿನ ಅಸಲಿ ಸತ್ಯ ಇಲ್ಲಿದೆ..!

ಗಂಭೀರ್​ ಶಿಷ್ಯ ಹರ್ಷಿತ್​ ರಾಣಾ ಟ್ಯಾಲೆಂಟೆಡ್​ ಪ್ಲೇಯರ್​ ಇರಬಹುದು. ಒಂದೇ ಒಂದು ಪಂದ್ಯದಲ್ಲಿ ಇಂಪ್ರೆಸ್ಸಿವ್​ ಪರ್ಫಾಮೆನ್ಸ್​ ಅನಿಸಿಲ್ಲ. ಗಂಭೀರ್​ ಕೃಪಾಕಟಾಕ್ಷದಿಂದಾಗಿ ಇಂದು ಆಲ್​​ಫಾರ್ಮೆಟ್​ ಪ್ಲೇಯರ್​ ಆಗಿದ್ದಾರೆ. ಅಭಿಮಾನಿಗಳಲ್ಲಿ ಮಾತ್ರವಲ್ಲ.. ಮಾಜಿ ಕ್ರಿಕೆಟಿಗರಿಗೆ ಈತನ ಆಯ್ಕೆ ಮಾಡ್ತಿರೋದ್ಯಾಕೆ ಅನ್ನೋದು ಅರ್ಥವಾಗ್ತಿಲ್ಲ. ಆರ್​​.ಅಶ್ವಿನ್​, ಕೃಷ್ಣಮಾಚಾರಿ ಶ್ರೀಕಾಂತ್​ ಕೂಡ ಈ ಬಗ್ಗೆ ಪ್ರಶ್ನೆ ಎತ್ತಿದ್ರು.

Advertisment

ಶಿಷ್ಯನ ಬೆಂಬಲಕ್ಕೆ ನಿಂತ ಗಂಭೀರ್

ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿ ಅಂತ್ಯದ ಬಳಿಕ ಪ್ರೆಸ್​ಮೀಟ್​ನಲ್ಲಿ ಗೌತಮ್​ ಗಂಭೀರ್, ಮಾಜಿ ಕ್ರಿಕೆಟರ್ಸ್​ಗೆ ತಿರುಗೇಟು ನೀಡಿದ್ರು. ಹರ್ಷಿತ್​ ರಾಣಾ ಆಯ್ಕೆಯನ್ನ ತಮ್ಮದೇ ಶೈಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಇದೊಂದು ನಾಚಿಕೆಗೇಡಿನ ವಿಚಾರ. ನಾನು ಪ್ರಾಮಾಣಿಕವಾಗಿ ಹೇಳ್ತಿನಿ. ನೀವು ನಿಮ್ಮ ಯೂಟ್ಯೂಬ್​​ ಚಾನೆಲ್​ ನಡೆಸಲು 23 ವರ್ಷದ ಯುವ ಆಟಗಾರನನ್ನ ಬಳಸಿಕೊಳ್ತಿರಾ ಅಂದ್ರೆ ಅದು ಸರಿಯಲ್ಲ. ಯಾಕಂದ್ರೆ ಆತನ ತಂದೆ ತಂಡದ ಮಾಜಿ ಚೇರ್​​ಮನ್​ ಅಲ್ಲ. ಮಾಜಿ ಕ್ರಿಕೆಟಿಗ ಅಲ್ಲ. NRI ಕೂಡ ಅಲ್ಲ. ಆತ ಆತನ ಮೆರಿಟ್​ ಮೇಲೆ ಆಡಿದ್ದಾನೆ. ಮುಂದೆಯೂ ಅಷ್ಟೇ. 

-ಗೌತಮ್ ಗಂಭೀರ್, ಟೀಂ ಇಂಡಿಯಾ ಆಟಗಾರ

ಗಂಭೀರ್​​-ಅಗರ್ಕರ್​ಗೆ ಬಿಸಿಸಿಐ ಬಾಸ್​ಗಳ ಅಭಯ..!

ಸೆಲೆಕ್ಷನ್​ ರಾಜಕೀಯ ಬಗ್ಗೆ ತೀವ್ರವಾಗಿ ಟೀಕೆಗಳು ಕೇಳಿ ಬಂದರೂ ಕೂಡ ಗಂಭೀರ್​-ಅಗರ್ಕರ್​ ಹೆಚ್ಚು ತಲೆ ಕೆಡಿಸಿಕೊಳ್ತಿಲ್ಲ. ಇಬ್ಬರಿಗೂ ಬಿಸಿಸಿಐ ಬಾಸ್​ಗಳ ಅಭಯವಿದೆ. ಹರ್ಷಿತ್​ ರಾಣಾ ಸೆಲೆಕ್ಷನ್​ ಅನ್ನ ಗಂಭೀರ್​ ಮಾತ್ರವಲ್ಲ. ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಕೂಡ ಸರ್ಮರ್ಥನೆ ಮಾಡಿಕೊಂಡಿದ್ದಾರೆ. 
ಸೆಲೆಕ್ಷನ್​ ಡಿಬೆಟ್​ ಏನೆ ಇರಲಿ. ಸದ್ಯ ಸೆಲೆಕ್ಟರ್ಸ್​ ಹಾಗೂ ಕೋಚ್​ ಮಾತುಗಳನ್ನ ಕೇಳಿದ್ರೆ, ಶಮಿಗೆ ಪರ್ಯಾಯವಾಗಿ ಹರ್ಷಿತ್​ ರಾಣಾನ ಬೆಳೆಸ್ತಿರೋದು ಸ್ಪಷ್ಟವಾಗ್ತಿದೆ. ಮೊಹಮ್ಮದ್​ ಶಮಿ ಪಾಲಿಗೆ ಮತ್ತೆ ಟೀಮ್​ ಇಂಡಿಯಾ ಡೋರ್​ ತೆಗೆಯೋದು ಅನುಮಾನವೇ. 

Advertisment

ಇದನ್ನೂ ಓದಿ: ಪ್ಲೇಯಿಂಗ್ -11ನಿಂದ ಕೊಹ್ಲಿ, ರೋಹಿತ್ ಹೊರಕ್ಕೆ.. ದಿಗ್ಗಜರ ಕೆಣಕಿದ ಕ್ಯಾಪ್ಟನ್..!


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Gautam Gambhir Mohammed Shami
Advertisment
Advertisment
Advertisment