/newsfirstlive-kannada/media/post_attachments/wp-content/uploads/2025/02/SHAMI-1-1.jpg)
ಗೌತಮ್​ ಗಂಭೀರ್​​ ಹೆಡ್​ಕೋಚ್​ ಆಗಿದ್ದೇ ಆಗಿದ್ದು ಟೀಮ್​ ಇಂಡಿಯಾದಲ್ಲಿ ಆಟಕ್ಕಿಂತ ರಾಜಕೀಯದ್ದೆ ಸದ್ದು ಜೋರಾಗಿದೆ. ಕೋಚ್​ ಗೌತಮ್​ ಗಂಭೀರ್​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​​​ ಟೀಮ್​ ಸೆಲೆಕ್ಷನ್​ ವಿಚಾರದಲ್ಲಿ ಆಡ್ತಿರೋ ಆಟ ಕ್ರಿಕೆಟಿಗರನ್ನ ಕೆರಳಿಸಿದೆ. ಮಾಜಿ ಕ್ರಿಕೆಟಿಗರಾದ ಆರ್​.ಅಶ್ವಿನ್​, ಕೃಷ್ಣಮಾಚಾರಿ ಶ್ರೀಕಾಂತ್​ ಆಯ್ತು.. ಇದೀಗ ಹಾಲಿ ಕ್ರಿಕೆಟಿಗ ಮೊಹಮ್ಮದ್​ ಶಮಿ ಸಿಡಿದೆದ್ದಿದ್ದಾರೆ.
ಶಮಿ ವಿಚಾರದಲ್ಲಿ ಚೀಫ್​​ ಸೆಲೆಕ್ಟರ್​​ ಹೇಳಿದ್ದೆಲ್ಲಾ ಸುಳ್ಳಾ?
ನನಗೆ ಆ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಆತ ದುಲೀಪ್ ಟ್ರೋಫಿ ಆಡಿದ್ದ. ಆದ್ರೆ ಕೊನೆಯ 2-3 ವರ್ಷಗಳಲ್ಲಿ ಆತ ಹೆಚ್ಚಿನ ಪಂದ್ಯ ಆಡಿಲ್ಲ. ಬೆಂಗಾಲ್ಗೆ ಒಂದು ಪಂದ್ಯ, ದುಲೀಪ್ ಟ್ರೋಫಿಯಲ್ಲಿ ಒಂದು ಪಂದ್ಯ ಆಡಿದ್ದಾನೆ. ಆತ ಏನು ಮಾಡ್ತಾನೆ ಅನ್ನೋದು ನಮಗೆ ಗೊತ್ತಿದೆ. ಆದ್ರೆ, ಆತ ಮತ್ತಷ್ಟು ಕ್ರಿಕೆಟ್ ಆಡಬೇಕಿದೆ.
ಅಜಿತ್ ಅಗರ್ಕರ್, ಆಯ್ಕೆ ಸಮಿತಿ ಮುಖ್ಯಸ್ಥ
ಮೊಹಮ್ಮದ್​ ಶಮಿಯನ್ನ ಡ್ರಾಪ್​ ಮಾಡಿದ್ದನ್ನ ಪ್ರಶ್ನಿಸಿದವರಿಗೆ ಸೆಲೆಕ್ಷನ್​ ಕಮಿಟಿಯ ಚೇರ್​ಪರ್ಸನ್​​ ಅಜಿತ್​ ಅಗರ್ಕರ್​ ನೀಡಿದ್ದ ಉತ್ತರ ಇದು. ಆನ್ಸರ್​​ ನೀಡೋ ಆರಂಭದಲ್ಲಿ ನನಗೆ ಏನು ಅಪ್​ಡೇಟ್​ ಇಲ್ಲ ಎಂದಿದ್ರು. ಆ ಉತ್ತರಕ್ಕೆ ಇದೀಗ ಶಮಿ ಕೌಂಟರ್​ ಕೊಟ್ಟಿದ್ದಾರೆ.
ನೋಡಿ ಅಣ್ಣಾ. ನಿಮಗೆ ಅಪ್ಡೇಟ್ ಬೇಕಂದ್ರೆ ನೀವು ಕೇಳಬೇಕು. ತಿಳಿದುಕೊಳ್ಳಬೇಕು. ಅಪ್ಡೇಟ್ ಕೊಡೋದು ನನ್ನ ಕೆಲಸವಲ್ಲ. ನನ್ನ ಕೆಲಸ ಏನು? ಎನ್ಸಿಎಗೆ ಹೋಗೋದು. ಮ್ಯಾಚ್ ಆಡೋದು. ಸಿದ್ಧತೆ ನಡೆಸೋದು. ಇದೆಲ್ಲಾ ನನ್ನ ಕೆಲಸ. ಅದು ಅವರಿಗೆ ಯಾರು ಅಪ್ಡೇಟ್ ನೀಡ್ತಾರೋ ಅವರ ಕೆಲಸ. ಇದು ನನ್ನ ಜವಾಬ್ಧಾರಿಯಲ್ಲ.
ಸೆಲೆಕ್ಷನ್ ನನ್ನ ಕೈಯಲ್ಲಿ ಇಲ್ಲ. ಫಿಟ್ನೆಸ್ನ ಸಮಸ್ಯೆ ಇದ್ದಿದ್ರೆ ನಾನು ಇಲ್ಲಿ ಇರ್ತಾ ಇರಲಿಲ್ಲ. ಇದಕ್ಕೆ ಮೇಲೆ ಮಾತಾಡೋ ಅವಶ್ಯಕತೆ ಇಲ್ಲ ಅನಿಸುತ್ತೆ. ಮೊದಲೇ ಹೇಳಿದ್ದೆ 4 ದಿನದ ಪಂದ್ಯ ಆಡಬಲ್ಲೆ ಅಂದ್ರೆ, 50 ಓವರ್ ಪಂದ್ಯ ಕೂಡ ಆಡಬಲ್ಲೆ. ಚಾಂಪಿಯನ್ಸ್ ಟ್ರೋಫಿ ಆಡಿದ್ದಿನಿ, ಐಪಿಎಲ್, ದುಲೀಪ್ ಟ್ರೋಫಿ ಆಡಿದ್ದೀನಿ. ಪಂದ್ಯಗಳನ್ನ ಆಡ್ತಾನೆ ಇದ್ದೀನಿ. ಹೀಗಾಗಿ ಟಚ್ನಲ್ಲಿ ಇಲ್ಲ ಅಂತಲ್ಲ. ಅಭ್ಯಾಸವನ್ನೂ ಮಾಡ್ತಿದ್ದೀನಿ. ಅವಕಾಶ ಸಿಕ್ಕಾಗ ಆಡ್ತೀನಿ.
ಮೊಹ್ಮದ್ ಶಮಿ, ಟೀಂ ಇಂಡಿಯಾ ವೇಗಿ
2023ರ ಏಕದಿನ ವಿಶ್ವಕಪ್​, 2025ರ ಚಾಂಪಿಯನ್ಸ್​ ಟ್ರೋಫಿ. ಎರಡೂ ಪ್ರತಿಷ್ಟಿತ ಟೂರ್ನಿಗಳಲ್ಲಿ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾ ಪರ ಮಹತ್ವದ ಪಾತ್ರವಹಿಸಿದ್ರು. ಎರಡೂ ಟೂರ್ನಿಗಳಲ್ಲಿ ಹೈಯೆಸ್ಟ್​ ವಿಕೆಟ್​ ಟೇಕರ್​​ ಆಗಿ ಹೊರಹೊಮ್ಮಿದ್ರು. ಆ ಬಳಿಕ ಇಂಜುರಿಗೆ ತುತ್ತಾದ ಶಮಿಯನ್ನ ಸಂಪೂರ್ಣ ಸೈಡ್​ಲೈನ್​ ಮಾಡಲಾಗ್ತಿದೆ.
ಇದನ್ನೂ ಓದಿ: ಪ್ಲೇಯಿಂಗ್ -11ನಿಂದ ಕೊಹ್ಲಿ, ರೋಹಿತ್ ಹೊರಕ್ಕೆ.. ದಿಗ್ಗಜರ ಕೆಣಕಿದ ಕ್ಯಾಪ್ಟನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ