/newsfirstlive-kannada/media/media_files/2025/08/07/virat-kohli-rohit-sharma-1-2025-08-07-18-25-55.jpg)
ರೋಹಿತ್, ಕೊಹ್ಲಿ Photograph: (ಬಿಸಿಸಿಐ)
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಪ್ರಾರಂಭವಾಗಲಿದೆ. ಈ ಸರಣಿಗೂ ಮೊದಲೇ ಪ್ಯಾಟ್ ಕಮ್ಮಿನ್ಸ್ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಆಟಗಾರರನ್ನೂ ಒಳಗೊಂಡ ಸಾರ್ವಕಾಲಿಕ ಪ್ಲೇಯಿಂಗ್ 11 ಆಯ್ಕೆ ಮಾಡಿದ್ದಾರೆ. ಅದರಲ್ಲಿ ಕೊಹ್ಲಿಗೆ ಹಾಗೂ ರೋಹಿತ್ ಶರ್ಮಾಗೆ ಸ್ಥಾನ ನೀಡಿಲ್ಲ!
ಆಸ್ಟ್ರೇಲಿಯಾ ಬೌಲರ್‌ಗಳನ್ನು ಸಿಕ್ಕಾಪಟ್ಟೆ ಕಾಡಿದ ಬ್ಯಾಟ್ಸ್​​ಮನ್​​ಗಳಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಹೌದು. ಅದ ತವರಿನಲ್ಲಿರಲಿ ಅಥವಾ ಆಸ್ಟ್ರೇಲಿಯಾ ನೆಲದಲ್ಲಿರಲಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಅವಕಾಶ ಸಿಕ್ಕಾಗಲೆಲ್ಲಾ ಕಾಂಗರೂ ಬೌಲರ್‌ಗಳನ್ನು ಬೆಂಡೆತ್ತಿದ್ದಾರೆ. ಅದೇ ಕಾರಣಕ್ಕೋ ಏನೋ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಕೊಹ್ಲಿ ಮತ್ತು ರೋಹಿತ್ ಅವರನ್ನು ಪ್ಲೇಯಿಂಗ್ 11ನಿಂದ ದೂರ ಇಟ್ಟಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ನೀಡಿದ ಪ್ಲೇಯಿಂಗ್ XI
ಕಮ್ಮಿನ್ಸ್ ತಮ್ಮ ಸಾರ್ವಕಾಲಿಕ ಭಾರತ-ಆಸ್ಟ್ರೇಲಿಯಾ ಸಂಯೋಜಿತ ಪ್ಲೇಯಿಂಗ್ XI ಅನ್ನು ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಇದರಲ್ಲಿ ಎಂಟು ಆಸ್ಟ್ರೇಲಿಯನ್ನರು ಮತ್ತು ಮೂವರು ನಿವೃತ್ತ ಭಾರತೀಯ ಆಟಗಾರರೂ ಸೇರಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ತಮ್ಮ ಪ್ಲೇಯಿಂಗ್ XI ನಲ್ಲಿ ಡೇವಿಡ್ ವಾರ್ನರ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಆರಂಭಿಕ ಆಟಗಾರರಾಗಿ ಸೇರಿಸಿಕೊಂಡಿದ್ದಾರೆ. ಅವರ ನಂತರ ಬ್ಯಾಟಿಂಗ್ ಕ್ರಮಾಂಕದಲ್ಲಿ ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್, ಶೇನ್ ವ್ಯಾಟ್ಸನ್ ಮತ್ತು ಮೈಕೆಲ್ ಬೆವನ್ ಇದ್ದಾರೆ. ಕಮ್ಮಿನ್ಸ್ ಭಾರತೀಯ ತಂಡದಿಂದ ಧೋನಿ ಮತ್ತು ಜಹೀರ್ ಖಾನ್ ಇಬ್ಬರನ್ನ ಆಯ್ಕೆ ಮಾಡಿದ್ದಾರೆ. ಅವರು ಶೇನ್ ವಾರ್ನ್, ಬ್ರೆಟ್ ಲೀ ಮತ್ತು ಗ್ಲೆನ್ ಮೆಕ್‌ಗ್ರಾತ್‌ರಂತಹ ಬೌಲರ್‌ಗಳನ್ನು ಸಹ ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದಾರೆ.
ಭಾರತ-ಆಸ್ಟ್ರೇಲಿಯಾ ಪ್ಲೇಯಿಂಗ್ XI..
ಡೇವಿಡ್ ವಾರ್ನರ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್, ಶೇನ್ ವ್ಯಾಟ್ಸನ್, ಮೈಕೆಲ್ ಬೆವನ್, ಎಂಎಸ್ ಧೋನಿ, ಶೇನ್ ವಾರ್ನ್, ಬ್ರೆಟ್ ಲೀ, ಜಹೀರ್ ಖಾನ್, ಗ್ಲೆನ್ ಮೆಕ್‌ಗ್ರಾತ್.
ಪ್ಯಾಟ್ ಕಮ್ಮಿನ್ಸ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಆಡುವ ಹನ್ನೊಂದರ ತಂಡದಲ್ಲಿ ಸೇರಿಸಲಿಲ್ಲ. ಆದರೆ ವಿರಾಟ್ ಮತ್ತು ರೋಹಿತ್ ಅವರಂತಹ ಆಟಗಾರರು ಆಸ್ಟ್ರೇಲಿಯಾದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಆಡುವ ಕೊನೆಯ ಸಿರೀಸ್ ಆಗಿರಬಹುದು. ವಿರಾಟ್ ಮತ್ತು ರೋಹಿತ್ ಇಬ್ಬರೂ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ 50 ಕ್ಕೂ ಹೆಚ್ಚು ಸರಾಸರಿ ರನ್ಸ್ ಹೊಂದಿದ್ದಾರೆ.
ಇದನ್ನೂ ಓದಿ: ಆಸಿಸ್​ ವಿರುದ್ಧದ ಸರಣಿಗೂ ಮುನ್ನವೇ ಆಘಾತ.. ಸ್ಟಾರ್ ಬ್ಯಾಟ್ಸ್‌ಮನ್‌ಗೆ ಗಾಯ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ