/newsfirstlive-kannada/media/media_files/2025/10/15/sai-sudarshan-2025-10-15-13-08-30.jpg)
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸಾಯಿ ಸುದರ್ಶನ್ (Sai Sudharsan) ಗಾಯಗೊಂಡಿದ್ದಾರೆ. ಸಾಯಿ ಗಾಯಗೊಂಡಿರೋದು ತಂಡದ ಮ್ಯಾನೇಜ್ಮೆಂಟ್​​ಗೆ ಚಿಂತೆಯುಂಟು ಮಾಡಿದೆ.
ಗಾಯ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ರಣಜಿ ಟ್ರೋಫಿಯಲ್ಲಿ ಆಡುತ್ತಿಲ್ಲ. ಇಂದು ಸಾಯಿ ಸುದರ್ಶನ್ ತಮಿಳುನಾಡು ಪರ, ಜಾರ್ಖಂಡ್ ವಿರುದ್ಧ ಕಣಕ್ಕೆ ಇಳಿಬೇಕಾಗಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ, ಸುದರ್ಶನ್ ಅದ್ಭುತ ಪ್ರದರ್ಶನ ನೀಡಿದರು.
ಇದನ್ನೂ ಓದಿ:ಮುಂಬೈನ ಆಲಿಯಾ ಭಟ್ ಮನೆಗೆ ಮೈಸೂರಿನ ಗಣಪ..!
ಮೊದಲ ಇನ್ನಿಂಗ್ಸ್‌ನಲ್ಲಿ 87 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿದರು. ಮೂರನೇ ದಿನದಂದು ಅವರು ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ವೆಸ್ಟ್ ಇಂಡೀಸ್ ಆಟಗಾರ ಜಾನ್ ಕ್ಯಾಂಪ್‌ಬೆಲ್ ಅವರ ಶಾಟ್ ಸುದರ್ಶನ್ ಅವರ ಎದೆಗೆ ಬಲವಾಗಿ ತಗುಲಿದೆ. ಗಾಯ ಹಿನ್ನೆಲೆಯಲ್ಲಿ ಮತ್ತೆ ಫೀಲ್ಡಿಂಗ್​ಗೆ ಬಂದಿರಲಿಲ್ಲ. ನಾಲ್ಕನೇ ದಿನ ಬ್ಯಾಟಿಂಗ್​ಗೆ ಬಂದರು.
ಸಾಯಿ ಸುದರ್ಶನ್ ಪ್ರತಿನಿಧಿಸುವ ತಮಿಳುನಾಡು ತಂಡವು ಗ್ರೂಪ್ ಎನಲ್ಲಿದೆ. ಈ ಗುಂಪಿನಲ್ಲಿ ನಾಗಾಲ್ಯಾಂಡ್, ಒಡಿಶಾ, ಹಾಲಿ ಚಾಂಪಿಯನ್ ವಿದರ್ಭ, ಆಂಧ್ರ, ಉತ್ತರ ಪ್ರದೇಶ ಮತ್ತು ಬರೋಡಾ ಕೂಡ ಸೇರಿವೆ. ತಮಿಳುನಾಡು ತಂಡವು ಕೊನೆಯ ಬಾರಿಗೆ ರಣಜಿ ಟ್ರೋಫಿಯನ್ನು 1987-88ರಲ್ಲಿ ಗೆದ್ದಿದೆ. ವೆಸ್ಟ್ ಇಂಡೀಸ್ ಸರಣಿಗಾಗಿ ಭಾರತೀಯ ತಂಡದಲ್ಲಿದ್ದ ಎನ್. ಜಗದೀಶನ್ ತಮಿಳುನಾಡು ತಂಡವನ್ನು ಸೇರಿದ್ದಾರೆ. ಸುದರ್ಶನ್ ಗಾಯದ ಕಾರಣದಿಂದಾಗಿ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ