/newsfirstlive-kannada/media/media_files/2025/08/13/arjun-tendulakr-1-2025-08-13-22-41-01.jpg)
ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ (Arjun Tendulkar) ಎಂಗೇಜ್ ಆಗಿದ್ದಾರೆ. ರವಿ ಘಾಯ್ ಮೊಮ್ಮಗಳು ಸಾನಿಯಾ ಚಂದೋಕ್ (Saaniya Chandok) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಘಾಯ್ ಕುಟುಂಬವು ಮುಂಬೈನ ದೊಡ್ಡ ಮತ್ತು ಪ್ರಸಿದ್ಧ ವ್ಯಾಪಾರ ಕುಟುಂಬವಾಗಿದೆ.
ಇವರು ಕಾಂಟಿನೆಂಟಲ್ ಮುರೈನ್ ಡ್ರೈವ್ ಹೋಟೆಲ್ ಬ್ರೂಕ್ಲಿನ್ ಕ್ರೀಮರಿ (ice cream brand Brooklyn Creamery) ಮಾಲೀಕರು. ಐಪಿಎಲ್ 2025ರಲ್ಲಿ ಅರ್ಜುನ್ ತೆಂಡುಲ್ಕರ್ ಅವರ ಪ್ರದರ್ಶನ ಬಹಳ ಸೀಮಿತವಾಗಿತ್ತು. ಅವರಿಗೆ ಇಡೀ ಪಂದ್ಯಾವಳಿಯಲ್ಲಿ ಪಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ.
ಇದನ್ನೂ ಓದಿ: ರಾಜಸ್ಥಾನ್ ತೊರೆಯೋದು ಪಕ್ಕಾ.. ಸಂಜುಗೆ ಫ್ರಾಂಚೈಸಿ ಮೇಲೆ ಬಂದಿರುವ ಸಿಟ್ಟು ರಿವೀಲ್..!
ಮುಂಬೈ ಇಂಡಿಯನ್ಸ್ನ (Mumbai Indians) ಮೆಗಾ ಹರಾಜಿನಲ್ಲಿ 30 ಲಕ್ಷ ರೂಪಾಯಿ ಮೂಲ ಬೆಲೆಗೆ ಉಳಿಸಿಕೊಂಡಿತ್ತು. ಆದರೆ ಪ್ಲೇಯಿಂಗ್-11ನಲ್ಲಿ ಕಾಣಿಸಿಕೊಂಡಿರಲಿಲ್ಲ. ಅರ್ಜುನ್ ತೆಂಡುಲ್ಕರ್ ಇದುವರೆಗೆ 17 ಪ್ರಥಮ ದರ್ಜೆ, 18 ಲಿಸ್ಟ್ -A ಮತ್ತು 24 ಟಿ-20 ಪಂದ್ಯಗಳನ್ನ ಆಡಿದ್ದಾರೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅರ್ಜುನ್ 33.51, ಸರಾಸರಿಯಲ್ಲಿ 37 ವಿಕೆಟ್ ಪಡೆದಿದ್ದಾರೆ. ಅವರು 23.13ರ ಸರಾಸರಿಯಲ್ಲಿ 532 ರನ್ಗಳಿಸಿದ್ದಾರೆ. ಲಿಸ್ಟ್-ಎ ಕ್ರಿಕೆಟ್ನಲ್ಲಿ ಅರ್ಜುನ್ 25 ವಿಕೆಟ್ಗಳು (ಸರಾಸರಿ 31.2) ಮತ್ತು 102 ರನ್ಗಳು (ಸರಾಸರಿಯಲ್ಲಿ 17) ಗಳಿಸಿದ್ದಾರೆ.
ಐಪಿಎಲ್ನಲ್ಲಿ ದಾಖಲೆ?
ಟಿ-20 ಕ್ರಿಕೆಟ್ನಲ್ಲಿ 25 ವರ್ಷ ಅರ್ಜುನ್ ತೆಂಡುಲ್ಕರ್ 25.7 ಸರಾಸರಿಯಲ್ಲಿ 27 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 13.22 ಸರಾಸರಿಯಲ್ಲಿ 119 ರನ್ಗಳನ್ನು ಗಳಿಸಿದ್ದಾರೆ. ಅರ್ಜುನ್ ದೇಶೀಯ ಕ್ರಿಕೆಟ್ನಲ್ಲಿ ಗೋವಾ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮೊದಲು ಅವರು, ಮುಂಬೈ ಪರ ಆಡುತ್ತಿದ್ದರು. ಅರ್ಜುನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಲ್ಲಿಯವರೆಗೆ 5 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 3 ವಿಕೆಟ್ಗಳು ಮತ್ತು 13 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಧೋನಿಯ 100 ಕೋಟಿ ಕೇಸ್ಗೆ 12 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್.. ಏನಿದು ಪ್ರಕರಣ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ