ಟೆಸ್ಟ್​ನಲ್ಲಿ ಸಿರಾಜ್​​ಗೆ ಸಹಾಯ ಆಗಿದ್ದು ಅದೊಂದು ವಾಲ್​ ಪೇಪರ್​​.. ಅದರಲ್ಲೇನಿತ್ತು ಅನ್ನೋದೇ ಸಿಕ್ರೇಟ್​..!

ಇಂಡೋ-ಇಂಗ್ಲೆಂಡ್​​ ಟೆಸ್ಟ್​ ಸರಣಿ ರೋಚಕ ಅಂತ್ಯ ಕಂಡಿದೆ. 4ನೇ ದಿನದಾಟದಲ್ಲಿ ಟೀಮ್​ ಇಂಡಿಯಾಗೆ ಸೋಲು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹಂತದಿಂದ ಫಿನಿಕ್ಸ್​​ನಂತೆ ಎದ್ದು ಬಂದ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ಸಿರಾಜ್​!

author-image
Ganesh
Mohammed Siraj

ಮೊಹ್ಮದ್ ಸಿರಾಜ್ Photograph: (@mdsirajofficial)

Advertisment
  • ಆಂಗ್ಲರಿಗೆ ನುಂಗಲಾರದ ತುತ್ತಾದ ಮೊಹಮ್ಮದ್​ ಸಿರಾಜ್​
  • ‘DSP ಸಿರಾಜ್​’ ಮಾರಕ ದಾಳಿಗೆ ಆಂಗ್ಲ ಪಡೆ ‘ಸೆರಂಡರ್​’
  • ವಾಲ್​ ಪೇಪರ್​​ ಸಿರಾಜ್​ಗೆ ಸ್ಫೂರ್ತಿ ತುಂಬಿದ್ದು ಹೇಗೆ..?

ಇಂಡೋ-ಇಂಗ್ಲೆಂಡ್​​ ಟೆಸ್ಟ್​ ಸರಣಿ ರೋಚಕ ಅಂತ್ಯ ಕಂಡಿದೆ. ಅಪ್ರತಿಮ ಹೋರಾಟ ನಡೆಸಿದ ಟೀಮ್​ ಇಂಡಿಯಾ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. 4ನೇ ದಿನದಾಟದಲ್ಲಿ ಟೀಮ್​ ಇಂಡಿಯಾಗೆ ಸೋಲು ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹಂತದಿಂದ ಫಿನಿಕ್ಸ್​​ನಂತೆ ಎದ್ದು ಬಂದ ಟೀಮ್​ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ಸಿರಾಜ್​!

35 ರನ್​​.. ಇಂಗ್ಲೆಂಡ್​​​ ತಂಡದ ಗೆಲುವಿಗೆ ಬೇಕಿದ್ದಿದ್ದು ಕೇವಲ 35 ರನ್​. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಜೇಮಿ ಸ್ಮಿತ್​,  ಆಲ್​​ರೌಂಡರ್​​ಗಳಾದ ಜೆಮ್ಮಿ ಓವರ್​​ಟನ್​, ಗಸ್​​ ಅಟ್ಕಿನ್ಸನ್​ ಸೇರಿ ಒಟ್ಟು 4 ವಿಕೆಟ್​ಗಳು ಕೈಯಲ್ಲಿದ್ವು. ಟೆಸ್ಟ್​ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್​​ಗೆ ಸುಲಭವಾಗಿ ಗೆಲ್ಲುವ ಅವಕಾಶ ಇತ್ತು. ತವರಿನಂಗಳದಲ್ಲಿ ಆಂಗ್ಲ ಪಡೆ ಮಕಾಡೆ ಮಲಗಿಬಿಡ್ತು. ಯಂಗ್​ ಇಂಡಿಯಾ ಗೆದ್ದು ಬೀಗಿತು.

ಆಂಗ್ಲರಿಗೆ ನುಂಗಲಾರದ ತುತ್ತಾದ ಸಿರಾಜ್

ಅಂತಿಮ ದಿನದಾಟದ ಮೊದಲ ಗಂಟೆಯಲ್ಲೇ ಗೆಲ್ಲೋ ಲೆಕ್ಕಾಚಾರದಲ್ಲಿದ್ದ ಇಂಗ್ಲೆಂಡ್​ ತಂಡಕ್ಕೆ ಶಾಕ್​ ಕೊಟ್ಟಿದ್ದು ವೇಗಿ ಮೊಹಮ್ಮದ್​ ಸಿರಾಜ್​. ಒಂದು ಗಂಟೆ ನಡೆದ ಗೇಮ್​ನಲ್ಲಿ ಸುದೀರ್ಘ ಕಾಲ ಬೌಲಿಂಗ್​ ಮಾಡಿದ ಸಿರಾಜ್​​​ ಮಾರಕ ದಾಳಿ ಸಂಘಟಿಸಿದ್ರು. ಸಿರಾಜ್​ ಬೌಲಿಂಗ್​ಗೆ ಬಂದ್ರೆ ಸಾಕು ಇಂಗ್ಲೆಂಡ್​​ ಬ್ಯಾಟ್ಸ್​​ಮನ್​​​ಗಳು ಗಢಗಢ ನಡುಗ್ತಾ ಇದ್ರು. ಆ ಫೈರಿ ಸ್ಪೆಲ್​ ಹಂಗಿತ್ತು. 

ಇದನ್ನೂ ಓದಿ: KL ರಾಹುಲ್​ಗೆ ಪ್ರಶಂಸೆಯ ಸುರಿಮಳೆ.. ಕನ್ನಡಿಗನ ತಾಳ್ಮೆ, ಶಾಂತತೆ, ಬಲಿಷ್ಠ ಬ್ಯಾಟಿಂಗ್ ಮೆಚ್ಚಲೇಬೇಕು!

ವಿಶ್ವ ಕ್ರಿಕೆಟ್​ಗೆ ಟೀಮ್ ಇಂಡಿಯಾನೇ ಪವರ್ ಹೌಸ್​.. ಆದ್ರೆ ಪೇಸ್​ ಅಟ್ಯಾಕ್​ಗೆ ಬ್ರೇಕ್ ಬಿತ್ತಾ?

‘DSP ಸಿರಾಜ್​’ ಮಾರಕ ದಾಳಿಗೆ ಆಂಗ್ಲ ಪಡೆ ‘ಸೆರೆಂಡರ್​’

ಪರ್ಫೆಕ್ಟ್​ ಲೈನ್​, ಪರ್ಫೆಕ್ಟ್​ ಲೆಂಥ್​​ನಲ್ಲಿ ಬೌಲಿಂಗ್​ ಮಾಡಿದ ಸಿರಾಜ್​ ಇಂಗ್ಲೆಂಡ್​ ಬ್ಯಾಟರ್ಸ್​​ಗೆ ಸಖತ್​ ಕಾಟ ಕೊಟ್ರು. ಜೇಮಿ ಸ್ಮಿತ್​, ಜೆಮ್ಮಿ ಓವರ್​ಟನ್​, ಗಸ್​​ ಅಟ್ಕಿನ್ಸನ್​​.. ಸಿರಾಜ್​​ ಶರವೇಗಕ್ಕೆ ಸ್ಟನ್​ ಆದ್ರು. ತಡಕಾಡಿದ ಸ್ಮಿತ್​ ಕ್ಯಾಚ್​ ನೀಡಿ ನಿರ್ಗಮಿಸಿದ್ರೆ,  ಓವರ್​​ಟನ್​ ಎಲ್​​ಬಿ ಬಲೆಗೆ ಬಿದ್ರು. ಇಂಗ್ಲೆಂಡ್​ ಪಾಲಿನ ಕೊನೆಯ ಭರವಸೆಯಾಗಿದ್ದ ಗಸ್​​ ಅಟ್ಕಿನ್ಸನ್​​ ಕ್ಲೀನ್​​ಬೋಲ್ಡ್​ ಆದ್ರು. 

ಕ್ಯಾಚ್​ ಬಿಟ್ಟು ಕಂಗೆಟ್ಟಿದ್ದ ಸಿರಾಜ್

ಈ ಟೆಸ್ಟ್​ನ 4ನೇ ದಿನದಾಟದಲ್ಲಿ ಸಿರಾಜ್​ ಒಂದು ಮಹಾ ಪ್ರಮಾದ ಮಾಡಿದ್ರು. ಶತಕ ವೀರ ಹ್ಯಾರಿ ಬ್ರೂಕ್​ನ ಜಸ್ಟ್​​ 19 ರನ್​ಗಳಿಗೆ ಔಟ್​ ಮಾಡೋ ಅವಕಾಶವಿತ್ತು. ಸಿರಾಜ್​ ಮಾಡಿದ ಯಡವಟ್ಟು ಬ್ರೂಕ್​ಗೆ ಜೀವದಾನ ನೀಡಿತ್ತು. ಕ್ಯಾಚ್​ ಹಿಡಿದ ಸಿರಾಜ್​ ಬೌಂಡರಿ ಲೈನ್​​ ಟಚ್​ ಮಾಡಿದ್ರು. ಲೈಫ್​ ಪಡೆದ ಬ್ರೂಕ್​ ಶತಕ ಸಿಡಿಸಿ ಪಂದ್ಯದ ಗತಿ ಬದಲಿಸಿದ್ರು. ಕ್ಯಾಚ್​ ಬಿಟ್ಟು ಮಾಡಿದ್ದ ತಪ್ಪು ಸಿರಾಜ್​​​ನ ಬಿಡದೇ ಕಾಡಿತ್ತು. 4ನೇ ದಿನದಾಟ ಅಂತ್ಯವಾದ ಬಳಿಕ ಸಿರಾಜ್​​ಗೆ ನೆಮ್ಮದಿಯ ನಿದ್ದೆಯೂ ಬಂದಿಲ್ಲ. ತಾ ಮಾಡಿದ ಯಡವಟ್ಟು ತಂಡವನ್ನ ಸೋಲಿನ ದವಡೆ ಸಿಲುಕಿಸಿಬಿಡ್ತಲ್ಲಾ ಅನ್ನೋ ಬೇಸರ ಸಿರಾಜ್​ನ ಆವರಿಸಿತ್ತು. ಕುಸಿದ ಸಿರಾಜ್​ಗೆ ಸ್ಫೂರ್ತಿಯಾಗಿದ್ದು ಒಂದು ವಾಲ್​ ಪೇಪರ್​!

ಇದನ್ನೂ ಓದಿ: ನೆಗೆಟೀವ್ಸ್​ನಿಂದಲೇ ಸುದ್ದಿಯಾದ ಕ್ಯಾಪ್ಟನ್.. ನಾಯಕನಾಗಿ ಗಿಲ್ ಗೆದ್ರಾ? ಸೋತ್ರಾ?

ಬೆಳಗ್ಗೆ ನಾನು ಎದ್ದಾಗ ನನಗನ್ನಿಸಿತ್ತು ನಾನಿದನ್ನ ಮಾಡಬಲ್ಲೆ ಅಂತಾ. ನನಗೆ ನಂಬಿಕೆ ಇತ್ತು. ನಾನು ಬೆಳಗ್ಗೆ ಎದ್ದಾಗ ಗೂಗಲ್​ನಿಂದ ಒಂದು ಫೋಟೋ ಡೌನ್​ಲೋಡ್​ ಮಾಡಿದೆ. ಅದನ್ನ ವಾಲ್​ ಪೇಪರ್​ ಮಾಡಿಕೊಂಡೆ. ನನ್ನಿಂದ ಸಾಧ್ಯ ಎಂದುಕೊಂಡೆ ಮೈದಾನಕ್ಕೆ ಬಂದೆ-ಮೊಹಮ್ಮದ್​ ಸಿರಾಜ್​, ವೇಗಿ
ಆ ವಾಲ್​ಪೇಪರ್​ ಏನಿತ್ತು ಗೊತ್ತಾ? ಫುಟ್ಬಾಲ್​ ಲೆಜೆಂಡ್​ ಕ್ರಿಸ್ಟಿಯಾನೊ ರೊನಾಲ್ಡೊರ ಜೆರ್ಸಿ ನಂಬರ್​ 7. ವಿಕೆಟ್​ ತೆಗೆದ ಬಳಿಕ ಸಿರಾಜ್​ ಸ್ಪೆಷಲ್​ ಸೆಲಬ್ರೇಷನ್​ ಮಾಡ್ತಾರಲ್ವಾ ಅದಕ್ಕೆ ಈ ರೊನಾಲ್ಡೊನೇ ಸ್ಫೂರ್ತಿ. 

5 ವಿಕೆಟ್​ ಕಬಳಿಸಿ ಮಿಂಚಿದ ಹೈದ್ರಾಬಾದ್​ ಹಂಟರ್​

ನನ್ನಿಂದ ಸಾಧ್ಯ ಎಂಬ ಬಲವಾದ ನಂಬಿಕೆಯೊಂದಿಗೆ ಮೈದಾನಕ್ಕೆ ಬಂದ ಮೊಹಮ್ಮದ್​ ಸಿರಾಜ್​ ವಿಧ್ವಂಸಕ ದಾಳಿ ಸಂಘಟಿಸಿದ್ರು. ಇಂಗ್ಲೆಂಡ್​​ ತಂಡವನ್ನ ಬಿಡದೇ ಕಾಡಿದ ಸಿರಾಜ್​​ ಟೀಮ್​ ಇಂಡಿಯಾದ ಗೆಲುವಿನ ರೂವಾರಿಯಾದ್ರು. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದರು.

ಮೊದಲ ಇನ್ನಿಂಗ್ಸ್​ನಲ್ಲೂ 4 ವಿಕೆಟ್​ ಕಬಳಿಸಿ ಕಮಾಲ್

ಸೆಕೆಂಡ್​ ಇನ್ನಿಂಗ್ಸ್​ ಮಾತ್ರವಲ್ಲ.. ಮೊದಲ ಇನ್ನಿಂಗ್ಸ್​ನಲ್ಲೂ ಸಿರಾಜ್​ ಬಾಲ್ ಹಿಡಿದು ಮ್ಯಾಜಿಕ್​ ಮಾಡಿದ್ರು. ಒಲಿ ಪೋಪ್​​, ಜೋ ರೋಟ್​, ಹ್ಯಾರಿ ಬ್ರೂಕ್, ಜೇಕಬ್​ ಬೆತೆಲ್​ ಪ್ರಮುಖ ಬ್ಯಾಟರ್ಸ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 4, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 5 ಒಟ್ಟಾರೆ 9 ವಿಕೆಟ್​ ಕಬಳಿಸಿ ಕೆನ್ನಿಂಗ್ಟನ್​ ಓವಲ್​ ಟೆಸ್ಟ್​ನಲ್ಲಿ ಸಿರಾಜ್​ ಆಂಗ್ಲರಿಗೆ ಕಂಟಕವಾದ್ರು. ಟೀಮ್​ ಇಂಡಿಯಾ ಪಾಲಿನ ಗೆಲುವಿನ ರೂವಾರಿಯಾದ್ರು. ಜಯದ ರೂವಾರಿ ಡಿಎಸ್​​ಪಿ ಸಿರಾಜ್​ಗೆ ನಮ್ಮ ಕಡೆಯಿಂದ ಒಂದು ಸೆಲ್ಯೂಟ್​.

ಇದನ್ನೂ ಓದಿ: ನೆಗೆಟೀವ್ಸ್​ನಿಂದಲೇ ಸುದ್ದಿಯಾದ ಕ್ಯಾಪ್ಟನ್.. ನಾಯಕನಾಗಿ ಗಿಲ್ ಗೆದ್ರಾ? ಸೋತ್ರಾ?


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Cricket news in Kannada Mohammed Siraj
Advertisment