/newsfirstlive-kannada/media/media_files/2025/12/20/team-india-16-2025-12-20-14-38-16.jpg)
ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸಮಸ್ಯೆಗಳು ಒಂದಾ? ಎರಡಾ? ಸಾಲು ಸಾಲು ಸಮಸ್ಯೆಗಳಿಗೆ ಸಿಲುಕಿರುವ ಟೀಮ್ ಇಂಡಿಯಾ ಮಹತ್ವದ ಘಟ್ಟದಲ್ಲಿ ಎಡವುತ್ತಿದೆ. ಇದರಿಂದ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲೋ ಕನಸು ದಿನೇ ದಿನೇ ಕಮರಿ ಹೋಗ್ತಿದೆ. ಆ ಮೂಲಕ ಹಾಲಿ ಚಾಂಪಿಯನ್ಸ್​ ಮೇಲೆ ಪಂದ್ಯದಿಂದ ಪಂದ್ಯಕ್ಕೆ ಒತ್ತಡ ಹೆಚ್ಚಾಗ್ತಿದೆ.
ಟಿ-20 ಕ್ರಿಕೆಟ್​ನಲ್ಲಿ ಕನ್ಸಿಸ್ಟೆನ್ಸಿ, ತುಂಬಾ ಇಂಪಾರ್ಟೆಂಟ್. ಕನ್ಸಿಸ್ಟೆಂನ್ಸಿಯಿಂದ ಬ್ಯಾಟರ್, ಮ್ಯಾಚ್ ವಿನ್ನರ್ ಕೂಡ ಆಗಬಹುದು. ಶಾರ್ಟರ್ ಫಾರ್ಮೆಟ್​ನಲ್ಲಿ ಕನ್ಸಿಸ್ಟೆಂನ್ಸಿ ಮಾತ್ರವಲ್ಲ. ಬ್ಯಾಟರ್​ ಸ್ಟ್ರೈಕ್​ರೇಟ್ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಎರಡು ಮುಖ್ಯವಾದದ್ದನ್ನೇ ಟೀಮ್ ಇಂಡಿಯಾ ಕಳೆದುಕೊಂಡಿದೆ.
ಇದನ್ನೂ ಓದಿ: ‘ಸ್ಟಾರ್ಟಿಂಗ್​ ಟ್ರಬಲ್’ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಮುಂದಿನ ಪ್ಲಾನ್ ಏನು ಗೊತ್ತಾ?
/filters:format(webp)/newsfirstlive-kannada/media/media_files/2026/02/10/team-india-22-2026-02-10-14-44-01.jpg)
ಪ್ರಸಕ್ತ ಟಿ-20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​​, ಕನ್ಸಿಸ್ಟೆಂಟ್ ಆಗಿ ರನ್ ಗಳಿಸುತ್ತಿಲ್ಲ. ಒಬ್ಬ ಬ್ಯಾಟರ್ ಒಂದು ಪಂದ್ಯದಲ್ಲಿ ರನ್ ಸ್ಕೋರ್ ಮಾಡಿದ್ರೆ, ಮತ್ತೊಬ್ಬ ಬ್ಯಾಟರ್ ಇನ್ನೊಂದು ಪಂದ್ಯದಲ್ಲಿ ರನ್​ಗಳಿಸುತ್ತಾನೆ. ಇಶಾನ್ ಕಿಶನ್ ಎರಡು ಪಂದ್ಯಗಳಲ್ಲಿ ಮಿಂಚಿದ್ರು. ನಂತರ ಸೈಲೆಂಟ್ ಆಗಿಬಿಟ್ರು. ಇದು ಟೀಮ್ ಇಂಡಿಯಾದ ಎಲ್ಲಾ ಬ್ಯಾಟರ್​ಗಳ ಸಮಸ್ಯೆಯಾಗಿದೆ.
ಕುಗ್ಗಿದ ಸೂರ್ಯ, ತಿಲಕ್ ವರ್ಮಾ ಸ್ಟ್ರೈಕ್​ರೇಟ್​
ಟಿ-20 ಕ್ರಿಕೆಟ್​ನ ಶ್ರೇಷ್ಟ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡಿರೋ ತಿಲಕ್ ವರ್ಮಾ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಸಾಧಾರಣ ಸ್ಟ್ರೈಕ್​ರೇಟ್​​​​​ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ತಿಲಕ್ ಕೇವಲ 118ರ ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಸೂರ್ಯ 127ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಸ್ಕೋರ್ ಮಾಡಿದ್ದಾರೆ. ಇದು ತಿಲಕ್ ಮತ್ತು ಸೂರ್ಯರ ಅಸಲಿ ಸ್ಟ್ರೈಕ್​ರೇಟ್ ಅಲ್ಲವೇ ಅಲ್ಲ.
ಇದನ್ನೂ ಓದಿ: ನವ ವಧು ರಶ್ಮಿಕಾಗೆ ಕುಟುಂಬದ ಬಳೆ, ಆಭರಣ ನೀಡಿದ ವಿಜಯ ದೇವರಕೊಂಡ ತಾಯಿ ಮಾಧವಿ: ನಾಳೆ ವಿವಾಹ
/filters:format(webp)/newsfirstlive-kannada/media/media_files/2026/02/01/team-india-18-2026-02-01-09-18-22.jpg)
ವಿಶ್ವಕಪ್​ನಲ್ಲಿ ಫಿನಿಷರ್ ರಿಂಕು ಸಿಂಗ್ ಮಂಕು
ಲೋವರ್ ಆರ್ಡರ್ ಬ್ಯಾಟರ್ ಫಿನಿಷರ್ ರಿಂಕು ಸಿಂಗ್, ತಂಡದಲ್ಲಿದ್ರೂ ಇಲ್ಲದಂತಾಗಿದ್ದಾರೆ. ಕೆಳ ಕ್ರಮಾಂಕದಲ್ಲಿ ರಿಂಕುಗೆ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಗ್ತಿಲ್ಲ. ಆಡಿರೋ 5 ಪಂದ್ಯಗಳಲ್ಲಿ ರಿಂಕು ಫೇಸ್ ಮಾಡಿದ್ದು ಕೇವಲ 29 ಬಾಲ್ ಮಾತ್ರ. ಗಳಿಸಿರೋದು 24 ರನ್ ಅಷ್ಟೇ. ಈ ವಿಶ್ವಕಪ್​ನಲ್ಲಿ ರಿಂಕು ಮಂಕಾಗಿದ್ದಾರೆ.
ಸೂರ್ಯ ಕ್ಯಾಪ್ಟನ್ಸಿ ಬಗ್ಗೆ ಟೀಕೆ ಯಾಕೆ?
ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಟೀಕೆಗೆ ಗುರಿಯಾಗಿದ್ದಾರೆ. ಸೂರ್ಯ ಬೌಲರ್​ಗಳನ್ನ ಸರಿಯಾಗಿ ರೊಟೇಟ್ ಮಾಡ್ತಿಲ್ಲ. ಬೌಲರ್​ಗಳನ್ನ ಸರಿಯಾಗಿ ಉಪಯೋಗಿಸಿಕೊಳ್ತಿಲ್ಲ. ಸೂರ್ಯ ಗೇಮ್ ಟ್ಯಾಕ್ಟಿಕ್ಸ್ ಸರಿ ಇಲ್ಲ ಅಂತೆಲ್ಲ ಆರೋಪಗಳು ಕೇಳಿಬರುತ್ತಿವೆ. ಒಂದೇ ಒಂದು ಪಂದ್ಯ ಸೋತಿದಕ್ಕೆ ಸೂರ್ಯನ ಮೇಲೆ, ಇಷ್ಟೆಲ್ಲಾ ಟೀಕೆಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ‘ಸ್ಟಾರ್ಟಿಂಗ್​ ಟ್ರಬಲ್’ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಮುಂದಿನ ಪ್ಲಾನ್ ಏನು ಗೊತ್ತಾ?
/filters:format(webp)/newsfirstlive-kannada/media/media_files/2025/12/12/team-india-12-2025-12-12-08-03-19.jpg)
ಮಾಜಿ ಕ್ರಿಕೆಟಿಗ ಅಜಿಂಕ್ಯಾ ರಹಾನೆ, ಕೋಚ್ ಗೌತಮ್ ಗಂಭೀರ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪನಾಯಕ ಅಕ್ಷರ್ ಪಟೇಲ್​ರಂತಹ ಕ್ವಾಲಿಟಿ ಆಲ್​ರೌಂಡರ್​​ಗೆ ಕೊಕ್ ಕೊಟ್ಟಿದ್ದು ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ..! ಓವರ್ ಸ್ಮಾರ್ಟ್​​ನೆಸ್ ತಂಡಕ್ಕೆ ಮುಳುವು ಅಂತಾನೂ ಎಚ್ಚರಿಕೆ ಕೊಟ್ಟಿದ್ದಾರೆ. ಮಹತ್ವದ ಪಂದ್ಯಗಳಲ್ಲಿ ಬದಲಾವಣೆ ಮಾಡೋಕೂ ಮುನ್ನ ನೂರು ಬಾರಿ ಯೋಚಿಸಬೇಕು ಅಂತ ಸಲಹೆ ಕೂಡ ನೀಡಿದ್ದಾರೆ.
ಒಂದೇ ಒಂದು ಸೋಲು, ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಗೆದ್ದಾಗ ಟೀಮ್ ಇಂಡಿಯಾದಲ್ಲಿ ಒಂದೇ ಒಂದು ಸಮಸ್ಯೆ ಕಾಣ್ತಿರಲಿಲ್ಲ. ಸೋತಾಗ ಒಂದಲ್ಲ, ಹತ್ತಾರು ಸಮಸ್ಯೆಗಳು ಎಲ್ಲರ ಕಣ್ಣಿಗೂ ಬೀಳುತ್ತಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಹಾಕಿ, ಕಮ್​​ಬ್ಯಾಕ್ ಮಾಡಲಿ. ಟೀಕಕಾರರಿಗೆ ಉತ್ತರ ಕೊಡುವಂತಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us