Advertisment

KL ರಾಹುಲ್​​ಗೆ ಗಾಳ.. ನಾಯಕತ್ವ ಬದಲಾಯಿಸಲು ನಿರ್ಧರಿಸಿದ ಐದು IPL ಫ್ರಾಂಚೈಸಿಗಳು

IPLನಲ್ಲಿ​ ಬದಲಾವಣೆಯ ಬಿರುಗಾಳಿ ಬೀಸಿದೆ. ಮಿನಿ ಆಕ್ಷನ್​ಗೆ ವಿಶೇಷ ಸಿದ್ಧತೆ ನಡೆಸ್ತಿರೋ ಫ್ರಾಂಚೈಸಿಗಳು ಹೊಸ ನಾಯಕರಿಗೆ ಗಾಳ ಹಾಕಲು ಮುಂದಾಗಿವೆ. 5 ಫ್ರಾಂಚೈಸಿಗಳು ಹೊಸ ಸಾರಥಿಯ ಸಾರಥ್ಯದಲ್ಲಿ ಕಣಕ್ಕಿಳಿಯಲು ತಂಡಗಳು ಮುಂದಾಗಿವೆ.

author-image
Ganesh Kerekuli
KL Rahu Surya Abhishek Sharma
Advertisment

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ​ ಬದಲಾವಣೆಯ ಬಿರುಗಾಳಿ ಬೀಸಿದೆ. ಮಿನಿ ಆಕ್ಷನ್​ಗೆ ವಿಶೇಷ ಸಿದ್ಧತೆ ನಡೆಸ್ತಿರೋ ಫ್ರಾಂಚೈಸಿಗಳು ಹೊಸ ನಾಯಕರಿಗೆ ಗಾಳ ಹಾಕಲು ಮುಂದಾಗಿವೆ. ಐದು ಫ್ರಾಂಚೈಸಿಗಳು ಹೊಸ ಸಾರಥಿಯ ಸಾರಥ್ಯದಲ್ಲಿ ಕಣಕ್ಕಿಳಿಯಲು ತಂಡಗಳು ಮುಂದಾಗಿವೆ. ಯಾವೆಲ್ಲಾ ತಂಡಗಳ ನಾಯಕತ್ವದಲ್ಲಿ ಬದಲಾವಣೆಯಾಗುತ್ತವೆ ಅನ್ನೋದ್ರ ವಿವರ ಇಲ್ಲಿದೆ. 

Advertisment

ಐಪಿಎಲ್​ ಸೀಸನ್​ 19ಕ್ಕೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಜೋರಾಗಿದೆ. ಡಿಸೆಂಬರ್​ನಲ್ಲಿ ನಡೆಯೋ ಮಿನಿ ಆಕ್ಷನ್​ನಲ್ಲಿ ಬಲಿಷ್ಟ ತಂಡವನ್ನ ಕಟ್ಟೋ ಲೆಕ್ಕಾಚಾರಗಳನ್ನ ಹಾಕಿ ಕುಳಿತುಕೊಂಡಿವೆ. ರಿಟೈನ್​​ ಹಾಗೂ ರಿಲೀಸ್​ ಮಾಡೋ ಆಟಗಾರರ ಪಟ್ಟಿ ಕೂಡ ಫೈನಲ್​ ಆಗಿದೆ. ಇದ್ರ ನಡುವೆ ಕೆಲ ಫ್ರಾಂಚೈಸಿಗಳು ಹೊಸ ನಾಯಕರ ನೇಮಕಕ್ಕೆ ಮುಂದಾಗಿವೆ. ರಿಟೈನ್ಶನ್​​ಗೂ ಮುನ್ನ ಟ್ರೇಡಿಂಗ್​ ಮೂಲಕ ಹೊಸ ಆಟಗಾರರನ್ನ ಸೆಳೆಯಲು ಪ್ಲಾನ್​ ರೂಪಿಸಿವೆ. 

KKRಗೆ ರಾಹುಲ್​ ಸಾರಥಿ?

ಕಳೆದ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. ವಿಕೆಟ್​ ಕೀಪರ್​, ಬ್ಯಾಟರ್​ ಪ್ಲಸ್​ ಕ್ಯಾಪ್ಟನ್​ ಹುಡುಕಾಟ ನಡೆಸಿರೋ ಫ್ರಾಂಚೈಸಿಯ ಕಣ್ಣು ಕನ್ನಡಿಗ ಕೆ.ಎಲ್​ ರಾಹುಲ್​ ಮೇಲೆ ಬಿದ್ದಿದೆ. ಸಪೋರ್ಟ್​ ಸ್ಟಾಫ್​​ ವಿಭಾಗಕ್ಕೆ ಮೇಜರ್​ ಸರ್ಜರಿ ಮಾಡಿರೋ ಕೊಲ್ಕತ್ತಾ ನೈಟ್​ ರೈಡರ್ಸ್​ ರಾಹುಲ್​ನ ಸೆಳೆಯಲು ತೆರೆಮರೆಯಲ್ಲೇ ಕಸರತ್ತನ್ನ ಆರಂಭಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​ನಲ್ಲೇ ನಾಯಕತ್ವ ಆಫರ್​ನ ರಿಜೆಕ್ಟ್​ ಮಾಡಿದ ರಾಹುಲ್​, ಕೆಕೆಆರ್​ನ ಆಫರ್​ ಒಪ್ತಾರಾ ಅನ್ನೋದು ದೊಡ್ಡ ಪ್ರಶ್ನೆ.  

ಸ್ಯಾಮ್ಸನ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ಗಾಳ

ಸಂಜು ಸ್ಯಾಮ್ಸನ್​ ರಾಜಸ್ಥಾನ್​ ರಾಯಲ್ಸ್​ ತಂಡವನ್ನ ತೊರೆಯೋದು ಕನ್​ಫರ್ಮ್​ ಆಗಿದೆ. ಪಿಂಕ್​ ಆರ್ಮಿಯಿಂದ ಹೊರಬರ್ತಿರೋ ಸಂಜುವಿನ ಮುಂದಿನ ನಿಲ್ದಾಣ ಯಾವುದು ಅನ್ನೋದು ಸದ್ಯ ಕುತೂಹಲ ಮೂಡಿಸಿದೆ. ಚೆನ್ನೈ, ಕೆಕೆಆರ್​ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಇದೀಗ ಸಂಜುಗೆ ಗಾಳ ಹಾಕಲು ಮುಂದಾಗಿದೆ. ಕಳೆದ ಸೀಸನ್​ನಲ್ಲಿ ಅಕ್ಷರ್​ ಪಟೇಲ್​ ನಾಯಕತ್ವದಲ್ಲಿ ತಂಡ ಡಿಸೇಂಟ್​ ಪ್ರದರ್ಶನ ನೀಡಿದ್ರೂ ಕೂಡ ಕಪ್​ ಕನಸಾಗೇ ಉಳಿದಿದೆ. ಹೀಗಾಗಿ​ ಸೀಸನ್​ 19ಕ್ಕೆ ಹೊಸ ನಾಯಕನ ಸಾರಥ್ಯದಲ್ಲಿ ಕಣಕ್ಕಿಳಿಯಲು ಡೆಲ್ಲಿ ಫ್ರಾಂಚೈಸಿ ಚಿಂತಿಸಿದ್ದು, ಸಂಜುಗೆ ಬಲೆ ಬೀಸಿದೆ. 

Advertisment

ಸೂರ್ಯನಿಗೆ ನಾಯಕನ ಪಟ್ಟ

ಮುಂಬೈ ಇಂಡಿಯನ್ಸ್​ 2024ರಲ್ಲಿ ರೋಹಿತ್ ಶರ್ಮಾನ ಸೈಡ್​ಲೈನ್ ಮಾಡಿ ಹಾರ್ದಿಕ್​ಗೆ ಪಟ್ಟ ಕಟ್ಟಿತ್ತು. ಹಾರ್ದಿಕ್​ ನೇತೃತ್ವದಲ್ಲಿ ಮೊದಲ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ್ದ ಮುಂಬೈ, 2025ರಲ್ಲಿ 4ನೇ ಸ್ಥಾನ ತೃಪ್ತಿ ಪಟ್ಟುಕೊಳ್ತು. ಕ್ಯಾಪ್ಟನ್​ ಹಾರ್ದಿಕ್ ಫ್ರಾಂಚೈಸಿ ನಿರೀಕ್ಷೆಯನ್ನ ತಲುಪುವಲ್ಲಿ ಫೇಲ್​ ಆಗಿದ್ದಾರೆ. ಹೀಗಾಗಿ ಮುಂಬೈ ಮ್ಯಾನೇಜ್​ಮೆಂಟ್​ ಬದಲಾವಣೆಗೆ ಮುಂದಾಗಿದೆ. ಟೀಮ್​ ಇಂಡಿಯಾ ಪರ ಟಿ20 ನಾಯಕನಾಗಿ ಸಕ್ಸಸ್​ ಕಂಡಿರೋ ಸೂರ್ಯಕುಮಾರ್​ ಯಾದವ್​ಗೆ ನಾಯಕತ್ವದ ಜವಾಬ್ದಾರಿ ನೀಡಲು ಚಿಂತಿಸಿದೆ. 

ಇದನ್ನೂ ಓದಿ:ಕೊಹ್ಲಿ ಆರ್​ಸಿಬಿ ಬಿಡುವ ನಿರ್ಧಾರದ ಹಿಂದಿನ 5 ಕಾರಣಗಳು ಇಲ್ಲಿವೆ!

ಲಕ್ನೋ ಸೂಪರ್​ ಜೈಂಟ್ಸ್​ ಫ್ರಾಂಚೈಸಿಯಲ್ಲೂ ಬದಲಾವಣೆಯ ಬಿರುಗಾಳಿ ಜೋರಾಗಿ ಬೀಸಿದೆ. ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ನೀಡಿ ಖರೀದಿಸಿದ ರಿಷಭ್​ ಪಂತ್​ ಕಳೆದ ಸೀಸನ್​​ನಲ್ಲಿ ಆಟಗಾರನಾಗಿಯೂ ಫೇಲ್​ ಆದ್ರು. ನಾಯಕನಾಗಿಯೂ ಫೇಲ್​ ಆದ್ರು. ಪಂತ್​ ನಾಯಕತ್ವದ ಬಗ್ಗೆ ಮಾಲೀಕ ಸಂಜಿವ್​ ಗೋಯೆಂಕಾಗೆ ಅಸಮಾಧಾನ ಉಂಟಾಗಿದೆ. ಪಂತ್​ನ ಕೆಳಗಿಳಿಸಿ ನಿಕೊಲಸ್​ ಪೂರನ್​ಗೆ ಪಟ್ಟ ಕಟ್ಟೋ ಚಿಂತನೆ ನಡೆಸಿದ್ದಾರೆ. ಪೂರನ್​​ ಮೇಜರ್​ ಲೀಗ್​ ಕ್ರಿಕೆಟ್​ನಲ್ಲಿ ಎಮ್​​ಐ ನ್ಯೂಯಾರ್ಕ್​ ಹಾಗೂ ಸಿಪಿಎಲ್​ನಲ್ಲಿ ಟ್ರಿನ್​ಬಾಗೋ ನೈಟ್​​ ರೈಡರ್ಸ್​ ತಂಡವನ್ನ ಚಾಂಪಿಯನ್​ ಪಟ್ಟವೇರಿಸಿದ್ದಾರೆ. ಪೂರನ್​ಗೆ ಪಟ್ಟ ಕಟ್ಟಿದ್ರೆ ಲಕ್ನೋ ಲಕ್​ ಬದಲಾಗಬಹುದು ಅನ್ನೋ ಚಿಂತನೆ ತಂಡದಲ್ಲಿ ನಡೆದಿದೆ. 

ಪಂಜಾಬ್​ ಪುತ್ತರ್​​ಗೆ ಹೈದ್ರಾಬಾದ್​​ ನಾಯಕತ್ವ?

ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಸಾರಥಿಯಾಗಿ ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​​ ತಂಡವನ್ನ ಸಮರ್ಥವಾಗಿ ಮುನ್ನಡೆಸಿದ್ದಾರೆ. ಮುಂದಿನ ಸೀಸನ್​ನಲ್ಲಿ ಕಮಿನ್ಸ್​​ ಲಭ್ಯತೆಯ ಬಗ್ಗೆ ಪ್ರಶ್ನೆಗಳಿವೆ. ಟೀಮ್​ ಇಂಡಿಯಾ ವಿರುದ್ಧದ ಸರಣಿಯಿಂದಲೂ ಹೊರಗುಳಿದಿರೋ ಕಮಿನ್ಸ್​, ಆ್ಯಷಸ್​ ಟೆಸ್ಟ್​ ಸರಣಿಯನ್ನಾಡೋದು ಅನುಮಾನವಾಗಿದೆ. ಹೀಗಾಗಿ ಹೈದ್ರಾಬಾದ್ ಫ್ರಾಂಚೈಸಿ ಕೂಡ ನಾಯಕತ್ವದ ಬದಲಾವಣೆ ಬಗ್ಗೆ ಚಿಂತಿಸಿದ್ದು, ಪಂಜಾಬ್​ ಪುತ್ತರ್​​ ಅಭಿಷೇಕ್​ ಶರ್ಮಾಗೆ ಜವಾಬ್ದಾರಿ ನೀಡೋ ಚರ್ಚೆ ಮ್ಯಾನೇಜ್​ಮೆಂಟ್​ ಲೆವೆಲ್​ನಲ್ಲಿ ನಡೆದಿವೆಯಂತೆ. ಟಿ20 ಕ್ರಿಕೆಟ್​​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿಸಿರೋ ಅಭಿಷೇಕ್​ ತಂಡದ ಬ್ರ್ಯಾಂಡ್​ವ್ಯಾಲ್ಯೂವನ್ನೂ ಹೆಚ್ಚಿಸ್ತಾರೆ ಅನ್ನೋ ಇದ್ರ ಹಿಂದಿರೋ ಲೆಕ್ಕಾಚಾರವಾಗಿದೆ. 

Advertisment

ಇದನ್ನೂ ಓದಿ:ಮ್ಯಾಚ್​ ಗೆಲ್ಲಿಸಿ ಸಂಭ್ರಮಿಸಿದ ರಾಹುಲ್.. ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿ ಕ್ಲೀನ್​ ಸ್ವೀಪ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Sanju Samson Hardik Pandya Surya kumar Yadav IPL KL Rahul
Advertisment
Advertisment
Advertisment