/newsfirstlive-kannada/media/media_files/2025/10/14/kl-rahul-6-2025-10-14-10-50-43.jpg)
ವೆಸ್ಟ್​ ವಿಂಡೀಸ್​ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ ಸ್ವೀಪ್ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಶುಬ್ಮನ್ ಗಿಲ್ ಪಡೆ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.
ಮೊದಲ ದಿನ ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಭಾರತ ತಂಡ, ಒಟ್ಟು 518 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತ್ತು. ಪ್ರತಿಯಾಗಿ ಬ್ಯಾಟಿಂಗ್​​ಗೆ ಇಳಿದ್ದ ವಿಂಡೀಸ್​, ನಿನ್ನೆಯ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತ್ತು. ಅಂತೆಯೇ ಬ್ಯಾಟಿಂಗ್​ಗೆ ಇಳಿದ ವಿಂಡೀಸ್ 248 ರನ್​​ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿ, ಫಾಲೋ ಆನ್ ಸುಳಿಗೆ ಸಿಲುಕಿತ್ತು.
ಇದನ್ನೂ ಓದಿ:ಕೊಹ್ಲಿ ಆರ್​ಸಿಬಿ ಬಿಡುವ ನಿರ್ಧಾರದ ಹಿಂದಿನ 5 ಕಾರಣಗಳು ಇಲ್ಲಿವೆ!
270 ರನ್​ಗಳ ಹಿನ್ನಡೆ ಅನುಭವಿಸಿದ ವಿಂಡೀಸ್, ಫಾಲೋ ಆನ್ ಪ್ರಕಾರ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿತು. ಎರಡನೇ ಅವಕಾಶದಲ್ಲಿ ಒಳ್ಳೆಯ ಪೈಪೋಟಿ ಕೊಟ್ಟ ವಿಂಡೀಸ್ ಪಡೆ, 390 ರನ್​ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ಗೆಲುವಿಗೆ 121 ರನ್​ ಬೇಕಿತ್ತು.
ಈ ಗುರಿಯನ್ನು ನಿನ್ನೆ ಮಧ್ಯಾಹ್ನದಿಂದ ಬೆನ್ನು ಹತ್ತಿದ್ದ ಗಿಲ್ ಪಡೆ ಇಂದು ಬೆಳಗ್ಗೆ ಗೆದ್ದು ಬೀಗಿದೆ. ಜೈಸ್ವಾಲ್, ಸಾಯಿ ಸುದರ್ಶನ್, ಗಿಲ್ ಸೇರಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದೆ. ತಾಳ್ಮೆಯ ಆಟವನ್ನಾಡಿದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದರು. 108 ಬಾಲ್​ಗಳನ್ನು ಎದುರಿಸಿ ಎರಡು ಸಿಕ್ಸರ್, ಆರು ಬೌಂಡರಿಯೊಂದಿಗೆ 58 ರನ್​ಗಳಿಸಿ ಅಜಯರಾಗಿ ಉಳಿದರು. ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ 38 ರನ್​ಗಳ ಕಾಣಿಕೆ ನೀಡಿದ್ದರು. ಈ ಗೆಲುವಿನೊಂದಿಗೆ ಶುಬ್ಮನ್ ಗಿಲ್ ನಾಯಕತ್ವಕ್ಕೆ ಮತ್ತೊಂದು ಸರಣಿ ಒಲಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ