/newsfirstlive-kannada/media/media_files/2025/12/10/hardik-pandya-9-2025-12-10-08-54-15.jpg)
ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಯಾವಾಗಲೂ ಸುದ್ದಿಯಲ್ಲಿರಲು ಇಷ್ಟಪಡ್ತಾರೆ. ಆಫ್ ದ​ ಫೀಲ್ಡ್​​ನಲ್ಲಿ ತನ್ನ ಗೆಳತಿಯ ಜೊತೆ ಕಾಣಿಸಿಕೊಂಡು ಹೆಡ್​​ಲೈನ್ ಆಗೋ ಪಾಂಡ್ಯ, ಇದೀಗ ಆನ್​ ಫಿಲ್ಡ್​ನಲ್ಲಿ ಹೊಸ ದಾಖಲೆ ಬರೆದು ಸದ್ದು ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಹಾರ್ದಿಕ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಗುಜರಾತ್​ನ ರಾಜ್​ಕೋಟ್ ಮೈದಾನದಲ್ಲಿ ಹಾರ್ದಿಕ್, ರನ್ ಹೊಳೆ ಹರಿಸಿದ್ರು. ವಿದರ್ಭ ಬೌಲರ್​ಗಳ ಬೆವರಿಳಿಸಿದ ಪಾಂಡ್ಯ, ಡಿಸ್ಟ್ರಕ್ಟೀವ್ ಬ್ಯಾಟಿಂಗ್ ನಡೆಸಿದ್ರು. ಪಾಂಡ್ಯ ಬಾರಿಸುತ್ತಿದ್ದ ಒಂದೊಂದು ಬೌಂಡರಿ-ಸಿಕ್ಸರ್​ಗಳು, ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾಜ್​​​​​​​​​​​​​ಕೋಟ್​ಗೆ ನಾನೇ ರಾಜ ಅನ್ನೋ ಹಾಗೆ, ಹಾರ್ದಿಕ್ ಬ್ಯಾಟಿಂಗ್ ನಡೆಸಿದ್ರು.
/filters:format(webp)/newsfirstlive-kannada/media/media_files/2026/01/03/hardik-pandya-13-2026-01-03-20-26-50.jpg)
ಹಾರ್ದಿಕ್ ಪಾಂಡ್ಯ ಕ್ರೀಸ್​​ಗೆ ಎಂಟ್ರಿ ಕೊಡೋಗೂ ಮುನ್ನ ಬರೋಡಾ ತಂಡದ ಸ್ಕೋರ್, 71 ರನ್ನಿಗೆ 5 ಕಳೆದುಕೊಂಡಿತ್ತು. ಪ್ರಮುಖ ಬ್ಯಾಟ್ಸ್​ಮನ್​ಗಳನ್ನ ಕಳೆದುಕೊಂಡಿದ್ದ ಬರೋಡಾ, ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗಿಳಿದ ಪಾಂಡ್ಯ, ಪಂದ್ಯದ ಸೀನ್ ಚೇಂಜ್ ಮಾಡಿದ್ರು. ಪಾಂಡ್ಯ ಔಟಾದಾಗ ತಂಡದ ಸ್ಕೋರ್ 263 ರನ್​ ಆಗಿತ್ತು.
ಹಾರ್ದಿಕ್ ಪಾಂಡ್ಯರನ್ನ ಇಂಪ್ಯಾಕ್ಟ್​ ಪ್ಲೇಯರ್​​ ಅನ್ನೋದು, ಇದೇ ಕಾರಣಕ್ಕೆ. ತಂಡ ಸಂಕಷ್ಟದಲ್ಲಿದ್ದಾಗ, ಸೋಲಿನ ಸುಳಿಗೆ ಸಿಲುಕಿದಾಗ ಹಾರ್ದಿಕ್, ಸೂಪರ್​​ಮ್ಯಾನ್​​ರಂತ ಬಂದು ತಂಡವನ್ನ ಸೇವ್ ಮಾಡ್ತಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಮೊದಲ 62 ಎಸೆತಗಳನ್ನ ಎದುರಿಸಿದ ಪಾಂಡ್ಯ 68 ರನ್​ಗಳಿಸಿದ್ರು. ನಂತರ ಕೇವಲ ಆರೇ ಆರು ಎಸೆತಗಳಲ್ಲಿ, ಅಂದ್ರೆ 68 ಎಸೆತಗಳಲ್ಲಿ ಹಾರ್ದಿಕ್ ಶತಕದ ಸಂಭ್ರಮ ಆಚರಿಸಿಕೊಂಡ್ರು. ಹಾರ್ದಿಕ್ ಇನ್ನಿಂಗ್ಸ್​ ಊಹಿಸಿಕೊಳ್ಳೋಕೂ ಸಾಧ್ಯವಾಗ್ತಿಲ್ಲ.
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೇರ್ ಚೇಂಜ್ ಮಾಡಿದ್ದೇ, 39ನೇ ಓವರ್​ನಲ್ಲಿ. ಎಡಗೈ ಸ್ಪಿನ್ನರ್ 26 ವರ್ಷದ ಪಾರ್ಥ್​​ ರೆಕಾಡೆ ಬೌಲಿಂಗ್​ನಲ್ಲಿ ಪಾಂಡ್ಯ, 5 ಎಸೆತಗಳಲ್ಲಿ 5 ಸಿಕ್ಸರ್​ಗಳನ್ನ ಸಿಡಿಸಿದ್ರು. ಆದ್ರೆ ಕೊನೆಯ ಎಸೆತವನ್ನ ಪಾಂಡ್ಯ ಸಿಕ್ಸರ್​​ ಬಾರಿಸಲು ಆಗಲಿಲ್ಲ. ಕೇವಲ ಬೌಂಡರಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಪಾರ್ಥ್​ರ ಒಂದೇ ಓವರ್​ನಲ್ಲಿ 34 ರನ್​​​​​​ ಚಚ್ಚಿದ ಪಾಂಡ್ಯ, ಸ್ಕೋರರ್ಸ್​ಗೆ ತಲೆಬಿಸಿ ಮಾಡಿದ್ರು. ​​​​​
ಇದನ್ನೂ ಓದಿ: ರೆಹಮಾನ್ ವಿವಾದ ಬೆನ್ನಲ್ಲೇ ‘ಭಾರತಕ್ಕೆ ಟಿ-20 ವಿಶ್ವಕಪ್ ಆಡಲು ಬರಲ್ಲ’ ಎಂದ ಬಾಂಗ್ಲಾದೇಶ
/filters:format(webp)/newsfirstlive-kannada/media/media_files/2025/12/10/hardik-pandya-9-2025-12-10-08-54-15.jpg)
ಎಕ್ಸ್ಟ್ರಾರ್ಡಿನರಿ ಇನ್ನಿಂಗ್ಸ್ ಆಡಿದ್ದ ಪಾಂಡ್ಯ 92 ಎಸೆತಗಳಲ್ಲಿ 133 ರನ್​ ಕಲೆಹಾಕಿದ್ರು. 8 ಬೌಂಡರಿ ಮತ್ತು 11 ಭರ್ಜರಿ ಸಿಕ್ಸರ್​ಗಳು, ಪಾಂಡ್ಯ ಬ್ಯಾಟ್​ನಿಂದ ದಾಖಲಾಯ್ತು. ಕ್ರೀಸ್​ನಲ್ಲಿ ನಿಂತಲ್ಲೇ ಪಾಂಡ್ಯ, 98 ರನ್​​​ ದಾಖಲಿಸಿದ್ರು. ನಿಜ ಹೇಳಬೇಕು ಅಂದ್ರೆ, ವಿದರ್ಭ ವಿರುದ್ಧ ಪಾಂಡ್ಯ ಆಡಿದ್ದ ಇನ್ನಿಂಗ್ಸ್,​​ ನೋಡೋಕೇ ಎರಡು ಕಣ್ಣು ಸಾಲದಂತಿತ್ತು.
ಹಾರ್ದಿಕ್ ಪಾಂಡ್ಯ ಟಿ-20 ಫಾರ್ಮೆಟ್​ನಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. ಆದ್ರೆ 2027ರ ಏಕದಿನ ವಿಶ್ವಕಪ್​​​​ಗೆ ಒಂದೇ ಒಂದು ವರ್ಷ ಬಾಕಿ ಇರೋದ್ರಿಂದ, ಪಾಂಡ್ಯ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವಕಪ್ ತಂಡದಲ್ಲಿ ಆಡಲೇಬೇಕು ಅಂತ ಬರೋಡಾ ಸೂಪರ್​ಸ್ಟಾರ್ ಆಟಗಾರ ನಿರ್ಧರಿಸಿದ್ದಾರೆ. ಸದ್ಯ ವಿದರ್ಭ ವಿರುದ್ಧದ ಇನ್ನಿಂಗ್ಸ್​, ಆಯ್ಕೆ ಸಮಿತಿಗೆ ಸಂದೇಶ ಕೊಟ್ಟಂತೆ ಕಾಣುತ್ತದೆ.
ಹಾರ್ದಿಕ್ ಪಾಂಡ್ಯ ಇದ್ದ ಕಡೆ, ಎಂಟರ್​ಟೈನ್ಮೆಂಟ್​​​ಗೆ ಏನೂ ಕಮ್ಮಿ ಇಲ್ಲ. ಆನ್​ಫೀಲ್ಡ್, ಆಫ್ ದ ಫೀಲ್ಡ್​​​​​​​​​​​​ ಎಲ್ಲಾ ಕಡೆ ಅಭಿಮಾನಿಗಳನ್ನ ರಂಜಿಸೋ ಪಾಂಡ್ಯ, ಮುಂದಿನ ಪಂದ್ಯಗಳಲ್ಲೂ ಸಾಲಿಡ್ ಪರ್ಫಾಮೆನ್ಸ್​ ಮುಂದುವರೆಸಲಿ ಅನ್ನೋದೇ, ಎಲ್ಲಾ ಅಭಿಮಾನಿಗಳ ಆಶಯ.
ಇದನ್ನೂ ಓದಿ:ಅದ್ದೂರಿಯಾಗಿ ನೆರವೇರಿದ ಪುರಾಣ ಪ್ರಸಿದ್ಧ ರಾಮಲಿಂಗೇಶ್ವರ ರಥೋತ್ಸವ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us