Advertisment

ಫೈಟರ್ ಜೆಟ್ ಕ್ರ್ಯಾಶ್ ಆಕ್ಟ್.. ಹ್ಯಾರಿಸ್ ರೌಫ್ 6-0 ಗೆಸ್ಚರ್ ವಿರುದ್ಧ ಭಾರೀ ಆಕ್ರೋಶ

ಭಾರತ vs ಪಾಕ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ 6-0 ಗೆಸ್ಚರ್, ಫೈಟರ್ ಜೆಟ್ ಕ್ರ್ಯಾಶ್ ಆಕ್ಟ್ ಅಭಿಮಾನಿಗಳನ್ನು ಕೆರಳಿಸಿತು. ಟೀಂ ಇಂಡಿಯಾ ಬ್ಯಾಟರ್​ಗಳು ದಿಟ್ಟ ಉತ್ತರ ನೀಡುತ್ತಿದ್ದರೂ, ನಾಚಿಕೆಯಿಲ್ಲದೇ ಪಾಕಿಸ್ತಾನಿ ಆಟಗಾರರು ಕೀಟಲೆ ಮಾಡಿ ನಗೆಪಾಟಿಲಿಗೆ ಗುರಿಯಾಗಿದ್ದಾರೆ.

author-image
Ganesh Kerekuli
pakisthan cricket (1)
Advertisment

ಭಾರತ vs ಪಾಕ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ 6-0 ಗೆಸ್ಚರ್, ಫೈಟರ್ ಜೆಟ್ ಕ್ರ್ಯಾಶ್ ಆಕ್ಟ್ ಅಭಿಮಾನಿಗಳನ್ನು ಕೆರಳಿಸಿತು. ಟೀಂ ಇಂಡಿಯಾ ಬ್ಯಾಟರ್​ಗಳು ದಿಟ್ಟ ಉತ್ತರ ನೀಡುತ್ತಿದ್ದರೂ, ನಾಚಿಕೆಯಿಲ್ಲದೇ ಪಾಕಿಸ್ತಾನಿ ಆಟಗಾರರು ಕೀಟಲೆ ಮಾಡಿ ನಗೆಪಾಟಿಲಿಗೆ ಗುರಿಯಾಗಿದ್ದಾರೆ.  

Advertisment

ಏಷ್ಯಾ ಕಪ್​ನ ಸೂಪರ್ ಫೋರ್ ಪಂದ್ಯದ ವೇಳೆ ಪಾಕಿಸ್ತಾನಿ ಆಟಗಾರರು ತಮ್ಮ ಕೆಟ್ಟ ವರ್ತನೆಗಳ ಮೂಲಕ ಹತಾಶೆಯನ್ನು ಕ್ರಿಕೆಟ್ ಜಗತ್ತಿಗೆ ಪ್ರದರ್ಶಿಸಿದರು. ಅದರಲ್ಲೂ ಮಿತಿ ಮೀರಿ ವರ್ತಿಸಿದ ಹ್ಯಾರಿಸ್ ರೌಫ್ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಕೆರಳಿ ಕೆಂಡವಾದರು. 

ಇದನ್ನೂ ಓದಿ:ಪಂದ್ಯದ ವೇಳೆ ಪಾಕಿಸ್ತಾನವನ್ನ ಸೋಲಿನಷ್ಟೇ ಕಾಡಿದ್ಲು ಹುಡುಗಿ -ಹೇಗೆ ಗೊತ್ತಾ?

Advertisment

ಮೈದಾನದಲ್ಲಿ ಕೆಟ್ಟದಾಗಿ ವರ್ತಿಸಿದಾಗ ಟೀಂ ಇಂಡಿಯಾ ಅಭಿಮಾನಿಗಳು ‘ಕೊಹ್ಲಿ, ಕೊಹ್ಲಿ!’ ಎಂದು ಕೂಗಿದರು. ಇನ್ನು, ರೌಫ್ ರಿಯಾಕ್ಷನ್ ನಾಚಿಕೆಗೇಡಿನ ಸಂಗತಿಯಾಗಿತ್ತು. ಕೈ ಸನ್ನೆ ಮೂಲಕ ವಿಮಾನವನ್ನು ಹೊಡೆದುರುಳಿಸಿದಂತೆ ತೋರಿಸಿದ್ದಾನೆ. ತಮ್ಮ ಬೆರಳುಗಳಿಂದ ‘6-0, 6-0’ ಎಂದು ಸನ್ನೆ ಮಾಡಿದ್ದಾನೆ. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಏನಿದು 6-0 ಅಂತರ..? 

ನಿನ್ನೆ ಭಾರತದ ಇನ್ನಿಂಗ್ಸ್​ನಲ್ಲಿ ಅಭಿಷೇಕ್ ಶರ್ಮಾ, ಮೊದಲ ಬಾಲ್​ಗೆ ಸಿಕ್ಸರ್ ಬಾರಿಸಿ ಖಡಕ್ ಉತ್ತರ ನೀಡಿದ್ದರು. ಆದರೆ ಇದನ್ನು ಪಾಕಿಸ್ತಾನದ ಆಟಗಾರ ಆಪರೇಷನ್ ಸಿಂಧೂರ್​​ಗೆ ಹೋಲಿಕೆ ಮಾಡಲು ಹೊರಟಿದ್ದ. ಇದೊಂದು ಪಾಕಿಸ್ತಾನದ ಕನಸು ಅಥವಾ ಕಟ್ಟುಕಥೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಪಾಕ್ ಸೇನೆ ಸುಳ್ಳು ಹೇಳಿತ್ತು. ಅಲ್ಲದೇ ಪಾಕಿಸ್ತಾನದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕೊಚ್ಚಿಕೊಂಡಿತ್ತು. ಇದೀಗ ಪಾಕಿಸ್ತಾನ ಆಟಗಾರರು ತಮ್ಮನ್ನು ಸಮರ್ಥಿಸಿಕೊಳ್ಳಲು ಈ ರೀತಿಯ ನಾಟಕವಾಡಿದ್ದಾರೆ. 

Advertisment

ಇದನ್ನೂ ಓದಿ: ಪಂದ್ಯ ಮುಗಿದ ಬಳಿಕವೂ ಸುಮ್ಮನೆ ಕೂರಲಿಲ್ಲ ಗಿಲ್.. ಪಾಕ್​​ಗೆ ಟ್ವಿಟರ್​​ನಲ್ಲಿ ಆನ್ಸರ್​!

ಅಷ್ಟೇ ಅಲ್ಲ, ಸಾಹಿಬ್‌ಜಾದಾ ಫರ್ಹಾನ್ ಬ್ಯಾಟ್ ಎತ್ತಿ ಗುಂಡು ಹಾರಿಸಿದ ರೀತಿ ಸಂಭ್ರಮಿಸಿದರು. ಇದು ಅವರ ದ್ವೇಷಪೂರಿತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Asia Cup 2025 Ind vs Pak india vs pakistan asia cup
Advertisment
Advertisment
Advertisment