/newsfirstlive-kannada/media/media_files/2025/09/22/india-vs-pakisthan-match-girl-2025-09-22-12-36-53.jpg)
ಏಷ್ಯಾಕಪ್​​ನಲ್ಲಿ ನಿನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯವು ನಾಟಕೀಯ ಮತ್ತು ರೋಮಾಂಚನದಿಂದ ಕೂಡಿತ್ತು. ಟೀಂ ಇಂಡಿಯಾ ಪಾಕಿಸ್ತಾನವನ್ನು 18.5 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಸೋಲಿಸಿತು.
ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಅಭಿಷೇಕ್ (74 ರನ್, 39 ಎಸೆತ, ಆರು ಬೌಂಡರಿ, ಐದು ಸಿಕ್ಸರ್) ಮತ್ತು ಗಿಲ್ (47 ರನ್, 28 ಎಸೆತ, ಎಂಟು ಬೌಂಡರಿ) ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರ 105 ರನ್‌ಗಳ ಪಾಲುದಾರಿಕೆ ಗೆಲುವಿಗೆ ಭದ್ರ ಅಡಿಪಾಯ ಹಾಕಿತು. ತಿಲಕ್ ವರ್ಮಾ ಕೂಡ 19 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಯೊಂದಿಗೆ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತದ ವಿರುದ್ಧ ಏಷ್ಯಾಕಪ್​​ನಲ್ಲಿ ಎರಡನೇ ಬಾರಿಗೆ ಸೋಲುಂಡ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿತು. ಅದು ಸಾಲದ್ದೂ ಎನ್ನುವಂತೆ, ಮೈದಾನಕ್ಕೆ ಬಂದಿದ್ದ ಯುವತಿಯೊಬ್ಬಳು ಪಾಕ್ ಆಟಗಾರರನ್ನು ಹಾಗೂ ಪಾಪಿಸ್ತಾನದ ಅಭಿಮಾನಿಗಳನ್ನ ಇನ್ನಿಲ್ಲದಂತೆ ಕಾಡಿದ್ದಾಳೆ.
ನಿಜ! ಈ ಮಹಿಳಾ ಅಭಿಮಾನಿ ಅಭಿಷೇಕ್ ಶರ್ಮಾ ಬಾರಿಸಿದ ಸಕ್ಸರ್​​​ಗಳಂತೆ ಗಮನ ಸೆಳೆದಿದ್ದಾಳೆ. ಹಸಿರು ಸೀರೆ ಧರಿಸಿ ಗ್ಯಾಲರಿಯಲ್ಲಿ ಟೀಂ ಇಂಡಿಯಾ ಪರ ಬ್ಯಾಟ್ ಬೀಸಿದ ಈಕೆ, ‘ಬೈ ಬೈ ಪಾಕಿಸ್ತಾನ್’ ಎಂದು ಜೋರಾಗಿ ಕೂಗಿದ್ದಾಳೆ. ರಾಷ್ಟ್ರಧ್ವಜ ಹಿಡಿದು ನಿಂತಿದ್ದ ಆಕೆಯ ಕೈಯಲ್ಲಿ ಬಳೆಗಳಿದ್ದವು. ಈ ದೃಶ್ಯವು ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯ ಉತ್ಸಾಹಭರಿತ ಮನೋಭಾವ ಮತ್ತು ಉಡುಗೆ ಪ್ರೇಕ್ಷಕರ ಗಮನ ಸೆಳೆಯಿತು.
ಇನ್ನು ನಿನ್ನೆಯ ಗೆಲುವಿನೊಂದಿಗೆ ಭಾರತ ಪಾಕಿಸ್ತಾನದ ಮೇಲೆ ಪ್ರಾಬಲ್ಯವನ್ನು ಮುಂದುವರಿಸಿದೆ. ತಂಡದ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಪಂದ್ಯ ಮುಗಿದ ಬಳಿಕ ಮಾತನ್ನಾಡಿರುವ ನಾಯಕ ಸೂರ್ಯ ಕುಮಾರ್ ಯಾದವ್, ಉತ್ಸಾಹ ಪ್ರದರ್ಶಸಿದರು. ಮೊದಲ 10 ಓವರ್ ಬೌಲಿಂಗ್ ಮುಗಿಯೋವರೆಗೂ ನಾನು ಸುಮ್ಮನಿದ್ದೆ. ಡ್ರಿಂಕ್ಸ್​ ಬ್ರೇಕ್ ನಂತರ ಆಟ ಪ್ರಾರಂಭವಾಗಲಿದೆ ಎಂದು ಹೇಳಿದೆ.
ಬುಮ್ರಾ ಬಗ್ಗೆ ಪ್ರತಿಕ್ರಿಯಿಸಿ.. ಪರವಾಗಿಲ್ಲ, ಅವರು ರೋಬೋಟ್ ಅಲ್ಲ, ನಿನ್ನೆ ಬುಮ್ರಾಗೆ ಕೆಟ್ಟ ದಿನವಾಗಿತ್ತು. ದುಬೆ ನಮ್ಮನ್ನು ತೊಂದರೆಯಿಂದ ಪಾರು ಮಾಡಿದರು. ಅಭಿಷೇಕ್ ಮತ್ತು ಗಿಲ್ ಒಳ್ಳೆಯ ಪಾಲುದಾರಿಕೆ ಕೊಟ್ಟರು. ಇದು ಬೆಂಕಿ ಮತ್ತು ಮಂಜುಗಡ್ಡೆಯ ಕಾಂಬಿನೇಷನ್. ಮೊದಲ ಇನ್ನಿಂಗ್ಸ್ ನಂತರ, ನಮ್ಮ ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಕಳಪೆ ಫೀಲ್ಡಿಂಗ್​ ಮಾಡಿದ ಆಟಗಾರರಿಗೆ ಇಮೇಲ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಬೆಂಕಿ ಮತ್ತು ಮಂಜುಗಡ್ಡೆ ಕಾಂಬಿನೇಷನ್ -ಗೆದ್ದ ಬೆನ್ನಲ್ಲೇ ಸೂರ್ಯ ಸ್ಫೋಟಕ ಹೇಳಿಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ