/newsfirstlive-kannada/media/media_files/2026/02/16/hardik-pandya-18-2026-02-16-09-35-52.jpg)
ಟಿ20 ವಿಶ್ವಕಪ್ 2026ರ (T20 World Cup 2026) ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 61 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಆದರೆ, ಪಂದ್ಯ ಮುಗಿದ ತಕ್ಷಣ ಮೈದಾನದಲ್ಲಿ ಕಂಡುಬಂದ ದೃಶ್ಯವೊಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಗೆಲುವಿನ ಸಂಭ್ರಮದಲ್ಲಿದ್ದರೂ ಹಾರ್ದಿಕ್ ಪಾಂಡ್ಯ ಮತ್ತು ನಾಯಕ ಸೂರ್ಯಕುಮಾರ್ ಯಾದವ್, ಸ್ಪಿನ್ನರ್ ಕುಲ್ದೀಪ್ ಯಾದವ್ ಮೇಲೆ ತೀವ್ರ ಅಸಮಾಧಾನ ಹೊರಹಾಕಿದರು.
ಮೈದಾನದಲ್ಲಿ ನಡೆದದ್ದೇನು?
ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ಕೊನೆಯ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಮುಗಿಸಿದರು. ಬಳಿಕ ಆಟಗಾರರೆಲ್ಲರೂ ಪರಸ್ಪರ ಹಸ್ತಲಾಘವ ಮಾಡುತ್ತಾ, ಅಪ್ಪಿಕೊಂಡು ಸಂಭ್ರಮಿಸುತ್ತಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ಮಾತ್ರ ಕುಲ್ದೀಪ್ ಯಾದವ್ ಅವರನ್ನು ನೋಡಿ ಮುಖ ಗಂಟುಹಾಕಿಕೊಂಡಿದ್ದರು. ಅಷ್ಟೇ ಅಲ್ಲ, ನಾಯಕ ಸೂರ್ಯಕುಮಾರ್ ಯಾದವ್ ಕೂಡ ಕುಲ್ದೀಪ್ ಬಳಿ ಬಂದು ಕೋಪದಿಂದಲೇ ಏನನ್ನೋ ಹೇಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Here is video of Hardik Pandya & Surya Kumar Yadav angry on Kuldeep Yadav #INDvsPAK#T20WorldCuppic.twitter.com/BsGCCprKNc
— cricketkayudh (@cricketkayudh) February 15, 2026
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ರಿಂಕು ಸಿಂಗ್, ತಕ್ಷಣ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಲು ಯತ್ನಿಸಿದರು. ತಿಲಕ್ ವರ್ಮಾ ಕೂಡ ಈ ಘಟನೆಯಿಂದ ಆತಂಕಗೊಂಡಂತೆ ಕಂಡುಬಂದರು.
ಹಾರ್ದಿಕ್, ಸೂರ್ಯ ಕೋಪಕ್ಕೆ ಕಾರಣವೇನು?
ಭಾರತದ ಸುಲಭ ಜಯದ ನಡುವೆಯೂ ಹಿರಿಯ ಆಟಗಾರರ ಈ ಕೋಪಕ್ಕೆ ಕಾರಣ ‘ಕ್ಯಾಚ್ ಡ್ರಾಪ್’ (Dropped Catch). ಪಂದ್ಯ ಮುಗಿಯುವ ಕೆಲವೇ ಕ್ಷಣಗಳ ಮೊದಲು, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಬಾರಿಸಿದ ಚೆಂಡು ಲಾಂಗ್-ಆನ್ ಕಡೆಗೆ ಹೋಯಿತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕುಲ್ದೀಪ್ ಯಾದವ್, ಸುಲಭವಾಗಿ ಹಿಡಿಯಬಹುದಾದ ಕ್ಯಾಚ್ ಅನ್ನು ಕೈಚೆಲ್ಲಿದರು. ಅಷ್ಟೇ ಅಲ್ಲ, ಕೈಯಿಂದ ಜಾರಿದ ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್‌ಗೆ ಹೋಯಿತು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ; 61 ರನ್ ಅಂತರದ ಭರ್ಜರಿ ಜಯ!
ಈ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ ಮುಂದಿನ ಕಠಿಣ ಪಂದ್ಯಗಳಲ್ಲಿ ಇಂತಹ ಸಣ್ಣ ತಪ್ಪುಗಳು ತಂಡಕ್ಕೆ ದುಬಾರಿಯಾಗಬಹುದು ಎಂಬ ಕಾರಣಕ್ಕೆ ಹಾರ್ದಿಕ್ ಮತ್ತು ಸೂರ್ಯಕುಮಾರ್, ಕುಲ್ದೀಪ್ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ.
ನಾಯಕ ಸೂರ್ಯ ಹೇಳಿದ್ದೇನು?
ಪಂದ್ಯದ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ‘ನಾವು ಅಂದುಕೊಂಡಂತೆ ಆಡಿದ್ದೇವೆ. ಇಶಾನ್ ಕಿಶನ್ ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಫಾರ್ಮ್ ಅನ್ನು ಇಲ್ಲೂ ಮುಂದುವರಿಸಿದ್ದಾರೆ. ಇದೊಂದು ಸಮಗ್ರ ತಂಡದ ಪ್ರದರ್ಶನ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಧಿಕೃತವಾಗಿ ‘ಸೂಪರ್-8’ ಹಂತಕ್ಕೆ ಪ್ರವೇಶಿಸಿದೆ. ಇತ್ತ ಸೋಲನುಭವಿಸಿರುವ ಪಾಕಿಸ್ತಾನ, ಮುಂದಿನ ಹಂತಕ್ಕೇರಲು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇದನ್ನೂ ಓದಿ:ಪಿಸಿಬಿ ಅಧ್ಯಕ್ಷ ಒಬ್ಬ ಅನಕ್ಷರಸ್ಥ.. ಸೋತ ಬೆನ್ನಲ್ಲೇ ಆಟಗಾರರ ಮೇಲೆ ಉರಿದುಬಿದ್ದ ಅಖ್ತರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us