/newsfirstlive-kannada/media/media_files/2025/11/03/rohit_sharma_1-2025-11-03-08-42-11.jpg)
2023ರ ಏಕದಿನ ವಿಶ್ವಕಪ್ ಯಾರ್ ತಾನೇ ಮರೆಯೋಕೆ ಸಾಧ್ಯ ಹೇಳಿ? ತವರಿನಲ್ಲಿ ನಡೆದ ಮೆಗಾ ಟೂರ್ನಿಯಲ್ಲಿ, ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲೋ ಫೇವರಿಟ್ಸ್​ ಎನಿಸಿಕೊಂಡಿತ್ತು. ಲೀಗ್​ ಹಂತದಲ್ಲಿ ಒಂದೇ ಒಂದು ಸೋಲು ಕಾಣದ ಟೀಮ್ ಇಂಡಿಯಾ, ಫೈನಲ್​​ ಪಂದ್ಯದಲ್ಲಿ ಎಡಿತ್ತು. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಕನಸು ನುಚ್ಚು ನೂರು ಮಾಡಿತ್ತು. ಅಂದು ಇಡೀ ದೇಶವೇ, ಕಣ್ಣೀರಲ್ಲಿ ಮೊಳಗಿತ್ತು.
ರೋಹಿತ್​ಗೆ ಪದೇ ಪದೇ ಕಾಡ್ತಿರೋ ಆ ನೋವು ಯಾವುದು..?
2023ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ, ಅದ್ಭುತವಾಗಿ ತಂಡವನ್ನ ಮುನ್ನಡೆಸಿದ್ರು. ಆದ್ರೆ ಅಹ್ಮದಾಬಾದ್​ನಲ್ಲಿ ನಡೆದ ಫೈನಲ್​​​ ಪಂದ್ಯದಲ್ಲಿ ರೋಹಿತ್, ಎಡವಿದ್ರು. ಆಟಗಾರನಾಗಿ ಹಾಗೆ ನಾಯಕನಾಗಿ ರೋಹಿತ್, ಫೇಲ್ ಆದ್ರು. ವಿಶ್ವಕಪ್ ಫೈನಲ್ ಪಂದ್ಯದ ಸೋಲು, ರೋಹಿತ್​ರನ್ನ ಇಂದಿಗೂ ಪದೇ ಪದೇ ಕಾಡ್ತಿದೆ.
ಫೈನಲ್ ಪಂದ್ಯದಲ್ಲಿ ರೋಹಿತ್​​ ಶರ್ಮಾ, ದುರಾದೃಷ್ಟ ನಾಯಕನಾದ್ರು. ಪಂದ್ಯಕ್ಕೂ ಮುನ್ನವೆ ಟಾಸ್ ಸೋತು ಅರ್ಧ ಪಂದ್ಯ ಸೋತಿದ್ದ ರೋಹಿತ್​​​​ಗೆ, ನಂತರ ತಂಡದ ಪ್ರಮುಖ ಬ್ಯಾಟರ್​ಗಳು ಕೈಕೊಟ್ರು. ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಬ್ಯಾಟ್​ನಿಂದ ಕಾಂಟ್ರಿಬ್ಯೂಟ್ ಮಾಡಿದ್ರೆ, ಟೀಮ್ ಇಂಡಿಯಾ ಫೈಟಿಂಗ್ ಟಾರ್ಗೆಟ್ ಸೆಟ್ ಮಾಡಬಹುದಿತ್ತು. ಆದ್ರೆ ಹಾಗಗಲಿಲ್ಲ. ಆ ಸೋಲಿನ ನೋವನ್ನ ರೋಹಿತ್​ಗೆ ಮರೆಯಲು ಸಾಧ್ಯವಾಗ್ತಿಲ್ಲ.
ಇದನ್ನೂ ಓದಿ: ಧಾರವಾಡ ಯುವಕ ಕೊರಿಯನ್ ಗೇಮ್ಸ್ ನಿಂದ ಆತ್ಮಹತ್ಯೆ!? ಪೊಲೀಸರಿಂದ ಮುಂದುವರಿದ ತನಿಖೆ
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-1-2025-10-28-19-31-31.jpg)
ಇತ್ತೀಚಿಗೆ ಐಸಿಸಿ ಇವೆಂಟ್​ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, ತಮ್ಮ ನೋವು ಮತ್ತು ಕನಸನ್ನ ಹೊರಹಾಕಿದ್ದಾರೆ. 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲೋ ಅವಕಾಶ ನಮಗಿತ್ತು. ಆದ್ರೆ ನಾವು ಕೈ ಚೆಲ್ಲಿಕೊಂಡೆವು ಅಂತ, ಬೇಸರದಿಂದ ನುಡಿದಿದ್ರು. ಆದ್ರೆ ಮುಂದಿನ ಏಕದಿನ ವಿಶ್ವಕಪ್​ ಅನ್ನ ದೇಶಕ್ಕಾಗಿ ಗೆದ್ದೇ ಗೆಲ್ಲುತ್ತೇವೆ. ಇದು ನನ್ನ ಗುರಿ ಅಂತ ಮುಂಬೈಕರ್, ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.
ಹೌದು.. ನಾನು ಆಡಬೇಕು. ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲಬೇಕು ಅನ್ನೋದು ನನ್ನ ಗುರಿ. 50 ಓವರ್ ವಿಶ್ವಕಪ್ ನೋಡಿಯೇ ನಾನು ಬೆಳೆದಿದ್ದು. ನಾನು ಕ್ರಿಕೆಟ್ ಶುರುಮಾಡಿದಾಗ T20 ವರ್ಲ್ಡ್ಕಪ್ ಇರಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇರಲಿಲ್ಲ. ಐಪಿಎಲ್ ಟೂರ್ನಿ ಸಹ ಇರಲಿಲ್ಲ. ಏಕದಿನ ವಿಶ್ವಕಪ್ ನೋಡು ನೋಡುತ್ತಾ ಬೆಳೆದಿದ್ದೇನೆ. 4 ವರ್ಷಕ್ಕೊಮ್ಮೆ ಬರುವ ವಿಶ್ವಕಪ್ ಇದು. ಈ ಒಂದು ಕಪ್ಗೆ ಅಷ್ಟೊಂದು ಮಹತ್ವ ಇದೆ. ನನಗೆ ಆ ಟ್ರೋಫಿ ಬೇಕು. ನನ್ನ ಪವರ್, ಕೆಪಾಸಿಟಿ ಮತ್ತು ಹಾರ್ಡ್ವರ್ಕ್ನಿಂದ ಎಲ್ಲಾ ಪ್ರಯತ್ನ ಮಾಡ್ತೀನಿ.
ರೋಹಿತ್ ಶರ್ಮಾ, ಬ್ಯಾಟ್ಸ್ಮನ್
ಟೆಸ್ಟ್ ಮತ್ತು ಟಿ-20 ಫಾರ್ಮೆಟ್​​ಗೆ ನಿವೃತ್ತಿ ಘೋಷಿಸಿದ ರೋಹಿತ್, ಸದ್ಯ ಏಕದಿನ ಕ್ರಿಕೆಟ್​ ಮಾತ್ರ ಆಡ್ತಿದ್ದಾರೆ. ಇತ್ತೀಚಿಗೆ ಬಿಸಿಸಿಐ ಬಿಡುಗಡೆ ಮಾಡಿದ ಪ್ಲೇಯರ್ಸ್ ಕಾಂಟ್ರ್ಯಾಕ್ಟ್ ಲಿಸ್ಟ್​ನಲ್ಲಿ ರೋಹಿತ್, ಎ+ ಗ್ರೇಡ್​​ನಿಂದ ಬಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ರು. ಮತ್ತೊಂದೆಡೆ 2027ರ ಏಕದಿನ ವಿಶ್ವಕಪ್​ ವೇಳೆಗೆ ರೋಹಿತ್, ಒಳ್ಳೆ ಶೇಪ್​ನಲ್ಲಿ ಇರ್ತಾರೋ ಇಲ್ವೋ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ಆದ್ರೆ ರೋಹಿತ್, ವಿಶ್ವಕಪ್ ಗೆಲ್ಲೋ ಕನಸು ಹೊರಹಾಕಿ ಬಿಗ್​ಬಾಸ್​ಗಳಿಗೆ ತಾನು ರೆಡಿ ಅನ್ನೋ ಸಂದೇಶ ಕಳುಹಿಸಿದ್ದಾರೆ. ​​
ರೋಹಿತ್ ಶರ್ಮಾ ಸದ್ಯ ಏಕೈಕ ಫಾರ್ಮೆಟ್​​ಗೆ ಸಿಕ್ಟ್ ಆನ್​ ಆಗಿದ್ದಾರೆ. ಏಕದಿನ ವಿಶ್ವಕಪ್​​ವರೆಗೂ ರೋಹಿತ್ ODI ಫಾರ್ಮೆಟ್ ಆಡ್ತಾರೆ. ವಿಶ್ವಕಪ್ ವೇಳಗೆ ರೋಹಿತ್ 40 ವರ್ಷ ಆಸುಪಾಸುವಿನಲ್ಲಿ ಇರ್ತಾರೆ. ಟೀಮ್ ಇಂಡಿಯಾ ವಿಶ್ವಕಪ್ ಗೆದ್ರೆ, ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್​​ಗೂ ಗುಡ್​ಬೈ ಹೇಳ್ತಾರೆ. ಇದು ಸದ್ಯ ರೋಹಿತ್ ಶರ್ಮಾರ ಫ್ಯೂಚರ್ ಪ್ಲಾನ್ ಆಗಿದೆ.
ರೋಹಿತ್ ಹಳೆ ನೋವನ್ನ ಮರೆಯಬೇಕಾದ್ರೆ, 2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಇಲ್ದಿದ್ರೆ ಮುಂಬೈಕರ್ ವಿಶ್ವಕಪ್ ಸೋಲಿನ ನೋವು, ಶಾಶ್ವತವಾಗೇ ಉಳಿದುಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ: ಜಡೇಜಾಗೆ ಶಾಕ್ ಕೊಟ್ಟ ರಾಜಸ್ಥಾನ್; ಪರಾಗ್​ಗೆ ಪಟ್ಟ ಕಟ್ಟಿದ್ಯಾಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us