/newsfirstlive-kannada/media/media_files/2025/11/21/ravindra-jadeja-1-2025-11-21-13-25-11.jpg)
2025ರ ಐಪಿಎಲ್ ಸೀನ್​ನಲ್ಲಿ​​ ಕಳಪೆ ಪ್ರದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್​ ಇದೀಗ ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ. ಇಷ್ಟು ದಿನ ನಾಯಕತ್ವದ ಗೊಂದಲಕ್ಕೆ ಸಿಲುಕಿದ್ದ ರಾಯಲ್ಸ್, ಯುವ ನಾಯಕನಿಗೆ ಪಟ್ಟ ಕಟ್ಟಿದೆ. ಐಪಿಎಲ್ ಸೀಸನ್-19ಕ್ಕೂ ಮುನ್ನ ಭರ್ಜರಿ ಸಿದ್ಧತೆ ಆರಂಭಿಸಿದೆ. ಕಳೆದ ಸೀಸನ್​ನ ಕಹಿ ಘಟನೆ ಮರೆಯಲು ಹೊರಟಿದೆ.
ಮಾಜಿ ನಾಯಕ ಸಂಜು ಸ್ಯಾಮ್ಸನ್​​​​​​​, ಚೆನ್ನೈ ಸೂಪರ್​ಕಿಂಗ್ಸ್ ತಂಡಕ್ಕೆ ಟ್ರೇಡ್ ಮೂಲಕ ಡೀಲ್ ಆದ್ರು. ಸಂಜು ಬದಲಿಗೆ ತಂಡಕ್ಕೆ ಎಂಟ್ರಿ ಕೊಟ್ಟ ಆಲ್​ರೌಂಡರ್ ರವೀಂದ್ರ ಜಡೇಜಾಗೆ, ರಾಜಸ್ಥಾನ ಸಾರಥ್ಯ ನೀಡುತ್ತದೆ ಅಂತ ಹೇಳಲಾಗ್ತಿತ್ತು. ಆದ್ರೆ ಜಡ್ಡು ಆರ್​ಆರ್​ ತಂಡಕ್ಕೆ ಎಂಟ್ರಿ ಆಗ್ತಿದಂತೆ, ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್ ಸಹ, ನಾಯಕತ್ವದ ಮಹದಾಸೆಯನ್ನ ವ್ಯಕ್ತಪಡಿಸಿದ್ರು. ಇದ್ರಿಂದ ರಾಯಲ್ಸ್​ ಮಾಲೀಕರಿಗೆ, ತಂಡದ ಸಾರಥಿ ಆಯ್ಕೆಯಲ್ಲಿ ಗೊಂದಲ ಉಂಟಾಗಿತ್ತು. ಆದ್ರೀಗ ಆ ಎಲ್ಲಾ ಗೊಂದಲಗಳಿಗೂ ಫ್ರಾಂಚೈಸಿ ತೆರೆ ಎಳೆದಿದೆ.
ಇದನ್ನೂ ಓದಿ: ಧಾರವಾಡ ಯುವಕ ಕೊರಿಯನ್ ಗೇಮ್ಸ್ ನಿಂದ ಆತ್ಮಹತ್ಯೆ!? ಪೊಲೀಸರಿಂದ ಮುಂದುವರಿದ ತನಿಖೆ
/filters:format(webp)/newsfirstlive-kannada/media/post_attachments/wp-content/uploads/2025/03/riyan_parag.jpg)
ಮಿನಿ ಹರಾಜಿನ ಬಳಿಕ ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ ಮಾಲೀಕರಿಗೆ, ನಾಯಕನ ಆಯ್ಕೆಯೇ ದೊಡ್ಡ ಸವಾಲಾಗಿತ್ತು. ಅನುಭವಿ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ಧೃವ್ ಜುರೆಲ್..! ಈ ನಾಲ್ವರು ಕ್ಯಾಪ್ಟನ್ಸ್ ರೇಸ್​​ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಅಂತಿಮವಾಗಿ ರಾಜಸ್ಥಾನ್ ಫ್ರಾಂಚೈಸಿ, 24 ವರ್ಷದ ಯುವ ಆಲ್​ರೌಂಡರ್ ರಿಯಾನ್ ಪರಾಗ್​ಗೆ ಪಟ್ಟ ಕಟ್ಟಿ ಜವಾಬ್ದಾರಿಯನ್ನ ಕೈ ತೊಳೆದುಕೊಂಡಿದ್ದಾರೆ.
ಪರಾಗ್ ಪಾಸ್
ರಾಜಸ್ಥಾನ್ ರಾಯಲ್ಸ್​ ನಾಯಕನ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಕೋಚ್ ಕುಮಾರ್ ಸಂಗಾಕ್ಕರ ಮತ್ತು ಟೀಮ್ ಮ್ಯಾನೇಜ್ಮೆಂಟ್, ದೊಡ್ಡ ಪರೀಕ್ಷೆಯೇ ನಡೆಸಿತ್ತು. ಮೊದಲಿಗೆ ಕ್ಯಾಪ್ಟನ್ಸ್ ರೇಸ್​ನಲ್ಲಿದ್ದ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಮತ್ತು ಧೃವ್ ಜುರೆಲ್​ರನ್ನ ಒಬ್ಬೊಬ್ಬರಾಗಿ ಸಂದರ್ಶನ ಮಾಡಲಾಗಿತ್ತು. ಆದ್ರೆ ಅಂತಿಮವಾಗಿ ಕೋಚ್ ಸಂಗಾಕ್ಕರ, ಪರಾಗ್​​ ಕೈಗೆ ತಂಡದ ಪವರ್​​ನೀಡಿದ್ರು.
ಮಿನಿ ಹರಾಜಿಗೂ ಮುನ್ನ ಟ್ರೇಡ್ ಮೂಲಕ ಆರ್​ಆರ್​ ಫ್ರಾಂಚೈಸಿಗೆ ಎಂಟ್ರಿ ಕೊಟ್ಟಿದ್ದ ಜಡೇಜಾ, ಕ್ಯಾಪ್ಟನ್ ಆಗಲು ಸ್ಟ್ರಾಂಗ್ ಕಂಟೆಂಡರ್ ಆಗಿದ್ರು. ಆದ್ರೆ ಭಾರೀ ಲೆಕ್ಕಾಚಾರದ ಬಳಿಕ, ಜಡ್ಡುಗೆ ನಾಯಕತ್ವ ಮಿಸ್ ಆಗಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ಬಳಿಕ ಆರ್​ಆರ್​ ಸಾರಥಿಯಾಗಲು ಕನಸು ಕಂಡಿದ್ದ ಯಶಸ್ವಿ ಜೈಸ್ವಾಲ್ ಮತ್ತು ಧೃವ್ ಜುರೆಲ್ ಆಸೆಗೂ, ಆರ್​ಆರ್​ ಫ್ರಾಂಚೈಸಿ ತಣ್ಣೀರು ಎರಚಿದೆ.
ಪರಾಗ್​​​​​​​​​​​ ಕ್ಯಾಪ್ಟನ್ ಯಾಕೆ..?
24 ವರ್ಷದ ಪರಾಗ್, ಆರ್​ಆರ್​ ನಾಯಕನಾಗಲು ಹಲವು ಕಾರಣಗಳಿವೆ. ಕಳೆದ 7 ವರ್ಷಗಳಿಂದ ಆರ್​ಆರ್​ ಫ್ರಾಂಚೈಸಿ ಪರ ಆಡುತ್ತಿರುವ ರಿಯಾನ್ ಪರಾಗ್, ಸಂಜು ಸ್ಯಾಮ್ಸನ್​​ ಬಳಿಕ ನಾಯಕನಾಗಲು ಆಟೋಮ್ಯಾಟಿಕ್ ಚಾಯ್ಸ್ ಆಗಿದ್ರು. ಕಳೆದ ಐಪಿಎಲ್​ನಲ್ಲಿ ಸಂಜು ಅಲಭ್ಯತೆಯಲ್ಲಿ ಪರಾಗ್ ತಂಡವನ್ನ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಆನ್​ಫೀಲ್ಡ್​​ನಲ್ಲಿ ಪರಾಗ್ ಕನ್ಸಿಸ್ಟೆಂಟ್ ಪರ್ಫಾಮರ್ ಸಹ ಹೌದು. ಸದ್ಯ ಆರ್​ಆರ್​ ಮ್ಯಾನೇಜ್ಮೆಂಟ್​​, ತಂಡವನ್ನ ರೀಬಿಲ್ಡ್​​ ಮಾಡಲು ಹೊರಟಿದೆ. ಅಷ್ಟೇ ಅಲ್ಲ, ಯುವ ನಾಯಕನ ಮೇಲೆ ಫ್ರಾಂಚೈಸಿ ಲಾಂಗ್ ಟರ್ಮ್ ಇನ್ವೆಸ್ಟ್​ಮೆಂಟ್​ಗೆ ಮುಂದಾಗಿದೆ.
ರಿಯಾನ್ ಪರಾಗ್​ಗೆ ರಾಜಸ್ಥಾನ್ ತಂಡದ ಪಟ್ಟ ಕಟ್ಟಿರೋದು ಅತ್ಯುತ್ತಮ ಆಯ್ಕೆ. ಪರಾಗ್, ಸಿಕ್ಕಿರುವ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡು, ತಮ್ಮ ಮೇಲಿನ ನಂಬಿಕೆಯನ್ನ ಉಳಿಸಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us