/newsfirstlive-kannada/media/media_files/2025/12/23/gill-2-2025-12-23-08-36-29.jpg)
ತವರಿನಲ್ಲಿ ನಡೆಯೋ ಪ್ರತಿಷ್ಟಿತ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿ 3 ದಿನ ಆಯ್ತು. ಭವಿಷ್ಯದ ಆಲ್​​ ಫಾರ್ಮೆಟ್​ ಕ್ಯಾಪ್ಟನ್​ ಎಂದೇ ಬಿಂಬಿತವಾಗಿದ್ದ ಉಪನಾಯಕ ಶುಭ್​ಮನ್​ ಗಿಲ್​ಗೆ ಗೇಟ್​​ ಪಾಸ್​ ನೀಡಿದ್ದು, ಈಗಲೂ ಮಿಸ್ಟ್ರಿ ಆಗುಳಿದಿದೆ. ಫ್ಯಾನ್ಸ್​ ವಲಯದಲ್ಲಂತೂ ಈ ಸರ್​​ಪ್ರೈಸ್, ಶಾಕಿಂಗ್​​​ ನಿರ್ಧಾರಕ್ಕೆ ಕಾರಣ ಏನು ಅನ್ನೋ ಹುಡುಕಾಟ ಜೋರಾಗಿ ನಡೀತಾ ಇದೆ. ಇದೀಗ ಆ ಪ್ರಶ್ನೆಗೆ ಇಂಟರೆಸ್ಟಿಂಗ್​ ಉತ್ತರ ಸಿಕ್ಕಿದೆ.
ಅಗರ್ಕರ್​ ಆಟಕ್ಕೆ ಬ್ರೇಕ್​..!
ಟಿ20 ವಿಶ್ವಕಪ್​ಗೆ ಟೀಮ್​ ಅನೌನ್ಸ್​ಮೆಂಟ್​​ಗೂ ಮುನ್ನ ಮುಂಬೈ ಬಿಸಿಸಿಐ ಹೆಡ್​​ಕ್ವಾಟ್ರಸ್​​ನಲ್ಲಿ ಹೈವೋಲ್ಟೆಜ್​ ಸಭೆ ನಡೆದಿದ್ದು ನಿಮಗೆ ಗೊತ್ತು. ಆ ಸಭೆ ಆರಂಭಕ್ಕೂ ಮುನ್ನವೇ ವಿಶ್ವಕಪ್​ ಟೀಮ್​ ಫೈನಲ್​ ಆಗಿತ್ತು. ಚೀಫ್​ ಸೆಲೆಕ್ಟರ್ ಅಜಿತ್​ ಅಗರ್ಕರ್​ ಹಾಗೂ ಹೆಡ್​ಕೋಚ್​ ಗೌತಮ್​ ಗಂಭೀರ್​ ತಮಗೆ ಬೇಕಾದ ಆಟಗಾರರ ಲಿಸ್ಟ್​ ಫೈನಲ್​ ಮಾಡಿದ್ರು. ಆ ಅಂತಿಮ ಪಟ್ಟಿಯಲ್ಲಿ ಶುಭ್​ಮನ್​ ಗಿಲ್​ ಹೆಸರೂ ಇತ್ತು. ಎಂದಿನಂತೆ ಮೀಟಿಂಗ್​ನಲ್ಲಿ ತಮ್ಮ ಟೀಮ್​ ಅನೌನ್ಸ್​ ಮಾಡಿದ ಅಗರ್ಕರ್​​, ಅದನ್ನೆ ಫೈನಲ್​ ಮಾಡೋಕೆ ಹೊರಟಿದ್ರು. ಆದ್ರೆ, ಆದ್ರೆ, ಈ ಬಾರಿ ಅಂದುಕೊಂಡಿತೆ ಆಗಲಿಲ್ಲ. ಗಿಲ್​ ಆಯ್ಕೆಗೆ ಕಮಿಟಿಯ ಉಳಿದ ಮೇಬಂರ್ಸ್​ ಪ್ರಭಲ ವಿರೋಧ ವ್ಯಕ್ತಪಡಿಸಿದ್ರು. ಈ ವಿರೋಧದ ಮುಂದೆ ಅಗರ್ಕರ್​ ಆಟ ನಡಿಲಿಲ್ಲ.
ಇದನ್ನೂ ಓದಿ:ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಕೆ.ಗೌತಮ್ : 14 ವರ್ಷದ ಕ್ರಿಕೆಟ್ ಕೆರಿಯರ್ ಗೆ ವಿದಾಯ
/filters:format(webp)/newsfirstlive-kannada/media/media_files/2025/11/16/gill-2025-11-16-13-25-43.jpg)
ಮೀಟಿಂಗ್​ನಲ್ಲಿ ಅಗರ್ಕರ್​ಗೆ ಸೆಡ್ಡು ಹೊಡೆದಿದ್ದು ಯಾರು ಗೊತ್ತಾ.? ಸೆಲೆಕ್ಷನ್​ ಕಮಿಟಿಗೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಮಾಜಿ ಕ್ರಿಕೆಟಿಗರಾದ ಆರ್​​ಪಿ ಸಿಂಗ್, ಪ್ರಗ್ಯಾನ್​ ಓಜಾ. ಸತತ ವೈಫಲ್ಯ ಕಂಡಿದ್ರೂ ಕೂಡ ಅರ್ಗಕರ್​, ಶುಭ್​ಮನ್​ ಗಿಲ್​ನ ಬ್ಯಾಕ್​ ಮಾಡಿದ್ದನ್ನ ಇವರಿಬ್ಬರೇ ಪ್ರಶ್ನಿಸಿದ್ದು. ಇದಕ್ಕೆ ಉಳಿದ ಸದಸ್ಯರು ಕೂಡ ದನಿಗೂಡಿಸಿದ್ರು. ಪ್ರಭಲ ವಿರೋಧ ವ್ಯಕ್ತವಾದ ಬೇರೆ ದಾರಿಯಿಲ್ಲದೆ ಗಿಲ್​ನ ತಂಡದಿಂದ ಕೈ ಬಿಡಲಾಯ್ತು.
ಗಿಲ್​​ ಕನಸು ನುಚ್ಚುನೂರು..!
ತಾನು ವಿಶ್ವಕಪ್​ ತಂಡದಿಂದ ಡ್ರಾಪ್​ ಆಗ್ತೀನಿ ಅನ್ನೋ ಸುಳಿವು ಕೂಡ ಗಿಲ್​ಗೆ ಇರಲಿಲ್ಲ. 2024ರ ವಿಶ್ವಕಪ್​ ಟೂರ್ನಿಯಲ್ಲಿ ಆಡೋದನ್ನ ಮಿಸ್​ ಮಾಡಿಕೊಂಡಿದ್ದ ಗಿಲ್​, ತವರಿನಲ್ಲಿ ನಡೆಯೋ ಟೂರ್ನಿಯಲ್ಲಿ ಆಡ್ತೀನಿ ಅನ್ನೋ ದೊಡ್ಡ ಕನಸು ಕಾಣ್ತಿದ್ರು. ಒಂದು ಫೋನ್​ ಕಾಲ್​ ಕನಸನ್ನ ನುಚ್ಚು ನೂರು ಮಾಡಿ ಬಿಡ್ತು. ಸೆಲೆಕ್ಷನ್​ ಡಿಬೇಟ್​ ಮುಗಿದ ಬೆನ್ನಲ್ಲೇ ಗಿಲ್​ಗೆ ಕಾಲ್​ ಮಾಡಿದ ಅಗರ್ಕರ್​ YOU ARE DROPPED ಅನ್ನೋ 3 ಪದದಲ್ಲೇ ಸಂದೇಶ ರವಾನಿಸಿದ್ರು.
ಆಯ್ಕೆಗೆ ಮುಳುವಾದ ‘ಆಪ್ತ ಗೆಳೆಯ’..!
ಶುಭ್​ಮನ್​ ಗಿಲ್​ನ ಡ್ರಾಪ್​ ಮಾಡಿದ ಸೆಲೆಕ್ಷನ್​ ಅಂತಿಮವಾಗಿ ಮಣೆ ಹಾಕಿದ್ದು ವಿಕೆಟ್​ ಕೀಪರ್​​ ಬ್ಯಾಟರ್​ ಇಶಾನ್​ ಕಿಶನ್​ಗೆ. 2023ರಲ್ಲಿ ಟೀಮ್​ ಇಂಡಿಯಾದಿಂದ ಹೊರಬಿದ್ದಿದ್ದ ಇಶಾನ್ ಕಿಶನ್​, ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗ್ತಾರೆ ಅಂತಾ ಯಾರೂ ಕೂಡ ಊಹೆ ಮಾಡಿರಲಿಲ್ಲ. ಆದ್ರೆ ಗಿಲ್​ಗೆ ಶಾಕ್​ ನೀಡಿದ ಸೆಲೆಕ್ಷನ್​ ಕಮಿಟಿ ಇಶಾನ್​ ಕಿಶನ್​ಗೆ ಸರ್​ಪ್ರೈಸ್​ ನೀಡ್ತು. ಕಿಶನ್​ ಎಂಟ್ರಿಯ ಹಿಂದಿರೋದು ಯಾರು ಗೊತ್ತಾ.? ಪ್ರಗ್ಯಾನ್​ ಓಜಾ & ಆರ್​ಪಿ ಸಿಂಗ್.
ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ವಿಚಾರ : ಪರಿಶೀಲನೆಗೆ ಸಮಿತಿ ರಚಿಸಿದ ಗೃಹ ಸಚಿವ ಪರಮೇಶ್ವರ್
/filters:format(webp)/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
ಪುಣೆಯಲ್ಲಿ ನಡೆದ ಮುಷ್ತಾಕ್ ಅಲಿ T20ಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಕೇವಲ 45 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕಿಶನ್, ದಾಖಲೆ ನಿರ್ಮಿಸಿದ್ರು. 206ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ಗಳಿಸಿದ್ದ ಕಿಶನ್, 49 ಎಸೆತಗಳಲ್ಲಿ 101 ರನ್​​ ಕಲೆ ಹಾಕಿದ್ರು. 10 ಮೆಗಾ ಸಿಕ್ಸರ್ ಮತ್ತು 6 ಬೌಂಡರಿಗಳನ್ನ ಬಾರಿಸಿದ್ರು. ಈ ಇನ್ನಿಂಗ್ಸೇ ನೋಡಿ ಕಿಶನ್​ ಕರಿಯರ್​ಗೆ ಮರುಜೀವ ನೀಡಿದ್ದು.
ಸೆಲೆಕ್ಷನ್​ ಕಮಿಟಿ ಸದಸ್ಯರಾದ ಆರ್​​.ಪಿ ಸಿಂಗ್​ ಮತ್ತು ಪ್ರಗ್ಯಾನ್ ಓಜಾ ಈ ಸ್ಪೋಟಕ ಆಟವನ್ನ ಅಂದು ಸ್ಟೇಡಿಯಂನಿಂದಲೇ ಕಣ್ತುಂಬಿಕೊಂಡಿದ್ರು. ಇಶಾನ್​ ಕಿಶನ್​ ಸಿಡಿಲಬ್ಬರದ ಆಟಕ್ಕೆ ಮಾರು ಹೋದ ಸೆಲೆಕ್ಟರ್ಸ್, ಸೆಲೆಕ್ಷನ್​ ಮೀಟಿಂಗ್​ನಲ್ಲಿ ಕಿಶನ್​ ಪರ ಬ್ಯಾಟ್​ ಬೀಸಿದ್ರು. ಶುಭ್​ಮನ್ ಗಿಲ್​ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ, ಇಶಾನ್​ ಕಿಶನ್​ಗೆ ಚಾನ್ಸ್​ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಒಂದೇ ಒಂದು ಫೋನ್​ ಕಾಲ್​ ಗಿಲ್​ ಕನಸನ್ನ ಛಿದ್ರ ಮಾಡಿದ್ರೆ, ಒಂದೇ ಒಂದು ಇನ್ನಿಂಗ್ಸ್​ ಇಶಾನ್​ ಕಿಶನ್​ ಕರಿಯರ್​ಗೆ ಮರುಜೀವ ನೀಡಿ ಬಿಡ್ತು. ಬಹುಶಃ ಸೌತ್​ ಆಫ್ರಿಕಾ ಸರಣಿಯಲ್ಲಿ ಗಿಲ್​ ಹೀಗೆ ಒಂದು ಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರೆ ತಂಡದಲ್ಲೇ ಉಳಿದುಕೊಳ್ತಿದ್ರು ಅನ್ಸುತ್ತೆ.
ಇದನ್ನೂ ಓದಿ: ಟಿ20 ವಿಶ್ವಕಪ್ ತಂಡದಿಂದ ಗಿಲ್​ನ ಹೊರಗಿಟ್ಟ ಕಾರಣ ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us