ಟಿ20 ವಿಶ್ವಕಪ್ ತಂಡದಿಂದ ಗಿಲ್​ನ ಹೊರಗಿಟ್ಟ ಕಾರಣ ರಿವೀಲ್..!

ಪ್ರತಿಷ್ಟಿತ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಳೆದುತೂಗಿ ಲೆಕ್ಕಾಚಾರ ಹಾಕಿರೋ ಸೆಲೆಕ್ಷನ್​ ಕಮಿಟಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಇಷ್ಟು ತಂಡದ ವೈಸ್​ ಕ್ಯಾಪ್ಟನ್​ ಆಗಿದ್ದ ಶುಭ್​ಮನ್​​ ಗಿಲ್​ನ ಡ್ರಾಪ್​ ಮಾಡಿ​ ಶಾಕ್​ ಕೊಟ್ಟಿದೆ. ವಿಶ್ವಕಪ್​ ಆಡೋ ಅವಕಾಶ ಮಾತ್ರವಲ್ಲ..

author-image
Ganesh Kerekuli
Gambhir and Gill
Advertisment
  • ವೈಸ್​ ಕ್ಯಾಪ್ಟನ್ ಶುಭ್​ಮನ್​ಗೆ ಸೆಲೆಕ್ಟರ್ಸ್​ ಶಾಕ್​
  • ವಿಶ್ವಕಪ್​ ಆಡೋ ಶುಭ್​ಮನ್ ಕನಸು ಭಗ್ನ
  • ಲಕ್ನೋದಲ್ಲೇ ನಿರ್ಧಾರವಾಗಿತ್ತು ಗಿಲ್​ ತಲೆದಂಡ

ಪ್ರತಿಷ್ಟಿತ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಅಳೆದುತೂಗಿ ಲೆಕ್ಕಾಚಾರ ಹಾಕಿರೋ ಸೆಲೆಕ್ಷನ್​ ಕಮಿಟಿ ಬಲಿಷ್ಠ ತಂಡವನ್ನೇ ಕಟ್ಟಿದೆ. ಇಷ್ಟು ತಂಡದ ವೈಸ್​ ಕ್ಯಾಪ್ಟನ್​ ಆಗಿದ್ದ ಶುಭ್​ಮನ್​​ ಗಿಲ್​ನ ಡ್ರಾಪ್​ ಮಾಡಿ​ ಶಾಕ್​ ಕೊಟ್ಟಿದೆ. ವಿಶ್ವಕಪ್​ ಆಡೋ ಅವಕಾಶ ಮಾತ್ರವಲ್ಲ.. ಇದ್ರೊಂದಿಗೆ ಶುಭ್​ಮನ್​ ಗಿಲ್​ ಕಂಡಿದ್ದ ಅತಿ ದೊಡ್ಡ ಕನಸೂ ನುಚ್ಚು ನೂರಾಗಿದೆ. 

ಪ್ರತಿಷ್ಠಿತ ಟಿ20 ವಿಶ್ವಕಪ್​ ಟೂರ್ನಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಸೌತ್​ ಆಫ್ರಿಕಾ ಸರಣಿಯಲ್ಲಿ ಆಡಿದ ಬಹುತೇಕ ಆಟಗಾರರಿಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆದ್ರೆ, ಒಂದು ಅಚ್ಚರಿಯ ಹಾಗೂ ಶಾಕಿಂಗ್​ ನಿರ್ಧಾರವನ್ನ ಸೆಲೆಕ್ಷನ್​ ಕಮಿಟಿ ತೆಗೆದುಕೊಂಡಿದೆ. ಟೀಮ್​ ಅನೌನ್ಸ್​ಮೆಂಟ್​ಗೂ ಮುನ್ನ ಕ್ರಿಕೆಟ್​ ಪಂಡಿತರು, ಹಲವು ಮಾಜಿ ಕ್ರಿಕೆಟರ್ಸ್​, ಅಭಿಮಾನಿಗಳು ಎಲ್ಲಾ ಏನು ಪ್ರಿಡಿಕ್ಷನ್​ ಮಾಡಿದ್ರೂ ಆ ಪ್ರಿಡಿಕ್ಷನ್ನೇ ತಲೆ ಕೆಳಗಾಗಿದೆ.

ಇದನ್ನೂ ಓದಿ: ವಿಶ್ವಕಪ್​​ಗೆ ತಂಡ ಪ್ರಕಟ.. ಯಾರಿಗೆ ಏನು ಜವಾಬ್ದಾರಿ..? 

Gill (1)

ವೈಸ್​ ಕ್ಯಾಪ್ಟನ್ ಗಿಲ್​ಗೆ ಸೆಲೆಕ್ಟರ್ಸ್​ ಶಾಕ್

ವಿಶ್ವಕಪ್​ ಸೆಲೆಕ್ಷನ್​ ಮೀಟಿಂಗ್​ನಲ್ಲಿ ಶುಭ್​ಮನ್ ಗಿಲ್​ ಆಯ್ಕೆಗೆ ಸಂಭಂಧಿಸಿದಂತೆ ಹಾಟ್​ ಡಿಬೆಟ್​ ನಡೆದಿದೆ. ಸೆಕ್ರೆಟರಿ ದೇವಜಿತ್ ಸೈಕಿಯಾ, ಚೀಫ್​ ಸೆಲೆಕ್ಟರ್​​ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಟೀಮ್ ಹಾಗೂ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಗಿಲ್ ಆಯ್ಕೆ ವಿಚಾರದಲ್ಲಿ ತೀವ್ರವಾದ ಚರ್ಚೆ ನಡೆಸಿದ್ದಾರೆ. ಅಂತಿಮವಾಗಿ ಕಠಿಣ ನಿರ್ಧಾರ ತೆಗೆದುಕೊಂಡು ವೈಸ್​ ಕ್ಯಾಪ್ಟನ್​ ಶುಭ್​ಮನ್​ ಗಿಲ್​ಗೆ ಶಾಕ್​ ಕೊಟ್ಟಿದ್ದಾರೆ. ವಿಶ್ವಕಪ್​ ಆಡೋ ಶುಭ್​ಮನ್​ ಗಿಲ್ ಕನಸು ನುಚ್ಚು ನೂರಾಗಿದೆ. 

15 ಆಟಗಾರರನ್ನ ಆಯ್ಕೆ ಮಾಡಿದಾಗ ಯಾರಾದ್ರೂ ಮಿಸ್​ ಆಗ್ತಾರೆ. ದುರಾದೃಷ್ಟವಶಾತ್​ ಈ ಹಂತದಲ್ಲಿ ಶುಭ್​ಮನ್ ಗಿಲ್ ಡ್ರಾಪ್ ಆಗಿದ್ದಾರೆ​. ಹಾಗಂತ ಆತ ಉತ್ತಮ ಆಟಗಾರ ಅಲ್ಲ ಅಂತಲ್ಲ. 
ಅಜಿತ್​ ಅಗರ್ಕರ್​, ಚೀಫ್​ ಸೆಲೆಕ್ಟರ್​​

ಗಿಲ್​ ತಲೆದಂಡ

ಮುಂಬೈನಲ್ಲಿ ನಿನ್ನೆ ನಡೆದ ಮೀಟಿಂಗ್ ಅಲ್ಲ.. ಸೌತ್​ ಆಫ್ರಿಕಾ ವಿರುದ್ಧ ಲಕ್ನೋ ಟಿ20 ಪಂದ್ಯದ ವೇಳೆಯೇ ಗಿಲ್​ ಡ್ರಾಪ್​ ಮಾಡೋ ನಿರ್ಧಾರ ಮ್ಯಾನೇಜ್​ಮೆಂಟ್​ ವಲಯದಲ್ಲಿ ಆಗಿತ್ತು. ಈ ಕಾರಣದಿಂದಲೇ ಕಾಲಿನ ಇಂಜುರಿಯ ಕುಂಟು ನೆಪ ಹೇಳಿ ಪಂದ್ಯದ ಆರಂಭಕ್ಕೂ ಮುನ್ನವೇ ರೋಲ್ಡ್​ ಔಟ್​ ಮಾಡಲಾಗಿತ್ತು. ನಂತರದ 5ನೇ ಟಿ20 ಪಂದ್ಯದಲ್ಲೂ ಗಿಲ್​ನ ರೋಲ್ಡ್​ ಔಟ್​​ ಮಾಡಿ ಸಂಜು ಸ್ಯಾಮ್ಸನ್​ಗೆ ಚಾನ್ಸ್​ ನೀಡಲಾಯ್ತು. ಕಾಲಿನ ಇಂಜುರಿಗೆ ತುತ್ತಾಗಿ ಪಂದ್ಯದಿಂದ ಹೊರಬಿದ್ರೂ ಗಿಲ್​ ಅರಾಮಾಗಿ ಓಡಾಡಿಕೊಂಡು ವಾಟರ್​ ಸಪ್ಲೆ ಮಾಡ್ತಾ ಇದ್ರು. ಇದೇ ವಿಶ್ವಕಪ್​ ತಂಡದಿಂದ ಡ್ರಾಪ್ ಮಾಡೋ ಸೂಚನೆ ನೀಡಿತ್ತು. 

ಸೌತ್​ ಆಫ್ರಿಕಾ ಸರಣಿ ಶುಭ್​ಮನ್​ ಗಿಲ್ ಪಾಲಿಗೆ ಡಿ ಆರ್​​ ಡೈ ಸರಣಿಯಾಗಿತ್ತು. ಸತತ ವೈಫಲ್ಯ ಕಂಡಿದ್ದ ಗಿಲ್​ಗೆ ಸೆಲೆಕ್ಷನ್​ ಮಾಡಿದಾಗಲೇ ಈ ಸರಣಿಯೇ ಲಾಸ್ಟ್​ ಎಂದು ಮ್ಯಾನೇಜ್​ಮೆಂಟ್​​ ವಾರ್ನ್​ ಮಾಡಿತ್ತು. ಸೌತ್​ ಆಫ್ರಿಕಾ ವಿರುದ್ಧದ ಸಿಡಿದೆದ್ರೆ ಮಾತ್ರ ಸ್ಥಾನ ಸೇಫ್ ಎಂಬ ಎಚ್ಚರಿಕೆಯನ್ನ ನೀಡಲಾಗಿತ್ತು. ಆದ್ರೆ ಶುಭ್​ಮನ್​ ಸಿಡಿದೇಳಲೆ ಇಲ್ಲ. ಮೊದಲ ಪಂದ್ಯದಲ್ಲಿ 4 ರನ್​ಗಳಿಸಿದ ಗಿಲ್, 2ನೇ ಮ್ಯಾಚ್​ನಲ್ಲಿ ಡಕೌಟ್​ ಆದ್ರು. 3ನೇ ಪಂದ್ಯದಲ್ಲಿ ಸ್ಲೋ ಬ್ಯಾಟಿಂಗ್​ ನಡೆಸಿ 28 ಎಸೆತಕ್ಕೆ 28 ರನ್​ಗಳಿಸಿದಾಗಲೇ ಗಿಲ್​ ಟಿ20 ವಿಶ್ವಕಪ್​ ಡೋರ್​​ ಕ್ಲೋಸ್​ ಆಗಿತ್ತು. 

ಇದನ್ನೂ ಓದಿ: ನೈಟ್ ಶಿಫ್ಟ್ ಕೆಲಸ ಡೇಂಜರ್​.. ಆತಂಕಕಾರಿ ವಿಷಯ ಬಿಚ್ಚಿಟ್ಟ ಹೊಸ ಸಂಶೋಧನೆ..!

Suryakumar_Gill_IndvsAus

ನಿಜ ಹೇಳಬೇಕಂದ್ರೆ ಶುಭ್​ಮನ್ ಗಿಲ್​ ತಮಗೆ ಸಿಕ್ಕಿದ್ದ 2ನೇ ಚಾನ್ಸ್​ನಲ್ಲೂ ಫೇಲ್​ ಆಗಿದ್ದಾರೆ. 2024ರ ಜುಲೈ 30 ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದ ಗಿಲ್​, ಆ ಬಳಿಕ ಸುದೀರ್ಘ ಕಾಲ ಫಾರ್ಮೆಟ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಾರಿಯ ಏಷ್ಯಾಕಪ್​ ತಂಡಕ್ಕೆ ಅಚ್ಚರಿಯ ರೀತಿಯಲ್ಲಿ ಎಂಟ್ರಿಕೊಟ್ಟ ಶುಭ್​ಮನ್ ಗಿಲ್​, ಉಪನಾಯಕನ ಪಟ್ಟವನ್ನೂ ಪಡೆದುಕೊಂಡಿದ್ರು. ಆದ್ರೆ, ಮ್ಯಾನೇಜ್​ಮೆಂಟ್​ & ಸೆಲೆಕ್ಟರ್ಸ್​ ಇಟ್ಟಿದ್ದ ನಿರೀಕ್ಷೆಯನ್ನ ಹುಸಿಗೊಳಿಸಿದ್ರು. ಸೆಕೆಂಡ್​ ಚಾನ್ಸ್​ನಲ್ಲಿ 15 ಪಂದ್ಯ ಆಡಿದ ಶುಭ್​ಮನ್​ ಕೇವಲ 24.25ರ ಸರಾಸರಿಯಲ್ಲಿ ಜಸ್ಟ್​ 291 ರನ್​ಗಳಿಸಿ ನಿರಾಸೆ ಮೂಡಿಸಿದ್ರು. ಒಂದೇ ಒಂದು ಅರ್ಧಶತಕ ಸಿಡಿಸೋಕೂ ಗಿಲ್​ ಕೈಯಲ್ಲಿ ಆಗಲಿಲ್ಲ. 

2024ರ ಟಿ20 ವಿಶ್ವಕಪ್​ನಿಂದ ಡ್ರಾಪ್​ ಆಗಿದ್ದ ಗಿಲ್​, 2026ರ ವಿಶ್ವಕಪ್​ನಿಂದಲೂ ಹೊರಬಿದ್ದಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ, ಗಿಲ್​ಗೆ​ ಮತ್ತೆ ಟಿ20 ತಂಡದ ಡೋರ್​​ ಓಪನ್​ ಆಗೋದು ಅನುಮಾನವೇ.! ಓಪನರ್​ ಸ್ಥಾನಕ್ಕೆ ಅಷ್ಟು ಪೈಪೋಟಿಯಿದೆ. ಗಿಲ್​ ಬ್ಯಾಟಿಂಗ್​ ಸ್ಟೈಲ್​ ಸದ್ಯದ ಟೀಮ್ ಇಂಡಿಯಾ ಅಪ್ರೋಚ್​ಗೆ ಹೊಂದಿಕೆಯಾಗ್ತಾನೂ ಇಲ್ಲ. ಯುವ ಆಟಗಾರರು ಅಗ್ರೆಸ್ಸಿವ್​ ಆಟವಾಡಿ ರನ್​ ಹೊಳೆ ಹರಿಸಿದ್ರೆ, ಗಿಲ್​ ಒಲ್ಡ್​​ ಸ್ಕೂಲ್ ಕ್ರಿಕೆಟ್ ಆಡ್ತಾರೆ. ಹೀಗಾಗಿ ಮತ್ತೆ ಚಾನ್ಸ್​ ಸಿಗೋದು ಡೌಟೇ.!

ಟೆಸ್ಟ್​ ಹಾಗೂ ಏಕದಿನ ತಂಡದ ನಾಯಕನಾಗಿರೋ ಗಿಲ್​, ಮುಂದೆ ಟಿ20 ತಂಡಕ್ಕೂ ಕ್ಯಾಪ್ಟನ್ ಆಗೋ ಕನಸು ಕಂಡಿದ್ರು. ಬಿಸಿಸಿಐ ವಲಯದಲ್ಲೂ ಗಿಲ್​ಗೆ ನಾಯಕತ್ವ ನೀಡಲು ತಯಾರಿ ನಡೆದಿತ್ತು. ಟಿ20 ವಿಶ್ವಕಪ್​ ಬಳಿಕ ಸೂರ್ಯಕುಮಾರ್​ ಕೆಳಗಿಳಿಸಿ, ಟಿ20 ನಾಯಕತ್ವ ನೀಡಲು ಬಿಸಿಸಿಐ ಸಜ್ಜಾಗಿತ್ತು. ಈ ಕಾರಣದಿಂದಲೇ ವೈಸ್​ ಕಾಪ್ಟನ್​ ಪಟ್ಟ ಕಟ್ಟಿತ್ತು. ಆದ್ರೆ, ಈಗ ನೋಡಿದ್ರೆ, ತಂಡದಲ್ಲಿ ಸ್ಥಾನವೇ ಸಿಕ್ಕಿಲ್ಲ. ಮೂರು ಮಾದರಿಗೆ ನಾಯಕನಾಗೋ ಶುಭ್​ಮನ್​ ಗಿಲ್​ ಕನಸೂ ಇದ್ರೊಂದಿಗೆ ಕೊಚ್ಚಿ ಹೋಗಿದೆ. 

ಇದನ್ನೂ ಓದಿ: ದಕ್ಷಿಣ ಭಾರತದ ಅತಿದೊಡ್ಡ ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಾಂಕ ನಿಗದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shubman Gill T20I T20 world cup team india squad
Advertisment