/newsfirstlive-kannada/media/media_files/2025/10/25/rohit-sharma-3-2025-10-25-15-26-45.jpg)
ರೋಹಿತ್​ ಶರ್ಮಾ ಮುಂಬೈ ಕಾ ರಾಜ ಮಾತ್ರವಲ್ಲ.. ಒನ್​​ ಡೇ ಕ್ರಿಕೆಟ್​​ಗೂ ರಾಜ..! 38ನೇ ವರ್ಷಕ್ಕೆ ರೋಹಿತ್​ ಶರ್ಮಾ ಅಂತಾ ಔಟ್​ ಸ್ಟ್ಯಾಂಡಿಂಗ್​ ಸಾಧನೆ ಮಾಡಿದ್ದಾರೆ. ಈ ಸಾಧನೆ 2027 ಏಕದಿನ ವಿಶ್ವಕಪ್​​ ಆಡೋ ಕನಸಿಗೂ ನೀರೆರೆದಿದೆ. ರಿಟೈರ್​ಮೆಂಟ್​ ಬಗ್ಗೆ ಮಾತನಾಡಿದವರು, ಸೈಡ್​ಲೈನ್​ ತಂತ್ರ ಹೆಣೆದವರು ಎಲ್ಲರಿಗೂ ಹಿಟ್​​ಮ್ಯಾನ್​​ ತನ್ನ ಸಾಧನೆಯಿಂದಲೇ ಸ್ಟ್ರೇಟ್​ ಹಿಟ್​ ಬಾರಿಸಿದ್ದಾರೆ.
ರಿಟೈರ್​ಮೆಂಟ್​ನ ರೂಮರ್ಸ್, ಬಿಸಿಸಿಐನ ಸೈಡ್​ಲೈನ್​ ತಂತ್ರ, ಎಕ್ಸ್​​ಪರ್ಟ್​​​ಗಳ ಟೀಕೆ-ಟಿಪ್ಪಣಿಗಳು, ನಾಯಕತ್ವದಿಂದ ಗೇಟ್​ಪಾಸ್​.. ಕಳೆದೊಂದು ತಿಂಗಳಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ವಿರುದ್ಧ ನಡೆದಿದ್ದು ಒಂದಾ.? ಎರಡಾ.? ಪ್ರತಿದಿನ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಹೆಡ್​​ಲೈನ್​ ಆಗಿದ್ರು. ಇವೆಲ್ಲವಕ್ಕೂ ಹೋಲ್​ಸೆಲ್​ ಆಗಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಸೂಪರ್ ಹಿಟ್​ ಆಟದಿಂದಲೇ ಆನ್ಸರ್​ ಕೊಟ್ಟಿದ್ದಾರೆ. ಕಾಂಗರೂಗಳ ನಾಡಲ್ಲಿ ಕಾಂಗರೂಗಳನ್ನೇ ಬೇಟೆಯಾಡಿದ ಮುಂಬೈಕರ್​​, ಕ್ರಿಕೆಟ್​ ಲೋಕವನ್ನೇ ನಿಬ್ಬೆರಗಾಗಿಸಿದ್ದಾರೆ.
ಇದನ್ನೂ ಓದಿ: ಮೊದಲ ಪಂದ್ಯ ಮಳೆಗೆ ಗೋವಿಂದ.. ಎರಡನೇ ಮ್ಯಾಚ್​ ಹೀನಾಯವಾಗಿ ಸೋತ ಸೂರ್ಯ ಪಡೆ..!
/filters:format(webp)/newsfirstlive-kannada/media/media_files/2025/10/27/kohli-rohit-2025-10-27-18-25-48.jpg)
ಏಕದಿನ ಕ್ರಿಕೆಟ್​​ಗೆ ರೋಹಿತ್​ ಶರ್ಮಾ ‘ಬಾಸ್​’
ಚಾಂಪಿಯನ್ಸ್​ ಟ್ರೋಫಿ ಬಳಿಕ ಅಂದ್ರೆ 7 ತಿಂಗಳ ಬಳಿಕ ಬ್ಲ್ಯೂ ಜೆರ್ಸಿ ತೊಟ್ಟು ಕಣಕ್ಕಿಳಿಯಲು ರೆಡಿಯಾಗಿದ್ದ ರೋಹಿತ್​ ಶರ್ಮಾ ಪಾಲಿಗೆ ಅಸ್ಟ್ರೇಲಿಯಾ ಪ್ರವಾಸ ಅಗ್ನಿಪರೀಕ್ಷೆಯ ಕಣವಾಗಿತ್ತು. ಡು ಆರ್​ ಡೈ ಸರಣಿಯಲ್ಲಿ ಸಾಮರ್ಥ್ಯ ನಿರೂಪಿಸಲು ಪಣತೊಟ್ಟು ಆಸಿಸ್​ ಫ್ಲೈಟ್​ ಹತ್ತಿದ ರೋಹಿತ್​ ಶರ್ಮಾ ಅಂದುಕೊಂಡಿದ್ದನ್ನ ಸಾಧಿಸಿಯೇ ವಾಪಾಸ್ಸಾಗಿರೋದು. ಮೊದಲ ಪಂದ್ಯದಲ್ಲಿ ಫ್ಲಾಪ್​ ಆದ ರೋಹಿತ್​, 2ನೇ ಪಂದ್ಯದಲ್ಲಿ ಹಾಫ್​ ಸೆಂಚುರಿ ಚಚ್ಚಿದ್ರು. 3ನೇ ಮ್ಯಾಚ್​ನಲ್ಲಿ ಸಾಲಿಡ್​ ಶತಕ ಸಿಡಿಸಿದ ಹಿಟ್​ಮ್ಯಾನ್​ ಏಕದಿನ ಕ್ರಿಕೆಟ್​ಗೆ ಬಾಸ್​ ಆಗಿ ಹೊರಹೊಮ್ಮಿದ್ದಾರೆ.
ಏಕದಿನದಲ್ಲಿ ನಂ.1 ಪಟ್ಟ
ಆಸ್ಟ್ರೇಲಿಯಾದಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ ರೋಹಿತ್​ ಶರ್ಮಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಕದಿನ ಱಂಕಿಂಗ್​ ಪಟ್ಟಿಯಲ್ಲಿ ಮುಂಬೈ ಕಾ ರಾಜ ರೋಹಿತ್​ ಶರ್ಮಾ ನಂಬರ್​ 1 ಪಟ್ಟವೇರಿದ್ದಾರೆ. ಸುದೀರ್ಘ 18 ವರ್ಷಗಳ ಒನ್​ ಡೇ ಕ್ರಿಕೆಟ್​ ಕರಿಯರ್​ನಲ್ಲಿ ಇದೇ ಮೊದಲ ಬಾರಿಗೆ ರೋಹಿತ್​​ ನಂಬರ್​ 1 ಪಟ್ಟವೇರಿದ್ದಾರೆ. ರೋಹಿತ್​ ಶರ್ಮಾ ವಯಸ್ಸೀಗ 38 ವರ್ಷ 183 ದಿನ.. ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಈ ಹಿರಿಯ ವಯಸ್ಸಿಗೆ ಱಂಕಿಂಗ್​​ನಲ್ಲಿ ನಂಬರ್​ 1 ಪಟ್ಟವನ್ನೇರಿದ ಮೊದಲ ಕ್ರಿಕೆಟಿಗ ರೋಹಿತ್​ ಶರ್ಮಾ.! 37 ವರ್ಷ 230 ದಿನಕ್ಕೆ ವಿವಿಎನ್​ ರಿಚರ್ಡ್​​ ನಂಬರ್​ 1 ಸ್ಥಾನವೇರಿದ್ದು ಈ ಹಿಂದಿನ ದಾಖಲೆಯಾಗಿತ್ತು.
5ನೇ ಭಾರತೀಯ ಕ್ರಿಕೆಟಿಗ
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್​ ಶರ್ಮಾ 724ರ ರೇಟಿಂಗ್ಸ್​ ಹೊಂದಿದ್ರು. ಇದೀಗ 730ರ ರೇಟಿಂಗ್ಸ್​ನೊಂದಿಗೆ ನಂಬರ್​ 1 ಸ್ಥಾನವನ್ನೇರಿದ್ದಾರೆ. ಒನ್​ ಡೇ ಕ್ಯಾಪ್ಟನ್​ ಶುಭ್​ಮನ್​ ಗಿಲ್​ನೇ ಹಿಂದಿಕ್ಕಿದ್ದಾರೆ. ಇದ್ರೊಂದಿಗೆ ನಂಬರ್​ 1 ಪಟ್ಟವೇರಿದ 5ನೇ ಭಾರತೀಯ ಕ್ರಿಕೆಟರ್​​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಚಿನ್ ತೆಂಡುಲ್ಕರ್​, ಎಮ್.ಎಸ್​ ಧೋನಿ, ವಿರಾಟ್​ ಕೊಹ್ಲಿ, ಶುಭ್​ಮನ್​ ಗಿಲ್ ಬಳಿಕ ಏಕದಿನ ಕ್ರಿಕೆಟ್​ನ ಸಿಂಹಾಸನವನ್ನ ಹಿಟ್​ಮ್ಯಾನ್​ ಅಲಂಕರಿಸಿದ್ದಾರೆ.
ಪರ್ತ್​​​ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ವೈಫಲ್ಯ ಅನುಭವಿಸಿದ್ದೇ ತಡ ರೋಹಿತ್​ ಕಥೆ ಮುಗಿದೆ ಹೋಯ್ತು ಅಂದವರೆಸ್ಟೋ. ಆ ಬಳಿಕ 2 ಪಂದ್ಯದಲ್ಲಿ ಸೂಪರ್ಬ್​​ ಪರ್ಫಾಮೆನ್ಸ್​​ ನೀಡಿದ ಬಳಿಕ ಆ ಸುದ್ದಿ ತಣ್ಣಗಾಗಿದೆ ಬಿಡಿ. ಅಸಲಿಗೆ ಈ ವರ್ಷದಲ್ಲಿ ರೋಹಿತ್​ ಶರ್ಮಾ ವೈಫಲ್ಯ ಅನುಭವಿಸಿರೋದು ಕೆಲವೇ ಕೆಲವು ಪಂದ್ಯಗಳಲ್ಲಿ ಮಾತ್ರ. 2025 ಭಾರತದ ಪರ ಏಕದಿನದಲ್ಲಿ ಅತಿ ಹೆಚ್ಚು ರನ್​ಗಳಿಸಿರೋದೆ ಇದಕ್ಕೆ ಸಾಕ್ಷಿ. ವಿಶ್ವ ಕ್ರಿಕೆಟ್​ನಲ್ಲಿ ಈ ವರ್ಷ ಹೆಚ್ಚು ರನ್​ಗಳಿಸಿರೋ 7ನೇ ಬ್ಯಾಟ್ಸ್​ಮನ್​ ರೋಹಿತ್​.!
ಇದನ್ನೂ ಓದಿ:ಯುವಿಗೆ ಬಿಗ್ ಆಫರ್​​.. ಈ ತಂಡದ ಕೋಚ್ ಆಗುವಂತೆ ಫ್ರಾಂಚೈಸಿ ಆಹ್ವಾನ..!
/filters:format(webp)/newsfirstlive-kannada/media/media_files/2025/10/25/rohit_sharma_50-1-2025-10-25-14-27-12.jpg)
2025ರಲ್ಲಿ 11 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರೋ ರೋಹಿತ್​ ಶರ್ಮಾ 504 ರನ್​ಗಳಿಸಿದ್ದಾರೆ. 50.40ರ ಸರಾಸರಿಯನ್ನ ಹೊಂದಿದ್ದು, 2 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ರೋಹಿತ್​ ಶರ್ಮಾ ಮುಂದಿರೋ ಪರಮೋಚ್ಚ ಗುರಿ ಅಂದ್ರೆ ಅದು 2027ರ ಏಕದಿನ ವಿಶ್ವಕಪ್​.! ವಿಶ್ವಕಪ್​ ಗೆಲ್ಲಬೇಕು ಅನ್ನೋ ಹಟಕ್ಕೆ ಬಿದ್ದಿರೋ ರೋಹಿತ್​ ಶರ್ಮಾ ಛಲದ ಹೋರಾಟ ನಡೆಸ್ತಿದ್ದಾರೆ. ಇದೊಂದು ಕನಸನ್ನ ಈಡೇರಿಸಿಕೊಳ್ಳಲು ಎಂತಾ ತ್ಯಾಗಕ್ಕೂ ನಾನು ಸಿದ್ಧ ಎಂದು ರೆಡಿಯಾಗಿದ್ದಾರೆ. ಫಿಟ್​ನೆಸ್​ ಬಗ್ಗೆ ಪ್ರಶ್ನಿಸಿದವರಿಗೆ ಬರೋಬ್ಬರಿ 11 ಕೆಜಿ ತೂಕ ಇಳಿಸಿಕೊಂಡು ಉತ್ತರ ಕೊಟ್ಟಿದ್ದಾರೆ. ಇನ್ನಷ್ಟು ತೂಕ ಇಳಿಸಿಕೊಂಡು ಮತ್ತಷ್ಟು ಫಿಟ್​ ಆಗ್ತಿನಿ ಎಂದು ಕೂಡ ಹೇಳಿ ಕೊಂಡಿದ್ದಾರೆ.
ಫಾರ್ಮ್​ ಬಗ್ಗೆ ಟೀಕಿಸಿದವರಿಗೂ ರೋಹಿತ್​ ಶರ್ಮಾ ಬ್ಯಾಟ್​ನಿಂದಲೇ ಉತ್ತರ ಕೊಟ್ಟಿದ್ದಾರೆ. ಇದೀಗ ಱಂಕಿಂಗ್​ನಲ್ಲಿ ನಂಬರ್​ 1 ಪಟ್ಟವನ್ನೇರಿರೋದು ಕೂಡ ರೋಹಿತ್​ ಸಾಮರ್ಥ್ಯ ಪ್ರಶ್ನಿಸಿದವರಿಗೆ ಪರೋಕ್ಷ ಉತ್ತರವಾಗಿದೆ. ಜೊತೆಗೆ 38 ವರ್ಷದ ರೋಹಿತ್​ಗೆ ಇನ್ನೂ ಆಟದ ಮೇಲೆ ಎಷ್ಟು ಹಸಿವಿದೆ ಅನ್ನೋದಕ್ಕೂ ಇದು ಬೆಸ್ಟ್​ ಎಕ್ಸಾಂಪಲ್ ಅಂದ್ರೆ ತಪ್ಪಿಲ್ಲ.
ಇದನ್ನೂ ಓದಿ: ಕುಡಚಿ ಶಾಸಕನ ಪುತ್ರನಿಗೆ ಡಿಕೆಶಿಯಿಂದ ನಾಮಕರಣ.. ಕಿವಿಯಲ್ಲಿ ಕೂಗಿ ಹೇಳಿದ ಹೆಸರು ಏನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us