Advertisment

ಯುವಿಗೆ ಬಿಗ್ ಆಫರ್​​.. ಈ ತಂಡದ ಕೋಚ್ ಆಗುವಂತೆ ಫ್ರಾಂಚೈಸಿ ಆಹ್ವಾನ..!

ಮುಂದಿನ ಐಪಿಎಲ್​ಗೆ ಲಕ್ನೋ ಸೂಪರ್​ಜೈಂಟ್ಸ್​ ತಂಡ ಸಿದ್ಧವಾಗ್ತಿದೆ. ತಂಡವನ್ನ ಮತ್ತಷ್ಟು ಬಲಿಷ್ಟಗೊಳಿಸಲು ಮುಂದಾಗಿರುವ ಲಕ್ನೋ, ಹೊಸ ಕೋಚ್ ಕರೆತರಲು ಪ್ಲಾನ್ ಮಾಡಿಕೊಂಡಿದೆ. ತೆರೆ ಹಿಂದೆ ಕೋಚ್ ಆಯ್ಕೆ ನಡೆಸುತ್ತಿರುವ ಎಲ್​ಎಸ್​​ಜಿ ಶೀಘ್ರದಲ್ಲೇ ನೂತನ ಕೋಚ್ ಹೆಸರು ಪ್ರಕಟಿಸಲು ಮುಂದಾಗಿದೆ.

author-image
Ganesh Kerekuli
ಯುವರಾಜ್ ಸಿಂಗ್ ಕರಿಯರ್ ಮುಗಿಸಿದ್ದೇ ಕೊಹ್ಲಿನಾ? ಹೀಗಂತ ಹೇಳಿದ್ದು ಯಾರು ಗೊತ್ತಾ?
Advertisment

ಲಕ್ನೋ ಸೂಪರ್​​ಜೈಂಟ್ಸ್​ ತಂಡಕ್ಕೆ ಸರ್ಜರಿ ಹೊಸತೇನಲ್ಲ. ಈಗಾಗಲೇ ಲಕ್ನೋ ಫ್ರಾಂಚೈಸಿ, ಮ್ಯಾನೇಜ್ಮೆಂಟ್​​ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ನ್ಯೂಜಿಲೆಂಡ್​​ನ ಕೇನ್ ವಿಲಿಯಮ್ಸನ್​​​​ ಸ್ಟ್ರಾಟಜಿಕ್ ಅಡ್ವೈಸರ್​​​ ಆಗಿ ನೇಮಕಗೊಂಡಿದ್ರೆ ಮಾಜಿ ವೇಗಿ ಭರತ್ ಅರಣ್, ಲಕ್ನೋ ತಂಡದ ಬೌಲಿಂಗ್ ಕೋಚ್ ಆಗಿ, ಮುಂದಿನ ಐಪಿಎಲ್ ಸೀಸನ್​ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದೆಲ್ಲದರ ನಡುವೆ ಎಲ್​ಎಸ್​ಜಿ ಫ್ರಾಂಚೈಸಿ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಸ್ಥಾನಕ್ಕೆ ದಿಗ್ಗಜ ಕ್ರಿಕೆಟಿಗನನ್ನ ನೇಮಿಸಲು ಮುಂದಾಗಿದೆ.

Advertisment

ಯುವರಾಜ್ ಸಿಂಗ್ ಕೋಚ್?

ಲಕ್ನೋ ಸೂಪರ್​​ಜೈಂಟ್ಸ್​ ತಂಡ ಹೊಸ ಕೋಚ್​​​​​ ಹುಡುಕಾಟದಲ್ಲಿದೆ. ತಂಡದಲ್ಲಿ ಬದಲಾವಣೆ ತರಲು ಮುಂದಾಗಿದೆ. ತಂಡದಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್, ಕೋಚ್ ಆಗಿ ಕಾರ್ಯನಿರ್ವಹಿಸ್ತಿದ್ದಾರೆ. ಎಲ್​​ಎಸ್​​ಜಿ ಫ್ರಾಂಚೈಸಿ, ಲ್ಯಾಂಗರ್ ಕೋಚಿಂಗ್​​​​​​​ ಸ್ಟೈಲ್ ಬಗ್ಗೆ ಸಮಾಧಾನ ಹೊಂದಿಲ್ಲ. ಹಾಗಾಗಿ ಹೊಸ ಕೋಚ್ ನೇಮಕಕ್ಕೆ ಮುಂದಾಗಿರುವ ಲಕ್ನೋ ತಂಡ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮೇಲೆ ಹೆಚ್ಚು ಒಲವು ತೋರುತ್ತಿದೆ. ಎಲ್​ಎಸ್​ಜಿ ಫ್ರಾಂಚೈಸಿ ಮತ್ತು ಯುವರಾಜ್ ಸಿಂಗ್ ನಡುವೆ ಮಾತುಕಥೆ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ, ಯುವಿ ಎಲ್​ಎಸ್​​ಜಿ ಕೋಚ್ ಆಗೋದು ಖಚಿತ. 

ಇದನ್ನೂ ಓದಿ: T20; ಹ್ಯಾಜಲ್​ವುಡ್​ ಮಿಂಚಿನ ದಾಳಿ.. ಗಿಲ್​, ಸೂರ್ಯ ಸೇರಿ 5 ವಿಕೆಟ್ ಫಿನೀಶ್​​​,​ ಸಂಕಷ್ಟದಲ್ಲಿ ಭಾರತ

ರಾಜಕೀಯ ಅಖಾಡಕ್ಕೆ ಯುವರಾಜ್ ಸಿಂಗ್ ಎಂಟ್ರಿ.. ಈ ಪಕ್ಷದ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಣಕ್ಕೆ..!

ಯುವರಾಜ್ ಸಿಂಗ್ ಚಾಂಪಿಯನ್ ಪ್ಲೇಯರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈಗಾಗಲೇ ಯುವರಾಜ್, 2007 ಟಿ-ಟ್ವೆಂಟಿ ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನ ತಂಡದ ಆಟಗಾರನಾಗಿದ್ದಾರೆ. ಹಾಗಾಗಿ ಯುವರಾಜ್ ಸಿಂಗ್​​ಗೆ, ಬಿಗ್ ಟೂರ್ನಮೆಂಟ್​​ಗಳನ್ನ ಗೆಲ್ಲೋದು ಹೇಗೆ ಅನ್ನೋದು ಚೆನ್ನಾಗೇ ಗೊತ್ತು. ಯುವಿ ಲಕ್ನೋ ತಂಡದ ಕೋಚ್ ಆದ್ರೆ, ಬಿಗ್ ಅಡ್ವಾಂಟೇಜ್. ಲಕ್ನೋ ತಂಡದಲ್ಲಿ ಯುವಿ, ವಿನ್ನಿಂಗ್ ಕಲ್ಚರ್ ತರಬಹುದು. ಜೊತೆಗೆ ನಾಕೌಟ್ ಸ್ಟೇಜ್​ನಲ್ಲಿ ಪರದಾಡುತ್ತಿರುವ ಎಲ್​ಎಸ್​​​ಜಿಗೆ, ಅದರಿಂದ ಹೊರಬರೋದು ಹೇಗೆ ಅನ್ನೋದನ್ನ ಯುವಿ ಪಾಠ ಮಾಡಬಹುದು.

Advertisment

ಯುವರಾಜ್ ಸಿಂಗ್ ಒತ್ತಡದ ಪಂದ್ಯಗಳಲ್ಲಿ ಪರ್ಫಾಮ್ ಮಾಡಿದ್ದಾರೆ. ಯುವರಾಜ್, ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಆಗಿ ಅನುಭವ ಇರೋದ್ರಿಂದ, ಕ್ರಂಚ್ ಸಿಚ್ಯುವೇಶನ್​ಗಳನ್ನ ಹ್ಯಾಂಡಲ್ ಮಾಡಿದ್ದಾರೆ. ಒಂದು ವೇಳೆ ಯುವಿ ಎಲ್​​ಎಸ್​​​ಜಿ ಕೋಚ್ ಆಗಿದ್ದೇ ಆದ್ರೆ ಬ್ಯಾಟಿಂಗ್​​ನಲ್ಲಿ ಪರದಾಡುತ್ತಿರುವ ತಂಡಕ್ಕೆ ಮರುಜೀವ ನೀಡಬಹುದು. ಯುವರಾಜ್ ಸಿಂಗ್​ಗೆ ಟಿ-ಟ್ವೆಂಟಿ ಕ್ರಿಕೆಟ್​​ ಬಗ್ಗೆ ಹೆಚ್ಚು ತಿಳುವಳಿಕೆ ಇರೋದ್ರಿಂದ ಐಪಿಎಲ್​​​ನಲ್ಲಿ ಎಲ್ಲ್ಎಸ್​ಜಿ ತಂಡಕ್ಕೆ ಅತ್ಯುತ್ತಮ ಮ್ಯಾಚ್ ಟ್ಯಾಕ್ಟಿಕ್ಸ್​ ಹೇಳಿಕೊಡಬಹುದು.  

ಇದನ್ನೂ ಓದಿ: ಮೊದಲ ಪಂದ್ಯ ಮಳೆಗೆ ಗೋವಿಂದ.. ಎರಡನೇ ಮ್ಯಾಚ್​ ಹೀನಾಯವಾಗಿ ಸೋತ ಸೂರ್ಯ ಪಡೆ..! 

2025ರ ಐಪಿಎಲ್​​ಗೆ ಯುವರಾಜ್​​​ ಸಿಂಗ್​ ಎಂಟ್ರಿ; ಸಿಕ್ಸರ್​​ ಕಿಂಗ್​​ಗೆ​​ ಈ ತಂಡದಿಂದ ಬಿಗ್​ ಆಫರ್​​!

ಯುವರಾಜ್ ಸಿಂಗ್ ಎಕ್ಸ್ಟ್ರಾರ್ಡಿನರಿ ಪ್ಲೇಯರ್ ಮಾತ್ರವಲ್ಲ. ಆತ ಅದ್ಭುತ ಲೀಡರ್​​​​​​​ ಕೂಡ ಹೌದು. ಯುವಿ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬಲ್ಲರು. ಡ್ರೆಸ್ಸಿಂಗ್ ರೂಮ್​ ವಾತಾವರಣವನ್ನ ಪಾಸಿಟಿವ್ ಆಗಿ ಇಡಬಲ್ಲರು. ಇನ್ನು ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್, ಯುವಕರ ಪಾಲಿಗೆ ರಿಯಲ್ ಹೀರೋ. ಯುವಿ ಓರ್ವ ಅದ್ಭುತ ಮೋಟಿವೇಟರ್. ಯುವಿ ಆಡೋ ಒಂದೊಂದು ಮಾತು, ಯುವಕರಲ್ಲಿ ಆತ್ಮಿಶ್ವಾಸ ಹೆಚ್ಚಿಸುತ್ತದೆ. ಈ ಎಲ್ಲಾ ಕ್ವಾಲಿಟೀಸ್ ಯುವರಾಜ್ ಸಿಂಗ್​ರಲ್ಲಿದೆ. 

Advertisment

ಟೀಮ್ ಇಂಡಿಯಾ ಯುವ ಕ್ರಿಕೆಟಿಗರ ಪಾಲಿಗೆ ಯುವರಾಜ್ ಸಿಂಗ್ ಸಾಲಿಡ್ ಮೆಂಟರ್​​​​​. ಈಗಾಗಲೇ ಯುವರಾಜ್ ಶಿಷ್ಯರು, ಟೀಮ್ ಇಂಡಿಯಾ ಮತ್ತು ಐಪಿಎಲ್ ತಂಡಗಳಲ್ಲಿ ಮಿಂಚುತ್ತಿದ್ದಾರೆ. ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ರಿಷಭ್ ಪಂತ್, ರವಿ ಬಿಷ್ಣೋಯ್, ಆಯುಷ್ ಬದೋನಿ, ಯಶ್ ಥಾಕೂರ್, ಪ್ರಭ್​​ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ನೆಹಾಲ್ ವದೇರಾ, ಅಬ್ದುಲ್ ಸಮದ್ ಎಲ್ಲರೂ, ಯುವರಾಜ್ ಸಿಂಗ್​ರಿಂದ ಮಾರ್ಗದರ್ಶನ ಪಡೆದ ಆಟಗಾರರು.  

ಇದನ್ನೂ ಓದಿ: ಮತ್ತೆ ಟಾಸ್ ಸೋತ ಸೂರ್ಯಕುಮಾರ್​.. ಪ್ಲೇಯಿಂಗ್- 11ನಲ್ಲಿ ಯಾರ್​ ಯಾರಿಗೆ ಸ್ಥಾನ?

ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್​ಗೆ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಇಲ್ಲ. ಆದ್ರೆ ಯುವಿ ಅಬುಧಬಿ T10 ಲೀಗ್ ಟೂರ್ನಿಯಲ್ಲಿ, ನ್ಯೂಯಾರ್ಕ್ ಸ್ಟ್ರೈಕರ್ಸ್​ ಫ್ರಾಂಚೈಸಿಯ ಮೆಂಟರ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಯುವರಾಜ್​​ಗೆ ಭಾರೀ ಡಿಮ್ಯಾಂಡ್ ಇದೆ. ಲಕ್ನೋ ಸೂಪರ್​ ಜೈಂಟ್ಸ್, ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳಿಂದಲೂ, ಯುವಿಗೆ ಕೋಚ್ ಹುದ್ದೆಗೆ ಭಾರೀ ಆಫರ್ ನೀಡಲಾಗಿದೆ. 

Advertisment

ಒಟ್ನಲ್ಲಿ.. ಯುವರಾಜ್ ಸಿಂಗ್ ಎಲ್​ಎಸ್​​ಜಿ ಕೋಚ್ ಆದ್ರೆ ತಂಡದ ಹಣೆಬರಹ ಬದಲಾಗುತ್ತೋ ಇಲ್ವೋ ಗೊತ್ತಿಲ್ಲ. ಯುವ ಕ್ರಿಕೆಟಿಗರ ಆಟವಂತೂ ನೆಕ್ಸ್ಟ್​​ ಲೆವೆಲ್​​​ಗೆ ರೀಚ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yuvaraj Singh
Advertisment
Advertisment
Advertisment