/newsfirstlive-kannada/media/media_files/2025/12/07/prasidh-krishna-2025-12-07-10-08-49.jpg)
ವೈಜಾಗ್​ ಒನ್​ ಡೇ ಮ್ಯಾಚ್​ನಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ಮೆರೆದಾಡಿದ್ರು. ಪ್ರಸಿದ್ಧ್​​ ಕೃಷ್ಣ ಪರಾಕ್ರಮ, ಕುಲ್​​​ದೀಪ್​ ಯಾದವ್​ ಕೈಚಳಕಕ್ಕೆ ಸೌತ್​ ಆಫ್ರಿಕಾ ಸ್ಟನ್​ ಆಯ್ತು. ಬಿಗ್​​ಸ್ಕೋರ್​​ ಕಲೆಹಾಕೋ ಸೂಚನೆ ನೀಡಿದ್ದ ಸೌತ್​ ಆಫ್ರಿಕಾ ದಿಢೀರ್​ ಕುಸಿತ ಕಾಣ್ತು. ಆಫ್ರಿಕನ್​ ಬ್ಯಾಟರ್ಸ್​ನ ಇಂಡಿಯನ್​ ಬೌಲರ್ಸ್​​ ಕಟ್ಟಿ ಹಾಕಿದ್ದೇಗೆ?
ಸತತ 20 ಪಂದ್ಯಗಳಲ್ಲಿ ಟಾಸ್​ ಸೋತಿದ್ದ ಟೀಮ್​ ಇಂಡಿಯಾ ಕೊನೆಗೂ ಏಕದಿನ ಮಾದರಿಯಲ್ಲಿ ಟಾಸ್​ ಗೆಲ್ತು. ವೈಜಾಗ್​ ಒನ್​ ಡೇಯಲ್ಲಿ ಟಾಸ್​ ಗೆದ್ದ ರಾಹುಲ್​ ಬೌಲಿಂಗ್​ ಆಯ್ದುಕೊಂಡ್ರು. ರಾಹುಲ್​​ ಡಿಶಿಷನ್​ಗೆ ಆರಂಭದಲ್ಲೇ ಸಕ್ಸಸ್​ ಸಿಗ್ತು. ಮೊದಲ ಓವರ್​ನಲ್ಲೇ ಆರ್ಷ್​​ದೀಪ್​ ಸಿಂಗ್​, ರಿಯಾನ್​ ರಿಕ್ಟಲನ್​​ ವಿಕೆಟ್​ ಎಗರಿಸಿದ್ರು.
2ನೇ ವಿಕೆಟ್​ಗೆ​ ಶತಕದ ಜೊತೆಯಾಟ
ಆರಂಭದಲ್ಲೇ ಆಘಾತ ಎದುರಿಸಿದ ಸೌತ್​ ಆಫ್ರಿಕಾ ತಂಡಕ್ಕೆ 2ನೇ ವಿಕೆಟ್​ಗೆ ಜೊತೆಯಾದ ಟೆಂಬಾ ಬವುಮಾ, ಕ್ವಿಂಟನ್​ ಡಿ ಕಾಕ್​ ಚೇತರಿಕೆ ನೀಡಿದ್ರು. ಆರಂಭದಲ್ಲಿ ರಕ್ಷಣಾತ್ಮಕ ಆಟವಾಡಿದ ಈ ಜೋಡಿ ಪವರ್​ ಪ್ಲೇ ಬಳಿಕ ಅಬ್ಬರಿಸಿತು. 2ನೇ ವಿಕೆಟ್​ಗೆ 113 ರನ್​ಗಳ ಜೊತೆಯಾಟವಾಡಿತು.
/filters:format(webp)/newsfirstlive-kannada/media/media_files/2025/12/07/team-india-10-2025-12-07-09-35-02.jpg)
ಬವುಮಾ ಆಟಕ್ಕೆ ಜಡೇಜಾ ಫುಲ್​​ ಸ್ಟಾಫ್​
21ನೇ ಓವರ್​​ನಲ್ಲಿ ರವೀಂದ್ರ ಜಡೇಜಾ ಜೊತೆಯಾಟವನ್ನ ಬ್ರೇಕ್​​ ಮಾಡಿದ್ರು. 67 ಎಸೆತ ಎದುರಿಸಿ 5 ಕ್ಲಾಸ್​ ಬೌಂಡಿ ಸಹಿತ 48 ರನ್​ಗಳಿಸಿದ್ದ ಬವುಮಾ, ಕೊಹ್ಲಿಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಬವುಮಾ ಪತನದೊಂದಿಗೆ ಸೌತ್​ ಆಫ್ರಿಕಾ ದಿಢೀರ್​ ಕುಸಿತ ಶುರುವಾಯ್ತು.
29ನೇ ಓವರ್​​ನಲ್ಲಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಡಬಲ್​ ಶಾಕ್​​ ನೀಡಿದ್ರು. 2ನೇ ಎಸೆತದಲ್ಲಿ 2 ಸಿಕ್ಸರ್​ ಸಿಡಿಸಿ ಮಿಂಚಿದ್ದ ಮ್ಯಾಥ್ಯೂ ಬ್ರಿಟ್ಜ್​ಕೀ ವಿಕೆಟ್ ಎಗರಿಸಿದ್ರು. ಕೊನೆಯ ಎಸೆತದಲ್ಲಿ ಕಳೆದ ಪಂದ್ಯದ ಶತಕ ವೀರ ಎಡೆನ್​ ಮರ್ಕರಮ್​ ವಿಕೆಟ್​ ಕಬಳಿಸಿದ್ರು.
ಅಬ್ಬರದ ಶತಕ ಸಿಡಿಸಿದ ಕ್ವಿಂಟನ್​ ಡಿ ಕಾಕ್​.!
ಇಂಡಿಯನ್​ ಬೌಲಿಂಗ್​ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಕ್ವಿಂಟನ್​ ಡಿ ಕಾಕ್​ ಭರ್ಜರಿ ಶತಕ ಸಿಡಿಸಿದ್ರು. ಹರ್ಷಿತ್​ ರಾಣಾ ಬೌಲಿಂಗ್​ನಲ್ಲಿ ಸಿಕ್ಸರ್​​ ಸಿಡಿಸಿ ಶತಕ ಪೂರೈಸಿ ಸಂಭ್ರಮಿಸಿದ್ರು. ಸೆಂಚುರಿ ಬೆನ್ನಲ್ಲೇ ಡಿಕಾಕ್​ ಔಟಾದ್ರು. ಪ್ರಸಿದ್ಧ್​​ ಕೃಷ್ಣ ಬೌಲಿಂಗ್​ನಲ್ಲಿ ಡಿಕಾಕ್​ ಕ್ಲೀನ್​ಬೋಲ್ಡ್​ ಆಗಿ ನಿರ್ಗಮಿಸಿದ್ರು.
ಇದನ್ನೂ ಓದಿ: ಸರಣಿ ಗೆದ್ದ ಭಾರತ.. ನಿರೀಕ್ಷೆ ಹುಸಿ ಮಾಡಲಿಲ್ಲ ರೋಹಿತ್ ಶರ್ಮಾ..!
/filters:format(webp)/newsfirstlive-kannada/media/media_files/2025/12/07/prasidh-krishna-1-2025-12-07-10-13-44.jpg)
ಅಂತಿಮ ಹಂತದಲ್ಲಿ ಕುಲ್​​​ದೀಪ್​ ಯಾದವ್​ ಕಮಾಲ್​ ಮಾಡಿದ್ರು. 39ನೇ ಓವರ್​​ನಲ್ಲಿ ಸೌತ್​ ಆಫ್ರಿಕಾಗೆ ಡಬಲ್ ಶಾಕ್ ನೀಡಿದ್ರು. ಕುಲ್​​ದೀಪ್​ ಕೈಚಳಕಕ್ಕೆ ಸ್ಟನ್​ ಆದ ಡೆವಾಲ್ಡ್​ ಬ್ರೆವಿಸ್​, ಮಾರ್ಕೋ ಯಾನ್ಸೆನ್​ ಪೆವಿಲಿಯನ್​ ಸೇರಿದ್ರು. ಮೊದಲ 2 ಪಂದ್ಯದಲ್ಲಿ ಮಿಂಚಿದ್ದ ಕಾರ್ಬಿನ್​ ಬಾಷ್​ ಆಟ ಕುಲ್​​ದೀಪ್​ ಕೈ ಚಳಕದ ಮುಂದೆ ನಡೆಯಲಿಲ್ಲ. 9 ರನ್​ಗಳಿಸಿ ಕಾರ್ಬಿನ್​ ಬಾಷ್​ ನಿರ್ಗಮಿಸಿದ್ರೆ, ಬಳಿಕ ಬ್ಯಾಟಿಂಗ್​ಗೆ ಬಂದ ಲುಂಗಿ ಎನ್​​ಗಿಡಿ ಕುಲ್​ದೀಪ್​ಗೆ 4 ಬಲಿಯಾದ್ರು.
158ಕ್ಕೆ 2 ವಿಕೆಟ್​​.. 270ಕ್ಕೆ ಸೌತ್​ ಆಫ್ರಿಕಾ ಆಲೌಟ್
ಪ್ರಸಿದ್ಧ್​ ಕೃಷ್ಣ ಬೌಲಿಂಗ್​ನಲ್ಲಿ ಬಾರ್ಟ್​ಮನ್​ ಕ್ಲೀನ್​ ಬೋಲ್ಡ್​ ಆಗೋದ್ರೊಂದಿಗೆ ಸೌತ್​ ಆಫ್ರಿಕಾ ಆಲೌಟ್​ ಆಯ್ತು. ಆರಂಭದಲ್ಲಿ 158 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡಿದ್ದ ಸೌತ್​ ಆಫ್ರಿಕಾ, ನಂತರ 112 ರನ್​ಗಳಿಸುವಷ್ಟರಲ್ಲಿ 8 ವಿಕೆಟ್​ ಕಳೆದುಕೊಳ್ತು. 270 ರನ್​ಗೆ ಸೌತ್​ ಆಫ್ರಿಕಾ ಸರ್ವಪತನ ಕಾಣ್ತು. ಭಾರತದ ಪರ ಕುಲ್​​ದೀಪ್​, ಪ್ರಸಿದ್ಧ್​ ತಲಾ 4 ಆರ್ಷ್​ದೀಪ್​​, ಜಡೇಜಾ ತಲಾ 1 ವಿಕೆಟ್​ ಕಬಳಿಸಿದ್ರು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us