/newsfirstlive-kannada/media/media_files/2025/12/07/team-india-10-2025-12-07-09-35-02.jpg)
ರೋಹಿತ್​ ಶರ್ಮಾ ರಣಾರ್ಭಟ, ಯಶಸ್ವಿ ಜೈಸ್ವಾಲ್​ ಜಬರ್ದಸ್ತ್​ ಶತಕ, ವಿರಾಟ್​ ಕೊಹ್ಲಿ ವಿರಾಟರೂಪ ದರ್ಶನ. ವೈಜಾಗ್​ ಸ್ಟೇಡಿಯಂನಲ್ಲಿ ನಿನ್ನೆ ಫ್ಯಾನ್ಸ್​ ಫುಲ್​ ಮೀಲ್ಸ್​ ಮನರಂಜನೆ ಸಿಗ್ತು. ಸೌತ್​ ಆಫ್ರಿಕಾ ಬೌಲರ್​ಗಳ ಮನಬಂದತೆ ದಂಡಿಸಿದ ರೋಹಿತ್​, ಜೈಸ್ವಾಲ್, ಕೊಹ್ಲಿ.. ಬೌಂಡರಿ, ಸಿಕ್ಸರ್​ಗಳ ಸುರಿಮಳೆಯನ್ನ ಸುರಿಸಿದ್ರು. ಅಬ್ಬರದ ಆಟಕ್ಕೆ ಸೌತ್​ ಆಫ್ರಿಕಾ ಬೌಲರ್​ಗಳು ಸ್ಟನ್​​ ಆದ್ರು.
271 ರನ್​​​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾ ಎಚ್ಚರಿಕೆಯ ಆರಂಭ ಪಡೆದುಕೊಳ್ತು. ಸರಣಿಯ ಮೊದಲ 2 ಪಂದ್ಯಗಳಲ್ಲಿ ಗುಡ್​ ಸ್ಟಾರ್ಟ್​ ನೀಡುವಲ್ಲಿ ವಿಫಲರಾಗಿದ್ದ ರೋಹಿತ್​ ಶರ್ಮಾ-ಯಶಸ್ವಿ ಜೈಸ್ವಾಲ್, ವೈಜಾಗ್​ನಲ್ಲಿ​ ಬೊಂಬಾಟ್​ ಆರಂಭ ನೀಡಿದ್ರು.
ಇದನ್ನೂ ಓದಿ: ವೈಜಾಗ್ ಜನರರೊಂದಿಗೆ ರೋಹಿತ್​ಗೆ ಭಾವನಾತ್ಮಕ ನಂಟು.. ಇವತ್ತಿನ ಪಂದ್ಯದಲ್ಲಿ ರೋಹಿತ್ ಮೇಲೆ ಎಲ್ಲರ ಕಣ್ಣು..!
/filters:format(webp)/newsfirstlive-kannada/media/media_files/2025/12/07/team-india-9-2025-12-07-09-34-22.jpg)
ತಾಯ್ನಾಡಿನಲ್ಲಿ ರೋಹಿತ್​ ಶರ್ಮಾ ರಣಾರ್ಭಟ
2ನೇ ಏಕದಿನದಲ್ಲಿ ಅಲ್ಪಮೊತ್ತಕ್ಕೆ ಔಟ್​ ಆಗಿದ್ದ ರೋಹಿತ್​ ನಿನ್ನೆ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಆರಂಭದಲ್ಲಿ ತಾಳ್ಮೆಯ ಆಟವನ್ನಾಡಿದ ರೋಹಿತ್​ ಶರ್ಮಾ, ಸೆಟಲ್​ ಆದ ಮೇಲೆ ಹಿಂದೆ ಮುಂದೆ ನೋಡದೆ ಸೌತ್​ ಆಫ್ರಿಕಾ ಬೌಲರ್​ಗಳನ್ನ ಬೆಂಡೆತ್ತಿದ್ರು. ರೋಹಿತ್​ ರಣಾರ್ಭಟಕ್ಕೆ ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. 54 ಎಸೆತಗಳಲ್ಲಿ ಹಾಫ್​ ಸೆಂಚುರಿ ಪೂರೈಸಿದ್ರು.
ಜೈಸ್ವಾಲ್​ ಲೆಕ್ಕಾಚಾರದ ಆಟಕ್ಕೆ ಬೌಲರ್ಸ್​ ಥಂಡಾ
ಮೊದಲ 2 ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಯಶಸ್ವಿ ಜೈಸ್ವಾಲ್​ ವೈಜಾಗ್​ನಲ್ಲಿ ಲೆಕ್ಕಾಚಾರದ ಆಟವಾಡಿದ್ರು. ಕ್ರಿಸ್​​ಗಿಳಿದ ಆರಂಭದಲ್ಲಿ ಸ್ಟ್ರಗಲ್​ ಮಾಡಿದ್ರೂ, ಕ್ರಿಸ್​ನಲ್ಲಿ ಸಮಯ ಕಳೆದಂತೆ ಒವರ್​ಕಮ್​ ಮಾಡಿದ್ರು. 75 ಎಸೆತಗಳಲ್ಲಿ ಹಾಫ್​​ ಸೆಂಚುರಿ ಪೂರೈಸಿ ಸಂಭ್ರಮಿಸಿದ್ರು. ಯಶಸ್ವಿ ಜೈಸ್ವಾಲ್​, ರೋಹಿತ್ ಶರ್ಮಾ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ರನ್​ ಹೊಳೆಯನ್ನೇ ಹರಿಸಿದ್ರು. ಸಿಂಗಲ್​, ಟೂಡಿಗಳ ಜೊತೆಗೆ ಬೌಂಡರಿ, ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು. 155 ಎಸೆತಗಳಲ್ಲಿ 155 ರನ್​ಗಳ ಜೊತೆಯಾಟವಾಡಿದ್ರು.
ಇದನ್ನೂ ಓದಿ:‘ಟಾರ್ಗೆಟ್-16’ ಬೆನ್ನು ಬಿದ್ದ ಸೆಂಚುರಿ ಸ್ಟಾರ್​ ಕೊಹ್ಲಿ..! ಏನಿದು..?
/filters:format(webp)/newsfirstlive-kannada/media/media_files/2025/12/07/rohit-sharma-2025-12-07-09-38-00.jpg)
7 ಬೌಂಡರಿ, 3 ಸಿಕ್ಸರ್​ ಸಿಡಿಸಿದ ರೋಹಿತ್​ 73 ಎಸೆತಗಳಲ್ಲಿ 75 ರನ್​ಗಳಿಸಿ ನಿರ್ಗಮಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ವಿರಾಟ್​ ಕೊಹ್ಲಿ - ಯಶಸ್ವಿ ಜೈಸ್ವಾಲ್​ ಮತ್ತಷ್ಟು ಸ್ಪೋಟಕ ಆಟವಾಡಿ ಸೌತ್​ ಆಫ್ರಿಕಾ ಬೌಲರ್​ಗಳ ಬೆವರಿಳಿಸಿದ್ರು. ಅರ್ಧಶತಕದ ಬಳಿಕ ಸೌತ್​ ಆಫ್ರಿಕಾ ಬೌಲರ್​ಗಳ ಮೇಲೆ ಅಕ್ಷರಶಃ ಸವಾರಿ ಮಾಡಿದ ಯಶಸ್ವಿ ಜೈಸ್ವಾಲ್​ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ನೀಡಿದ್ರು. 111 ಎಸೆತಗಳಲ್ಲಿ ಜೈಸ್ವಾಲ್​ ಚೊಚ್ಚಲ ಏಕದಿನ ಸೆಂಚುರಿ ಪೂರೈಸಿ ಸಂಭ್ರಮಿಸಿದ್ರು.
ವೈಜಾಗ್​ನಲ್ಲಿ ಕೊಹ್ಲಿ ವಿರಾಟರೂಪ ದರ್ಶನ
ಫೆವರಿಟ್​​ ಗ್ರೌಂಡ್​ನಲ್ಲಿ ನಿರೀಕ್ಷೆಯಂತೆ ವಿರಾಟ್​ ಕೊಹ್ಲಿ ವಿರಾಟರೂಪ ದರ್ಶನ ಮಾಡಿಸಿದ್ರು. ಕಾನ್ಫಿಡೆಂಟ್​​ ಆರಂಭ ಪಡೆದ ಕೊಹ್ಲಿ ಬಿಗ್​ ಶಾಟ್​ಗಳನ್ನ ಬಾರಿಸಿ ಫ್ಯಾನ್ಸ್​ನ ರಂಜಿಸಿದ್ರು. ಜಸ್ಟ್​ 40 ಎಸೆತಗಳಲ್ಲಿ ಹಾಫ್​ ಸೆಂಚುರಿ ಚಚ್ಚಿ ಬಿಸಾಕಿದ್ರು. ಸೌತ್​​ ಆಫ್ರಿಕಾ ಬೌಲರ್​ಗಳ ಬೆವರಿಳಿಸಿದ ವಿರಾಟ್​ ಕೊಹ್ಲಿ-ಜೈಸ್ವಾಲ್​ 39.5 ಓವರ್​ಗಳಲ್ಲೇ ಟೀಮ್​ ಇಂಡಿಯಾ ಗೆಲುವಿನ ದಡ ಸೇರಿಸಿದ್ರು. ಜೈಸ್ವಾಲ್ ಅಜೇಯ 116 ರನ್​ಗಳಿಸಿದ್ರೆ, ಕೊಹ್ಲಿ ಅಜೇಯ 65 ರನ್​ಗಳಿಸಿದ್ರು. 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಟೀಮ್​ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿತು.
ಇದನ್ನೂ ಓದಿ: ಜಾರಿಯಾಗಿ 20 ದಿನದಲ್ಲೇ ‘ಇ-ಖಾತಾ ಫೇಸ್‌ಲೆಸ್’ ಆನ್​ಲೈನ್​ ವ್ಯವಸ್ಥೆ ರದ್ದು! ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us