ದೇಸಿ ಟೂರ್ನಿಯಲ್ಲಿ ಕನ್ನಡಿಗನದ್ದೇ ಪರಾಕ್ರಮ.. 5 ಪಂದ್ಯ 4 ಶತಕ.. ಸರಾಸರಿ 102 ರನ್ಸ್..!

ಪ್ರತಿಷ್ಟಿತ ಡೊಮೆಸ್ಟಿಕ್​ ಟೂರ್ನಿ ವಿಜಯ್​ ಹಜಾರೆಯಲ್ಲಿ ಕನ್ನಡಿಗ ದೇವದತ್​ ಪಡಿಕ್ಕಲ್ ದರ್ಬಾರ್​​ ಜೋರಾಗಿದೆ.​ ಪಡಿಕ್ಕಲ್​ ಪರಾಕ್ರಮಕ್ಕೆ ಎದುರಾಳಿ ಪಡೆಗಳ ಬೌಲರ್ಸ್​​ ಕಂಗಾಲಾಗಿ ಹೋಗಿದ್ದಾರೆ. ಡ್ರೀಮ್​ ಫಾರ್ಮ್​ನಲ್ಲಿ ಬ್ಯಾಟ್​ ಬೀಸ್ತಾ ಇರೋ ದೇವದತ್,​ ಮತ್ತೊಂದು ಸೆಂಚುರಿ ಸಿಡಿಸಿದ್ದಾರೆ.

author-image
Ganesh Kerekuli
Devudatta padikkal
Advertisment
  • ಪಡಿಕ್ಕಲ್​ ಪರಾಕ್ರಮಕ್ಕೆ ದಂಗಾದ ತ್ರಿಪುರಾ
  • ಕನ್ನಡಿಗನ ಘರ್ಜನೆಗೆ ಬೆಚ್ಚಿದ ಬೌಲರ್ಸ್​
  • 4ನೇ ಶತಕ ಸಿಡಿಸಿದ ದೇವದತ್​​ ಪಡಿಕ್ಕಲ್

ಪ್ರತಿಷ್ಟಿತ ಡೊಮೆಸ್ಟಿಕ್​ ಟೂರ್ನಿ ವಿಜಯ್​ ಹಜಾರೆಯಲ್ಲಿ ಕನ್ನಡಿಗ ದೇವದತ್​ ಪಡಿಕ್ಕಲ್ ದರ್ಬಾರ್​​ ಜೋರಾಗಿದೆ.​ ಪಡಿಕ್ಕಲ್​ ಪರಾಕ್ರಮಕ್ಕೆ ಎದುರಾಳಿ ಪಡೆಗಳ ಬೌಲರ್ಸ್​​ ಕಂಗಾಲಾಗಿ ಹೋಗಿದ್ದಾರೆ. ಡ್ರೀಮ್​ ಫಾರ್ಮ್​ನಲ್ಲಿ ಬ್ಯಾಟ್​ ಬೀಸ್ತಾ ಇರೋ ದೇವದತ್,​ ಮತ್ತೊಂದು ಸೆಂಚುರಿ ಸಿಡಿಸಿದ್ದಾರೆ. ಅಹ್ಮದಾಬಾದ್​ನಲ್ಲಿ ಕನ್ನಡಿಗನ ಘರ್ಜನೆಗೆ ತ್ರಿಪುರಾ ತಂಡ ಬೆಚ್ಚಿ ಬಿದ್ದಿದೆ. 

ಭಾರತೀಯ ಕ್ರಿಕೆಟ್​ನ ಡೊಮೆಸ್ಟಿಕ್​ ಟೂರ್ನಮೆಂಟ್​ ವಿಜಯ್​ ಹಜಾರೆಯಲ್ಲಿ ಈ ಬಾರಿ ರನ್​ಹೊಳೆಯೇ ಹರಿತಿದೆ. ಸ್ಟಾರ್​​ ಕ್ರಿಕೆಟರ್​ಗಳ ಕಮ್​ಬ್ಯಾಕ್​ನ ನಡುವೆ​, ಯುವ ಕ್ರಿಕೆಟಿಗರ ಅಬ್ಬರವೂ ಜೋರಾಗಿದೆ. ಅದ್ರಲ್ಲೂ, ಕರ್ನಾಟಕದ ತಂಡದ ಬ್ಯಾಟ್ಸ್​ಮನ್​ ದೇವದತ್ತ್​ ಪಡಿಕ್ಕಲ್​ ಆಟಕ್ಕೆ ದಿಗ್ಗಜರೇ ದಂಗಾಗಿ ಹೋಗಿದ್ದಾರೆ. ಕನ್ನಡಿಗನ ಆರ್ಭಟಕ್ಕೆ ಎದುರಾಳಿ ಪಡೆಯ ಬೌಲರ್​ಗಳೆಲ್ಲಾ ಬೆಚ್ಚಿ ಬಿದ್ದಿದ್ದಾರೆ.
ಈ ಸೀಸನ್​ನ ವಿಜಯ್​ ಹಜಾರೆ ಟೂರ್ನಿಯಲ್ಲಿ ಅಕ್ಷರಶಃ ಪಡಿಕ್ಕಲ್​ ಪರಾಕ್ರಮ ಮೆರೆಯುತ್ತಿದ್ದಾರೆ. ಡ್ರೀಮ್​ ಫಾರ್ಮ್​ನಲ್ಲಿರೋ ಕನ್ನಡಿಗ, ಬೌಲರ್​ಗಳನ್ನ ಬೆಂಡೆತ್ತಿ ಲೀಲಾಜಾಲವಾಗಿ ರನ್​ಗಳಿಸ್ತಾ ಇದ್ದಾರೆ. ನಿನ್ನೆ ನಡೆದ ತ್ರಿಪುರಾ ವಿರುದ್ಧದ ಪಂದ್ಯದಲ್ಲೂ ಪಡಿಕ್ಕಲ್​ ಆರ್ಭಟ ಜೋರಾಗಿತ್ತು. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ಕನ್ನಡಿಗ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. 

ಇದನ್ನೂ ಓದಿ:  ಅಮೆರಿಕಾದಲ್ಲಿ ಮಾಜಿ ಬಾಯ್ ಫ್ರೆಂಡ್ ನಿಂದ ಹತ್ಯೆಯಾದ ಭಾರತದ ಯುವತಿ : ಭಾರತಕ್ಕೆ ಪರಾರಿಯಾದ ಹತ್ಯೆ ಆರೋಪಿ!

devdutt padikkal

4ನೇ ಶತಕ ಸಿಡಿಸಿದ ದೇವದತ್​​ ಪಡಿಕ್ಕಲ್​

ಪಂದ್ಯದಲ್ಲಿ ತ್ರಿಪುರಾ ಬೌಲಿಂಗ್​ ದಾಳಿಯನ್ನ ಪುಡಿಗಟ್ಟಿದ ಪಡಿಕ್ಕಲ್​, 106 ಎಸೆತಗಳಲ್ಲಿ ಸೆಂಚುರಿ ಚಚ್ಚಿದ್ರು. ಒಟ್ಟಾರೆ, 120 ಎಸೆತಗಳನ್ನ ಎದುರಿಸಿದ ದೇವದತ್​ ಪಡಿಕ್ಕಲ್​ 8 ಬೌಂಡರಿ, 3 ಸಿಕ್ಸ್ ನೆರವಿನೊಂದಿಗೆ 108 ರನ್​ಗಳಿಸಿದ್ರು. ಅಂದ್ಹಾಗೆ ಈ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಪಡಿಕ್ಕಲ್​ ಸಿಡಿಸಿದ 4ನೇ ಸೆಂಚುರಿ ಇದು. ಪಡಿಕ್ಕಲ್​ ಪರಾಕ್ರಮಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್​.

5 ಪಂದ್ಯ, 514 ರನ್​, 102 ಸರಾಸರಿ.!

ಈ ಸೀಸನ್​ನ ವಿಜಯ್​ ಹಜಾರೆ ಟೂರ್ನಿಯಲ್ಲಿ ನಡೀತಾ ಇರೋ ದೇವದತ್​ ಪಡಿಕ್ಕಲ್​ ದರ್ಬಾರ್​.! ಜಾರ್ಖಂಡ್​ ಎದುರಿನ ಪಂದ್ಯದೊಂದಿಗೆ ಆರಂಭವಾಗಿ ನಿನ್ನೆಯ ತ್ರಿಪುರಾ ವಿರುದ್ಧದ ಪಂದ್ಯದವರೆಗೆ ಪಡಿಕ್ಕಲ್​, ರನ್​ ಹೊಳೆ ಹರಿಸಿದ್ದಾರೆ. ಈ ಸೀಸನ್​ನಲ್ಲಿ ಆಡಿರೋ 5 ಪಂದ್ಯಗಳಲ್ಲಿ 4 ಸೆಂಚುರಿ ಸಿಡಿಸಿರೋ ಪಡಿಕ್ಕಲ್​, ಬರೋಬ್ಬರಿ 102ರ ರನ್​ಗಳಿಕೆಯ ಸರಾಸರಿ ಹೊಂದಿದ್ದಾರೆ. 514 ರನ್​ಗಳೊಂದಿಗೆ ಟಾಪ್​ ಸ್ಕೋರ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಲಿಸ್ಟ್​-ಎ ಕ್ರಿಕೆಟ್​ಗೆ ಕನ್ನಡಿಗನೇ ‘ಕಿಂಗ್’​

ಲಿಸ್ಟ್​​ ಎ ಕ್ರಿಕೆಟ್​​ನಲ್ಲಿ ಹೈಯೆಸ್ಟ್​​ ಬ್ಯಾಟಿಂಗ್​ ಎವರೇಜ್​ ಲಿಸ್ಟ್​ನಲ್ಲಿ 57.86ರ ಸರಾಸರಿ ಹೊಂದಿದ್ದ ಮೈಕಲ್​ ಬೆವೆನ್​ ನಂಬರ್​ ಒನ್​ ಸ್ಥಾನದಲ್ಲಿದ್ದಾರೆ. ಆದ್ರೆ, ಆಡಿರೋ 37 ಇನ್ನಿಂಗ್ಸ್​ಗಳಲ್ಲೇ ಕನ್ನಡಿಗ ದೇವದತ್​​ ಪಡಿಕ್ಕಲ್​ ಸರಾಸರಿ ಎಷ್ಟಿದೆ ಗೊತ್ತಾ.? 82.56.! ಒಟ್ಟು 2,585 ರನ್​​ಗಳಿಸಿರೋ ಪಡಿಕ್ಕಲ್,​ 13 ಸೆಂಚುರಿ, 12 ಹಾಫ್​​ ಸೆಂಚುರಿ ಸಿಡಿಸಿದ್ದಾರೆ. ಅಂದ್ರೆ, 37 ಇನ್ನಿಂಗ್ಸ್​ಗಳ ಪೈಕಿ 25 ಇನ್ನಿಂಗ್ಸ್​ಗಳಲ್ಲಿ 50ಕ್ಕೂ ಅಧಿಕ ರನ್​ ಬಾರಿಸಿದ ಸ್ಪೆಷಲ್​ ಸಾಧನೆ ಮಾಡಿದ್ದಾರೆ.  

ಇದನ್ನೂ ಓದಿ:ಅಮೆರಿಕಾದಲ್ಲಿ ಮಾಜಿ ಬಾಯ್ ಫ್ರೆಂಡ್ ನಿಂದ ಹತ್ಯೆಯಾದ ಭಾರತದ ಯುವತಿ : ಭಾರತಕ್ಕೆ ಪರಾರಿಯಾದ ಹತ್ಯೆ ಆರೋಪಿ!

padikkal karun nair

ಈ ಸೀಸನ್​ನ ಮುಷ್ತಾಕ್​ ಅಲಿ ಟೂರ್ನಿಯಲ್ಲೂ ದೇವದತ್​​ ಪಡಿಕ್ಕಲ್​ ಬ್ಯಾಟ್​ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಆಡಿದ 6 ಪಂದ್ಯಗಳಲ್ಲೇ ಪಡಿಕ್ಕಲ್ 309 ರನ್​ ಚಚ್ಚಿದ್ರು. 61.80ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದಿದ್ದ ಪಡಿಕ್ಕಲ್​, 1 ಸೆಂಚುರಿ, 2 ಹಾಫ್​ ಸೆಂಚುರಿ ಸಿಡಿಸಿದ್ರು. 167.02ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್​ ನಡೆಸಿ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಅದೇ ಆಟವನ್ನ ಇದೀಗ ವಿಜಯ್​ ಹಜಾರೆಯಲ್ಲೂ ಮುಂದುವರೆಸಿದ್ದಾರೆ. 

ವಿಜಯ್​​ ಹಜಾರೆ ಟೂರ್ನಿಯಲ್ಲಿ ಡ್ರೀಮ್​ ಫಾರ್ಮ್​ನಲ್ಲಿ ಬ್ಯಾಟಿಂಗ್​ ನಡೆಸ್ತಾ ಇರೋ ದೇವದತ್​ ಪಡಿಕ್ಕಲ್ ಎದುರಾಳಿ ಪಡೆಗೆ ವಿಲನ್​ ಆಗಿದ್ರೆ, ಕರ್ನಾಟಕ ತಂಡದ ರಿಯಲ್​ ಸ್ಟ್ರೆಂಥ್​ ಎನಿಸಿದ್ದಾರೆ. ಪಡಿಕ್ಕಲ್​ ಪರಾಕ್ರಮ ಹೀಗೆ ಮುಂದುವರೆಯಲಿ. ಕರ್ನಾಟಕ ತಂಡಕ್ಕೆ ಪ್ರತಿಷ್ಟಿತ ವಿಜಯ್​ ಹಜಾರೆ ಟ್ರೋಫಿ ಗೆಲ್ಲಿಸಿಕೊಡಲಿ ಅನ್ನೋದು ಕನ್ನಡಿಗರ ಆಶಯವಾಗಿದೆ.

ಇದನ್ನೂ ಓದಿ: ಸ್ಪಂದನಾಗಿಂತ ನನಗೇ ಜಾಸ್ತಿ ವೋಟ್ ಬಂದಿತ್ತು -ಮಾಳು ಆರೋಪಕ್ಕೆ ಸ್ಪಂದನಾ ಖಡಕ್ ಪ್ರತಿಕ್ರಿಯೆ..! 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

devdutt padikkal Vijay Hazare Trophy
Advertisment