/newsfirstlive-kannada/media/media_files/2025/09/26/kl-rahul-11-2025-09-26-14-18-01.jpg)
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಭಾರತ A ಹಾಗೂ ಆಸ್ಟ್ರೇಲಿಯಾ A ತಂಡಗಳ ಮಧ್ಯೆ ನಡೆದ ಎರಡನೇ ಅನ್​ಅಫೀಶಿಯಲ್ ಟೆಸ್ಟ್​ನಲ್ಲಿ ಭಾರತ ಜಯಭೇರಿ ಬಾರಿಸಿದೆ. ಕನ್ನಡಿಗ ಕೆಎಲ್ ರಾಹುಲ್ ಅವರ 176 ರನ್​ಗಳ ಕಾಣಿಕೆಯೊಂದಿಗೆ ಐದು ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೂರನೇಯ ದಿನವಾದ ನಿನ್ನೆ 74 ರನ್​ಗಳಿಸಿದ್ದ ರಾಹುಲ್ ರಿಟೈರ್ಡ್​ ಹರ್ಟ್ ಆಗಿದ್ದರು. ಬಳಿಕ ಮನವ್ ಸುತ್ತಾರ್ ಔಟ್ ಆದ ಬಳಿಕ ಮತ್ತೆ ಬ್ಯಾಟಿಂಗ್​ ಬಂದಿರುವ ರಾಹುಲ್ ಇವತ್ತು ಶತಕ ಬಾರಿಸಿ ಮಿಂಚಿದ್ದಾರೆ. 33 ವರ್ಷದ ರಾಹುಲ್, ಫಸ್ಟ್​​ ಕ್ಲಾಸ್ ಕ್ರಿಕೆಟ್​ನಲ್ಲಿ 22 ಶತಕ ಬಾರಿಸಿದ್ದಾರೆ. ಇನ್ನು 210 ಬಾಲ್​ಗಳನ್ನ ಎದುರಿಸಿ ನಾಲ್ಕು ಸಿಕ್ಸರ್ ಬಾರಿಸಿ 16 ಬೌಂಡರಿ ಹೊಡೆದ ರಾಹುಲ್, 176 ರನ್​ಗಳಿಸಿ ಅಜಯರಾಗಿ ಉಳಿದರು.
ಇದನ್ನೂ ಓದಿ:ಒಂದು ಕೋಟಿ ನಷ್ಟ! ವಿಷಯ ಗೊತ್ತಾಗಿ ಶಾಕ್ ಆದ ನಿರ್ಮಾಪಕಿ.. ಜನ ಹಿಂಗೂ ಮೋಸ ಮಾಡ್ತಾರೆ!
ಇನ್ನು ಸಾಯಿ ಸುದರ್ಶನ್ ಕೂಡ 100 ರನ್​ಗಳ ಕಾಣಿಕೆ ನೀಡಿದರು. 172 ಬಾಲ್​ನಲ್ಲಿ ಒಂದು ಸಿಕ್ಸರ್, 9 ಬೌಂಡರಿಯೊಂದಿಗೆ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ, 420 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ಕೇವಲ 194 ರನ್​ಗಳಿಗೆ ಆಲೌಟ್ ಆಗಿತ್ತು. 226 ರನ್​ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ, ಎರಡನೇ ಇನ್ನಿಂಗ್ಸ್​ನಲ್ಲಿ 185 ರನ್​ಗಳಿಸಿ ಒಟ್ಟು 411 ರನ್​​ಗಳ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ಭಾರತ ಐದು ವಿಕೆಟ್ ಕಳೆದುಕೊಂಡು 413 ರನ್​ಗಳಿಸಿ ಗೆಲುವು ದಾಖಲಿಸಿದೆ. ಟೀಂ ಇಂಡಿಯಾ ಪರ ಜಗದೀಶನ್ 36, ಕೆಎಲ್ ರಾಹುಲ್ 176, ಸಾಯಿ ಸುದರ್ಶನ್ 100, ದೇವದತ್ ಧ್ರುವ್ ಜುರೇಲ್ 56 ರನ್​ಗಳ ಕಾಣಿಕೆ ನೀಡಿದರು.
ಇದನ್ನೂ ಓದಿ:ರೇರಾ ಅಕ್ರಮಗಳ ಬಗ್ಗೆ ವಸತಿ ಸಚಿವ ಜಮೀರ್ ಅಹಮದ್‌ಗೆ ನ್ಯೂಸ್ ಫಸ್ಟ್ ಪ್ರಶ್ನೆಗಳು: ಉತ್ತರ ಕೊಡಿ ಜಮೀರ್ ಅಹಮದ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.